ಅರಕಲಗೂಡು ಕ್ಷೇತ್ರದಿಂದ ಎ. ಮಂಜು ಸ್ಪರ್ಧೆ: ಹೆಚ್​ಡಿ ರೇವಣ್ಣ ಘೋಷಣೆ

|

Updated on: Mar 12, 2023 | 4:37 PM

ನಮ್ಮ ಪಾರ್ಟಿಯಿಂದ ಯಾರಾದರೂ ನಿಲ್ಲುವುದಾದರೆ ಕುಳಿತು ಮಾತನಾಡಿ ಅಂಥ ಹೇಳಿದ್ದೆ. ಎಲ್ಲಾ ಸೇರಿ ಇವತ್ತು ಎ. ಮಂಜಣ್ಣ ನಿಲ್ಲಬೇಕು ಅಂಥ ಭಾವನೆ ವ್ಯಕ್ತಪಡಿಸಿದ್ದಾರೆ. ಅರಕಲಗೂಡು ಕ್ಷೇತ್ರದಿಂದ ಎ.ಮಂಜಣ್ಣ ಅವರು ಸ್ಪರ್ಧಿಸುತ್ತಾರೆ ಎಂದು ಮಾಜಿ ಸಚಿವ ಹೆಚ್​ಡಿ. ರೇವಣ್ಣ ಹೇಳಿದರು.

ಅರಕಲಗೂಡು ಕ್ಷೇತ್ರದಿಂದ ಎ. ಮಂಜು ಸ್ಪರ್ಧೆ:  ಹೆಚ್​ಡಿ ರೇವಣ್ಣ ಘೋಷಣೆ
ಎಚ್.ಡಿ.ರೇವಣ್ಣ
Follow us on

ಹಾಸನ: ನಮ್ಮ ಪಾರ್ಟಿಯಿಂದ ಯಾರಾದರೂ ನಿಲ್ಲುವುದಾದರೆ ಕುಳಿತು ಮಾತನಾಡಿ ಅಂಥ ಹೇಳಿದ್ದೆ. ಎಲ್ಲಾ ಸೇರಿ ಇವತ್ತು ಎ. ಮಂಜಣ್ಣ ನಿಲ್ಲಬೇಕು ಅಂಥ ಭಾವನೆ ವ್ಯಕ್ತಪಡಿಸಿದ್ದಾರೆ. ಇವತ್ತು ಅಧಿಕೃತವಾಗಿ ದೇವೇಗೌಡರು, ಕುಮಾರಸ್ವಾಮಿ ಅವರು ಏನು ಹೇಳಿದ್ದಾರೆ ಅದಕ್ಕೆ ಸಮ್ಮತಿ ಇದೇ ಎಂದು ಇಂದಿನ ಮುಖಂಡರುಗಳ ಸಭೆಯಲ್ಲಿ ಎಲ್ಲರೂ ಹೇಳಿದ್ದಾರೆ. ಹಾಗಾಗಿ ಅರಕಲಗೂಡು ಕ್ಷೇತ್ರದಿಂದ ಎ.ಮಂಜಣ್ಣ ಅವರು ಸ್ಪರ್ಧಿಸುತ್ತಾರೆ ಎಂದು ಮಾಜಿ ಸಚಿವ ಹೆಚ್​ಡಿ. ರೇವಣ್ಣ (HD Revanna) ಹೇಳಿದರು. ಜಿಲ್ಲೆಯ ಅರಕಲಗೂಡು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಎ.ಮಂಜುಗೆ ಟಿಕೆಟ್​ ನೀಡುವಂತೆ ಕಾರ್ಯಕರ್ತರು ಕೂಡ ಹೇಳಿದ್ದಾರೆ. ಅದಕ್ಕೂ ಮುನ್ನ ಹೆಚ್​ಡಿಕೆ ಜತೆ ಮಾತಾಡುವುದಾಗಿ ಎ.ಮಂಜು ಹೇಳಿದ್ದಾರೆ ಎಂದರು.

ಕೆಲವರು ಕೇಸ್​ಗಾಗಿ ಎ.ಮಂಜಣ್ಣ ಜೊತೆ ರಾಜಿ ಅಂತಾರೆ. ಆದರೆ ಕೇಸ್​ಗೂ ರಾಜಕೀಯಕ್ಕೂ ಸಂಬಂಧ ಇಲ್ಲಾ. ಅವರು ಕೇಸ್ ಹಾಕಿ ದೊಡ್ಡ ವಕೀಲರನ್ನು ನೇಮಿಸಿ ವಾದ ಮಾಡಿಸುತ್ತಿದ್ದಾರೆ ಎಂದು ಪರೋಕ್ಷವಾಗಿ ಹಾಲಿ ಶಾಸಕ ಎಟಿ ರಾಮಸ್ವಾಮಿ ವಿರುದ್ದ ಟೀಕೆ ಮಾಡಿದರು. ಇವರನ್ನು ಬಿಟ್ಟರೆ ಬೇರೆ ಯಾರಾದರೂ ಅಭ್ಯರ್ಥಿ ಇದ್ದರೆ ಹೇಳಿ ಎಂದು ಹೇಳಿದ್ದೆ. ಎಟಿ ರಾಮಸ್ವಾಮಿ ಅವರನ್ನು ನಾವೇನು ಹೊರಗೆ ಕಳಿಸಿರಲಿಲ್ಲ. ಎ. ಮಂಜು ಜೊತೆಗೆ ಬಂದವರನ್ನು ನಾವು ಕೈಬಿಡಲು ಆಗಲ್ಲ. ನಮ್ಮ ಕಾರ್ಯಕರ್ತ ರನ್ನು ಬಿಡೊ ಪ್ರಶ್ನೆಯೂ ಇಲ್ಲ ಎಂದು ಹೇಳಿದರು.

ಇದನ್ನೂ ಓದಿ: IIT Dharwad Inauguration Live: ಐಐಟಿ ಗ್ರೀನ್​ ಕ್ಯಾಂಪಸ್​ ಉದ್ಘಾಟಿಸಿದ ಪ್ರಧಾನಿ ಮೋದಿ

ಎ.ಮಂಜು ಪಕ್ಷ ಸೇರ್ಪಡೆ ಬಗ್ಗೆ ರೇವಣ್ಣ ಸಮ್ಮುಖದಲ್ಲೇ ಅಪಸ್ವರ

ಎ.ಮಂಜು ಪಕ್ಷ ಸೇರ್ಪಡೆ ಬಗ್ಗೆ ರೇವಣ್ಣ ಸಮ್ಮುಖದಲ್ಲೇ ಅಪಸ್ವರ ಸಹ ಕೇಳಿಬಂದಿದೆ. ಈ ಹಿಂದೆ ಎ.ಟಿ ರಾಮಸ್ವಾಮಿ ಕಾಂಗ್ರೆಸ್​ನಲ್ಲಿ ಇದ್ದರು. ಅವರನ್ನು ಕರೆತಂದ್ರಿ, ಅವರ ನಾಯಕರು ಬಂದರು. ನಮ್ಮ ನಾಯಕರು ಸೈಡಿಗೆ ಹೋದರು. ಈಗ ಎ.ಮಂಜು ಬರುತ್ತಿದ್ದಾರೆ. ಅವರ ಹಿಂದೆ ಬರೋರಿಗೆ ಅವಕಾಶ ಸಿಗುತ್ತೆ, ನಮ್ಮ ಕಾರ್ಯಕರ್ತರಿಗೆ ಸಿಗಲ್ಲ. ಇಷ್ಡು ದುಡಿದು ನಾವು ಏನು ಮಾಡೋಣ ಎಂದು ಪ್ರಶ್ನೆ ಪ್ರಶ್ನಿಸಲಾಗಿದೆ.

ಎ.ಮಂಜು ನಮಗೆ ಬೇಕಾಗಿಲ್ಲ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಂಕರಣ್ಣಗೆ ಟಿಕೆಟ್​ ಕೊಡಿ ಎಂದು ಬೇರೆ ಹೆಸರು ಪ್ರಸ್ತಾಪಿಸಲಾಗಿದೆ. ಆದರೆ ಇನ್ನು ಕೆಲವರು ಎ.ಮಂಜು ಬದಲು ಹೊನ್ನವಳ್ಳಿ ಸತೀಶ್​ಗೆ ಟಿಕೆಟ್​ ಕೊಡಿ ಎಂದು ಪ್ರಸ್ತಾಪಿಸಿದ್ದಾರೆ. ಸಭೆಯಲ್ಲಿ ಬೇರೆ ಬೇರೆ ಹೆಸರು ಬರೋಕೆ ಶುರುವಾಗುತ್ತಲೇ ಎಚ್ಚೆತ್ತ ರೇವಣ್ಣ, ಎ ಮಂಜು ಅಭ್ಯರ್ಥಿ ಆಗಬೇಕು ಎನ್ನುವವರು ಕೈ ಎತ್ತಿ ಎಂದರು. ರೇವಣ್ಣ ಹೇಳಿಕೆಗೆ ಧ್ವನಿಗೂಡಿಸಿ ಬಹುತೇಕ ಕಾರ್ಯತರ್ಕರು ಕೈ ಎತ್ತಿದ್ದಾರೆ.

ಇದನ್ನೂ ಓದಿ: ರಾಜಕೀಯ ಅಂದರೆ ಮೋಸ, ಸುಳ್ಳು, ವಂಚನೆ: ಜನಾರ್ದನ ರೆಡ್ಡಿ

ಇನ್ನು ವೇದಿಕೆ ಮೇಲಿದ್ದ ಮುಖಂಡರಿಂದಲೇ ಎ.ಮಂಜು ಸೇರ್ಪಡೆಗೆ ಅಸಮಾಧಾನ ವ್ಯಕ್ತವಾಗಿದೆ. ಆದರೆ ಸಭೆಯಲ್ಲಿ ಬಹುಮತದ ಜನರು ರೇವಣ್ಣ ಪ್ರಸ್ತಾಪಕ್ಕೆ ಒಪ್ಪಿಗೆ ಸೂಚಿಸಿದ ಹಿನ್ನೆಲೆ ಎ.ಮಂಜು ಅಭ್ಯರ್ಥಿ, ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡೋಣ ಎಂದು ರೇವಣ್ಣ ಘೋಷಣೆ ಮಾಡಿದರು.

ಅವರ ಬಗ್ಗೆ ಮಾತನಾಡುವಂತಹ ಶಕ್ತಿ ನನಗಿಲ್ಲ

ಸಂಸದೆ ಸುಮಲತಾ ಬಿಜೆಪಿಗೆ ಬೆಂಬಲ ಘೋಷಣೆ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಅವರು ದೊಡ್ಡವರಿದ್ದಾರೆ ಅವರ ಬಗ್ಗೆ ಮಾತನಾಡುವಂತಹ ಶಕ್ತಿ ನನಗಿಲ್ಲ ಎಂದರು. ಇನ್ನು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕ ರಾಜ್ಯಕ್ಕೆ ಭೇಟಿ ವಿಚಾರವಾಗಿ ಮಾತನಾಡಿ, ನಮ್ಮ ಪ್ರಧಾನಮಂತ್ರಿಗಳು ಬರಲಿ ಒಳ್ಳೆಯದು. ಮೈಸೂರು-ಬೆಂಗಳೂರು ರಸ್ತೆಗೆ ಕುಮಾರಸ್ವಾಮಿ, ನಾವು ಏನು ಕೊಟ್ಟಿದ್ದೇವೆ ಅನ್ನೋದನ್ನ ಹೇಳುತ್ತೇನೆ. ನಾವು ಇಲ್ಲ ಅಂದಿದ್ದರೆ ಮೋದಿಯವರು ಇವತ್ತು ರಸ್ತೆ ಉದ್ಘಾಟನೆ ಮಾಡಲು ಆಗುತ್ತಿರಲಿಲ್ಲ ಎಂದು ವಾಗ್ದಾಳಿ ಮಾಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:37 pm, Sun, 12 March 23