ಎಕೆ ಸುಬ್ಬಯ್ಯದಿಂದ ಬಿವೈ ವಿಜಯೇಂದ್ರ ವರೆಗೆ: ಕರ್ನಾಟಕ ಬಿಜೆಪಿ ಅಧ್ಯಕ್ಷರ ಪಟ್ಟಿ ಇಲ್ಲಿದೆ

Karnataka BJP Presidents List: ಕರ್ನಾಟಕ ಬಿಜೆಪಿಯ ನೂತನ ಅಧ್ಯಕ್ಷರಾಗಿ ಬಿವೈ ವಿಜಯೇಂದ್ರ ಅವರು ಅಧಿಕಾರ ಸ್ವೀಕರಿಸಿದ್ದಾರೆ. ಈ ಮೂಲಕ ವಿಜಯೇಂದ್ರ ಅವರು ಕರ್ನಾಟಕ ಬಿಜೆಪಿಯ 14ನೇ ರಾಜ್ಯಾಧ್ಯಕ್ಷರಾಗಿದ್ದಾರೆ. ಎಕೆ ಸುಬ್ಬಯ್ಯದಿಂದ ಬಿವೈ ವಿಜಯೇಂದ್ರ ವರೆಗೆ ಕರ್ನಾಟಕ ಬಿಜೆಪಿ ಅಧ್ಯಕ್ಷರು. ಯಾರು ಯಾರು? ಅವರು ಎಷ್ಟು ಅವಧಿವರೆಗೆ ಬಿಜೆಪಿಯನ್ನು ಮುನ್ನಡೆಸಿದ್ದಾರೆ ಎನ್ನುವ ವಿವರ ಇಲ್ಲಿದೆ.

ಎಕೆ ಸುಬ್ಬಯ್ಯದಿಂದ ಬಿವೈ ವಿಜಯೇಂದ್ರ ವರೆಗೆ: ಕರ್ನಾಟಕ ಬಿಜೆಪಿ ಅಧ್ಯಕ್ಷರ ಪಟ್ಟಿ ಇಲ್ಲಿದೆ
ಬಿವೈ ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ

Updated on: Nov 15, 2023 | 12:02 PM

ಬೆಂಗಳೂರು, (ನವೆಂಬರ್ 15): ಕರ್ನಾಟಕ ಬಿಜೆಪಿಯ ನೂತನ ಅಧ್ಯಕ್ಷರಾಗಿ ಬಿವೈ ವಿಜಯೇಂದ್ರ (BY Vijayendra) ಅವರು ಅಧಿಕಾರ ಸ್ವೀಕರಿಸಿದ್ದಾರೆ. ಇಂದು ಬೆಂಗಳೂರಿನ ಮಲ್ಲೇಶ್ವರಂ ಕಚೇರಿಯಲ್ಲಿ ಅಧಿಕೃತವಾಗಿ ರಾಜ್ಯಾಧ್ಯಕ್ಷರಾಗಿ ಪದಗ್ರಹಣ ಮಾಡಿದ್ದು, ವಿಧಾನಸಭೆ ಚುನಾವಣೆಯಲ್ಲಿ ಸೋತು ಸುಣ್ಣವಾಗಿದ್ದ ಬಿಜೆಪಿಯಲ್ಲೀಗ ಯುವ ಹವಾ ಶುರುವಾಗಿದೆ. ಅಲ್ಲದೇ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಕ್ಷವನ್ನು ಗೆಲುವಿನ ಕಡೆಗೆ ಕೊಡ್ಯೊಯ್ಯಲು ಹೆಗಲು ಕೊಟ್ಟಿದ್ದಾರೆ. ಇನ್ನು ಇಲ್ಲಿಯವರೆ ಕರ್ನಾಟಕ ಬಿಜೆಪಿಯ ಹೊಣೆಯನ್ನು ಯಾರೆಲ್ಲಾ ಹೊತ್ತೊಂಡಿದ್ದಾರೆ ಎನ್ನುವ ವಿವರ ಈ ಕೆಳಗಿನಂತಿದೆ.

1980ರಲ್ಲಿ ಎ.ಕೆ ಸುಬ್ಬಯ್ಯ ಅವರು ಕರ್ನಾಟಕ ಬಿಜೆಪಿಯ ಮೊದಲ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದರು. ಬಳಿಕ ಬಿ.ಬಿ ಶಿವಪ್ಪ (BB Shivappa), ಬಿ.ಎಸ್.‌ ಯಡಿಯೂರಪ್ಪ (BS Yediyurappa), ಕೆ.ಎಸ್‌. ಈಶ್ವರಪ್ಪ (KS Eshwarappa) ಸೇರಿದಂತೆ ಹಲವರು ರಾಜ್ಯಾಧ್ಯಕ್ಷರಾಗಿ ಬಿಜೆಪಿಗೆ ದುಡಿದಿದ್ದಾರೆ. ಬಿಜೆಪಿ ಕರ್ನಾಟಕದಲ್ಲಿ ಈ ಮಟ್ಟಕ್ಕೆ ಬೆಳೆದು ನಿಲ್ಲುವಲ್ಲಿ ಯಡಿಯೂರಪ್ಪನವರ ಪಾತ್ರ ಬಹಳ ದೊಡ್ಡದಿದೆ.

ಇದನ್ನೂ ಓದಿ: BY Vijayendra: ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ವಿಜಯೇಂದ್ರ, ಹಲವು ನಾಯಕರು ಗೈರು

1988ರಲ್ಲಿ ಮೊದಲ ಬಾರಿಗೆ ಬಿ.ಎಸ್. ಯಡಿಯೂರಪ್ಪ ರಾಜ್ಯಾಧ್ಯಕ್ಷರಾಗಿದ್ದರು. ಹಾಗೇ 1998 ಮತ್ತು 2016ರಲ್ಲೂ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದರು. ಇದರೊಂದಿಗೆ ಯಡಿಯೂರಪ್ಪ ಒಟ್ಟು ಮೂರು ಬಾರಿ ಕರ್ನಾಟಕ ಬಿಜೆಪಿ ಅಧ್ಯಕ್ಷರಾಗಿದ್ದರು. ಇನ್ನು ಕೆಎಸ್ ಈಶ್ವರಪ್ಪ 1993 ಹಾಗೂ 2010ರಲ್ಲಿ ಎರಡೂ ಬಾರಿ ರಾಜ್ಯಾಧ್ಯಕ್ಷರಾಗಿದ್ದರು.

ಬಿಜೆಪಿಯ ಈ ಹಿಂದಿನ ರಾಜ್ಯಾದ್ಯಕ್ಷರು ಯಾರು?

  • ಎ.ಕೆ. ಸುಬ್ಬಯ್ಯ: 1980 ರಿಂದ 1983 (3 ವರ್ಷ)
  •  ಬಿ.ಬಿ. ಶಿವಪ್ಪ: 1983-1988 (5 ವರ್ಷ)
  •  ಬಿ.ಎಸ್.‌ ಯಡಿಯೂರಪ್ಪ: 1988-1991 (3 ವರ್ಷ)
  •  ಕೆ.ಎಸ್.‌ ಈಶ್ವರಪ್ಪ: 1993-1998 (5 ವರ್ಷ)
  • ಬಿ.ಎಸ್.‌ ಯಡಿಯೂರಪ್ಪ: 1998-1999 (1 ವರ್ಷ)
  •  ಬಸವರಾಜ ಪಾಟೀಲ್‌ ಸೇಡಂಳ 2000- 2003 (3 ವರ್ಷ)
  •  ಅನಂತ್‌ ಕುಮಾರ್: 2003- 2004 (1 ವರ್ಷ)
  •  ಜಗದೀಶ್‌ ಶೆಟ್ಟರ್: 2004-2006(2 ವರ್ಷ)
  •  ಡಿ.ವಿ. ಸದಾನಂದ ಗೌಡ: 2006-2010 (4 ವರ್ಷ)
  • ಕೆ.ಎಸ್.‌ ಈಶ್ವರಪ್ಪ: 2010-2013 (3 ವರ್ಷ )
  • ಪ್ರಲ್ಹಾದ್‌ ಜೋಶಿ-2013-2016 (3 ವರ್ಷ)
  • ಬಿ.ಎಸ್.‌ ಯಡಿಯೂರಪ್ಪ: 2016-2019 (3 ವರ್ಷ)
  • ನಳಿನ್‌ ಕುಮಾರ್‌ ಕಟೀಲ್: 2019- (4 ವರ್ಷ)
  • ಬಿ.ವೈ. ವಿಜಯೇಂದ್ರ: 2023 (ನ. 15) ಹಾಲಿ

Published On - 11:41 am, Wed, 15 November 23

ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More
Loading...
Unable to load recommendations.
Follow Us