Beauty Benefits: ತೆಂಗಿನ ಎಣ್ಣೆಯ ಜತೆಗೆ ಕರ್ಪೂರ; ತ್ವಚೆಯ ಆರೋಗ್ಯಕ್ಕೆ ಈ ಪ್ರಯೋಗ ನೀವು ಮಾಡಲೇಬೇಕು

| Updated By: preethi shettigar

Updated on: Jan 11, 2022 | 9:25 AM

ತೆಂಗಿನ ಎಣ್ಣೆ ಆರೋಗ್ಯ ಮತ್ತು ತ್ವಚೆಗೆ ತುಂಬಾ ಪ್ರಯೋಜನಕಾರಿ. ಕರ್ಪೂರದೊಂದಿಗೆ ತೆಂಗಿನ ಎಣ್ಣೆಯನ್ನು ಬೆರೆಸಿದರೆ ಇನ್ನೂ ಉತ್ತಮ. ಈ ಸಂಯೋಜನೆಯು ಅನೇಕ ಕಾಯಿಲೆಗೆ ಚಿಕಿತ್ಸೆಯಾಗಿ ಕಾರ್ಯನಿರ್ವಹಿಸುತ್ತದೆ.

1 / 5
ತಲೆಹೊಟ್ಟು: ನಿಮಗೆ ತಲೆಹೊಟ್ಟಿನ ಸಮಸ್ಯೆ ಎದುರಾಗಿದ್ದರೆ, ತೆಂಗಿನ ಎಣ್ಣೆಯಲ್ಲಿ ಸ್ವಲ್ಪ ಕರ್ಪೂರವನ್ನು ಬೆರೆಸಿ ತಲೆಗೆ ಮಸಾಜ್ ಮಾಡಿ. ಈ ಎಣ್ಣೆಯು ತಲೆಹೊಟ್ಟು ನಿವಾರಣೆಗೆ ಸಹಾಯ ಮಾಡುತ್ತದೆ.

2 / 5
ಚರ್ಮದ ಅಲರ್ಜಿ: ನಿಮಗೆ ಚರ್ಮದ ಮೇಲೆ ಯಾವುದೇ ರೀತಿಯ ಅಲರ್ಜಿ ಇದ್ದರೆ, ತೆಂಗಿನ ಎಣ್ಣೆಯಲ್ಲಿ ಕರ್ಪೂರವನ್ನು ಬೆರೆಸಿ ಆ ಜಾಗಕ್ಕೆ ಹಚ್ಚಿ. ಒಮ್ಮೆ ಬಳಸಿದ ನಂತರ ನೀವು ಅದರ ಆರೋಗ್ಯಕರ ಬದಲಾವಣೆಯನ್ನು ಕಂಡುಕೊಳ್ಳುತ್ತೀರ.

3 / 5
ಮೊಡವೆ: ಅನೇಕ ಬಾರಿ ಮುಖದ ಮೇಲೆ ಮೊಡವೆಗಳು ಉಂಟಾಗುತ್ತವೆ. ಈ ಸಂದರ್ಭದಲ್ಲಿ ನೀವು ತೆಂಗಿನ ಎಣ್ಣೆಯೊಂದಿಗೆ ಬೆರೆಸಿದ ಕರ್ಪೂರವನ್ನು ಬಳಸಬಹುದು. ತೆಂಗಿನೆಣ್ಣೆ ಮತ್ತು ಕರ್ಪೂರ ಮೊಡವೆಗಳನ್ನು ತಡೆಗಟ್ಟುವಲ್ಲಿ ಬಹಳ ಪರಿಣಾಮಕಾರಿಯಾಗಿದೆ.

4 / 5
ಉಗುರು ಸುತ್ತು:  ತೆಂಗಿನ ಎಣ್ಣೆಯು ಶಿಲೀಂಧ್ರ ವಿರೋಧಿ ಗುಣಗಳನ್ನು ಹೊಂದಿದೆ. ಉಗುರುಬೆಚ್ಚಗಿನ ತೆಂಗಿನೆಣ್ಣೆಯಲ್ಲಿ ಕರ್ಪೂರವನ್ನು ಬೆರೆಸಿ ಸ್ವಲ್ಪ ಸಮಯದವರೆಗೆ ಉಗುರಿಗೆ ಮಸಾಜ್ ಮಾಡಿ. ಇದು ಶಿಲೀಂಧ್ರವನ್ನು ಅಥವಾ ಉಗುರು ಸುತ್ತನ್ನು ಕ್ರಮೇಣ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

5 / 5
ಮಚ್ಚೆಗಳು: ಚರ್ಮದ ಮೇಲೆ ನಸುಕಂದು ಮಚ್ಚೆಗಳಿದದ್ದರೆ ಅವುಗಳನ್ನು ಹೋಗಲಾಡಿಸಲು ನೀವು ತೆಂಗಿನ ಎಣ್ಣೆಯನ್ನು ಸ್ವಲ್ಪ ಕರ್ಪೂರದೊಂದಿಗೆ ಬೆರೆಸಿ ಬಳಸಬಹುದು. ರಾತ್ರಿ ಮಲಗುವ ಮುನ್ನ ಈ ಎಣ್ಣೆಯನ್ನು ಮುಖಕ್ಕೆ ಹಚ್ಚಿಕೊಳ್ಳಿ.