ತುಮಕೂರು: ರಾಜ್ಯದಲ್ಲಿ 2023 ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ(Congress Party) ಸ್ಪಷ್ಟ ಬಹುಮತ ಪಡೆದು, ಈಗಾಗಲೇ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿದೆ. ಅದರಂತೆ ಇದೀಗ ಕುಣಿಗಲ್(Kunigal) ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಅಕ್ರಮವಾಗಿದೆಯೆಂದು ವಿಧಾನಪರಿಷತ್ ಸದಸ್ಯ ನವೀನ್(Naveen) ಆರೋಪಿಸಿದ್ದಾರೆ. ಹೌದು ಕುಣಿಗಲ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ.ರಂಗನಾಥ್ ಹಾಗೂ ಬೆಂಗಳೂರು ಗ್ರಾಮಾಂತರ ಎಂ.ಪಿ ಡಿಕೆ ಸುರೇಶ್ ಸೇರಿ ಅಕ್ರಮ ಮಾಡಿದ್ದಾರೆ ಎಂದು ಆರೋಪ ಕೇಳಿಬಂದಿದೆ. ಮತದಾನದ ಮುನ್ನ ಕ್ಷೇತ್ರದಲ್ಲಿ ಗ್ಯಾರಂಟಿ ಕಾರ್ಡ್ ವಿತರಣೆ ಮಾಡಿದ್ದಾರೆ. ಅದರಲ್ಲಿ ಅಭ್ಯರ್ಥಿ ಕ್ರಮ ಸಂಖ್ಯೆ, ಸಿಂಬಲ್ ಹಾಗೂ ಬಾರ್ ಕೋಡ್ ಇದೆ ಎಂದಿದ್ದಾರೆ.
ಹೌದು ಕಾಂಗ್ರೆಸ್ ಪಕ್ಷ 60 ಸಾವಿರ ಕಾರ್ಡ್ಗಳನ್ನ ಮನೆ ಮನೆಗೆ ಹೋಗಿ ವಿತರಣೆ ಮಾಡಿದೆ. ಕಾರ್ಡ್ನ್ನ ಎಟಿಎಮ್ ರೀತಿ ಬಳಸಬಹುದು. ಅದರಲ್ಲಿ ಗಿಫ್ಟ್ನ್ನ ಖರೀದಿ ಮಾಡಬಹುದು ಎಂದು ಮತದಾರರಿಗೆ ಆಮಿಷ ಒಡ್ಡಿದ್ದಾರೆ. ಮತದಾನ ಬಳಿಕ ಕಾರ್ಡ್ ಬಳಸಬಹುದೆಂದು ಸುಳ್ಳು ಭರವಸೆ ನೀಡಿದ್ದಾರೆ. ಇದರಿಂದ ಚುನಾವಣೆಯಲ್ಲಿ ವ್ಯತ್ಯಾಸ ಆಗಿದೆ. ಮತಕ್ಕೆ ಪ್ರಚಾರ ಆಗಿದ್ದರೇ, ಬಾರ್ ಕೋಡ್ ಯಾಕೆ ಪ್ರಿಂಟ್ ಮಾಡಿದ್ರು. ಮತದಾರರಿಗೆ ದಾರಿ ತಪ್ಪಿಸುವ ಕೆಲಸ ಆಗಿದೆ. ಅಕ್ರಮ ಮಾಡಿ ಕುಣಿಗಲ್ ಶಾಸಕ ಡಾ.ರಂಗನಾಥ್ ಗೆದ್ದಿದ್ದಾರೆ. ನಾವು ಹೈ ಕೋರ್ಟ್ನಲ್ಲಿ ಈ ಬಗ್ಗೆ ಕೇಸ್ ದಾಖಲು ಮಾಡುವ ಮೂಲಕ ಕಾನೂನು ಹೋರಾಟ ಮಾಡ್ತಿವಿ ಎಂದಿದ್ದಾರೆ.
ಇದನ್ನೂ ಓದಿ:ಜಯನಗರ ಕ್ಷೇತ್ರದಲ್ಲಿ ಅಕ್ರಮವಾಗಿ ಮತದಾರರ ಸೇರ್ಪಡೆ ಆರೋಪ; ಮುಖ್ಯ ಚುನಾವಣಾಧಿಕಾರಿಗೆ N.R.ರಮೇಶ್ ದೂರು
ಇನ್ನು ಕಾಂಗ್ರೆಸ್ಗೆ ಜನರು ಆಶಿರ್ವಾದ ಮಾಡಿದ್ದಾರೆಂಬ ಹೇಳುವ ನೈತಿಕತೆ ಇಲ್ಲ, ಅಕ್ರಮವಾಗಿ ಮತ ಪಡೆದಿದ್ದಾರೆ.
ಕಾನೂನಿನ, ಪ್ರಜಾಪ್ರಭುತ್ವ ವಿರುದ್ಧ ಚುನಾವಣೆ ಮಾಡಿ ಕಾಂಗ್ರೆಸ್ ಗೆದ್ದಿದ್ದೆ. ಡಾ. ರಂಗನಾಥ್ ಅಕ್ರಮ ಮಾಡುವುದರಲ್ಲಿ ಎತ್ತಿದ ಕೈ. ಕುಕ್ಕರ್ಗಳನ್ನ ನಾಲ್ಕೈದು ತಿಂಗಳುಗಳಿಂದ ಮನೆ ಮನೆಗೂ ಹಂಚಿದ್ದಾರೆ. ಈ ಬಗ್ಗೆ ಕೇಸ್ ದಾಖಲಿಸಿದರೂ ಕೂಡ ಚುನಾವಣೆಯಲ್ಲಿ ಅಕ್ರಮ ಮಾಡಿದ್ದಾರೆ. ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಹೇಗೆ ಹೋರಾಟ ಮಾಡಿದ್ವೋ, ಹಾಗೇ ಕುಣಿಗಲ್ ಕ್ಷೇತ್ರದ್ದು ಮಾಡ್ತಿವಿ.
ಜೊತೆಗೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಹೆಚ್ಚು ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದ್ದು, ಕಾಂಗ್ರೆಸ್ ಮುಂಚೆಯಿಂದಲೂ ಇದೆ ಮಾಡಿದೆ. ಕಾನೂನು ಹೋರಾಟ ಮಾಡಲು ಕುಣಿಗಲ್ ಬಿಜೆಪಿ ಮುಖಂಡರು ನಿರ್ಧಾರ ಮಾಡಿದ್ದಾರೆ. ಈ ವೇಳೆ ಕುಣಿಗಲ್ ಶಾಸಕ ಡಾ.ರಂಗನಾಥ್ ಭಾವಚಿತ್ರ, ಬಾರ್ ಕೋಡ್ ಇರುವ ಕಾರ್ಡ್ ತೋರಿಸಿ ಕಿಡಿಕಾರಿದ್ದಾರೆ.
ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ