ಸಿದ್ದರಾಮಯ್ಯ ಬಳಿಕ ಪರಮೇಶ್ವರ್​ ಸಿಎಂ: ಕಾಂಗ್ರೆಸ್​ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ ಸಚಿವ ರಾಜಣ್ಣ ಹೇಳಿಕೆ

| Updated By: ವಿವೇಕ ಬಿರಾದಾರ

Updated on: Nov 03, 2023 | 2:53 PM

ನಾನು ರಾಜಣ್ಣನವರಿಗೆ ಅಭಾರಿ ಆಗಿದ್ದಾನೆ. ಆ ಅದೃಷ್ಟ ಕೂಡಿ ಬರಲಿ ಅಂತ ನಾನು ಆಸೆಪಡುತ್ತೇನೆ. ಆ ಅದೃಷ್ಟ ಯಾವಾಗ ಕೂಡಿ ಬರುತ್ತೆ ಅಂತ ಹೇಳೋಕೆ ಆಗಲ್ಲ ಎಂದು ಜಿ ಪರಮೇಶ್ವರ್​ ಹೇಳುವ ಮೂಲಕ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯ ಬಳಿಕ ಪರಮೇಶ್ವರ್​ ಸಿಎಂ: ಕಾಂಗ್ರೆಸ್​ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ ಸಚಿವ ರಾಜಣ್ಣ ಹೇಳಿಕೆ
ಸಚಿವ ಕೆನ್​ ರಾಜಣ್ಣ
Follow us on

ತುಮಕೂರು ನ.3: ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನದ ವಿಚಾರ ಸಾಕಷ್ಟು ಚರ್ಚೆಯಾಗುತ್ತಿದೆ. ಎರಡೂವರೆ ವರ್ಷದ ಬಳಿಕ ಮುಖ್ಯಮಂತ್ರಿ ಬದಲಾಗುತ್ತಾರೆ, ಡಿಕೆ ಶಿವಕುಮಾರ್ (DK Shivakumar) ಸಿಎಂ ಆಗಲಿದ್ದಾರೆ ಎಂದು ಕಾಂಗ್ರೆಸ್​ನ (Congress) ಒಂದು ಬಣ, ಸಿದ್ದರಾಮಯ್ಯ (Siddaramaiah) ಅವರೇ ಐದು ವರ್ಷ ಮುಂದುವರೆಯುತ್ತಾರೆ ಎಂದು ಮತ್ತೊಂದು ಬಣ ಹೇಳುತ್ತಿದೆ. ಸಿಎಂ ವಿಚಾರವಾಗಿ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವಿನ ತಿಕ್ಕಾಟದ ಮಧ್ಯೆ ಗೃಹ ಸಚಿವ ಡಾ. ಜಿ ಪರಮೇಶ್ವರ (G Parmeshwra) ಅವರ ಹೆಸರು ತೇಲಿ ಬಂದಿದೆ. ಹೌದು ಜಿ ಪರಮೇಶ್ವರ್​ ಮುಖ್ಯಮಂತ್ರಿ ಆಗಬೇಕು ಎಂದು ಸಚಿವ ಕೆಎನ್ ರಾಜಣ್ಣ (KN Rajanna) ಹೇಳಿದರು.

ತುಮಕೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ನಾನು ಜೀವಮಾನದಲ್ಲಿ ಏನೆಲ್ಲಾ ಹೇಳಿದ್ದೇನೆ ಅದು ಯಾವುದು ಸುಳ್ಳಾಗಿಲ್ಲ.  ನಾನು ಹೇಳಿದ ಯಾವ ವಿಚಾರವು ಅಸತ್ಯವಾಗಿಲ್ಲ. ಪರಮೇಶ್ವರ್ ಸಿಎಂ ಆಗುತ್ತಾರೆ ಎಂಬುವ ವಿಚಾರವು ಸಹ ಅಸತ್ಯವಾಗಲ್ಲ. ಸಿದ್ದರಾಮಯ್ಯ ಅವರು ಯಾವಾಗ ಬಿಡುತ್ತಾರೆ, ಅವಾಗ ಪರಮೇಶ್ವರ್ ಮುಖ್ಯಮಂತ್ರಿ ಆಗುತ್ತಾರೆ ಎಂದು ಹೇಳಿದ್ದಾರೆ.

ಈ ಅವಧಿಯಲ್ಲಿ ಪರಮೇಶ್ವರ್ ಸಿಎಂ ಆಗುತ್ತಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು ಹೌದು ಆಗುತ್ತಾರೆ. ನನಗೆ ಸಚಿವನಾಗಿರುವುದು ಸಾಕು. ನನಗೆ ಯಾವುದೇ ಡಿಸಿಎಂ ಹುದ್ದೆ ಬೇಡ‌. ನಾನು ಇಲ್ಲಿಯ ತನಕ ಬಂದಿರೋದೆ ಹೆಚ್ಚು ಎಂದರು.

ಇದನ್ನೂ ಓದಿ: ನಾನೇ ಸಿಎಂ ಎಂದು ಹೇಳುವ ದೌರ್ಭಾಗ್ಯ ಸಿದ್ದರಾಮಯ್ಯಗೆ ಬರಬಾರದಿತ್ತು, ಸರ್ಕಾರದ ಅವನತಿ ಶುರುವಾಗಿದೆ

 ಆ ಅದೃಷ್ಟ ಕೂಡಿ ಬರಲಿ ಅಂತ ನಾನು ಆಸೆಪಡುತ್ತೇನೆ: ಪರಮೇಶ್ವರ್​

ಈ ಹೇಳಿಕೆಹಗೆ ಸಂಬಂಧಿಸಿದಂತೆ “ನಾನು ರಾಜಣ್ಣನವರಿಗೆ ಅಭಾರಿ ಆಗಿದ್ದಾನೆ. ಆ ಅದೃಷ್ಟ ಕೂಡಿ ಬರಲಿ ಅಂತ ನಾನು ಆಸೆಪಡುತ್ತೇನೆ” ಎಂದು ಜಿ ಪರಮೇಶ್ವರ್​ ಹೇಳುವ ಮೂಲಕ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ್ದಾರೆ. ಆ ಅದೃಷ್ಟ ಯಾವಾಗ ಕೂಡಿ ಬರುತ್ತೆ ಅಂತ ಹೇಳೋಕೆ ಆಗಲ್ಲ. ತುಮಕೂರಿನವರು ಅಲ್ವಾ ನೀವು, ನಮಗೆ ಒಳ್ಳೆದಾಗಬೇಕು ಅಂದರೇ ನನಗೆ ಸಪೊರ್ಟ್ ಮಾಡಿ ಎಂದು ಮಾಧ್ಯಮರಿಗೆ ಪರಮೇಶ್ವರ್ ಹೇಳಿದರು. ಡಿನ್ನರ್ ಪಾರ್ಟಿ ವಿಚಾರವಾಗಿ ಮಾತನಾಡಿದ ಅವರು ನಮ್ಮ ಮನೆಯಲ್ಲಿ ಯಾವುದೇ ತರಹದ ಚರ್ಚೆ ಆಗಿಲ್ಲ. ಬಹಳ ಅರ್ಹರು ಇದ್ದಾರೆ, ಎಲ್ಲರು ಒಂದೊಂದು ಚಾನ್ಸ್ ತೆಗೆದುಕೊಳ್ಳಲಿ ಬಿಡಿ ಎಂದರು.

 

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:48 pm, Fri, 3 November 23