- Kannada News Photo gallery Youtube WhatsApp And Facebook Support Reliance JioPhone Prima 4G Sale started in India
ವಾಟ್ಸ್ಆ್ಯಪ್, ಯೂಟ್ಯೂಬ್ ಇರುವ 2,599 ರೂ. ಬೆಲೆಯ ಜಿಯೋ ಪ್ರೈಮಾ 4G ಫೋನ್ ಖರೀದಿಗೆ ಲಭ್ಯ
JioPhone Prima 4G Sale: ಜಿಯೋ ಪ್ರೈಮಾ 4G ಪ್ರೀಮಿಯಂ ವಿನ್ಯಾಸವನ್ನು ಹೊಂದಿದ್ದು, ವಾಟ್ಸ್ಆ್ಯಪ್ ಮತ್ತು ಯೂಟ್ಯೂಬ್ನಂತಹ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳನ್ನು ಸಪೋರ್ಟ್ ಮಾಡುತ್ತದೆ. ಇದರ ಬೆಲೆ ಕೇವಲ 2,599 ರೂ.. ಇದು ನೀಲಿ ಮತ್ತು ಹಳದಿ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.
Updated on: Nov 09, 2023 | 12:30 PM

ಪ್ರಸಿದ್ಧ ರಿಲಯನ್ಸ್ ಜಿಯೋ ಕಂಪನಿ ಕಳೆದ ವಾರ ತನ್ನ ಹೊಸ ಫೋನ್ ಜಿಯೋ ಪ್ರೈಮಾ 4G (Jio Prima 4G) ಅನ್ನು ಬಿಡುಗಡೆ ಮಾಡಿತ್ತು. ಕಂಪನಿಯು ಇಂಡಿಯನ್ ಮೊಬೈಲ್ ಕಾಂಗ್ರೆಸ್ 2023 (IMC) ನಲ್ಲಿ ಈ ಹ್ಯಾಂಡ್‌ಸೆಟ್ ಅನ್ನು ಅನಾವರಣ ಮಾಡಿತ್ತು. ಇದೀಗ ಈ ಫೋನ್ ಮಾರಾಟ ಕಾಣುತ್ತಿದೆ.

ಜಿಯೋ ಪ್ರೈಮಾ 4G ಪ್ರೀಮಿಯಂ ವಿನ್ಯಾಸವನ್ನು ಹೊಂದಿದ್ದು, ವಾಟ್ಸ್ಆ್ಯಪ್ ಮತ್ತು ಯೂಟ್ಯೂಬ್ನಂತಹ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳನ್ನು ಸಪೋರ್ಟ್ ಮಾಡುತ್ತದೆ. ಇದರ ಬೆಲೆ ಕೇವಲ 2,599 ರೂ.. ಇದು ನೀಲಿ ಮತ್ತು ಹಳದಿ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ. ಜಿಯೋ ಮಾರ್ಟ್ನಲ್ಲಿ ಮಾರಾಟ ಕಾಣಲಿದೆ. ಮಾರಾಟದ ಸಮಯದಲ್ಲಿ ಕಂಪನಿ ಬ್ಯಾಂಕ್ ಕೊಡುಗೆಗಳು ಮತ್ತು ಕ್ಯಾಶ್‌ಬ್ಯಾಕ್ ಕೊಡುಗೆಗಳನ್ನು ಸಹ ನೀಡುತ್ತಿದೆ.

ಹೊಸದಾಗಿ ಬಿಡುಗಡೆಯಾದ ಜಿಯೋ ಫೋನ್ ಪ್ರೈಮಾ 4G 320×240 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ 2.4-ಇಂಚಿನ TFT ಡಿಸ್ಪ್ಲೇಯನ್ನು ಹೊಂದಿದೆ. ಹೆಚ್ಚುವರಿಯಾಗಿ, ಈ ಫೋನ್‌ನಲ್ಲಿ 0.3-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಸೇರಿದಂತೆ ಫ್ಲ್ಯಾಷ್‌ಲೈಟ್ ಮತ್ತು ಕ್ಯಾಮೆರಾ ಇದೆ.

ಈ ಜಿಯೋ ಫೋನ್ 512MB RAM ನಿಂದ ಚಾಲಿತವಾಗಿದೆ. ಸಂಗ್ರಹ ಸಾಮರ್ಥ್ಯವನ್ನು ಮೈಕ್ರೋ SD ಕಾರ್ಡ್ ಬಳಸಿ 128GB ವರೆಗೆ ವಿಸ್ತರಿಸಬಹುದು. KaiOS ಆಪರೇಟಿಂಗ್ ಸಿಸ್ಟಂನಲ್ಲಿ ರನ್ ಆಗುತ್ತದೆ. ARM ಕಾರ್ಟೆಕ್ಸ್ A53 ಪ್ರೊಸೆಸರ್ ನೀಡಲಾಗಿದೆ.

ಜಿಯೋ ಫೋನ್ ಪ್ರೈಮಾ 4G ಬ್ಲೂಟೂತ್ 5.0 ಅನ್ನು ಹೊಂದಿದೆ ಮತ್ತು 1800mAh ಬ್ಯಾಟರಿಯನ್ನು ನೀಡಲಾಗಿದೆ. ಇತರೆ ವೈಶಿಷ್ಟ್ಯಗಳಿಗೆ ಸಂಬಂಧಿಸಿದಂತೆ, 4G FM ರೇಡಿಯೊ ವೈಶಿಷ್ಟ್ಯದೊಂದಿಗೆ ಬರುತ್ತದೆ. ಯೂಟ್ಯೂಬ್, ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸಾವನ್ ಮತ್ತು ಜಿಯೋ ನ್ಯೂಸ್‌ನಂತಹ ಅಪ್ಲಿಕೇಶನ್ ಇದರಲ್ಲಿ ನೀಡಲಾಗಿದೆ.

ವಿಶೇಷವಾಗಿ ಈ ಫೋನ್ 1200 ಕ್ಕೂ ಹೆಚ್ಚು ಅಪ್ಲಿಕೇಶನ್‌ಗಳನ್ನು ಬೆಂಬಲಿಸುತ್ತದೆ. ವಾಟ್ಸ್ಆ್ಯಪ್, ಯೂಟ್ಯೂಬ್ ಸೇರಿದಂತೆ ಫೇಸ್ಬುಕ್, ಗೂಗಲ್ ಮ್ಯಾಪ್ಸ್ ನಂತಹ ಜನಪ್ರಿಯ ಅಪ್ಲಿಕೇಶನ್‌ಗಳನ್ನು ಸಹ ಒಳಗೊಂಡಿದೆ. 3.5mm ಹೆಡ್‌ಫೋನ್ ಜ್ಯಾಕ್ ಕೂಡ ಫೋನ್‌ನಲ್ಲಿ ಲಭ್ಯವಿದೆ. ಜೊತೆಗೆ ಎಫ್ ಎಂ ರೇಡಿಯೋ ಕೂಡ ಇದರಲ್ಲಿ ಕೇಳಿಸುತ್ತಿದೆ.



















