Amit Shah: ಮಮತಾ ಬ್ಯಾನರ್ಜಿ ನಾಡಿನಲ್ಲಿ ಇಂದು ಅಮಿತ್ ಶಾ ಅಬ್ಬರದ ಪ್ರಚಾರ, ಲೋಕಸಭಾ ಚುನಾವಣೆಗೆ ತಂತ್ರಗಾರಿಕೆ ಶುರು
ಲೋಕಸಭೆ ಚುನಾವಣಾ ಪ್ರಚಾರವನ್ನು ಆರಂಭಿಸಿದೆ. ಇದು ಮೊದಲ ಚುನಾವಣಾ ಕಹಳೆ ಎಂಬಂತೆ ಮಮತಾ ಬ್ಯಾನರ್ಜಿ ಅವರ ರಾಜ್ಯ ಪಶ್ಚಿಮ ಬಂಗಾಳದಿಂದಲ್ಲೇ ಆರಂಭಿಸಿದೆ. ಹೌದು ಈ ಕಾರ್ಯತಂತ್ರಕ್ಕೆ ಬಿಜೆಪಿ ಚಾಣಕ್ಯ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಮುಂದಾಗಿದ್ದಾರೆ.
ಕೊಲ್ಕತ್ತಾ: ಲೋಕಸಭೆಯ ಚುನಾವಣೆಯನ್ನು (Lok Sabha Elections) ಎದುರು ನೋಡುತ್ತಿರುವ ಎಲ್ಲ ಪಕ್ಷಗಳು ಈಗಾಗಲೇ ಅನೇಕ ರಾಜಕೀಯ ತಂತ್ರಗಾರಿಕೆಯನ್ನು ಮಾಡುತ್ತಿದೆ. ಕಾಂಗ್ರೆಸ್ ಅನೇಕ ರಾಜಕೀಯ ಪಕ್ಷಗಳ ಜತೆಗೆ ಮುಂದಿನ ಚುನಾವಣೆ ಬಗ್ಗೆ ಚರ್ಚೆ ಮಾಡುತ್ತಿದೆ. ಇದೀಗ ಬಿಜೆಪಿ ಕೂಡ ಒಂದು ಹೆಜ್ಜೆ ಮುಂದೆ ಹೋಗಿ ಈಗಿನಿಂದಲ್ಲೇ ಚುನಾವಣಾ ಪ್ರಚಾರವನ್ನು ಆರಂಭಿಸಿದೆ. ಇದು ಮೊದಲ ಚುನಾವಣಾ ಕಹಳೆ ಎಂಬಂತೆ ಮಮತಾ ಬ್ಯಾನರ್ಜಿ ಅವರ ರಾಜ್ಯ ಪಶ್ಚಿಮ ಬಂಗಾಳದಿಂದಲೇ ಆರಂಭಿಸಿದೆ. ಹೌದು ಈ ಕಾರ್ಯತಂತ್ರಕ್ಕೆ ಬಿಜೆಪಿ ಚಾಣಕ್ಯ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಮುಂದಾಗಿದ್ದಾರೆ. ಇಂದು (ಏ.14) ಮಧ್ಯಾಹ್ನ ಅಮಿತ್ ಶಾ ಪಶ್ಚಿಮ ಬಂಗಾಳಕ್ಕೆ ಆಗಮಿಸಲಿದ್ದು, ರಾಜ್ಯದಲ್ಲಿ 2024ರ ಲೋಕಸಭೆ ಚುನಾವಣೆಯ ಪ್ರಚಾರವನ್ನು ಪ್ರಾರಂಭಿಸಲು ಮತ್ತು ಬಿರ್ಭೂಮ್‌ನಲ್ಲಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕರು ತಿಳಿಸಿದ್ದಾರೆ.
ಪಕ್ಷದ ನಾಯಕರ ಪ್ರಕಾರ, ಅಮಿತ್ ಶಾ ಮಧ್ಯಾಹ್ನ 12.30ಕ್ಕೆ ಆಂಡಾಲ್ ವಿಮಾನ ನಿಲ್ದಾಣಕ್ಕೆ ತಲುಪಲಿದ್ದಾರೆ. ಅಲ್ಲಿಂದ ಬಿರ್ಭುಮ್‌ನ ಸಿಯುರಿ ಪಟ್ಟಣಕ್ಕೆ ಭೇಟಿ ನೀಡಲಿದ್ದಾರೆ, ನಂತರ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇಂದು ಡಾ ಬಿಆರ್ ಅಂಬೇಡ್ಕರ್ ಜಯಂತಿಯ ಪ್ರಯುಕ್ತ ಶಾ ಅವರು ಬಿಆರ್ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ. ಸಂಜೆ 4 ಗಂಟೆಗೆ ಕೋಲ್ಕತ್ತಾಗೆ ತೆರಳುವ ಮೊದಲು ಸಿಯುರಿಯಲ್ಲಿ ಪಕ್ಷದ ಹೊಸ ಕಚೇರಿಯನ್ನು ಉದ್ಘಾಟಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿದೆ.
ಇದನ್ನೂ ಓದಿ:Amit Shah ಜಮ್ಮು ಮತ್ತು ಕಾಶ್ಮೀರದಲ್ಲಿ ಅಭಿವೃದ್ಧಿ ಯೋಜನೆ, ಭದ್ರತೆಗೆ ವಿಷಯಗಳ ಬಗ್ಗೆ ಸಭೆ ನಡೆಸಿದ ಅಮಿತ್ ಶಾ
ಬಂಗಾಳದಲ್ಲಿ ಯಾವುದೇ ಕ್ಷಣದಲ್ಲೂ ಪಂಚಾಯತ್ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದ್ದರೂ, ಬಿಜೆಪಿ ಲೋಕಸಭೆ ಸ್ಥಾನಗಳ ಮೇಲೆ ತನ್ನ ಗಮನ ನೀಡಿದೆ. 2019ರಲ್ಲಿ, ಪಕ್ಷವು ಪಶ್ಚಿಮ ಬಂಗಾಳದಲ್ಲಿ 42 ಸ್ಥಾನಗಳಲ್ಲಿ 18 ಸ್ಥಾನಗಳನ್ನು ಗೆದ್ದಿದೆ.
ಅಮಿತ್ ಶಾ ಅವರು ಭಾರತದಲ್ಲಿ ಅತ್ಯಂತ ಯಶಸ್ವಿ ಚುನಾವಣಾ ತಂತ್ರಗಾರರಾಗಿದ್ದಾರೆ. ಅವರ ಭೇಟಿ ಮಹತ್ವದ್ದಾಗಿದೆ ಎಂದು ಬಂಗಾಳ ಬಿಜೆಪಿಯ ಮುಖ್ಯ ವಕ್ತಾರ ಸಮಿಕ್ ಭಟ್ಟಾಚಾರ್ಯ ಹೇಳಿದ್ದಾರೆ. ಬಿಜೆಪಿಯನ್ನು ಎದುರಿಸಲು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಭಾನುವಾರ ಸಿಯುರಿಯ ಅದೇ ಸ್ಥಳದಲ್ಲಿ ರ್ಯಾಲಿಯನ್ನು ಯೋಜಿಸಿದೆ. ಟಿಎಂಸಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿರುವ ಕೋಲ್ಕತ್ತಾ ಮೇಯರ್ ಫಿರ್ಹಾದ್ ಹಕೀಮ್, ನಮ್ಮ ಕಾರ್ಯಕ್ರಮವನ್ನು ಮೊದಲೇ ಯೋಜಿಸಲಾಗಿತ್ತು. ಪಕ್ಷದ ಜಿಲ್ಲಾ ಸಮಿತಿ ಈ ನಿರ್ಧಾರ ಕೈಗೊಂಡಿದೆ ಎಂದು ಹೇಳಿದ್ದಾರೆ.