ರಾಜಸ್ಥಾನ, ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶದಲ್ಲಿ ಬಿಜೆಪಿ ಗೆಲ್ಲುತ್ತದೆ: ಪಿಯೂಷ್ ಗೋಯಲ್

ನಾವು ಅಲ್ಲಿ ನೋಡುತ್ತಿರುವುದು ತುಂಬಾ ಸ್ಪಷ್ಟವಾಗಿದೆ, ಟಿವಿ ಮತ್ತು ಎಕ್ಸ್ ನೋಡಿದರೆ ಛತ್ತೀಸ್‌ಗಢದಲ್ಲಿ ಟ್ರೆಂಡ್ ಬದಲಾಗಿದ್ದು ನಾವು ಕಾಂಗ್ರೆಸ್‌ಗಿಂತ ಸ್ಪಷ್ಟವಾಗಿ ಮುಂದಿದ್ದೇವೆ ಎಂದು ನಂಬುವಂತೆ ಮಾಡಿದೆ. ನಾನು ಭಾರತದಿಂದ ಹೊರಡುವ ಮೊದಲೇ ಮಧ್ಯಪ್ರದೇಶವು ಬಿಜೆಪಿಯತ್ತ ಒಲವು ಹೊಂದಿತ್ತು .

ರಾಜಸ್ಥಾನ, ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶದಲ್ಲಿ ಬಿಜೆಪಿ ಗೆಲ್ಲುತ್ತದೆ: ಪಿಯೂಷ್ ಗೋಯಲ್
ಪಿಯೂಷ್ ಗೋಯಲ್
Follow us
ರಶ್ಮಿ ಕಲ್ಲಕಟ್ಟ
|

Updated on: Nov 17, 2023 | 6:14 PM

ದೆಹಲಿ ನವೆಂಬರ್ 17: ಕೇಂದ್ರ ಸಚಿವ ಪಿಯೂಷ್ ಗೋಯಲ್ (Piyush Goyal) ಅವರು ಏಷ್ಯಾ-ಪೆಸಿಫಿಕ್ ಆರ್ಥಿಕ ಸಹಕಾರ (APEC) ನಲ್ಲಿ ಪಾಲ್ಗೊಳ್ಳಲು ಅಮೆರಿಕದಲ್ಲಿದ್ದರೂ ಐದು ರಾಜ್ಯಗಳ ವಿಧಾನಸಭಾ ಚುನಾವಣೆ (Assembly Elections 2023) ಬಗ್ಗೆ ಗಮನ ಕೇಂದ್ರೀಕರಿಸಿದ್ದಾರೆ. ಚುನಾವಣಾ ಕುರಿತು ಎಪಿಇಸಿ ಶೃಂಗಸಭೆಯ ಹೊತ್ತಲ್ಲೇ ಅವರು ಎನ್‌ಡಿಟಿವಿಯೊಂದಿಗೆ ಮಾತನಾಡಿದ್ದು, ಚುನಾವಣೆಯಲ್ಲಿ ಬಿಜೆಪಿ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಆಡಳಿತವಿರುವ ರಾಜಸ್ಥಾನದಲ್ಲಿ ಬಿಜೆಪಿ ಪ್ರಚಂಡ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದ ಗೋಯಲ್ ಪಕ್ಷವು “ಛತ್ತೀಸ್‌ಗಢದಲ್ಲಿ ಸ್ಪಷ್ಟವಾಗಿ ಮುಂದಿದೆ” ಮತ್ತು ಮಧ್ಯಪ್ರದೇಶ ಬಿಜೆಪಿ ತೆಕ್ಕೆಗೆ ಬೀಳಲಿದೆ ಎಂದಿದ್ದಾರೆ.

ರಾಜಸ್ಥಾನದಲ್ಲಿ ಬಿಜೆಪಿ ಗೆಲ್ಲುತ್ತದೆ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ಸೋಲುತ್ತದೆ ಎಂದು ಅಭಿಪ್ರಾಯ ಸಂಗ್ರಹಗಳು ಮತ್ತು ವಿಶ್ಲೇಷಕರು ಭವಿಷ್ಯ ನುಡಿದಿದ್ದಾರೆ. ಆದರೆ ಮಿಜೋರಾಂ ವಿಷಯದಲ್ಲಿ ಸ್ಪಷ್ಟ ಅಭಿಪ್ರಾಯಗಳು ಕೇಳಿಬಂದಿಲ್ಲ. ತೆಲಂಗಾಣದಲ್ಲಿ ಮುಖ್ಯವಾಗಿ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಮತ್ತು ಕಾಂಗ್ರೆಸ್ ನಡುವೆ ಕದನವಿದೆ.  ಈ ಬಗ್ಗೆ ಮಾತನಾಡಿದ ಗೋಯಲ್ ಆದಾಗ್ಯೂ, ಈ ಭವಿಷ್ಯ ನೆಲದ ಪರಿಸ್ಥಿತಿಯನ್ನು ಪ್ರತಿಬಿಂಬಿಸುವುದಿಲ್ಲ ಎಂದಿದ್ದಾರೆ.

“ನಾವು ಅಲ್ಲಿ ನೋಡುತ್ತಿರುವುದು ತುಂಬಾ ಸ್ಪಷ್ಟವಾಗಿದೆ, ಟಿವಿ ಮತ್ತು ಎಕ್ಸ್ ನೋಡಿದರೆ ಛತ್ತೀಸ್‌ಗಢದಲ್ಲಿ ಟ್ರೆಂಡ್ ಬದಲಾಗಿದ್ದು ನಾವು ಕಾಂಗ್ರೆಸ್‌ಗಿಂತ ಸ್ಪಷ್ಟವಾಗಿ ಮುಂದಿದ್ದೇವೆ ಎಂದು ನಂಬುವಂತೆ ಮಾಡಿದೆ. ನಾನು ಭಾರತದಿಂದ ಹೊರಡುವ ಮೊದಲೇ ಮಧ್ಯಪ್ರದೇಶವು ಬಿಜೆಪಿಯತ್ತ ಒಲವು ಹೊಂದಿತ್ತು .

“ನಾನು ರಾಜಸ್ಥಾನ ಮತ್ತು ಮಧ್ಯಪ್ರದೇಶಕ್ಕೆ ಆಗಾಗ್ಗೆ ಭೇಟಿ ನೀಡಿದ್ದೇನೆ. ರಾಜಸ್ಥಾನವು ಏಕಪಕ್ಷೀಯ ಆದಂತೆ ಕಾಣಉತ್ತಿದೆ. ನಾವು ರಾಜಸ್ಥಾನದಲ್ಲಿ ಅತ್ಯಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ಮಧ್ಯಪ್ರದೇಶ ಮತ್ತು ಛತ್ತೀಸ್ ಗಢದಲ್ಲಿ ಬಿಜೆಪಿ ಗೆಲುವುದು ನಿಶ್ಚಿತ ಎಂದು ಕೇಂದ್ರ ಸಚಿವರು ಹೇಳಿದ್ದಾರೆ.

ಭಾರತಕ್ಕೆ ಮರಳಿದ ನಂತರವೇ ತೆಲಂಗಾಣ ಪರಿಸ್ಥಿತಿ ಬಗ್ಗೆ ಹೇಳಬಹುದು. ತೆಲಂಗಾಣದಲ್ಲಿ ನವೆಂಬರ್ 30 ರಂದು ಮತದಾನವಿದೆ. ನಾನು ಇಲ್ಲಿಗೆ ಬರುವ ಮೊದಲು ತೆಲಂಗಾಣಕ್ಕೆ ಕೇವಲ ಎರಡು ಬಾರಿ ಭೇಟಿ ನೀಡಿದ್ದೇನೆ. ಒಮ್ಮೆ ಹಿಂತಿರುಗಿ ಮತ್ತು ನೆಲದ ಪರಿಸ್ಥಿತಿಯನ್ನು ನೋಡಿದರೆ ಅಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ಹೇಳಬಹುದು. ನಾವು ವ್ಯಾಪಕವಾಗಿ ಪ್ರಚಾರ ನಡೆಸಿದ್ದ ರಾಜಸ್ಥಾನ, ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶ – ಕನಿಷ್ಠ ಮೂರು ರಾಜ್ಯಗಳಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದು ಗೋಯಲ್ ಹೇಳಿದ್ದಾರೆ.

ಇದನ್ನೂ ಓದಿ:ಮುಗ್ಧ ಮನಸ್ಸುಗಳೊಂದಿಗೆ ಮಗುವಾದ ಮೋದಿ  

ಭಾರತದಲ್ಲಿ ಟೆಸ್ಲಾ ಮತ್ತು ಇವಿ ಬಗ್ಗೆ

ತಮ್ಮ ಅಮೆರಿಕ ಭೇಟಿಯು ಪ್ರಾಥಮಿಕವಾಗಿ ಟೆಸ್ಲಾ ತಂಡವನ್ನು ಭೇಟಿಯಾಗುವುದಕ್ಕಾಗಿ ಎಂದು ಹೇಳಿದರು, “ಅವರಲ್ಲಿ ಅನೇಕ ಭಾರತೀಯರು ನಮಗೆ ಹೆಮ್ಮೆ ತಂದಿದ್ದಾರೆ.” ವಿಶೇಷವಾಗಿ ಟೆಸ್ಲಾ ಭಾರತದಿಂದ ತಮ್ಮ ಆಮದುಗಳನ್ನು ದ್ವಿಗುಣಗೊಳಿಸಿದ ನಂತರ, ತಮ್ಮ ಪೂರೈಕೆ ಸರಪಳಿಯಲ್ಲಿ ಭಾರತದಿಂದ ಅಂಶಗಳ ಬಗ್ಗೆ ಟೆಸ್ಲಾದ ಯೋಜನೆಗಳನ್ನು ಚರ್ಚಿಸಲು ಸರ್ಕಾರ ಬಯಸುತ್ತದೆ.

“ನಾವು ಎಲೆಕ್ಟ್ರಿಕ್ ವಾಹನಗಳನ್ನು (EV ಗಳು) ಅತ್ಯಂತ ವೇಗವಾಗಿ ಅಳವಡಿಸಿಕೊಳ್ಳುತ್ತಿದ್ದೇವೆ. ಸುಮಾರು 40 ಪ್ರತಿಶತ ದ್ವಿಚಕ್ರ ವಾಹನಗಳು ಈಗ EVಗಳಾಗಿವೆ. ವಾಣಿಜ್ಯ ಬಸ್‌ಗಳು ಮತ್ತು ಕ್ಯಾಬ್‌ಗಳಿಗೆ, EV ಗಳನ್ನು ಬಳಸುವು ಹೆಚ್ಚು ಆರ್ಥಿಕ ಮತ್ತು ಪರಿಸರ ಸ್ನೇಹಿಯಾಗಿದೆ ಎಂದು ಗೋಯಲ್ ಹೇಳಿದ್ದಾರೆ.

ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ