Chandrayaan 3: ನಿಯಂತ್ರಣ ಕಳೆದುಕೊಂಡು ಮತ್ತೆ ಭೂಮಿಗೆ ಮರಳಿದ ಚಂದ್ರಯಾನ-3 ಬಾಹ್ಯಾಕಾಶ ನೌಕೆಯ ಒಂದು ಭಾಗ
ಚಂದ್ರಯಾನ-3 ಮಿಷನ್‌ನ ಯಶಸ್ಸಿನ ಕುರಿತು ದೇಶದ ಜನತೆಗೆ ಹೆಮ್ಮೆ ಇದೆ. ಚಂದ್ರಯಾನ 3 ಬಾಹ್ಯಾಕಾಶ ನೌಕೆಯಯನ್ನು ಯಶಸ್ವಿಯಾಗಿ ನಿಗದಿತ ಕಕ್ಷೆಯಲ್ಲಿ ಇರಿಸಿದ್ದ ಎಲ್ವಿಎಂ ಎಂ4 ಉಡಾವಣಾ ವಾಹನದ ಕ್ರಯೋಜೆನಿಕ್ ಮೇಲಿನ ಭಾಗವು ಅನಿಯಂತ್ರಿತವಾಗಿ ಭೂಮಿಯ ಕಡೆ ಮರಳಿದೆ. ಈ ಕುರಿತು ಇಸ್ರೋ ಮಾಹಿತಿ ನೀಡಿದೆ.
ಚಂದ್ರಯಾನ-3(Chandrayaan 3) ಮಿಷನ್‌ನ ಯಶಸ್ಸಿನ ಕುರಿತು ದೇಶದ ಜನತೆಗೆ ಹೆಮ್ಮೆ ಇದೆ. ಚಂದ್ರಯಾನ 3 ಬಾಹ್ಯಾಕಾಶ ನೌಕೆಯಯನ್ನು ಯಶಸ್ವಿಯಾಗಿ ನಿಗದಿತ ಕಕ್ಷೆಯಲ್ಲಿ ಇರಿಸಿದ್ದ ಎಲ್ವಿಎಂ ಎಂ4 ಉಡಾವಣಾ ವಾಹನದ ಕ್ರಯೋಜೆನಿಕ್ ಮೇಲಿನ ಭಾಗವು ಅನಿಯಂತ್ರಿತವಾಗಿ ಭೂಮಿಯ ಕಡೆ ಮರಳಿದೆ. ಈ ಕುರಿತು ಇಸ್ರೋ ಮಾಹಿತಿ ನೀಡಿದೆ.
ಸೆಪ್ಟೆಂಬರ್ನಲ್ಲಿ ಸ್ಲೀಪ್ ಮೋಡ್ಗೆ ಹೋಗಿದ್ದ ಲ್ಯಾಂಡರ್ ವಿಕ್ರಮ್ ಮತ್ತು ರೋವರ್ ಪ್ರಗ್ಯಾನ್ ಇನ್ನೂ ಆಕ್ಟೀವ್ ಆಗಿಲ್ಲ. ಈ ರಾಕೆಟ್ನ ಭಾಗವು ಉತ್ತರ ಪೆಸಿಫಿಕ್ ಮಹಾಸಾಗಾರದ ಮೇಲೆ ಬೀಳಬಹುದು ಎನ್ನಲಾಗಿದೆ.
ಜುಲೈ 14ರಂದು ಆಂಧ್ರಪ್ರದೇಶದ ಶ್ರೀಹರಿಕೋಟದಿಂದ ಚಂದ್ರಯಾನ 3 ಉಡಾವಣೆಯಾಗಿತ್ತು, ಆಗಸ್ಟ್ 23ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿಯಿತು. ಭಾರತವು ಚಂದ್ರನನ್ನು ತಲುಪಿದ ವಿಶ್ವದ ನಾಲ್ಕನೇ ದೇಶ ಮತ್ತು ದಕ್ಷಿಣ ಧ್ರುವದಲ್ಲಿ ಇಳಿದ ಮೊದಲ ದೇಶವಾಗಿದೆ.
ಇಳಿದ ನಂತರ ಸುಮಾರು 14 ದಿನಗಳಲ್ಲಿ ಅನೇಕ ಪ್ರಮುಖ ಮಾಹಿತಿಯನ್ನು ಸಂಗ್ರಹಿಸಲಾಯಿತು. ಸೆಪ್ಟೆಂಬರ್ 2ರಂದು ಸ್ಲೀಪ್ ಮೋಡ್ಗೆ ಹೋದ ವಿಕ್ರಮ್ ಲ್ಯಾಂಡರ್ ಇನ್ನೂ ದೀರ್ಘ ನಿದ್ರೆಯಲ್ಲಿದೆ, ಇಸ್ರೋ ನಿರಂತರ ಪ್ರಯತ್ನಗಳನ್ನು ಮಾಡುತ್ತಿದ್ದರೂ, ಲ್ಯಾಂಡರ್ ಮತ್ತು ರೋವರ್ ಅನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ.
ಮತ್ತಷ್ಟು ಓದಿ: ಆಗಸ್ಟ್ 23 ‘ರಾಷ್ಟ್ರೀಯ ಬಾಹ್ಯಾಕಾಶ ದಿನ’ವೆಂದು ಘೋಷಿಸಿದ ಕೇಂದ್ರ ಸರ್ಕಾರ
ಚಂದ್ರಯಾನ 3 ಯೋಜನೆಯ ಒಟ್ಟು ವೆಚ್ಚ ರೂ.615 ಕೋಟಿ ಎಂದು ಅಂದಾಜಿಸಲಾಗಿದೆ. ಇಸ್ರೊ ಮಾಜಿ ಅಧ್ಯಕ್ಷ ಕೆ ಶಿವನ್ ಈ ವೆಚ್ಚವನ್ನು ಅಂದಾಜಿಸಿದ್ದರು. ಡಿಸೆಂಬರ್ 2019ರಲ್ಲಿ ಇಸ್ರೊ 75 ಕೋಟಿ ರೂಗಳನ್ನು ಆರಂಭಿಕವಾಗಿಯೇ ವಿನಂತಿಸಿತ್ತು. ಸುಮಾರು 60 ಕೋಟಿಗೂ ಹೆಚ್ಚು ಕೇವಲ ಯಂತ್ರೋಪಕರಣಗಳು, ಉಪಕರಣಗಳಿಗೆ ವೆಚ್ಚವಾಗಿದೆ ಎನ್ನಲಾಗಿದೆ.
ನೌಕೆಯು ಪೇಲೋಡ್‌ಗಳನ್ನು ಹೊಂದಿದ್ದು, ಇದು ಚಂದ್ರನ ಮೇಲ್ಮೈ ಪ್ಲಾಸ್ಮಾ ಆಯಾನುಗಳು ಮತ್ತು ಇಲೆಕ್ಟ್ರಾನ್‌ಗಳ ಸಾಂದ್ರತೆ, ಅದರ ಬದಲಾವಣೆಗಳನ್ನು ಅಳೆಯಲು ನೆರವಾಗುತ್ತದೆ.
ಭೌತಿಕ ಪ್ರಯೋಗಗಳು, ಅಧ್ಯಯನಗಳು, ಅಲ್ಲಿನ ಧ್ರುವ ಪ್ರದೇಶದ ಬಳಿ ಚಂದ್ರನ ಮೇಲ್ಮೈಯ ಉಷ್ಣ ಗುಣಲಕ್ಷಣಗಳ ಮಾಪನ, ಚಂದ್ರನ ಭೂಕಂಪನ ಚಟುವಟಿಕೆ, ಅಲ್ಲಿನ ಖನಿಜ ಸಂಯೋಜನೆ, ಹೊರಪದರ ರಚನೆ, ಮಣ್ಣು, ಬಂಡೆಗಳು, ರಸಾಯನಿಕ ಗುಣಗಳು, ಇತರೆ ಹಲವು ಅಂಶಗಳ ಅಧ್ಯಯನವನ್ನು ಚಂದ್ರಯಾನ ನಡೆಸಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ