ಕೆಸಿಆರ್ ಅತ್ಯಂತ ಭ್ರಷ್ಟ ರಾಜಕಾರಣಿ ಎನ್ನುವ ಬಿಜೆಪಿ ಯಾಕೆ ಇಡಿ, ಸಿಬಿಐ ಕಳುಹಿಸಲಿಲ್ಲ?: ವಿಜಯಶಾಂತಿ
ತೆಲಂಗಾಣ ಚುನಾವಣೆಯಲ್ಲಿ "ಬಿಜೆಪಿ ಮತ್ತು ಟಿಆರ್‌ಎಸ್ (ಬಿಆರ್‌ಎಸ್) ಒಟ್ಟಿಗೆ ಬಂದಿದ್ದರಿಂದ ನಾನು ಕಾಂಗ್ರೆಸ್‌ಗೆ ಸೇರಿದ್ದೇನೆ. ಬಿಜೆಪಿಯ ಉನ್ನತ ನಾಯಕರು ತೆಲಂಗಾಣಕ್ಕೆ ಬರುತ್ತಾರೆ ಯಾವಾಗಲೂ ಕೆಸಿಆರ್ ಭ್ರಷ್ಟರು, ಅವರ ಮಗಳು ಮದ್ಯದ ಹಗರಣದಲ್ಲಿದ್ದಾರೆ, ಇದು ಕುಟುಂಬದ ಪಕ್ಷ ಎಂದು ಹೇಳುತ್ತಾರೆ. ಆಮೇಲೆ ಅವರು ದೆಹಲಿಗೆ ಹಿಂತಿರುಗುತ್ತಾರೆ.
ಹೈದರಾಬಾದ್ ನವೆಂಬರ್ 18: ಬಿಜೆಪಿಯ ಪ್ರಕಾರ ತೆಲಂಗಾಣ (Telangana) ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅತ್ಯಂತ ಭ್ರಷ್ಟ ರಾಜಕಾರಣಿ ಆದರೆ ಕೆಸಿಆರ್ (KCR) ವಿರುದ್ಧ ಬಿಜೆಪಿ ಯಾವುದೇ ಕ್ರಮ ಕೈಗೊಂಡಿಲ್ಲ ಏಕೆಂದರೆ ಅವರು ಒಟ್ಟಿಗೆ ಇದ್ದಾರೆ ಎಂದು ನಟಿ-ರಾಜಕಾರಣಿ ವಿಜಯಶಾಂತಿ ಶನಿವಾರ ವಿವರಿಸಿದ್ದಾರೆ. ತೆಲಂಗಾಣ ಚುನಾವಣೆಯಲ್ಲಿ “ಬಿಜೆಪಿ ಮತ್ತು ಟಿಆರ್‌ಎಸ್ (ಬಿಆರ್‌ಎಸ್) ಒಟ್ಟಿಗೆ ಬಂದಿದ್ದರಿಂದ ನಾನು ಕಾಂಗ್ರೆಸ್‌ಗೆ (Congress) ಸೇರಿದ್ದೇನೆ. ಬಿಜೆಪಿಯ ಉನ್ನತ ನಾಯಕರು ತೆಲಂಗಾಣಕ್ಕೆ ಬರುತ್ತಾರೆ ಯಾವಾಗಲೂ ಕೆಸಿಆರ್ ಭ್ರಷ್ಟರು, ಅವರ ಮಗಳು ಮದ್ಯದ ಹಗರಣದಲ್ಲಿದ್ದಾರೆ, ಇದು ಕುಟುಂಬದ ಪಕ್ಷ ಎಂದು ಹೇಳುತ್ತಾರೆ. ಆಮೇಲೆ ಅವರು ದೆಹಲಿಗೆ ಹಿಂತಿರುಗುತ್ತಾರೆ. ಇತರ ಅನೇಕ ನಾಯಕರ ಮೇಲೆ ದಾಳಿಗಳು ನಡೆಯುತ್ತಿವೆ ಆದರೆ ಯಾವುದೇ ಇಡಿ, ಸಿಬಿಐ ಕೆಸಿಆರ್ ಬಳಿ ಬಂದಿಲ್ಲ ಎಂದು ವಿಜಯಶಾಂತಿ ಹೇಳಿದ್ದಾರೆ.
ತೆಲುಗಿನ ಹಿರಿಯ ನಟಿ ವಿಜಯಶಾಂತಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ಚುನಾವಣಾ ಪ್ರಚಾರ ಮತ್ತು ಯೋಜನಾ ಸಮಿತಿಯ ಮುಖ್ಯ ಸಂಯೋಜಕರಾಗಿ ನೇಮಕಗೊಂಡಾಗ “ಕೆಸಿಆರ್ ಅವರನ್ನು ಜೈಲಿಗೆ ಹಾಕಬೇಕು ಎಂದು ಅವರು ಹೇಳದ್ದಾರೆ. ಸಂಜಯ್ ಕೆಸಿಆರ್ ವಿರುದ್ಧ ಇದ್ದ ಕಾರಣ ಬಿಜೆಪಿ ಬಂಡಿ ಸಂಜಯ್ ಕುಮಾರ್ ಅವರನ್ನು ತೆಗೆದುಹಾಕಿದೆ. ಚುನಾವಣೆಗೆ ನಾಲ್ಕು ತಿಂಗಳ ಮೊದಲು ಪಕ್ಷವು ಈ ನಿರ್ಧಾರವನ್ನು ತೆಗೆದುಕೊಂಡಿತು. ಇದು ನ್ಯಾಯವಲ್ಲ, ಸಂಜಯ್ ಅವರನ್ನು ತೆಗೆದುಹಾಕಿದ ನಂತರ ಬಿಜೆಪಿ ತಮ್ಮದೇ ಪಕ್ಷವನ್ನು ಹಾಳುಮಾಡಿದೆ. ಬಿಜೆಪಿ ಆಗಿರುವ ಅನಾಹುತಕ್ಕೆ ನಾವು ಹೊಣೆಯಲ್ಲ ಎಂದಿದ್ದಾರೆ ಅವರು.
ಹಿಂದಿನ ಟಿಆರ್‌ಎಸ್ ಸೇರಿದಂತೆ ಎಲ್ಲಾ ಪಕ್ಷಗಳಿಗೂ ವಿಜಯಶಾಂತಿ ಪಕ್ಷಾಂತರ ಮಾಡಿದ್ದಾರೆ. ಅವರು 1997 ರಲ್ಲಿ ಬಿಜೆಪಿಯೊಂದಿಗೆ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರು. ವಿಜಯಶಾಂತಿ ಟಿಆರ್ಎಸ್ ಮತ್ತು ತೆಲಂಗಾಣ ಚಳವಳಿಗೆ ಸೇರಿದರು. 2009 ರಲ್ಲಿ ಅವರು ಟಿಆರ್ ಎಸ್ ಸಂಸದರಾದರು. 2015 ರಲ್ಲಿ ತೆಲಂಗಾಣ ಹುಟ್ಟುವ ಮೊದಲು, ಅವರು 2014 ರಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರಿದರು. 2019 ರಲ್ಲಿ, ವಿಜಯಶಾಂತಿ ಅವರು ಪ್ರಧಾನಿ ಮೋದಿ ಸರ್ವಾಧಿಕಾರಿಯಂತೆ ಆಡಳಿತ ನಡೆಸುತ್ತಿದ್ದಾರೆ ಎಂದು ಹೇಳಿ ವಿವಾದವನ್ನು ಹುಟ್ಟುಹಾಕಿದರು. ಒಂದು ವರ್ಷದ ನಂತರ ಅವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದರು.
ಇದನ್ನೂ ಓದಿ: ಕಾಂಗ್ರೆಸ್ ಮತ್ತು ಬಿಆರ್‌ಎಸ್ ‘ಹಿಂದುಳಿದ ವರ್ಗದ ವಿರೋಧಿ’ ಪಕ್ಷಗಳು: ತೆಲಂಗಾಣದಲ್ಲಿ ಅಮಿತ್ ಶಾ
ವಿಜಯಶಾಂತಿ ಚಿತ್ರಗಳು
ವಿಜಯಶಾಂತಿ ಹಲವಾರು ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಕರ್ತವ್ಯಂ ಚಿತ್ರದಲ್ಲಿ ಮಹಿಳಾ ಪೋಲೀಸ್ ಪಾತ್ರಕ್ಕಾಗಿ ಅವರು ಅತ್ಯುತ್ತಮ ನಟಿಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಲಭಿಸಿತ್ತು. ವಿಜಯಶಾಂತಿ ಅನಿಲ್ ಕಪೂರ್ ಜೊತೆ ‘ಈಶ್ವರ್’ ಮತ್ತು ‘ಅಪರಾಧಿ’ ಚಿತ್ರಗಳಲ್ಲಿ ಮತ್ತು ಧರ್ಮೇಂದ್ರ ಅವರೊಂದಿಗೆ ‘ಗುಂಡಾಗರ್ದಿ’ ಚಿತ್ರದಲ್ಲಿ ಕೆಲಸ ಮಾಡಿದರು.
ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:57 pm, Sat, 18 November 23