ಸ್ನೇಹಿತನ ಮೇಲಿನ ಕೋಪದಿಂದ ಸುಳ್ಳು ಅತ್ಯಾಚಾರ ದೂರು ದಾಖಲಿಸಿದ ಮಹಿಳೆ; ಪುಣೆಯಲ್ಲೊಂದು ಶಾಕಿಂಗ್ ಘಟನೆ
ಪುಣೆಯ ಮಹಿಳೆಯೊಬ್ಬರು ತಮ್ಮ ಸ್ನೇಹಿತನ ವಿರುದ್ಧ 'ಕೋಪದಿಂದ' ಆತನ ವಿರುದ್ಧ ಅತ್ಯಾಚಾರದ ದೂರು ದಾಖಲಿಸಿದ್ದಾರೆ. ಪೊಲೀಸರು ಈ ಆಘಾತಕಾರಿ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. ಕಾನೂನನ್ನು ದುರುಪಯೋಗಪಡಿಸಿಕೊಂಡು ಸುಳ್ಳು ಅತ್ಯಾಚಾರದ ದೂರು ನೀಡಿದ್ದಕ್ಕಾಗಿ ಪೊಲೀಸರು ಆಕೆಯ ವಿರುದ್ಧವೇ ತನಿಖೆ ನಡೆಸುತ್ತಿದ್ದಾರೆ. ತಾನು ಒಬ್ಬಂಟಿಯಾಗಿದ್ದಾಗ ಡೆಲಿವರಿ ಏಜೆಂಟ್ ಎಂದು ಹೇಳಿಕೊಂಡು ಬಂದ ವ್ಯಕ್ತಿ ಬಂದು ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆಕೆ ಈ ಹಿಂದೆ ತನ್ನ ದೂರಿನಲ್ಲಿ ಹೇಳಿಕೊಂಡಿದ್ದರು.

ಪುಣೆ, ಜುಲೈ 5: ಮಹಾರಾಷ್ಟ್ರದ ಪುಣೆಯ ಮಹಿಳೆಯೊಬ್ಬರು ತಮ್ಮ ನಿವಾಸದಲ್ಲಿ ಕೊರಿಯರ್ ಡೆಲಿವರಿ ಏಜೆಂಟ್ ಎಂದು ನಟಿಸಿದ ವ್ಯಕ್ತಿಯೊಬ್ಬರು ತಮ್ಮ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಹೇಳಿಕೊಂಡಿದ್ದರು. ಆದರೆ, ಇದೀಗ ಅವರಿಬ್ಬರೂ ಸ್ನೇಹಿತರಾಗಿದ್ದರು ಎಂಬುದು ಬೆಳಕಿಗೆ ಬಂದಿದೆ. ಪುಣೆಯ ಅತ್ಯಾಚಾರ ಪ್ರಕರಣದಲ್ಲಿ ಆಘಾತಕಾರಿ ತಿರುವು ಸಿಕ್ಕಿದ್ದು, ಪುಣೆಯ ಐಷಾರಾಮಿ ಸೊಸೈಟಿಯಲ್ಲಿ ತನ್ನ ನಿವಾಸದಲ್ಲಿ ಕೊರಿಯರ್ ಡೆಲಿವರಿ ಬಾಯ್ ಎಂದು ಹೇಳಿಕೊಂಡು ಬಂದ ವ್ಯಕ್ತಿಯೊಬ್ಬರು ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಟೆಕ್ಕಿ ಹೇಳಿಕೊಂಡಿದ್ದರು. ಆದರೆ, ವರದಿಯ ಪ್ರಕಾರ ಆಕೆ ತನ್ನ ಸ್ನೇಹಿತನ ವಿರುದ್ಧ “ಕೋಪದಿಂದ” ಈ ರೀತಿ ಸುಳ್ಳು ದೂರು ದಾಖಲಿಸಿದ್ದಾರೆ.
ಆರೋಪಿಯು ಆ ಮಹಿಳೆಯ ಸ್ನೇಹಿತನಾಗಿದ್ದು, ಇಬ್ಬರೂ ಒಂದೆರಡು ವರ್ಷಗಳಿಂದ ಪರಸ್ಪರ ಪರಿಚಿತರಾಗಿದ್ದರು ಎಂದು ತನಿಖೆಯ ಸಮಯದಲ್ಲಿ ಬೆಳಕಿಗೆ ಬಂದಿದೆ. ಅವರು ಹಿಂದೆ ಆ ಮಹಿಳೆಯ ಮನೆಯಲ್ಲಿ ಹಲವು ಬಾರಿ ಭೇಟಿಯಾಗಿದ್ದರು. ಆ ಘಟನೆ ನಡೆದ ದಿನದಂದು ಕೂಡ ಆಕೆಯನ್ನು ಭೇಟಿಯಾಗಲು ಬಂದಿದ್ದರು ಎನ್ನಲಾಗಿದೆ. ಐಟಿ ವೃತ್ತಿಪರಳಾದ ಮಹಿಳೆ ಇದೀಗ ಬೇರೆ ಹೇಳಿಕೆ ನೀಡಿದ್ದು, ಆ ದಿನ ನಾನು ಲೈಂಗಿಕ ಸಂಭೋಗಕ್ಕೆ ಸಿದ್ಧವಾಗಿರಲಿಲ್ಲ. ಆದರೆ, ಆ ವ್ಯಕ್ತಿ ತನ್ನ ಮೇಲೆ ಬಲವಂತವಾಗಿ ಹಲ್ಲೆ ನಡೆಸಿದ್ದಾನೆ ಎಂದು ಹೇಳಿದ್ದಾರೆ. ಆ ಮಹಿಳೆ ತನ್ನ ಹೇಳಿಕೆಯಲ್ಲಿ ಪೊಲೀಸರಿಗೆ ತಾನು ಆರಂಭದಲ್ಲಿ ತಪ್ಪು ಮಾಹಿತಿ ನೀಡಿದ್ದಾಗಿ ಒಪ್ಪಿಕೊಂಡಿದ್ದಾಳೆ.
ಇದನ್ನೂ ಓದಿ: ಅದು ಅತ್ಯಾಚಾರವೇ ಆಗಿದ್ರೆ ಆರೋಪಿ ಕುತ್ತಿಗೆಯಲ್ಲಿ ಈ ಲವ್ ಬೈಟ್ ಯಾಕೆ ಇರ್ತಿತ್ತು? ವಕೀಲರ ಪ್ರಶ್ನೆ
ತಾನು ಒಬ್ಬಂಟಿಯಾಗಿದ್ದಾಗ ಕೊಂಧ್ವಾ ಪ್ರದೇಶದ ತನ್ನ ಫ್ಲಾಟ್‌ಗೆ ಡೆಲಿವರಿ ಏಜೆಂಟ್ ಎಂದು ಹೇಳಿಕೊಂಡು ಬಂದ ವ್ಯಕ್ತಿ ಬಂದು ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆಕೆ ಈ ಹಿಂದೆ ತನ್ನ ದೂರಿನಲ್ಲಿ ಹೇಳಿಕೊಂಡಿದ್ದರು. ಆರೋಪಿಯು ತನ್ನ ಫೋನ್‌ನಲ್ಲಿ ಸೆಲ್ಫಿ ತೆಗೆದುಕೊಂಡಿದ್ದಾನೆ, ಅದರಲ್ಲಿ ತನ್ನ ಬೆನ್ನು ಮತ್ತು ಮುಖದ ಒಂದು ಭಾಗ ಗೋಚರಿಸುತ್ತಿದೆ ಎಂದು ಆಕೆ ಹೇಳಿಕೊಂಡಿದ್ದರು. ತನ್ನ ಫೋಟೋಗಳನ್ನು ತಾನು ತೆಗೆದುಕೊಂಡಿದ್ದೇನೆ, ಈ ಘಟನೆಯನ್ನು ಪೊಲೀಸರಿಗೆ ತಿಳಿಸಿದರೆ ಅವುಗಳನ್ನು ಆನ್‌ಲೈನ್‌ನಲ್ಲಿ ಸೋರಿಕೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದ ಎಂದು ಆಕೆ ಹೇಳಿದ್ದರು.
ಇದನ್ನೂ ಓದಿ: ಬಿಹಾರ: ಭೂತ ಬಿಡಿಸುವ ನೆಪದಲ್ಲಿ 4 ತಿಂಗಳ ಗರ್ಭಿಣಿ ಮೇಲೆ ಸಾಮೂಹಿಕ ಅತ್ಯಾಚಾರ
ಆದರೆ, ಆರೋಪಿಯನ್ನು ಬಂಧಿಸಿದ ನಂತರ, ಸೆಲ್ಫಿ ತೆಗೆದುಕೊಂಡಿದ್ದು ಮಹಿಳೆಯೇ ಎಂದು ಪೊಲೀಸರು ಕಂಡುಕೊಂಡರು. ಅವರಿಬ್ಬರ ಕುಟುಂಬಗಳು ಪರಸ್ಪರ ತಿಳಿದಿದ್ದವು ಎಂದು ವರದಿಯಲ್ಲಿ ತಿಳಿಸಲಾಗಿದೆ. ಆ ಮಹಿಳೆ ಯಾಕೆ ಸುಳ್ಳು ನೀಡಿದ್ದಾರೆ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:30 pm, Sat, 5 July 25