PM Modi Karnataka Visit Highlights: ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ದೆಹಲಿಯತ್ತ ಪ್ರಯಾಣ ಬೆಳಸಿದ ಪ್ರಧಾನಿ ಮೋದಿ

ಕಿರಣ್ ಹನುಮಂತ್​ ಮಾದಾರ್
| Updated By: ಗಂಗಾಧರ​ ಬ. ಸಾಬೋಜಿ

Updated on:Mar 12, 2023 | 6:18 PM

Bengaluru Mysuru Expressway, IIT Dharwad Inauguration Highlights Updates: ಕೆಲವೇ ಗಂಟೆಗಳಲ್ಲಿ ಧಾರವಾಡಕ್ಕೆ ಆಗಮಿಸಲಿರುವ ಪ್ರಧಾನಿ ಮೋದಿ, ಧಾರವಾಡದಲ್ಲಿ ಐಐಟಿ, ಹಾಗೂ ಹುಬ್ಬಳ್ಳಿಯಲ್ಲಿ ನಿರ್ಮಾಣವಾದ ವಿಶ್ವದ ಅತಿದೊಡ್ಡ ರೈಲ್ವೆ ಪ್ಲಾಟ್​ ಪಾರ್ಮ್​ನ್ನು ಉದ್ಘಾಟಿಸಲಿದ್ದಾರೆ. ಇಲ್ಲಿದೆ ಕ್ಷಣ ಕ್ಷಣದ ಮಾಹಿತಿ

PM Modi Karnataka Visit Highlights: ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ದೆಹಲಿಯತ್ತ ಪ್ರಯಾಣ ಬೆಳಸಿದ ಪ್ರಧಾನಿ ಮೋದಿ
ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರನ್ನ ಸನ್ಮಾನಿಸಿದ ಸಚಿವ ಪ್ರಹ್ಲಾದ್​ ಜೋಶಿ, ಸಿಎಂ ಬೊಮ್ಮಾಯಿ

PM Narendra Modi in Karnataka, Mandya, Dharwad and Hospet Live News Updates: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಂಡ್ಯ ಮತ್ತು ಧಾರವಾಡಕ್ಕೆ ಭೇಟಿ ನೀಡಲಿದ್ದಾರೆ. ಹೀಗಾಗಿ ಎಲ್ಲಾ ರೀತಿಯ ತಯಾರಿ ನಡೆದಿದೆ. ದಶಪಥ ರಸ್ತೆಯಲ್ಲಿ ಕೇಸರಿ ಬಾವುಟ ಹಾರಾಡ್ತಿದೆ. ಮದ್ದೂರಿನಲ್ಲಿ ಬೃಹತ್ ಸಮಾವೇಶ. ಭರ್ಜರಿ ರೋಡ್‌ಶೋಗೆ ಹೈವೇ ಸಜ್ಜಾಗಿದೆ. ವಿದ್ಯಾಕಾಶಿ ಧಾರವಾಡದಲ್ಲಿ ಬರೋಬ್ಬರಿ 535 ಎಕರೆ ಜಾಗದಲ್ಲಿ ನಿರ್ಮಾಣನಾಗಿರೋ ಭಾರತೀಯ ತಂತ್ರಜ್ಞಾನ ಸಂಸ್ಥೆ ಅಂದ್ರೆ ಐಐಟಿಯನ್ನ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ. 852 ಕೋಟಿ ವೆಚ್ಚದಲ್ಲಿ ಬೃಹತ್‌ ಕಟ್ಟಡ ನಿರ್ಮಾಣವಾಗಿದ್ದು, ಸಂಪೂರ್ಣ ಪರಿಸರ ಸ್ನೇಹಿಯಾಗಿದೆ. ಹೀಗಾಗೇ ಇದನ್ನ ದೇಶದ ಮೊದಲ ಹಸಿರು ಐಐಟಿ ಎನ್ನಲಾಗ್ತಿದೆ. ಬನ್ನಿ ನರೇಂದ್ರ ಮೋದಿ ಅವರ ರಾಜ್ಯ ಪ್ರವಾಸದ ಕ್ಷಣ ಕ್ಷಣದ ಅಪ್​ಡೇಟ್ಸ್​ಗಳನ್ನು ಇಲ್ಲಿ ಪಡೆಯಿರಿ.

LIVE NEWS & UPDATES

The liveblog has ended.
  • 12 Mar 2023 05:50 PM (IST)

    PM Modi In Hubballi: ಐಐಟಿ ಕ್ಯಾಂಪಸ್​ನಿಂದ ಹುಬ್ಬಳ್ಳಿಯತ್ತ ಮೋದಿ ಪ್ರಯಾಣ

    ಧಾರವಾಡದ ಐಐಟಿ ಕ್ಯಾಂಪಸ್​ನಿಂದ ಹೆಲಿಕಾಪ್ಟರ್ ಮೂಲಕ ಹುಬ್ಬಳ್ಳಿಗೆ ಪ್ರಯಾಣ ಬೆಳಸಿದ ಮೋದಿ.  ಬಳಿಕ ಹುಬ್ಬಳ್ಳಿಯ ಸೇನಾ ವಿಮಾನದಲ್ಲಿ ದೆಹಲಿಗೆ ತೆರಳಲಿದ್ದಾರೆ.

  • 12 Mar 2023 05:43 PM (IST)

    PM Modi In Hubballi: ಇಡೀ ಪ್ರಪಂಚದಲ್ಲಿ ಪ್ರಜಾಪ್ರಭುತ್ವದ ತಾಯಿ ನಮ್ಮ ಭಾರತ ಎಂದ ಮೋದಿ

    ಇಡೀ ಪ್ರಪಂಚದಲ್ಲಿ ಪ್ರಜಾಪ್ರಭುತ್ವದ ತಾಯಿ ನಮ್ಮ ಭಾರತ ಪ್ರಧಾನಿ ಮೋದಿ. ಕೆಲವು ವರ್ಷಗಳ ಹಿಂದೆ  ಲಂಡನ್​ನಲ್ಲಿ ಬಸವಣ್ಣನವರ ಮೂರ್ತಿ ಅನಾವರಣಗೊಳಿಸುವ ಅವಕಾಶ ನನಗೆ ಸಿಕ್ಕಿತ್ತು.  ಇಂದು ಬಸವೇಶ್ವರರಿಗೆ ಕೆಲವೊಬ್ಬರು ಅವಮಾನ ಮಾಡುತ್ತಿದ್ದಾರೆ ಎನ್ನುವ ಮೂಲಕ ಪರೋಕ್ಷವಾಗಿ ರಾಹುಲ್ ಗಾಂಧಿ ವಿರುದ್ಧ ಕಿಡಿಕಾರಿದ ಪ್ರಧಾನಿ ಮೋದಿ. ‘ಅಂತಹವರ ಬಗ್ಗೆ ಕರ್ನಾಟಕದ ಜನರು ಎಚ್ಚರದಿಂದ ಇರಬೇಕು. ವಿದೇಶದಲ್ಲಿ ನಿಂತುಕೊಂಡು ನಮ್ಮ ಭಾರತದ ಬಗ್ಗೆ ವ್ಯಂಗ್ಯವಾಡುತ್ತಾರೆ. ಪ್ರಜಾಪ್ರಭುತ್ವದ ತಾಯಿ ನಮ್ಮ ಭಾರತದ ವಿರುದ್ಧ ಮಾಡತನಾಡುತ್ತಾರೆ. 12ನೇ ಶತಮಾನದ ಅನುಭವ ಮಂಟಪದ ಬಗ್ಗೆ  ಪ್ರಸ್ತಾಪಿಸಿದ ಮೋದಿ. ಈ ಭೂಮಿ 12ನೇ ಶತಮಾನದಲ್ಲೇ ಸಂಸತ್ ಭವನದ ಪರಿಕಲ್ಪನೆ ನೀಡಿದೆ. ಅನುಭವ ಮಂಟಪ ಎಲ್ಲ ವರ್ಗದ ಜನರನ್ನು ಒಳಗೊಂಡಿತ್ತು. ಈಗ ಕೆಲವರು ವಿದೇಶದಲ್ಲಿ ನಿಂತುಕೊಂಡು ಭಾರತಕ್ಕೆ ಅವಮಾನ ಮಾಡುತ್ತಾರೆ. ರಾಹುಲ್ ಗಾಂಧಿ ಹೆಸರು ಪ್ರಸ್ತಾಪಿಸದೇ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ.

  • 12 Mar 2023 05:33 PM (IST)

    PM Modi In Hubballi: 9 ವರ್ಷಗಳಲ್ಲಿ 250 ಮೆಡಿಕಲ್ ಕಾಲೇಜುಗಳ ನಿರ್ಮಾಣ; ಪ್ರಧಾನಿ ಮೋದಿ

    ಕಳೆದ 9 ವರ್ಷಗಳಲ್ಲಿ ದೇಶದಲ್ಲಿ ಉತ್ತಮ ಶಿಕ್ಷಣ ಸಂಸ್ಥೆಗಳ ಸಂಖ್ಯೆ ಹೆಚ್ಚುತ್ತಿವೆ. 9 ವರ್ಷಗಳಲ್ಲಿ 250 ಮೆಡಿಕಲ್ ಕಾಲೇಜುಗಳನ್ನು ನಿರ್ಮಾಣ ಮಾಡಲಾಗಿದೆ. ದೇಶದ ನಗರಗಳಿಗೆ ಆಧುನಿಕ ಸ್ಪರ್ಶ ನೀಡಿ ಅಭಿವೃದ್ಧಿಗೊಳಿಸಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು. ತಂತ್ರಜ್ಞಾನ, ಮೂಲಭೂತ ಸೌಕರ್ಯ ಕ್ಷೇತ್ರದಲ್ಲಿ ಅಭಿವೃದ್ಧಿಗೊಳಿಸಲಾಗುತ್ತಿದೆ. ಜಲಜೀವನ್ ಮಿಷನ್ ಯೋಜನೆಯಡಿ ಧಾರವಾಡದ ಸುತ್ತಮುತ್ತ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಸಂಪರ್ಕ ಕ್ಷೇತ್ರದಲ್ಲಿಯೂ ಕೂಡ ಕರ್ನಾಟಕ ಇಂದು ಮುಂಚೂಣಿಯಲ್ಲಿದೆ ಎಂದರು.

  • 12 Mar 2023 05:26 PM (IST)

    PM Modi In Hubballi: ಧಾರವಾಡ ಕರ್ನಾಟಕ ಅಷ್ಟೇ ಅಲ್ಲ ಭಾರತದ ಜೀವಂತ ಪ್ರತಿಬಿಂಬ ಎಂದ ಪ್ರಧಾನಿ ಮೋದಿ

    ಧಾರವಾಡ ಕರ್ನಾಟಕ ಅಷ್ಟೇ ಅಲ್ಲ ಭಾರತದ ಜೀವಂತ ಪ್ರತಿಬಿಂಬ ಎಂದ ಪ್ರಧಾನಿ ಮೋದಿ. ಪಂಡಿತ ಭೀಮಸೇನ್ ಜೋಶಿ, ದ.ರಾ.ಬೇಂದ್ರೆರನ್ನು ಸ್ಮರಿಸಿದ ಪ್ರಧಾನಿಯವರು. ಸಾಹಿತ್ಯ, ಸಂಗೀತ ಸೇರಿ ಎಲ್ಲ ಕ್ಷೇತ್ರಕ್ಕೂ ಧಾರವಾಡದ ಕೊಡುಗೆ ಸಾಕಷ್ಟಿದೆ. ಇಂದು ಜೋಶಿಯವರು ನನಗೆ ಧಾರವಾಡ ಪೇಡಾ ನೀಡಿದ್ದಾರೆ. ಬೆಂಗಳೂರು-ಮೈಸೂರು ಹೈವೇ ಉದ್ಘಾಟಿಸುವ ಸೌಭಾಗ್ಯ ನನಗೆ ಸಿಕ್ಕಿದೆ.  ಇತ್ತೀಚೆಗೆ ಶಿವಮೊಗ್ಗದಲ್ಲಿ ಕುವೆಂಪು ಏರ್​ಪೋರ್ಟ್​ ಉದ್ಘಾಟಿಸಲಾಗಿದೆ. ಇಂದು ಧಾರವಾಡದ ಐಐಟಿ ಉದ್ಘಾಟಿಸಲಾಯಿತು.  4 ವರ್ಷಗಳ ಹಿಂದೆ ಐಐಟಿ ಧಾರವಾಡದಲ್ಲಿ ಶಿಲಾನ್ಯಾಸ ನೆರವೇರಿಸಿದ್ದೆ. ಇಂದು ಲೋಕಾರ್ಪಣೆ ಮಾಡಲಾಗಿದ್ದು, ಡಬಲ್​ ಇಂಜಿನ್ ಸರ್ಕಾರದಿಂದ ವೇಗದ ಗತಿಯಲ್ಲಿ ಅಭಿವೃದ್ಧಿ ಕಾರ್ಯ ಮಾಡುತ್ತಿದೆ. ನಾವೇ ಲೋಕಾರ್ಪಣೆ ಮಾಡುತ್ತೇವೆ  ಬಳಿಕ ಉದ್ಘಾಟನೆಯೂ ನಾವೇ ಮಾಡ್ತೇವೆ. ಇದು ಡಬಲ್ ಇಂಜಿನ ಸರ್ಕಾರದ ಗುರಿ ಎಂದು ಪ್ರಧಾನಿ ಮೋದಿ ಹೇಳಿದರು.

  • 12 Mar 2023 05:19 PM (IST)

    PM Modi In Hubballi: ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ

    ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ. ಜಗದ್ಗುರು ಬಸವೇಶ್ವರರಿಗೆ ನನ್ನ ನಮಸ್ಕಾರಗಳು ಎಂದು ಹೇಳುವ ಮೂಲಕ ಪ್ರಾರಂಭಿಸಿದರು.  ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ, ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಹುಬ್ಬಳ್ಳಿಯ ಜನರ ಪ್ರೀತಿಯನ್ನು ನಾನು ಎಂದೂ ಮರೆಯುವುದಿಲ್ಲ. ಕನ್ನಡಿಗ ಸ್ನೇಹಿತರು ನನಗೆ ಅಪಾರ ಪ್ರೀತಿ ತೋರಿಸಿದ್ದಾರೆ. ಕರ್ನಾಟಕದ ಪ್ರತಿ ವ್ಯಕ್ತಿ ಜೀವನ ಸಮೃದ್ಧಗೊಳಿಸುವ ಅವಕಾಶ ಸಿಕ್ಕಿದೆ ಎಂದರು.

  • 12 Mar 2023 05:14 PM (IST)

    PM Modi In Hubballi: ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್​ಫಾರ್ಮ್​ ಉದ್ಘಾಟಿಸಿದ ಪ್ರಧಾನಿ ಮೋದಿ

    ಧಾರವಾಡದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ, 20.1 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ​ ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್​ಫಾರ್ಮ್​ ಉದ್ಘಾಟಿಸಿದ ಪ್ರಧಾನಿ ಮೋದಿ.

  • 12 Mar 2023 04:48 PM (IST)

    IIT Dharwad Inauguration Live: ನನ್ನ ರಾಜಕೀಯ ಜೀವನದಲ್ಲೇ ಇಷ್ಟು ದೊಡ್ಡ ಕಾರ್ಯಕ್ರಮ ನೋಡಿಲ್ಲ; ಸಿಎಂ ಬೊಮ್ಮಾಯಿ

    ನನ್ನ ರಾಜಕೀಯ ಜೀವನದಲ್ಲೇ ಇಷ್ಟು ದೊಡ್ಡ ಕಾರ್ಯಕ್ರಮ ನೋಡಿಲ್ಲ. ಪ್ರಧಾನಿ ನರೇಂದ್ರ ಮೋದಿ ದೂರದೃಷ್ಟಿ ನಾಯಕ ಎಂದು ಸಿಎಂ ಬೊಮ್ಮಾಯಿ ಹೇಳಿದರು. ಐಐಟಿ ಕ್ಯಾಂಪಸ್​ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪ್ರಧಾನಿ ಮೋದಿ ಆಶೀರ್ವಾದದಿಂದ ರಾಜ್ಯದ ರೈಲ್ವೆ ಹಳಿಗಳ ಅಭಿವೃದ್ಧಿಯಾಗಿದೆ. ಬಜೆಟ್‌ನಲ್ಲಿ ಕರ್ನಾಟಕಕ್ಕೆ ಪ್ರಧಾನಿ ಮೋದಿ ಹೆಚ್ಚಿನ ಅನುದಾನ ನೀಡಿದ್ದಾರೆ. ಇದು ಡಬಲ್‌ ಇಂಜಿನ್ ಸರ್ಕಾರದ ಸಾಧನೆ, ಇದಕ್ಕೆ ಧಮ್ ಬೇಕಾಗುತ್ತೆ. ಡಬಲ್ ಇಂಜಿನ್ ಸರ್ಕಾರದಿಂದ ಮಾತ್ರ ಕರ್ನಾಟಕದ ಅಭಿವೃದ್ಧಿ ಸಾಧ್ಯ. ಯುವಕರಿಗೆ ಉದ್ಯೋಗ ಕಲ್ಪಿಸಲು ಡಬಲ್ ಇಂಜಿನ್ ಸರ್ಕಾರ ಶ್ರಮಿಸುತ್ತಿದೆ ಎಂದರು.

  • 12 Mar 2023 04:38 PM (IST)

    IIT Dharwad Inauguration Live: ಉದ್ಘಾಟನಾ ಕಾರ್ಯಕ್ರಮದಲ್ಲಿ ಸ್ವಾಗತ ಭಾಷಣ ಮಾಡಿದ ಜೋಶಿ

    ವಿವಿಧ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ, ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಜೋಶಿಯವರಿಂದ ಸ್ವಾಗತ ಭಾಷಣ. ಕಾರ್ಯಕ್ರಮಕ್ಕೆ ದೊಡ್ಡ ಸಂಖ್ಯೆಯಲ್ಲಿ ಜನ ಸೇರಿದ್ದಾರೆ. ಪ್ರಧಾನಿಯವರ ಅಮೃತ ಹಸ್ತದಿಂದ ಧಾರವಾಡದ ಐಐಟಿ ಉದ್ಘಾಟನೆ ಆಗಿದೆ. ಪ್ರಧಾನಿ ಮೋದಿ ಆಶೀರ್ವಾದದಿಂದ ಧಾರವಾಡದಲ್ಲಿ ಐಐಟಿ ಸ್ಥಾಪನೆ ಆಗಿದ್ದು, 2019ರ ಫೆ.10ರಂದು ಐಐಟಿ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿದ್ದರು. ಯುಪಿಎ ಆಡಳಿತ ಅವಧಿಯಲ್ಲಿ ದೇಶ ಭ್ರಷ್ಟಾಚಾರದಿಂದ ಮುಳುಗಿತ್ತು ಎಂದಿದ್ದಾರೆ.

  • 12 Mar 2023 04:32 PM (IST)

    IIT Dharwad Inauguration Live: ಪ್ರಧಾನಿ ಮೋದಿಯವರನ್ನ ಸನ್ಮಾನ ಮಾಡಿದ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ

    ಧಾರವಾಡದ ಐಐಟಿ ಕ್ಯಾಂಪಸ್​ನಿಂದ ಸಾರ್ವಜನಿಕ ಸಮಾವೇಶದ ವೇದಿಕೆಗೆ ಆಗಮಿಸಿದ ಪ್ರಧಾನಿ ಮೋದಿ. ಕಾರ್ಯಕ್ರಮದಲ್ಲಿ ಪ್ರಧಾನಿಗೆ ಏಲಕ್ಕಿ ಹಾರ, ಪೇಟ ಹಾಕಿ ಸನ್ಮಾನ ಮಾಡಿದ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ.

  • 12 Mar 2023 04:20 PM (IST)

    IIT Dharwad Inauguration Live: ಧಾರವಾಡದ ಐಐಟಿ ಕ್ಯಾಂಪಸ್​ ಉದ್ಘಾಟಿಸಿದ ಪ್ರಧಾನಿ ಮೋದಿ

    ರಿಬ್ಬನ್ ಕಟ್ ಮಾಡುವುದರ ಮೂಲಕ ಐಐಟಿ ಕ್ಯಾಂಪಸ್​ ಉದ್ಘಾಟಿಸಿದ ಪ್ರಧಾನಿ ಮೋದಿ.  852 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಪರಿಸರ ಸ್ನೇಹಿ ಐಐಟಿ ಕ್ಯಾಂಪಸ್​ ಇದಾಗಿದೆ.  ಧಾರವಾಡದ ಐಐಟಿ ಕ್ಯಾಂಪಸ್ ವೀಕ್ಷಣೆ ಮಾಡುತ್ತಿರುವ ಪ್ರಧಾನಿ ಮೋದಿ. ಪ್ರಧಾನಿಯವರಿಗೆ ನೂತನ ಕ್ಯಾಂಪಸ್ ಬಗ್ಗೆ ವಿವರಣೆ ನೀಡುತ್ತಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ.

  • 12 Mar 2023 04:13 PM (IST)

    PM Modi in Dharwad live: ಪ್ರಧಾನ ಸೇವಕನ ಆಗಮನಕ್ಕೆ ಕಾದು ಕುಳಿತ ಧಾರವಾಡದ ಜನತೆ; ​ಜೋಶಿ ಟ್ವಿಟ್

    ಫೇಡಾ ನಗರಿಗೆ ಪ್ರಥಮ ಬಾರಿಗೆ ಆಗಮಿಸುತ್ತಿರುವ ಹೆಮ್ಮೆಯ ಪ್ರಧಾನ ಸೇವಕನ ಆಗಮನಕ್ಕೆ ಕಾತರದಿಂದ ಕಾಯುತ್ತಿರುವ ಧಾರವಾಡದ ಜನತೆ ಎಂದು ಟ್ವಿಟ್​ ಮಾಡಿದ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ

  • 12 Mar 2023 03:59 PM (IST)

    PM Modi in Dharwad live: ಧಾರವಾಡದ ಐಐಟಿ ಕ್ಯಾಂಪಸ್​ನತ್ತ ಬಂದ ಸೇನಾ ಹೆಲಿಕಾಪ್ಟರ್​ಗಳು

    ಧಾರವಾಡದ ಐಐಟಿ ಕ್ಯಾಂಪಸ್​ನತ್ತ ಸೇನಾ ಹೆಲಿಕಾಪ್ಟರ್ ಗಳು ಆಗಮಿಸಿದ್ದು, ಕೆಲವೇ ಕ್ಷಣಗಳಲ್ಲಿ ಪ್ರಧಾನಿ ಮೋದಿ ಆಗಮಿಸಿಲಿದ್ದಾರೆ.

  • 12 Mar 2023 03:36 PM (IST)

    PM Modi in Dharwad live: ಧಾರವಾಡಕ್ಕೆ ಆಗಮಿಸಿದ ನರೇಂದ್ರ ಮೋದಿ ಕಾರ್ಯಕ್ರಮ ಹೀಗಿದೆ

    ಐಐಟಿ ಕ್ಯಾಂಪಸ್ ಸೇರಿ ವಿವಿಧ ಯೋಜನೆಗಳ ಉದ್ಘಾಟನೆಗೆ ಧಾರವಾಡಕ್ಕೆ ಆಗಮಿಸಿದ ನರೇಂದ್ರ ಮೋದಿ ಕಾರ್ಯಕ್ರಮ ಹೀಗಿದೆ.

    * ಧಾರವಾಡ ಐಐಟಿ ಉದ್ಘಾಟನೆ- 852ಕೋಟಿ ರೂ. * ಹುಬ್ಬಳ್ಳಿ ರೈಲು ನಿಲ್ದಾಣದ ಜಗತ್ತಿನ ಅತೀ ಉದ್ದದ ಪ್ಲಾಟ್‌ಫಾರ್ಮ್ ಲೋಕಾರ್ಪಣೆ-20.1ಕೋಟಿ *ಹೊಸಪೇಟೆ-ಹುಬ್ಬಳ್ಳಿ-ತಿನೈಘಾಟ್ ರೈಲ್ವೆ ಮಾರ್ಗದ ವಿದ್ಯುತ್ ಲೈನ್ ಲೋಕಾರ್ಪಣೆ-519ಕೋಟಿ ರೂ. *ಹೊಸಪೇಟೆಯ ಉನ್ನತೀಕರಣಗೊಂಡ ರೈಲ್ವೆ ನಿಲ್ದಾಣ ಉದ್ಘಾಟನೆ * ತುಪ್ಪರಿಹಳ್ಳ ಪ್ರವಾಹ ನಿಯಂತ್ರಣ ಕಾಮಗಾರಿಗೆ ಭೂಮಿ ಪೂಜೆ-150ಕೋಟಿ ರೂ. * ಹುಬ್ಬಳ್ಳಿ ಕಿಮ್ಸ್‌ನ ನೂತನ ವೈದ್ಯಕೀಯ ಸೌಲಭ್ಯ ಮತ್ತು ಹಾಸ್ಟೆಲ್ ಉದ್ಘಾಟನೆ-69.09 ಕೋಟಿ -ಹುಬ್ಬಳ್ಳಿ ಕಿಮ್ಸ್‌ನಲ್ಲಿ 11 ಎಕರೆಯಲ್ಲಿ ನಿರ್ಮಾಣ ಆಗಲಿರುವ ಜಯದೇವ ಹೃದ್ರೋಗ ಸಂಸ್ಥೆಯ ಘಟಕಕ್ಕೆ ಶಂಕುಸ್ಥಾಪನೆ-250 ಕೋಟಿ ರೂ. * ಧಾರವಾಡ ಜಿಲ್ಲೆಯ 144 ಗ್ರಾಪಂಗಳ 388 ಗ್ರಾಮಗಳ ಜಲಜೀವನ್ ಜಲಜೀವನ್ ಮಿಷನ್ ಯೋಜನೆ ಲೋಕಾರ್ಪಣೆ-1042.34 ಕೋಟಿ ರೂ. * ವಿವೇಕ ಯೋಜನೆ ಅಡಿ ಧಾರವಾಡ ಜಿಲ್ಲೆಯಲ್ಲಿ 295 ಶಾಲಾ‌ ಕೊಠಡಿಗಳ ನಿರ್ಮಾಣಕ್ಕೆ 42.15 ಕೋಟಿ ರೂ. ಬಿಡುಗಡೆ * ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ 15 ಕಾಮಗಾರಿ ಲೋಕಾರ್ಪಣೆ-353.48 ಕೋಟಿ ರೂ.

  • 12 Mar 2023 03:28 PM (IST)

    PM Modi in Dharwad live: ಧಾರವಾಡದ ಐಐಟಿ ಕ್ಯಾಂಪಸ್​ಗೆ ತೆರಳಿದ ಪ್ರಧಾನಿ ಮೋದಿ

    ಮೈಸೂರಿನಿಂದ ಭಾರತೀಯ ವಾಯುಸೇನೆಯ ವಿಶೇಷ ವಿಮಾನದಲ್ಲಿ ಹುಬ್ಬಳ್ಳಿಗೆ ಆಗಮಿಸಿದ ಪ್ರಧಾನಿ ಮೋದಿ. ಐಎಎಫ್​ ಹೆಲಿಕಾಪ್ಟರ್​ನಲ್ಲಿ ಧಾರವಾಡದ ಐಐಟಿ ಕ್ಯಾಂಪಸ್​ಗೆ ತೆರಳಿದ್ದಾರೆ.

  • 12 Mar 2023 03:23 PM (IST)

    PM Modi in Dharwad live: ಮೋದಿ ಆಗಮನ ಹಿನ್ನಲೆ ಹುಬ್ಬಳ್ಳಿ ಏರ್​ಪೋರ್ಟ್​ನಲ್ಲಿ ಬೀಗಿ ಬಂದೋಬಸ್ತ್​

    ಧಾರವಾಡದ ಐಐಟಿ ಉದ್ಘಾಟನೆ ಮಾಡಲಿರುವ ಪ್ರಧಾನಿ ಮೋದಿ. ಈ ಹಿನ್ನಲೆ  ಕೆಲವೇ ಕ್ಷಣಗಳಲ್ಲಿ ಧಾರವಾಡಕ್ಕೆ ಆಗಮಿಸಿಲಿದ್ದಾರೆ. ಇದಕ್ಕಾಗಿ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಭಾರೀ ಪೊಲೀಸ್‌ ಭದ್ರತೆ ಒದಗಿಸಲಾಗಿದೆ.

  • 12 Mar 2023 03:11 PM (IST)

    PM Modi in Dharwad live: ಕ್ಯಾಂಪಸ್ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ ಐಐಟಿ ವಿದ್ಯಾರ್ಥಿಗಳು

    ಧಾರವಾಡದಲ್ಲಿ ಐಐಟಿ ಕ್ಯಾಂಪಸ್ ಉದ್ಘಾಟಿಸಲಿರುವ ಪ್ರಧಾನಿ ಮೋದಿ. ಈ ಹಿನ್ನಲೆ ಪೋಷಕರ ಜೊತೆ ಕಾರ್ಯಕ್ರಮಕ್ಕೆ  ಐಐಟಿ ವಿದ್ಯಾರ್ಥಿಗಳು ಆಗಮಿಸಿದ್ದಾರೆ. ವಿದ್ಯಾರ್ಥಿಗಳಿಗೆ ಪ್ರತ್ಯೇಕ ಸ್ಥಳ ನಿಗದಿ ಪಡಿಸಿರುವ ಆಯೋಜಕರು. ವಿದ್ಯಾರ್ಥಿಗಳು, ಪೋಷಕರು ಸೇರಿ 1,100 ಜನರಿಗೆ ಅವಕಾಶ ಕಲ್ಪಿಸಲಾಗಿದೆ.

  • 12 Mar 2023 02:39 PM (IST)

    PM Narendra Modi Speech Live: ಕೆಲವೇ ಗಂಟೆಗಳಲ್ಲಿ ಧಾರವಾಡದ ಐಐಟಿ ಹೆಲಿಪ್ಯಾಡ್​ಗೆ ಆಗಮಿಸಲಿರುವ ಪ್ರಧಾನಿ ಮೋದಿ

    ಕೆಲವೇ ಗಂಟೆಗಳಲ್ಲಿ ಧಾರವಾಡದ ಐಐಟಿ ಹೆಲಿಪ್ಯಾಡ್ ಗೆ ಪ್ರಧಾನಿ ಮೋದಿ ಆಗಮಿಸಲಿದ್ದು, ರಾಜ್ಯದ ಮೊದಲ ಐಐಟಿ ಕಟ್ಟಡವನ್ಬ ಲೋಕಾರ್ಪಣೆಗೊಳಿಸಲಿದ್ದಾರೆ. ಜೊತೆಗೆ ಏಷ್ಯಾದ ಅತೀ ಉದ್ದದ ರೈಲ್ವೇ ಫ್ಲಾಟ್ ಫಾರಂ ಲೋಕಾರ್ಪಣೆ ಮಾಡಲಿದ್ದು, ಬಳಿಕ ಬೃಹತ್ ಸಾರ್ವಜನಿಕ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಲಿದ್ದಾರೆ.

  • 12 Mar 2023 02:33 PM (IST)

    PM Narendra Modi Speech Live: ಮೈಸೂರಿನಿಂದ ಹುಬ್ಬಳ್ಳಿಗೆ ತೆರಳಿದ ಪ್ರಧಾನಿ ನರೇಂದ್ರ ಮೋದಿ

    ಮೈಸೂರು:  ಮದ್ದೂರಿನಿಂದ‌ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ‌ ಬಂದಿಳಿದ ಪ್ರಧಾನಿ ಮೋದಿ. ಮಂಡಕಳ್ಳಿಯಿಂದ‌  ವಾಯುಸೇನೆಯ ವಿಶೇಷ ವಿಮಾನದಲ್ಲಿ ಮೈಸೂರಿನಿಂದ ಹುಬ್ಬಳ್ಳಿಗೆ ತೆರಳಿದರು.

  • 12 Mar 2023 01:52 PM (IST)

    PM Narendra Modi Speech Live: ಭಾಷಣ ಮುಗಿಸಿ ಹೆಲಿಪ್ಯಾಡ್​​ನತ್ತ ತೆರಳಿದ ಪ್ರಧಾನಿ ನರೇಂದ್ರ ಮೋದಿ

    ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಗೆಜ್ಜಲಗೆರೆ ಕಾಲೋನಿಯ ಹೆದ್ದಾರಿ ಉದ್ಘಾಟನಾ ಕಾರ್ಯಕ್ರಮದ ವೇದಿಕೆಯಿಂದ ಮೋದಿ ನಿರ್ಗಮಿಸಿ ಹೆಲಿಪ್ಯಾಡ್​​ನತ್ತ ತೆರಳಿದರು.

  • 12 Mar 2023 01:41 PM (IST)

    PM Narendra Modi Speech Live: 9 ವರ್ಷಗಳಲ್ಲಿ 3 ಕೋಟಿಗೂ ಹೆಚ್ಚು ಬಡವರಿಗೆ ಮನೆ ನೀಡಲಾಗಿದೆ -ಪ್ರಧಾನಿ ಮೋದಿ

    ಕಳೆದ 9 ವರ್ಷಗಳಲ್ಲಿ 3 ಕೋಟಿಗೂ ಹೆಚ್ಚು ಬಡವರಿಗೆ ಮನೆ ನೀಡಲಾಗಿದೆ. ಕರ್ನಾಟಕದಲ್ಲೂ ಬಡವರಿಗೆ ಮನೆ ನಿರ್ಮಾಣ, ಕುಡಿಯುವ ನೀರಿನ ಸಂಪರ್ಕ ನೀಡಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಹೇಳಿದರು. ಜಲ್​ಜೀವನ್ ಮಿಷನ್​ನಡಿ 40 ಲಕ್ಷ ಕುಟುಂಬಗಳಿಗೆ ನಲ್ಲಿ ನೀರಿನ ಸಂಪರ್ಕ ನೀಡಲಾಗಿದೆ. ಬಜೆಟ್​ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ಹಣ ಘೋಷಣೆ ಮಾಡಲಾಗಿದೆ. ಮಂಡ್ಯ ಜಿಲ್ಲೆಯ ರೈತರ ಖಾತೆಗಳಿಗೆ ನೇರವಾಗಿ ಹಣ ಜಮೆ ಮಾಡಲಾಗಿದೆ. 3 ಲಕ್ಷಕ್ಕೂ ಹೆಚ್ಚು ರೈತರಿಗೆ 600 ಕೋಟಿಗೂ ಹೆಚ್ಚು ಹಣ ವರ್ಗಾವಣೆ ಮಾಡಲಾಗಿದೆ. ಕರ್ನಾಟಕದ ಬಿಜೆಪಿ ಸರ್ಕಾರಕ್ಕೆ ಅಭಿನಂದನೆ ಎಂದರು.

  • 12 Mar 2023 01:31 PM (IST)

    PM Narendra Modi Speech Live: ಕಾಂಗ್ರೆಸ್ ವಿರುದ್ಧ ಪ್ರಧಾನಮಂತ್ರಿ ನರೇಂದ್ರ ಮೋದಿ ತೀವ್ರ ವಾಗ್ದಾಳಿ

    ದಶಪಥ ಹೆದ್ದಾರಿಯಿಂದ ಪ್ರವಾಸೋದ್ಯಮ ಕ್ಷೇತ್ರ ಮತ್ತಷ್ಟು ಬೆಳೆಯಲಿದೆ. 2014ಕ್ಕಿಂತ ಮೊದಲು ದೇಶದ ಬಡವರ ಬಗ್ಗೆ ಕಾಳಜಿ ತೋರಿಸಲಿಲ್ಲ. ಬಡವರ ಹೆಸರಿನ ಯೋಜನೆಯಲ್ಲಿ ಕೋಟ್ಯಂತರ ಹಣ ಲೂಟಿ ಮಾಡಿದರು ಎಂದು ಕಾಂಗ್ರೆಸ್ ವಿರುದ್ಧ ಪ್ರಧಾನಮಂತ್ರಿ ನರೇಂದ್ರ ಮೋದಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. 2014ರಲ್ಲಿ ದೇಶದ ಜನರು ನನಗೆ ಆಶೀರ್ವಾದ ನೀಡಿದರು. ದೇಶದ ಅಭಿವೃದ್ಧಿಗಾಗಿ 2014ರಲ್ಲಿ ಬಡವರ ಪರ ಸರ್ಕಾರ ಅಧಿಕಾರಕ್ಕೆ ಬಂತು. ಬಡವರ ಕಷ್ಟಗಳನ್ನು ಅರಿತುಕೊಂಡು ನಿವಾರಿಸಲು ಪ್ರಯತ್ನಿಸುತ್ತಿದ್ದೇವೆ. ಕಳೆದ 9 ವರ್ಷಗಳಲ್ಲಿ ಕೇಂದ್ರ ಯೋಜನೆಯಿಂದ ಬಡವರ ಬದುಕು ಹಸನಾಗಿದೆ ಎಂದರು.

  • 12 Mar 2023 01:27 PM (IST)

    PM Narendra Modi Speech Live: ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ

    ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಗೆಜ್ಜಲಗೆರೆ ಕಾಲೋನಿಯಲ್ಲಿ ನಡೆಯುತ್ತಿರುವ ಸಮಾವೇಶದಲ್ಲಿ ನರೇಂದ್ರ ಮೋದಿ ಕನ್ನಡದಲ್ಲೇ ಭಾಷಣ ಆರಂಭಿಸಿದರು. ತಾಯಿ ಭುವನೇಶ್ವರಿಗೆ ನಮಸ್ಕಾರಗಳು. ನಿಮ್ಮ ಪ್ರೀತಿಯ ಋಣ ಬಡ್ಡಿ ಸಮೇತ ನಮ್ಮ ಸರ್ಕಾರ ತೀರಿಸಲಿದೆ. ಕಳೆದ ಕೆಲವು ದಿನಗಳಿಂದ ಹೆದ್ದಾರಿ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಸಾಮಾಜಿಕ ಜಾಲತಾಣದಲ್ಲೂ ದಶಪಥ ಹೆದ್ದಾರಿ ಬಗ್ಗೆ ಚರ್ಚೆ ಆಗುತ್ತಿದೆ. ಮೈಸೂರು-ಬೆಂಗಳೂರು ಹೆದ್ದಾರಿಯ ಫೋಟೋಗಳು ವೈರಲ್​ ಆಗಿವೆ. ಮೈಸೂರು-ಕುಶಾಲನಗರ 4 ಪಥದ ರಸ್ತೆಗೆ ಶಿಲಾನ್ಯಾಸ ನೆರವೇರಿಸಿದ್ದೇವೆ. ದಶಪಥ ಹೆದ್ದಾರಿಯಿಂದ ಈ ಭಾಗದಲ್ಲಿ ಸಾಕಷ್ಟು ಅನುಕೂಲವಾಗಲಿದೆ. ಈ ಪುಣ್ಯಭೂಮಿ ಕೃಷ್ಣರಾಜ ಒಡೆಯರ್, ವಿಶ್ವೇಶ್ವರಯ್ಯರನ್ನು ದೇಶಕ್ಕೆ ನೀಡಿದೆ. ಇಂದು ಭಾರತ ಸಾಕಷ್ಟು ಬದಲಾವಣೆ ಆಗುತ್ತಿದೆ. ಭಾರತ ಮಾಲಾ, ಸಾಗರ ಮಾಲಾ ಯೋಜನೆಯಿಂದ ದೇಶ ಅಭಿವೃದ್ಧಿ. ಮೂಲಭೂತ ಕ್ಷೇತ್ರದಲ್ಲಿ ಡಬಲ್​ ಇಂಜಿನ್​ ಸರ್ಕಾರದಿಂದ ಬದಲಾವಣೆ ಎಂದರು.

  • 12 Mar 2023 01:11 PM (IST)

    Bengaluru Mysuru Expressway Inauguration Live: ಮೈಸೂರು-ಕುಶಾಲನಗರ ಹೆದ್ದಾರಿ ಕಾಮಗಾರಿಗೆ ಮೋದಿ ಶಿಲಾನ್ಯಾಸ

    ಮೈಸೂರು-ಕುಶಾಲನಗರ ಹೆದ್ದಾರಿ ಕಾಮಗಾರಿಗೆ ಮೋದಿ ಶಿಲಾನ್ಯಾಸ ನೆರವೇರಿಸಿದರು. 4128.92 ಕೋಟಿ ವೆಚ್ಚದ 92.33 ಕಿ.ಮೀ. ಉದ್ದದ ಹೆದ್ದಾರಿ ಕಾಮಗಾರಿಗೆ ಗೆಜ್ಜಲಗೆರೆ ಕಾಲೋನಿನ ಸಮಾವೇಶದಲ್ಲಿ ಶಿಲಾನ್ಯಾಸ ಮಾಡಿದ್ದಾರೆ. ಸಿಎಂ ಬೊಮ್ಮಾಯಿ, ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಪ್ರಹ್ಲಾದ್ ಜೋಶಿ, ಸಂಸದರಾದ ಪ್ರತಾಪ್ ಸಿಂಹ, ಸುಮಲತಾ, ಸಚಿವರಾದ ಕೆ.ಗೋಪಾಲಯ್ಯ, ಕೆ.ಸಿ.ನಾರಾಯಣಗೌಡ, ಎಸ್.ಟಿ.ಸೋಮಶೇಖರ್ ಮತ್ತಿತರರು ಉಪಸ್ಥಿತರಿದ್ದರು.

  • 12 Mar 2023 01:08 PM (IST)

    Bengaluru Mysuru Expressway Inauguration Live: ಬಿಜೆಪಿಯಿಂದ ಮಾತ್ರ ಭಾರತದ ಅಭಿವೃದ್ಧಿ ಸಾಧ್ಯ-ಸಿಎಂ

    ಮಂಡ್ಯ ಅಂದ್ರೆ ಇಂಡಿಯಾ ಎಂದು ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡ್ಯ ಜನರನ್ನು ಹುರಿದುಂಬಿಸಿದರು. ಮೋದಿಯವರನ್ನು ವಿಶ್ವನಾಯಕ ಎಂದು ಕರೆಯಲು ಕಾರಣವಿದೆ. ವಿರೋಧಿ ರಾಷ್ಟ್ರಗಳಲ್ಲಿನ ಜನ ಕೂಡ ಮೋದಿಯನ್ನು ಒಪ್ಪಿಕೊಂಡಿದ್ದಾರೆ. ಅಮೆರಿಕ, ಚೀನಾ ನಾಗರಿಕರು ಕೂಡ ವಿಶ್ವನಾಯಕ ಎಂದು ಕರೆದಿದ್ದಾರೆ. 2014ರಲ್ಲಿ ಮೋದಿ ಪ್ರಧಾನಿಯಾದ ಮೇಲೆ ದೇಶ ಅಭಿವೃದ್ಧಿ ಆಗುತ್ತಿದೆ. ವಿಪಕ್ಷಗಳು ಸುಳ್ಳು ಹೇಳಿ ಜನರನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿವೆ. ಅಡಿಗಲ್ಲು ಹಾಕಿ ಉದ್ಘಾಟನೆ ಮಾಡುತ್ತಿರುವುದು ಮೋದಿ ಸರ್ಕಾರ. ಡಬಲ್​ ಇಂಜಿನ್ ಸರ್ಕಾರ ರಾಜ್ಯದ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಮಂಡ್ಯದ ಮೈಶುಗರ್ ಕಾರ್ಖಾನೆ ಪುನಾರಂಭ ಮಾಡಿದ್ದು ಬಿಜೆಪಿ. ಕಿಸಾನ್ ಸಮ್ಮಾನ್ ಯೋಜನೆಯಿಂದ ರೈತರಿಗೆ ಅನುಕೂಲವಾಗಿದೆ. ಮಂಡ್ಯದ 2 ಲಕ್ಷಕ್ಕೂ ಹೆಚ್ಚು ಜನ ಯೋಜನೆ ಲಾಭ ಪಡೆದಿದ್ದಾರೆ. ಬಿಜೆಪಿಯಿಂದ ಮಾತ್ರ ಭಾರತದ ಅಭಿವೃದ್ಧಿ ಸಾಧ್ಯ. ಎಲ್ಲ ಪಕ್ಷಗಳ ಅಭಿವೃದ್ಧಿ ರಿಪೋರ್ಟ್ ನೋಡಿ ನೀವು ಬೆಂಬಲ ನೀಡಿ. ಮುಂದಿನ ದಿನಗಳಲ್ಲಿ ಬಿಜೆಪಿ ಬೆಂಬಲಿಸುವ ಮೂಲಕ ಆಶೀರ್ವದಿಸಿ ಎಂದರು.

  • 12 Mar 2023 12:59 PM (IST)

    Bengaluru Mysuru Expressway Inauguration Live: ನರೇಂದ್ರ ಮೋದಿ ನಾಯಕತ್ವ ಕೊಂಡಾಡಿದ ಸಿಎಂ ಬೊಮ್ಮಾಯಿ

    ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನರೇಂದ್ರ ಮೋದಿ ನಾಯಕತ್ವ ಕೊಂಡಾಡಿದ್ದಾರೆ. ಪಾಕಿಸ್ತಾನ, ಚೀನಾ ನಾಗರಿಕರಿಗೂ ನರೇಂದ್ರ ಮೋದಿ ಮೆಚ್ಚುಗೆ. ಮೋದಿ ರೀತಿ ನಾಯಕ ಬೇಕು ಅಂತಿದ್ದಾರೆ ಪಾಕಿಸ್ತಾನದ ಜನ. ಮೋದಿ ವಿಶ್ವ ನಾಯಕ ಅಂತಾ ಹೊಗಳುತ್ತಾರೆ ಚೀನಾದವರು. ಅಮೆರಿಕ ಪ್ರಜೆಗಳಿಂದಲೂ ನರೇಂದ್ರ ಮೋದಿಗೆ ಬಹುಪರಾಕ್ ಹೇಳಲಾಗಿದೆ ಎಂದು ಮಂಡ್ಯ ಸಮಾವೇಶದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮೋದಿಯವರನ್ನು ಕೊಂಡಾಡಿದರು.

  • 12 Mar 2023 12:54 PM (IST)

    Bengaluru Mysuru Expressway Inauguration Live: ಡಿಸೆಂಬರ್​ನಲ್ಲಿ ಬೆಂಗಳೂರು-ಚೆನ್ನೈ ಎಕ್ಸ್ ಪ್ರೆಸ್ ವೇ ಉದ್ಘಾಟನೆ

    ಸಾರ್ವಜನಿಕ ಸಮಾವೇಶದಲ್ಲಿ ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಇಲಾಖೆ ಸಚಿವ ನಿತಿನ್ ಗಡ್ಕರಿ ಮಾತನಾಡಿದ್ದು, ಕರ್ನಾಟಕ ಇತಿಹಾಸದಲ್ಲಿ ಇಂದು ಐತಿಹಾಸಿಕ ದಿನ. ಹೆದ್ದಾರಿ ನಿರ್ಮಾಣದ ವೇಳೆ ಹಳೆಯ ರಸ್ತೆಗಳನ್ನು ದುರಸ್ತಿಪಡಿಸಿದ್ದೇವೆ. 8 ಕಿ.ಮೀ. ಎಲಿವೇಟೆಡ್ ನಿರ್ಮಾಣ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ತಮಿಳುನಾಡಿಗೂ ಹೆದ್ದಾರಿ ಸಂಪರ್ಕ ಹೊಂದಲಿದೆ. ಕರ್ನಾಟಕದಲ್ಲಿ ಡಬಲ್​ ಇಂಜಿನ್​ ಸರ್ಕಾರದಿಂದ ಅಭಿವೃದ್ಧಿ ಪರ್ವ ಶುರುವಾಗಿದೆ. ಮೋದಿ ನೇತೃತ್ವದ ಸರ್ಕಾರ ಮೂಲ ಸೌಕರ್ಯಕ್ಕೆ ಹೆಚ್ಚು ಒತ್ತು ನೀಡಿದೆ. 20 ಸಾವಿರ ಕೋಟಿ ವೆಚ್ಚದಲ್ಲಿ ಬೆಂಗಳೂರು-ಚೆನ್ನೈ ಹೆದ್ದಾರಿ ನಿರ್ಮಾಣ ಮಾಡಲಾಗುತ್ತೆ. 2024ರ ಮಾರ್ಚ್​ ವೇಳೆಗೆ ಹೆದ್ದಾರಿ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ ಎಂದರು.

  • 12 Mar 2023 12:52 PM (IST)

    Bengaluru Mysuru Expressway Inauguration Live: ಮೋದಿ ಸನ್ಮಾನಿಸಿದ ಸಿಎಂ ಬೊಮ್ಮಾಯಿ

    ಗೆಜ್ಜಲಗೆರೆ ಕಾಲೋನಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರನ್ನು ಸಿಎಂ ಬೊಮ್ಮಾಯಿ ಸನ್ಮಾನಿಸಿದರು. ಹಸಿರು ಶಾಲು ಹೊದಿಸಿ, ಮೈಸೂರು ಪೇಟಾ ತೊಡಿಸಿ, ಮಲ್ಲಿಗೆ ಹೂವಿನ ಹಾರ ಹಾಕಿ, ನೆನಪಿನ ಕಾಣಿಕೆ ನೀಡಿ ಸನ್ಮಾನ ಮಾಡಿದರು.

  • 12 Mar 2023 12:49 PM (IST)

    Bengaluru Mysuru Expressway Inauguration Live: ಸಮಾವೇಶದ ವೇದಿಕೆಗೆ ಆಗಮಿಸಿದ ಪ್ರಧಾನಿ ಮೋದಿ, ಸಿಎಂ ಬೊಮ್ಮಾಯಿ

    ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಗೆಜ್ಜಲಗೆರೆ ಕಾಲೋನಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಉದ್ಘಾಟನಾ ಸಮಾರಂಭದ ವೇದಿಕೆಗೆ ಪ್ರಧಾನಿ ಮೋದಿ, ಸಿಎಂ ಬೊಮ್ಮಾಯಿ ಆಗಮಿಸಿದ್ದಾರೆ. ಕೇಂದ್ರ ಸಚಿವರಾದ ಜೋಶಿ, ಗಡ್ಕರಿ, ಸಂಸದರಾದ ಸುಮಲತಾ, ಪ್ರತಾಪ್​ ಸಿಂಹ, ಸಚಿವರಾದ ಕೆ.ಗೋಪಾಲಯ್ಯ, ಕೆ.ಸಿ.ನಾರಾಯಣಗೌಡ ಸೇರಿ ಹಲವರು ಭಾಗಿಯಾಗಿದ್ದಾರೆ.

  • 12 Mar 2023 12:33 PM (IST)

    Bengaluru Mysuru Expressway Inauguration Live: ಎಕ್ಸ್​ಪ್ರೆಸ್​ ಹೈವೇ ಮಾಡೆಲ್​ ವೀಕ್ಷಿಸಿದ ಪ್ರಧಾನಿ ನರೇಂದ್ರ ಮೋದಿ

    ಪ್ರಧಾನಿ ನರೇಂದ್ರ ಮೋದಿ ಎಕ್ಸ್​ಪ್ರೆಸ್​ ಹೈವೇ ಕಾಮಗಾರಿ ಗ್ಯಾಲರಿ ವೀಕ್ಷಿಸಿದರು. ಈ ವೇಳೆ ಸಿಎಂ ಬೊಮ್ಮಾಯಿ, ಕೇಂದ್ರ ಸಚಿವರಾದ ಗಡ್ಕರಿ, ಜೋಶಿ ಉಪಸ್ಥಿತರಿದ್ದರು.

  • 12 Mar 2023 12:29 PM (IST)

    Bengaluru Mysuru Expressway Inauguration Live: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೈವೇ ಉದ್ಘಾಟಿಸಿದ ಪ್ರಧಾನಿ ಮೋದಿ

    ಮಂಡ್ಯ ತಾಲೂಕಿನ ಹನಕೆರೆ ಗ್ರಾಮದ ಬಳಿ 118 ಕಿ.ಮೀ. ಉದ್ದದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೈವೇಯನ್ನು ಪ್ರಧಾನಿ ಮೋದಿ ಅಧಿಕೃತವಾಗಿ ಲೋಕಾರ್ಪಣೆ ಮಾಡಿದ್ದಾರೆ. 8,479 ಕೋಟಿ ರೂ. ವೆಚ್ಚದಲ್ಲಿ ಎಕ್ಸ್‌ಪ್ರೆಸ್‌ ಹೈವೇ ನಿರ್ಮಾಣವಾಗಿದೆ. ಹೈವೇ ಉದ್ಘಾಟನೆ ವೇಳೆ ಪ್ರಧಾನಿ ಮೋದಿಗೆ ಕಲಾತಂಡಗಳಿಂದ ಸ್ವಾಗತ ಕೋರಲಾಯಿತು.

  • 12 Mar 2023 11:49 AM (IST)

    PM Modi Roadshow Live: ಮಂಡ್ಯದಲ್ಲಿ ಮೋದಿ ರೋಡ್‌ಶೋ ಆರಂಭ

    ಮಂಡ್ಯದ ಪ್ರವಾಸಿಮಂದಿರ ಸರ್ಕಲ್​ನಿಂದ ಮೋದಿ ರೋಡ್‌ಶೋ ಆರಂಭಿಸಿದ್ದಾರೆ. ಪ್ರವಾಸಿಮಂದಿರ ವೃತ್ತದಿಂದ ನಂದಾ ಸರ್ಕಲ್‌ವರೆಗೆ ರೋಡ್‌ಶೋ ನಡೆಯಲಿದ್ದು ರೋಡ್​ ಶೋ ವೇಳೆ ಪ್ರಧಾನಿ ಮೋದಿ ಮೇಲೆ ಹೂವಿನ ಸುರಿಮಳೆಯಾಗಿದೆ. ಮಾರ್ಗಮಧ್ಯೆ ಕಾರು ನಿಲ್ಲಿಸಿ ಮೋದಿ ಜನರತ್ತ ಕೈಬೀಸಿದ್ದಾರೆ. 1.8 ಕಿ.ಮೀ. ದೂರ ಪ್ರಧಾನಮಂತ್ರಿ ನರೇಂದ್ರ ಮೋದಿ ರೋಡ್​ಶೋ ನಡೆಯಲಿದೆ.

  • 12 Mar 2023 11:37 AM (IST)

    PM Modi In Karnataka Live: ಮದ್ದೂರಿನಲ್ಲಿ ಪ್ರಧಾನಿ ಮೋದಿ ಸಮಾವೇಶಕ್ಕೆ ಬಂದಿದ್ದ ವೃದ್ಧೆ ಅಸ್ವಸ್ಥ

    ಮದ್ದೂರಿನಲ್ಲಿ ಪ್ರಧಾನಿ ಮೋದಿ ಸಮಾವೇಶಕ್ಕೆ ಬಂದಿದ್ದ ವೃದ್ಧೆ ಅಸ್ವಸ್ಥಗೊಂಡಿದ್ದಾರೆ. ಚೇರಿನಿಂದ ಕೆಳಗೆ ಕುಸಿದು ಬಿದ್ದಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಅಸ್ವಸ್ಥ ವೃದ್ಧೆಯನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.

  • 12 Mar 2023 11:28 AM (IST)

    PM Modi In Karnataka Live: ಸರಣಿ ಟ್ವೀಟ್ ಮಾಡಿ ಆಕ್ರೋಶ ಹೊರ ಹಾಕಿದ ಹೆಚ್​ಡಿ ಕುಮಾರಸ್ವಾಮಿ

    ಇದು ಅತ್ಯಂತ ಮುಖ್ಯ ವಿಷಯ. ಬೆಂಗಳೂರು-ಮೈಸೂರು ನಗರಗಳ ನಡುವೆ ನಿರ್ಮಿಸಿರುವ ದಶಪಥ ಹೆದ್ದಾರಿ ಯಾರಿಗೆ ಉಪಯೋಗ? ಹಣ ಮಾಡಲು ಯಾರಿಗೆ ರಹದಾರಿ? ಎನ್ನುವುದು ನನ್ನ ಪ್ರಶ್ನೆ. ರಾಮನಗರ, ಮಂಡ್ಯ ಜಿಲ್ಲೆಗಳ ಜನರಿಗೆ, ಅದರಲ್ಲೂ ಬೆಂಗಳೂರು-ಮೈಸೂರು ನಡುವೆ ಆ ಹೆದ್ದಾರಿ ಉದ್ದಕ್ಕೂ ಜೀವಿಸುತ್ತಿರುವ ಜನರಿಗೆ ಇದರಿಂದ ನಯಾಪೈಸೆ ಉಪಯೋಗ ಇದೆಯಾ? ಇಲ್ಲ ಎಂದು ಹೆಚ್​ಡಿ ಕುಮಾರಸ್ವಾಮಿ ಸರಣಿ ಟ್ವೀಟ್ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ.

  • 12 Mar 2023 11:25 AM (IST)

    PM Modi In Karnataka Live: ಮೋದಿಗಾಗಿ ಸ್ಪೆಷಲ್​ ಗಿಫ್ಟ್ ತಂದ ಮಂಡ್ಯ ಸಂಸದೆ

    ಪ್ರಧಾನಿ ಮೋದಿ ಅವರಿಗೆ ಉಡುಗೊರೆ ನೀಡಲು ಮಂಡ್ಯ ಸಂಸದೆ ಸುಮಲತಾ ಅವರು ಸ್ಪೇಷಲ್ ಆಗಿ ಪ್ಯಾಕ್ ಮಾಡಿಸಿಕೊಂಡು ಬೆಲ್ಲ ತಂದಿದ್ದಾರೆ.

  • 12 Mar 2023 11:23 AM (IST)

    PM Modi In Karnataka Live: ಮಗುವಿನ ಶರ್ಟ್​ ಬಿಚ್ಚಿಸಿದ ಪೊಲೀಸರು

    ಮಂಡ್ಯದಲ್ಲಿ ಕಪ್ಪು ಬಟ್ಟೆ ಧರಿಸಿ ಬಂದಿದ್ದ ಮಗುವಿನ ಶರ್ಟ್​ನ್ನು ಪೊಲೀಸರು ಬಿಚ್ಚಿಸಿದ್ದಾರೆ.

  • 12 Mar 2023 11:18 AM (IST)

    PM Modi In Karnataka Live: ಮಂಡ್ಯದ ಪಿಇಎಸ್ ಕಾಲೇಜು ಹೆಲಿಪ್ಯಾಡ್‌ಗೆ ಮೋದಿ ಆಗಮನ

    ಮೈಸೂರಿನಿಂದ ಹೆಲಿಕಾಪ್ಟರ್​​ನಲ್ಲಿ ಮಂಡ್ಯದ ಪಿಇಎಸ್ ಕಾಲೇಜು ಹೆಲಿಪ್ಯಾಡ್‌ಗೆ ಮೋದಿ ಬಂದಿಳಿದಿದ್ದಾರೆ. ಕೆಲವೇ ಕ್ಷಣಗಳಲ್ಲಿ ಪ್ರವಾಸಿಮಂದಿರ ವೃತ್ತದಿಂದ ಮೋದಿ ರೋಡ್‌ಶೋ ಆರಂಭವಾಗಲಿದೆ.

  • 12 Mar 2023 10:59 AM (IST)

    PM Modi In Karnataka Live: ಕೆಲವೇ ಕ್ಷಣಗಳಲ್ಲಿ ಮಂಡ್ಯದ ಪಿಇಎಸ್ ಕಾಲೇಜಿಗೆ ತೆರಳುವ ಮೋದಿ

    ಕೆಲವೇ ಕ್ಷಣಗಳಲ್ಲಿ ವಿಶೇಷ ಹೆಲಿಕಾಪ್ಟರ್‌ನಲ್ಲಿ ಮಂಡ್ಯದ ಪಿಇಎಸ್ ಕಾಲೇಜಿನತ್ತ ಪ್ರಧಾನಿ ಮೋದಿ ಪ್ರಯಾಣ ಬೆಳೆಸಲಿದ್ದಾರೆ. ಬಳಿಕ ಮಂಡ್ಯದ ಪ್ರವಾಸಿಮಂದಿರ ವೃತ್ತದಿಂದ ನಂದ ಸರ್ಕಲ್‌ವರೆಗೆ ರೋಡ್‌ಶೋ ನಡೆಸಲಿದ್ದಾರೆ.

  • 12 Mar 2023 10:57 AM (IST)

    PM Modi In Karnataka Live: ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ಮೋದಿ

    ವಾಯುಪಡೆ ವಿಶೇಷ‌ ವಿಮಾನದಲ್ಲಿ ಮೈಸೂರು ವಿಮಾನ ನಿಲ್ದಾಣಕ್ಕೆ ಪ್ರಧಾನಿ ಮೋದಿ ಬಂದಿಳಿದಿದ್ದಾರೆ.

  • 12 Mar 2023 10:55 AM (IST)

    PM Modi Karnataka Visit Live: ಇಂದು ಧಾರವಾಡ ಐಐಟಿ ಉದ್ಘಾಟಿಸಲಿರುವ ಪ್ರಧಾನಿ ಮೋದಿ

    ಇಂದು ಧಾರವಾಡಕ್ಕೆ ಮೋದಿ ಆಗಮಿಸಲಿದ್ದು ಐಐಟಿ ಉದ್ಘಾಟಿಸಲಿದ್ದಾರೆ. ಧಾರವಾಡ ನೆನಪಿಗಾಗಿ ಮೋದಿಗೆ ಕಸೂತಿ ಶಾಲು ಉಡುಗೊರೆ ನೀಡಲಿದ್ದಾರೆ. ಶಾಲು ಜೊತೆಗೆ ಕಲಘಟಗಿ ತೊಟ್ಟಿಲಿನ ಮಾದರಿ ನೀಡಿ ಸನ್ಮಾನ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಗೋಪುರ, ನಕ್ಷತ್ರಗಳನ್ನು ಬಿಡಿಸಿದ ಶಾಲಿಗೆ ಗೊಂಡೆ ಜೋಡಣೆ ಮಾಡಲಾಗಿದೆ. ಶಾಲಿಗೆ ಸಖಿ ಸಾಫಲ್ಯ ಸಂಸ್ಥೆಯ ಮಹಿಳೆಯರಿಂದ 2 ದಿನಗಳ ಕಾಲ ಕಸೂತಿ ಮಾಡಲಾಗಿದೆ.

  • 12 Mar 2023 10:28 AM (IST)

    PM Modi Karnataka Visit Live: ಕಣಮಿಣಿಕೆ ಗ್ರಾಮದ ಬಳಿಯ ಟೋಲ್ ಪ್ಲಾಜಾ ಎದುರು ಪ್ರತಿಭಟನೆ

    ಇಂದು ಬೆಂಗಳೂರು ಮೈಸೂರು ‌ಎಕ್ಸ್ ಪ್ರೆಸ್ ವೇ ಉದ್ಘಾಟನೆ ಹಿನ್ನೆಲೆ ಪ್ರಧಾನಿ ಮೋದಿ ಉದ್ಘಾಟನೆ ವಿರೋಧಿಸಿ ವಿವಿಧ ಕನ್ನಡಪರ ಸಂಘಟನೆ ಕಾರ್ಯಕರ್ತರು ಬೆಂಗಳೂರು ದಕ್ಷಿಣ ತಾಲೂಕಿನ ಕಣಮಿಣಿಕೆ ಬಳಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕಣಮಿಣಿಕೆ ಗ್ರಾಮದ ಬಳಿಯ ಟೋಲ್ ಪ್ಲಾಜಾ ಎದುರು ಪ್ರತಿಭಟನೆ ನಡೆಯುತ್ತಿದೆ. ಪ್ರಧಾನಿ ಮೋದಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಲಾಗುತ್ತಿದೆ.

  • 12 Mar 2023 09:58 AM (IST)

    PM Modi Karnataka Visit Live: ಗೆಜ್ಜಲಗೆರೆ ಬೃಹತ್​​ ಸಮಾವೇಶ ಸ್ಥಳದಲ್ಲಿ ಶ್ವಾನ ದಳ, ಪೊಲೀಸರಿಂದ ಭದ್ರತಾ ಪರಿಶೀಲನೆ

    ಮಂಡ್ಯದಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ನಡೆಸಲಿದ್ದಾರೆ. ಬಳಿಕ ಮದ್ದೂರು ತಾಲೂಕಿನ ಗೆಜ್ಜಲಗೆರೆ ಬಳಿ ಬೃಹತ್​​ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಹೀಗಾಗಿ ಸಮಾವೇಶ ಸ್ಥಳದಲ್ಲಿ ಶ್ವಾನ ದಳ, ಪೊಲೀಸರಿಂದ ಭದ್ರತಾ ಪರಿಶೀಲನೆ ನಡೆಸಲಾಗುತ್ತಿದೆ.

  • 12 Mar 2023 09:14 AM (IST)

    PM Modi Karnataka Visit Live: ಜನ ಹೊಸ ಬದಲಾವಣೆಯ ನಿರೀಕ್ಷೆಯಲ್ಲಿ ಇದ್ದಾರೆ-ಸುಮಲತಾ

    ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಜನ ಹೊಸ ಬದಲಾವಣೆಯ ನಿರೀಕ್ಷೆಯಲ್ಲಿ ಇದ್ದಾರೆ. ಬದಲಾವಣೆ ಗಾಳಿ ಮೇಲ್ನೋಟಕ್ಕೆ ಕಾಣುತ್ತಿಲ್ಲ ಜನರ ಮನಸ್ಸಿನಲ್ಲಿ ಇದೆ. ಮಂಡ್ಯದಲ್ಲಿ ಮೋದಿ 1.8 ಕಿ.ಮೀ. ರೋಡ್​ ಶೋ ನಡೆಸಲಿದ್ದಾರೆ. ಗೆಜ್ಜಲಗೆರೆ ಕಾಲೋನಿಯಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಗೆಜ್ಜಲಗೆರೆಯಲ್ಲಿ ಪ್ರಧಾನಿ ಮೋದಿ ಸ್ವಾಗತ ಮಾಡಲಿದ್ದೇವೆ ಎಂದು ಬೆಂಗಳೂರಿನಲ್ಲಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ತಿಳಿಸಿದರು.

  • 12 Mar 2023 09:12 AM (IST)

    PM Modi Karnataka Visit Live: ಮೋದಿ ಕಾರ್ಯಕ್ರಮದಲ್ಲಿ ಭರ್ಜರಿ ಊಟದ ವ್ಯವಸ್ಥೆ

    ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಗೆಜ್ಜಲಗೆರೆಯಲ್ಲಿ ಪ್ರಧಾನಿ ಮೋದಿ ಕಾರ್ಯಕ್ರಮ ಹಿನ್ನೆಲೆ ಊಟದ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮಕ್ಕೆ ಬರುವ ಎರಡೂವರೆ ಲಕ್ಷ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದ್ದು ಪಲಾವ್, ಮೊಸರನ್ನ, ಗೋಧಿ ಪಾಯಸ, ಉಪ್ಪಿಟ್ಟು, ಕೇಸರಿ ಬಾತ್ ಇರಲಿದೆ.

  • 12 Mar 2023 09:08 AM (IST)

    PM Modi Karnataka Visit Live: ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಲಿರುವ ಸಂಸದೆ ಸುಮಲತಾ

    ಇಂದು ಪ್ರಧಾನಿ ನರೇಂದ್ರ ಮೋದಿ ಮಂಡ್ಯಕ್ಕೆ ಭೇಟಿ ಹಿನ್ನೆಲೆ ಪ್ರಧಾನಿಯನ್ನು ಸಂಸದೆ ಸುಮಲತಾ ಸ್ವಾಗತಿಸಲಿದ್ದಾರೆ. ಮೋದಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಬೆಂಬಲ ಘೋಷಿಸಿದ ಬಳಿಕ ಮೊದಲ ಬಾರಿ ಮಂಡ್ಯಕ್ಕೆ ಮೋದಿ ಭೇಟಿ ನೀಡುತ್ತಿದ್ದಾರೆ. ಹೀಗಾಗಿ ಇಂದು ಮೋದಿಗೆ ಸಾವಯವ ಬೆಲ್ಲ ಉಡುಗೊರೆ ನೀಡಲಿದ್ದಾರೆ.

  • 12 Mar 2023 09:05 AM (IST)

    PM Modi Karnataka Visit Live: ಮಂಡ್ಯ ನಗರ, ಮದ್ದೂರು ಪಟ್ಟಣದಲ್ಲಿ ಭಾರಿ ಪೊಲೀಸ್ ಬಂದೋಬಸ್ತ್

    ಇಂದು ಬೆಂಗಳೂರು-ಮೈಸೂರು ಎಕ್ಸ್​​ಪ್ರೆಸ್​​​​​ ಹೈವೇ ಲೋಕಾರ್ಪಣೆ ವೇಳೆ ಪ್ರಧಾನಿ ಮೋದಿ ರೋಡ್ ಶೋ ಹಿನ್ನೆಲೆ ಮಂಡ್ಯ ನಗರ, ಮದ್ದೂರು ಪಟ್ಟಣದಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಎಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಖಾಕಿ ಸರ್ಪಗಾವಲು ಹಾಕಲಾಗಿದೆ. ಐವರು ಎಸ್​ಪಿ, 24 ಡಿವೈಎಸ್​​ಪಿ ನೇತೃತ್ವದಲ್ಲಿ 2,300 ಪೊಲೀಸ್​ ಸಿಬ್ಬಂದಿ, 14 ಡಿಎಆರ್‌ ತುಕಡಿ ನಿಯೋಜನೆ ಮಾಡಲಾಗಿದೆ.

  • 12 Mar 2023 08:58 AM (IST)

    PM Modi Karnataka Visit Live: ಮಂಡ್ಯಕ್ಕೆ ಮೋದಿ ಭೇಟಿ, ಮದುವೆ ಸಮಾರಂಭಕ್ಕೆ ತಟ್ಟಿದ ಬಿಸಿ

    ಮಂಡ್ಯ ಜಿಲ್ಲೆಗೆ ಇಂದು ಪ್ರಧಾನಿ ನರೇಂದ್ರ ಮೋದಿ ಆಗಮನ ಹಿನ್ನೆಲೆಯಲ್ಲಿ ಎಲ್ಲೆಡೆ ಪೊಲೀಸರು ಕಟ್ಟೆಚ್ಚರ ವಹಿಸಲಾಗಿದೆ. ಮೋದಿ ಕಾರ್ಯಕ್ರಮದಿಂದ ಮದುವೆ ಸಮಾರಂಭಕ್ಕೂ ಬಿಸಿ ತಟ್ಟಿದೆ.

  • 12 Mar 2023 08:55 AM (IST)

    PM Modi Karnataka Visit Live: ಮೋದಿ ಭೇಟಿಗೆ ಮಂಡ್ಯ ಕೇಸರಿ ಮಯ

    ಇಂದು ಸಕ್ಕರೆ ನಗರಿ ಮಂಡ್ಯಕ್ಕೆ ಪ್ರಧಾನಿ ಮೋದಿ ಭೇಟಿ ಹಿನ್ನೆಲೆ ಮಂಡ್ಯ ಸಂಪೂರ್ಣ ಕೇಸರಿ ಮಯವಾಗಿದೆ. ಮಂಡ್ಯ ನಗರದ ಮುಖ್ಯ ರಸ್ತೆಯಲ್ಲಿ ಕೇಸರಿ ಬಾವುಟ ಫ್ಲೆಕ್ಸ್‌ಗಳು ತಲೆ ಎತ್ತಿವೆ.  ಮಂಡ್ಯದಿಂದ ಗೆಜ್ಜಲಗೆರೆಗೆ ಹೋಗುವ ಮಾರ್ಗ‌ ಮಧ್ಯದಲ್ಲಿ ಫ್ಲೆಕ್ಸ್ ಹಾಗೂ ಬಾವುಟದ ಭರಾಟೆ ಜೋರಾಗಿದೆ.

  • Published On - Mar 12,2023 8:52 AM

    Follow us