ವಿಧಾನ ಪರಿಷತ್​ ಸಭಾನಾಯಕರನ್ನಾಗಿ ಎನ್​ಎಸ್​​ ಬೋಸರಾಜು ನೇಮಕ: ಸರ್ಕಾರ ಆದೇಶ

| Updated By: ಗಂಗಾಧರ​ ಬ. ಸಾಬೋಜಿ

Updated on: Jul 03, 2023 | 8:09 PM

ವಿಧಾನ ಪರಿಷತ್ತಿನ ಸಭಾನಾಯಕರನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್​ಎಸ್​ ಬೋಸರಾಜು ಅವರನ್ನು ಸರ್ಕಾರ ಸೋಮವಾರ ನಾಮನಿರ್ದೇಶನ ಮಾಡಿದೆ.

ವಿಧಾನ ಪರಿಷತ್​ ಸಭಾನಾಯಕರನ್ನಾಗಿ ಎನ್​ಎಸ್​​ ಬೋಸರಾಜು ನೇಮಕ: ಸರ್ಕಾರ ಆದೇಶ
ಎನ್​ಎಸ್​​ ಬೋಸರಾಜು
Follow us on

ಬೆಂಗಳೂರು: ವಿಧಾನ ಪರಿಷತ್ತಿನ ಸಭಾನಾಯಕರನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್​ಎಸ್​ ಬೋಸರಾಜು (NS boseraju) ಅವರನ್ನು ಸರ್ಕಾರ ಸೋಮವಾರ ನಾಮನಿರ್ದೇಶನ ಮಾಡಿದೆ. ಈ ಕುರಿತು ಸೂಕ್ತ ವಿಧಿ ವಿಧಾನಗಳನ್ನು ಅನುಸರಿಸುವಂತೆ ಸಿಎಂ ಸಿದ್ಧರಾಮಯ್ಯ ಸೂಚಿಸಿದ್ದಾರೆ. ಇತ್ತೀತ್ತಿಗೆ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಗೆಲುವು ಸಾಧಿಸಿದ ಬಳಿಕ ವಿಧಾನಸಭೆ ಹಾಗೂ ಪರಿಷತ್‌ ಸದಸ್ಯರಲ್ಲದ ಎನ್​ಎಸ್​ ಬೋಸರಾಜು ಅವರಿಗೆ ಸಚಿವ ಸ್ಥಾನ ಲಭಿಸಿತ್ತು.

ರಾಹುಲ್ ಗಾಂಧೀ ಅವರೇ ಬೋಸರಾಜ್ ಜೊತೆ ಮಾತುಕತೆ ನಡೆಸಿ, ಸರ್ಕಾರ ಬಂದರೆ ಎಂಎಲ್​ಸಿ ಮಾಡಿ ಪ್ರಮುಖ ಹುದ್ದೆ ನೀಡುವುದಾಗಿ ಭರವಸೆ ನೀಡಿದ್ದರು. ಅದರಂತೆಯೇ ಬೋಸರಾಜ್​ಗೆ ಮಂತ್ರಿ ಸ್ಥಾನ ಒಲಿದುಬಂದಿತ್ತು.

ಇದನ್ನೂ ಓದಿ: ವೈಎಸ್​ಟಿ ಜೊತೆಗೆ ಪೇಸಿಎಂ, ಪೇ ಸೋನಿಯಾ, ಪೇ ವೇಣುಗೋಪಾಲ್ ಇದೆ: ಬಿಜೆಪಿ ಶಾಸಕ ಯತ್ನಾಳ್

ಎನ್​ಎಸ್​ ಬೋಸರಾಜು ಅವರು ಕಾಂಗ್ರೆಸ್​ ಪಕ್ಷಕ್ಕಾಗಿ ಮೊದಲಿನಿಂದಲ್ಲೂ ಸಾಕಷ್ಟು ದುಡಿದಿದ್ದಾರೆ. ಜೊತೆಗೆ ಹೈಕಮಾಂಡ್​ ಜೊತೆ ಒಳ್ಳೆಯ ಸಂಪರ್ಕವನ್ನು ಹೊಂದಿದ್ದೇ ಅವರಿಗೆ ಸಚಿವ ಸ್ಥಾನ ಸಿಗಲು ಕಾರಣ ಎಂಬ ಮಾತುಗಳು ಸಹ ಕೇಳಿಬಂದಿದ್ದವು.

ಇದನ್ನೂ ಓದಿ: ರಾಜ್ಯದ ಇತಿಹಾಸದಲ್ಲಿ ವಿಪಕ್ಷ ನಾಯಕನಿಲ್ಲದೆ ಮೊದಲ ಅಧಿವೇಶನ: ಇದು ದುರ್ದೈವ ಎಂದ ಸಚಿವ ಹೆಚ್​ಕೆ ಪಾಟೀಲ್

ಸಚಿವ ಸಂಭವನೀಯರ ಪಟ್ಟಿಯಲ್ಲಿ ಬೋಸರಾಜ್ ಅವರ ಹೆಸರು ಬಂದಾಗ ರಾಯಚೂರಿನ ಕಾಂಗ್ರೆಸ್​ನಲ್ಲಿ ಅಮಾಧಾನ ಸ್ಫೋಟಗೊಂಡಿತ್ತು. ಯಾವುದೇ ಕಾರಣಕ್ಕೂ ಬೋಸರಾಜ್ ಅವರಿಗೆ ಸಚಿವ ಸ್ಥಾನ ನೀಡಬಾರದು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆಯಲಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:17 pm, Mon, 3 July 23