ತೆಲಂಗಾಣ, ಛತ್ತೀಸ್​ಗಢ, ಮಧ್ಯಪ್ರದೇಶ ರಾಜ್ಯಗಳಲ್ಲಿ ಗೆದ್ದೇ ಗೆಲ್ಲುತ್ತೇವೆ: ಸಿಎಂ ಸಿದ್ದರಾಮಯ್ಯ

| Updated By: ಗಂಗಾಧರ​ ಬ. ಸಾಬೋಜಿ

Updated on: Nov 30, 2023 | 6:18 PM

ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ಕುರಿತು ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಮಾಧ್ಯಮದವರೊಂದಿಗೆ ಮಾತನಾಡಿದ್ದು, ತೆಲಂಗಾಣ, ಛತ್ತೀಸ್​ಗಢ ಮತ್ತು ಮಧ್ಯಪ್ರದೇಶದಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ. 100% ತೆಲಂಗಾಣದಲ್ಲಿ ಗೆಲುತ್ತೇವೆ. ರಾಜಸ್ಥಾನದಲ್ಲಿ ಗೆಲ್ಲುವುದು ಕಷ್ಟವಿದೆ ಎಂದು ಹೇಳಿದ್ದಾರೆ.

ತೆಲಂಗಾಣ, ಛತ್ತೀಸ್​ಗಢ, ಮಧ್ಯಪ್ರದೇಶ ರಾಜ್ಯಗಳಲ್ಲಿ ಗೆದ್ದೇ ಗೆಲ್ಲುತ್ತೇವೆ: ಸಿಎಂ ಸಿದ್ದರಾಮಯ್ಯ
ಸಿದ್ದರಾಮಯ್ಯ
Follow us on

ಬೆಂಗಳೂರು, ನವೆಂಬರ್​​ 30: ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ಮತದಾನ ಪ್ರಕ್ರಿಯೆ ಅಂತ್ಯವಾಗಿದ್ದು, ಮತಗಟ್ಟೆ ಸಮೀಕ್ಷೆ ಪ್ರಕಟಣೆ ಆಗಲಿದೆ. ಸದ್ಯ ಈ ವಿಚಾರವಾಗಿ ಸಿಎಂ ಸಿದ್ದರಾಮಯ್ಯ (Siddaramaiah) ಪ್ರತಿಕ್ರಿಯಿಸಿದ್ದು, ತೆಲಂಗಾಣ, ಛತ್ತೀಸ್​ಗಢ ಮತ್ತು ಮಧ್ಯಪ್ರದೇಶದಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ. 100% ತೆಲಂಗಾಣದಲ್ಲಿ ಗೆಲುತ್ತೇವೆ. ರಾಜಸ್ಥಾನದಲ್ಲಿ ಗೆಲ್ಲುವುದು ಕಷ್ಟವಿದೆ ಎಂದು ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಅವರದ್ದು ಸಾಬೀತಾಗಿಬಿಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ಎಲ್ಲೆಲ್ಲಿ ಹೋಗಿ ಪ್ರಚಾರ ಮಾಡಿ ರೋಡ್ ಶೋ ಮಾಡಿದ್ದಾರೋ ಅಲ್ಲೆಲ್ಲ ಬಿಜೆಪಿಗೆ ಸೋಲಾಗಿದೆ. ಯಾರಿಗೆ ವರ್ಚಸ್ಸು ಕಮ್ಮಿ ಆಗಿದೆ ಹಾಗಾದರೆ? ನನ್ನ ವರ್ಚಸ್ಸು ಕಡಿಮೆ ಆಯಿತಾ, ಮೋದಿ ವರ್ಚಸ್ಸು ಕಡಿಮೆ ಆಯ್ತಾ ಎಂದು ಪ್ರಶ್ನಿಸಿದ್ದಾರೆ.

ಗೃಹ ಸಚಿವರ ಭೇಟಿಗೆ ಸಮಯ ಕೇಳಿದ ಸಿಎಂ ಸಿದ್ದರಾಮಯ್ಯ

ನಾನು ಭೇಟಿ ಆಗುತ್ತೇನೆ ನನಗೆ ಸಮಯ ಕೊಡಿ ಅಂತ ಗೃಹ ಸಚಿವರಿಗೆ ಪತ್ರ ಬರೆದಿದ್ದೇನೆ. ಇವತ್ತಿನ ತನಕವು ಟೈಂ ಕೊಟ್ಟಿಲ್ಲ. ಬಿತ್ತನೆ ವೈಫಲ್ಯ, ಮಧ್ಯಂತರ ಬೆಳೆ ವಿಮೆ ಪರಿಹಾರಕ್ಕೆ 6.5 ಲಕ್ಷ ರೈತರಿಗೆ 460 ಕೋಟಿ ರೂ. ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಕುಡಿಯುವ ನೀರು, ಮೇವು, ಜನರಿಗೆ ಉದ್ಯೋಗಕ್ಕೆ 327 ಕೋಟಿ ರೂ. ಬಿಡುಗಡೆ ಮಾಡಿದ್ದೇವೆ. 780 ಕೋಟಿ ರೂ. ಡಿಸಿಗಳ ಬಳಿ ಹಣ ಇದೆ. ಎಲ್ಲ ತಹಶಿಲ್ದಾರರಿಗೂ ಕೂಡ ಅವರು ಹಣ ಬಿಡುಗಡೆ ಮಾಡಿದ್ದಾರೆ. ಎಲ್ಲ ತಾಲೂಕುಗಳಲ್ಲಿ ಕೂಡ ಕುಡಿಯುವ ನೀರಿನ ಸಮಸ್ಯೆ ಆಗದ ರೀತಿ ನೋಡಿಕೊಂಡಿದ್ದೇವೆ ಎಂದರು.

ಇದನ್ನೂ ಓದಿ: ಗ್ಯಾರಂಟಿ ಬಗ್ಗೆ ಇನ್ಫೋಸಿಸ್ ನಾರಾಯಣ ಮೂರ್ತಿ ಆಕ್ಷೇಪ‌; ಪ್ರಿಯಾಂಕ್ ಖರ್ಗೆ ಹೇಳಿದ್ದಿಷ್ಟು

ಪೈಪ್ ಲೈನ್ ಹಾಕುವುದು, ಬೋರ್ ವೆಲ್​ಗಳಿಂದ ಕುಡಿಯುವ ನೀರು ಒದಗಿಸುವುದು ಎಲ್ಲ ಮಾಡಿದ್ದೇವೆ. 60 ಹಳ್ಳಿಗಳಲ್ಲಿ ಟ್ಯಾಂಕರ್ ಮೂಲಕ ನೀರು ಕೊಡುತ್ತಿದ್ದೇವೆ. ಬೀಜ ಹಾಗೂ ಮೇವಿನ ಕೊರತೆ ಇದುವರೆಗೆ ಆಗಿಲ್ಲ. 7 ಲಕ್ಷ ಮೇವಿನ ಬೀಜ ಬಿತ್ತನೆ ಮಾಡಿದ್ದೇವೆ. ಮೊದಲ ಕಂತು ಬೆಳೆ ಪರಿಹಾರ 2 ಸಾವಿರ ರೂ. ಪರಿಹಾರ ಕೊಡಲು ನಿರ್ಧರಿಸಲಾಗಿದೆ. ಇನ್ನೊಂದು ಎರಡು ಮೂರು ದಿನಗಳಲ್ಲಿ ರೈತರಿಗೆ ನೀಡುತ್ತಿದ್ದೇವೆ. ಕೇಂದ್ರ ನಮಗೆ ಕೊಡುವುದು ನಿಧಾನ ಆಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಡವ ಮತ್ತು ರೈತ ವಿರೋಧಿ ಸಿದ್ದರಾಮಯ್ಯ ಸರ್ಕಾರಕ್ಕೆ ಅಧಿವೇಶನದಲ್ಲಿ ಕಾದಿದೆ ಶಾಸ್ತಿ: ಬಿವೈ ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ

ರೈತರಿಗೆ ತೊಂದರೆ ಆಗಬಾರದು ಅಂತ 2000 ರೂ.ವರೆಗೆ ಪರಿಹಾರ ಕೊಡುತ್ತೇವೆ. ಎನ್ಡಿಆರ್ಎಫ್ ನಿಯಮ ಪ್ರಕಾರ ಎಷ್ಟೇ ಜಮೀನಿದ್ದರೂ ಎರಡು ಎಕರೆಗೆ ಮಾತ್ರ ಪರಿಹಾರ ನೀಡಲು ಸಾಧ್ಯ. ಡಿಸಿಗಳಿಂದ ವರದಿ ತರಿಸಿಕೊಂಡು 223 ತಾಲೂಕು ರೈತರಿಗೆ ನೀಡುತ್ತೇವೆ. ಮಧ್ಯಂತರ ವಿಮೆ ಬಿಟ್ಟು ಇದು ಪ್ರತ್ಯೇಕ ನೀಡುತ್ತೇವೆ ಎಂದಿದ್ದಾರೆ.

ರೈತರಿಗೆ ಬರ ಬರಬಾರದು

ಬಿಜೆಪಿ ಇದ್ದಾಗ ಪ್ರವಾಹ ಬರ ಎರಡೂ ಇತ್ತು. 12 ರಾಜ್ಯಗಳಲ್ಲಿ ಬರ ಇದೆ. ಅಲ್ಲೆಲ್ಲ ನಾನೇ ಅಧಿಕಾರದಲ್ಲಿ ಇದ್ದೀನಾ? ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಕರ್ನಾಟಕದಲ್ಲಿ ಬರ ಬಂದಿದೆ. ರೈತರಿಗೆ ಬರ ಬರಬಾರದು. ಎಲ್ಲ ನಷ್ಟಕ್ಕೂ ನಾವು ಪರಿಹಾರ ನೀಡುವುದಕ್ಕೆ ಆಗುತ್ತಿಲ್ಲ. 25 ಜನ ಎಂಪಿಗಳಿದ್ದಾರೆ ಯಾಕೆ ಇದನ್ನು ಮಾತನಾಡುತ್ತಿಲ್ಲ. ನಮ್ಮ ಮಂತ್ರಿಗಳಿಗೆ ಭೇಟಿ ಮಾಡುವುದಕ್ಕೆ ಅವಕಾಶವನ್ನೇ ಕೊಡುತ್ತಿಲ್ಲ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.