ಚಹಾ ಮಾರಿಕೊಂಡಾದರೂ ಬದುಕಬಹದು, ನಿಮ್ಮಂತೆ ಬದುಕು ಮಾರಿಕೊಂಡು ಅಲ್ಲ! ಕಾಂಗ್ರೆಸ್​ಗೆ ಯತ್ನಾಳ್ ಟಾಂಗ್

ವೀಕ್ಷಕರ ಜತೆಗಿನ ಮಾತುಕತೆ ಬಳಿಕ ಮುನಿಸಿಕೊಂಡು ಶಾಸಕಾಂಗ ಪಕ್ಷದ ಸಭೆಗೂ ಹಾಜರಾಗದೆ ತೆರಳಿದ್ದ ಮೂವರು ನಾಯಕರನ್ನು ಗುರಿಯಾಗಿಸಿ ಕಾಂಗ್ರೆಸ್ ವ್ಯಂಗ್ಯವಾಡಿತ್ತು.

ಚಹಾ ಮಾರಿಕೊಂಡಾದರೂ ಬದುಕಬಹದು, ನಿಮ್ಮಂತೆ ಬದುಕು ಮಾರಿಕೊಂಡು ಅಲ್ಲ! ಕಾಂಗ್ರೆಸ್​ಗೆ ಯತ್ನಾಳ್ ಟಾಂಗ್
ಬಸನಗೌಡ ಪಾಟೀಲ್ ಯತ್ನಾಳ್

Updated on: Nov 18, 2023 | 5:23 PM

ಬೆಂಗಳೂರು, ನವೆಂಬರ್ 18: ‘ಬಿಜೆಪಿ ಕಚೇರಿ ಶ್ರೀಮಂತರ ಚಹಾ ಹೋಟೆಲ್, ಇಲ್ಲಿ ಬಡವರ ಚಹಾ ಸಿಗಲ್ಲ’ ಎಂದು ವ್ಯಂಗ್ಯವಾಡಿ ಕಾಂಗ್ರೆಸ್​​ ಮಾಡಿರುವ ಟ್ವೀಟ್​ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ತೀಕ್ಷ್ಣವಾದ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಟ್ವೀಟ್​​ಗೆ ಖಾರವಾಗಿ ತಿರುಗೇಟು ನೀಡಿ ಸಾಮಾಜಿಕ ಮಾಧ್ಯಮ ಎಕ್ಸ್​​​ನಲ್ಲಿ ಪೋಸ್ಟ್​ ಮಾಡಿರುವ ಯತ್ನಾಳ್, ‘ಹೇ ಪ್ರಭು! ಚಹಾ ಮಾರಿಕೊಂಡು ಆದರೂ ಬದುಕಬಹದು, ನಿಮ್ಮಂತೆ ಬದುಕು ಮಾರಿಕೊಂಡು ಅಲ್ಲ!’ ಎಂದು ಟಾಂಗ್ ನೀಡಿದ್ದಾರೆ.

ಶುಕ್ರವಾರ ರಾತ್ರಿ ಬೆಂಗಳೂರಿನಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆದು ಆರ್. ಅಶೋಕ ಅವರನ್ನು ವಿಧಾನಸಭೆಯ ಪ್ರತಿಪಕ್ಷ ನಾಯಕನನ್ನಾಗಿ ಆಯ್ಕೆ ಮಾಡಲಾಗಿತ್ತು. ಇದಕ್ಕೂ ಮುನ್ನ ಕೇಂದ್ರದಿಂದ ಬಂದ ವೀಕ್ಷಕರು ಶಾಸಕರ ಜತೆ ಮುಖಾಮುಖಿ ಮಾತುಕತೆ ನಡೆಸಿದ್ದರು. ಅದರಂತೆ, ಉತ್ತರ ಕರ್ನಾಟಕ ಭಾಗದ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ ಹಾಗೂ ರಮೇಶ್ ಜಾರಕಿಹೊಳಿ ಸಹ ಮಾತುಕತೆ ನಡೆಸಿದ್ದರು.


ವೀಕ್ಷಕರ ಜತೆಗಿನ ಮಾತುಕತೆ ಬಳಿಕ ಮುನಿಸಿಕೊಂಡು ಶಾಸಕಾಂಗ ಪಕ್ಷದ ಸಭೆಗೂ ಹಾಜರಾಗದೆ ತೆರಳಿದ್ದ ಮೂವರು ನಾಯಕರನ್ನು ಗುರಿಯಾಗಿಸಿ ಕಾಂಗ್ರೆಸ್ ವ್ಯಂಗ್ಯವಾಡಿತ್ತು.

ಇದನ್ನೂ ಓದಿ: ಬಿಜೆಪಿ ಕಚೇರಿ ಶ್ರೀಮಂತರ ಚಹಾ ಹೋಟೆಲ್, ಇಲ್ಲಿ ಬಡವರ ಚಹಾ ಸಿಗಲ್ಲ; ಟ್ವೀಟ್​ ಮೂಲಕ ಕಾಂಗ್ರೆಸ್​ ವ್ಯಂಗ್ಯ

ಬಿಜೆಪಿ ನಾಯಕರ ಅಸಮಾಧಾನದ ಬಗ್ಗೆ ವ್ಯಂಗ್ಯವಾಗಿ ಸಾಮಾಜಿಕ ಮಾಧ್ಯಮ ಎಕ್ಸ್​​​ನಲ್ಲಿ ಸಂದೇಶ ಪ್ರಕಟಿಸಿದ್ದ ಕಾಂಗ್ರೆಸ್, ಬಿಜೆಪಿ ಕಚೇರಿ ಶ್ರೀಮಂತರ ಚಹಾ ಹೋಟೆಲ್, ಇಲ್ಲಿ ಬಡವರ ಚಹಾ ಸಿಗಲ್ಲ ಎಂದು ಹೊರಗೆ ಟೀ ಕುಡಿಯಲು ಹೋದವರು ಜಗನ್ನಾಥ ಭವನದ ಎದುರು ಟೀ ಮಾರಿಕೊಂಡು ಕೂತಿದ್ದಾರಂತೆ, ಮೋದಿ ಮಾದರಿ! ಹೇ ಜಗನ್ನಾಥ ಪ್ರಭು, ನೀನೆಷ್ಟು ಕ್ರೂರಿ? ‘‘ಜಾರಿದವರ ಯತ್ನ ಬೆಲ್ಲ’’ ಆಗ್ಲಿಲ್ಲವಲ್ಲಪ್ಪ ಎಂದು ವ್ಯಂಗ್ಯವಾಡಿತ್ತು. ಇದಕ್ಕೆ ಯತ್ನಾಳ್ ತಿರುಗೇಟು ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ