ರಾಂಚಿಯಲ್ಲಿ ಪ್ರಧಾನಿ ಮೋದಿ ಬೆಂಗಾವಲು ವಾಹನದ ಮುಂದೆ ಹಠಾತ್ತನೆ ಜಿಗಿದ ಮಹಿಳೆ
ರಾಂಚಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಭದ್ರತೆಯಲ್ಲಿ ಭಾರಿ ಲೋಪವಾಗಿದೆ. ಇದ್ದಕ್ಕಿದ್ದಂತೆ ಮಹಿಳೆಯೊಬ್ಬರು ಪ್ರಧಾನಿ ನರೇಂದ್ರ ಮೋದಿಯವರ ಬೆಂಗಾವಲು ವಾಹನದ ಮುಂದೆ ಹಾರಿದ್ದಾರೆ. ಚಾಲಕ ಏಕಾಏಕಿ ಬ್ರೇಕ್ ಹಾಕಿ ಅಪಘಾತವನ್ನು ತಪ್ಪಿಸಿದ್ದಾರೆ, ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ರಾಂಚಿಯಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi) ಯವರ ಭದ್ರತೆಯಲ್ಲಿ ಭಾರಿ ಲೋಪವಾಗಿದೆ. ಇದ್ದಕ್ಕಿದ್ದಂತೆ ಮಹಿಳೆಯೊಬ್ಬರು ಪ್ರಧಾನಿ ನರೇಂದ್ರ ಮೋದಿಯವರ ಬೆಂಗಾವಲು ವಾಹನದ ಮುಂದೆ ಹಾರಿದ್ದಾರೆ. ಚಾಲಕ ಏಕಾಏಕಿ ಬ್ರೇಕ್ ಹಾಕಿ ಅಪಘಾತವನ್ನು ತಪ್ಪಿಸಿದ್ದಾರೆ, ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಪ್ರಧಾನಿ ಮೋದಿ ಬುಧವಾರ ರಾಂಚಿಯಲ್ಲಿ ಬಿರ್ಸಾಮುಂಡ ಸ್ಮಾರಕಕ್ಕೆ ತೆರಳುತ್ತಿರುವಾಗ ಈ ಘಟನೆ ಸಂಭವಿಸಿದೆ. ಈ ಪ್ರದೇಶವು ಕೊತ್ವಾಲಿ ಪೊಲೀಸ್ ಠಾಣೆ ಮತ್ತು ಲಾಲ್ಪುರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಹಿಳೆಗೆ ಕೌಟುಂಬಿಕ ಸಮಸ್ಯೆಗಳಿವೆ ಎನ್ನಲಾಗುತ್ತಿದೆ, ಅವರು ತಮ್ಮ ಕಷ್ಟವನ್ನು ಪ್ರಧಾನಿ ಮೋದಿಗೆ ಹೇಳಲು ಬಯಸಿದ್ದರು.
ರಸ್ತೆಬದಿಯಲ್ಲಿ ಪ್ರಧಾನಿ ಬರುವುದನ್ನೇ ಕಾಯುತ್ತಾ ನಿಂತಿದ್ದ ಮಹಿಳೆ ಕಾರು ಕಂಡಾಕ್ಷಣ ಎದುರು ಜಿಗಿದಿದ್ದಾರೆ. ತಕ್ಷಣ ಭದ್ರತಾ ಸಿಬ್ಬಂದಿ ಆಕೆಯನ್ನು ತಡೆದಿದ್ದಾರೆ. ಬಳಿಕ ಪ್ರಧಾನಿ ಮೋದಿ ಬೆಂಗಾವಲು ವಾಹನ ಮುಂದೆ ಚಲಿಸಿತು.
ಮತ್ತಷ್ಟು ಓದಿ: Tribal Pride Day: ಬಿರ್ಸಾ ಮುಂಡಾ ಜನ್ಮದಿನ, ಬುಡಕಟ್ಟು ಜನಾಂಗದ ಐಕಾನ್ನ ಪ್ರತಿಮೆಗೆ ಗೌರವ ಸಲ್ಲಿಸಿದ ಪ್ರಧಾನಿ ಮೋದಿ
ಉನ್ನತ ಮಟ್ಟದ ತನಿಖೆ ನಡೆಯುತ್ತಿದೆ, ಕಮಾಂಡೊಗಳು ಮಹಿಳೆಯನ್ನು ಸ್ಥಳೀಯ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಈ ಘಟನೆಯ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ, ಖಾಲಿ ರಸ್ತೆಯಲ್ಲಿ ಮೋದಿ ಬೆಂಗಾವಲು ವಾಹನ ತುಂಬಾ ವೇಗವಾಗಿ ಹೋಗುತ್ತಿರುವುದನ್ನು ಕಾಣಬಹುದು.
Big mistake in PM Modi’s security! A woman came in front of the Prime Minister’s car in Ranchi, the convoy had to be stopped suddenly.#PMModi #Modi #NarendraModi #India pic.twitter.com/ewDmUt7l3R
— Siraj Noorani (@sirajnoorani) November 15, 2023
ಅಷ್ಟರಲ್ಲಿ ವಾಹನದ ಮುಂದೆ ಕೆಂಪು ಬಟ್ಟೆ ತೊಟ್ಟ ಮಹಿಳೆ ಓಡಿ ಬಂದಿದ್ದಾರೆ, ಎಲ್ಲಾ ವಾಹನಗಳು ತುರ್ತು ಬ್ರೇಕ್ ಹಾಕಬೇಕಾಯಿತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ