AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಬರ್ತೀನಿ: ಯುವತಿ ಮೇಲೆ ಅತ್ಯಾಚಾರವೆಸಗಿ ಮೊಬೈಲ್​ನಲ್ಲಿ ಸೆಲ್ಫಿ ತೆಗೆದು, ನೋಟ್ ಬರೆದಿಟ್ಟು ಹೋದ ಡೆಲಿವರಿ ಬಾಯ್

ಡೆಲಿವರಿಗೆಂದು ಬಂದಿದ್ದ ವ್ಯಕ್ತಿ ಯುವತಿ ಮೇಲೆ ಅತ್ಯಾಚಾರವೆಗಿರುವ ಘಟನೆ ಪುಣೆಯಲ್ಲಿ ನಡೆದಿದೆ. ಐಷಾರಾಮಿ ಫ್ಲಾಟ್​ನಲ್ಲಿ ವಾಸಿಸುತ್ತಿರುವ ಯುವತಿ ಮನೆಗೆ ಕೊರಿಯರ್ ನೀಡಲು ಬಂದಿದ್ದ ವ್ಯಕ್ತಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಆಕೆ ಮೊಬೈಲ್​ನಲ್ಲಿ ಒಟಿಪಿ ನೋಡಲು ಒಳಗೆ ಹೋದಾಗ ವ್ಯಕ್ತಿ ಬಾಗಿಲು ಲಾಕ್ ಮಾಡಿ ಮನೆಯೊಳಗೆ ಪ್ರವೇಶಿಸಿ ಅತ್ಯಾಚಾರವೆಸಗಿದ್ದಾನೆ. ಕೆಲವು ವರದಿಗಳ ಪ್ರಕಾರ, ಆರೋಪಿ ಯುವತಿ ಮುಖಕ್ಕೆ ಏನನ್ನೋ ಸ್ಪ್ರೇ ಮಾಡಿದ್ದಾನೆ, ಆಕೆ ಪ್ರಜ್ಞಾಹೀನಳಾಗಿ ಬಿದ್ದಿದ್ದಳು, ಕೂಡಲೇ ಆತ ಅತ್ಯಾಚಾರವೆಸಗಿ ಪರಾರಿಯಾಗಿದ್ದಾನೆ.

ಮತ್ತೆ ಬರ್ತೀನಿ: ಯುವತಿ ಮೇಲೆ ಅತ್ಯಾಚಾರವೆಸಗಿ ಮೊಬೈಲ್​ನಲ್ಲಿ ಸೆಲ್ಫಿ ತೆಗೆದು, ನೋಟ್ ಬರೆದಿಟ್ಟು ಹೋದ ಡೆಲಿವರಿ ಬಾಯ್
ಕ್ರೈಂ Image Credit source: Aaj Tak
ನಯನಾ ರಾಜೀವ್
|

Updated on:Jul 03, 2025 | 11:07 AM

Share

ಪುಣೆ, ಜುಲೈ 03: ಡೆಲಿವರಿಗೆಂದು ಬಂದಿದ್ದ ವ್ಯಕ್ತಿ ಯುವತಿ ಮೇಲೆ ಅತ್ಯಾಚಾರವೆಗಿರುವ ಘಟನೆ ಪುಣೆಯಲ್ಲಿ ನಡೆದಿದೆ. ಐಷಾರಾಮಿ ಫ್ಲಾಟ್​ನಲ್ಲಿ ವಾಸಿಸುತ್ತಿರುವ ಯುವತಿ ಮನೆಗೆ ಕೊರಿಯರ್ ನೀಡಲು ಬಂದಿದ್ದ ವ್ಯಕ್ತಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಆಕೆ ಮೊಬೈಲ್​ನಲ್ಲಿ ಒಟಿಪಿ ನೋಡಲು ಒಳಗೆ ಹೋದಾಗ ವ್ಯಕ್ತಿ ಬಾಗಿಲು ಲಾಕ್ ಮಾಡಿ ಮನೆಯೊಳಗೆ ಪ್ರವೇಶಿಸಿ ಅತ್ಯಾಚಾರವೆಸಗಿದ್ದಾನೆ.

ಕೆಲವು ವರದಿಗಳ ಪ್ರಕಾರ, ಆರೋಪಿ ಯುವತಿ ಮುಖಕ್ಕೆ ಏನನ್ನೋ ಸ್ಪ್ರೇ ಮಾಡಿದ್ದಾನೆ, ಆಕೆ ಪ್ರಜ್ಞಾಹೀನಳಾಗಿ ಬಿದ್ದಿದ್ದಳು, ಕೂಡಲೇ ಆತ ಅತ್ಯಾಚಾರವೆಸಗಿ ಪರಾರಿಯಾಗಿದ್ದಾನೆ. ಹೊರಡುವ ಮೊದಲು ಆಕೆಯ ಮೊಬೈಲ್​ನಿಂದ ಸೆಲ್ಫಿ ತೆಗೆದು, ನಾನು ಮತ್ತೆ ಬರ್ತೀನಿ ಎಂದು ನೋಟ್ ಬರೆದಿಟ್ಟು ಹೋಗಿದ್ದಾನೆ. ಪೊಲೀಸರು ಈ ಘಟನೆ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.

ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್‌ಗಳ ಅಡಿಯಲ್ಲಿ ಪೊಲೀಸರು ಅತ್ಯಾಚಾರ, ಮಹಿಳೆಯ ಮೇಲೆ ಹಲ್ಲೆ ಮತ್ತು ಕ್ರಿಮಿನಲ್ ಬೆದರಿಕೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿದ್ದಾರೆ.ಸಂಜೆ 7.30ರ ಸುಮಾರಿಗೆ ಫ್ಲಾಟ್​ಗೆ ಡೆಲಿವರಿ ಬಾಯ್ ಹೋಗಿದ್ದಾನೆ. ಅಪರಾಧ ವಿಭಾಗದ ಐದು ಮತ್ತು ಐದು ವಲಯ ತಂಡಗಳು ಸೇರಿದಂತೆ ಹತ್ತು ತಂಡಗಳು ಈ ಪ್ರಕರಣದಲ್ಲಿ ಕೆಲಸ ಮಾಡುತ್ತಿವೆ.

ಮಹಿಳೆ ಸಂಜೆ 7.30 ರಿಂದ ಪ್ರಜ್ಞಾಹೀನಳಾಗಿದ್ದಳು. ಪರಿಶೀಲಿಸಲು ವಿಧಿವಿಜ್ಞಾನ ತಜ್ಞರನ್ನು ಕರೆಸಲಾಯಿತು.ಆಕೆಯ ಮೇಲೆ ಏನಾದರೂ ಸಿಂಪಡಿಸಲಾಗಿತ್ತೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಮಹಿಳೆಯ ಫೋನ್‌ನಲ್ಲಿ ಸೆಲ್ಫಿ ಕಂಡುಬಂದಿದೆ. ನಾವು ಅದನ್ನು ವಿಶ್ಲೇಷಿಸುತ್ತಿದ್ದೇವೆ ಎಂ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತಷ್ಟು ಓದಿ: ಬಿಜೆಪಿ ಮುಖಂಡನ ಪುತ್ರನ ವಿರುದ್ಧ ಅತ್ಯಾಚಾರ ಕೇಸ್: ಮಗುವಿನ ಜನ್ಮ ನೀಡಿದ ಸಂತ್ರಸ್ತೆ

ಬಿಹಾರ: ಭೂತ ಬಿಡಿಸುವ ನೆಪದಲ್ಲಿ 4 ತಿಂಗಳ ಗರ್ಭಿಣಿ ಮೇಲೆ ಸಾಮೂಹಿಕ ಅತ್ಯಾಚಾರ ಭೂತ ಬಿಡಿಸುವ ನೆಪದಲ್ಲಿ 4 ತಿಂಗಳ ಗರ್ಭಿಣಿ ಮೇಲೆ ಅತ್ಯಾಚಾರವೆಸಗಿರುವ ಘಟನೆ ಬಿಹಾರದ ಮುಜಾಫರ್​ಪುರದಲ್ಲಿ ನಡೆದಿದೆ. ಆಕೆ ಗರ್ಭಿಣಿಯಾದಾಗಿನಿಂದ ಅನಾರೋಗ್ಯಕ್ಕೆ ತುತ್ತಾಗಿದ್ದಳು, ಆಕೆಯ ಕುಟುಂಬದವರು ಮೂಢನಂಬಿಕೆಯಿಂದ ಮಾಂತ್ರಿಕನ ಬಳಿ ಕರೆದುಕೊಂಡು ಬಂದಿದ್ದರು. ಆ ಮಾಂತ್ರಿಕ ಆಕೆಯ ಮಾವನಿಗೆ ಹೊರಗಡೆ ಕೂರುವಂತೆ ಸೂಚಿಸಿ ಆಕೆಯನ್ನು ಒಳಗೆ ಕರೆದುಕೊಂಡು ಹೋಗಿ ಸಹಚರರೊಂದಿಗೆ ಸಾಮೂಹಿಕ ಅತ್ಯಾಚಾರವೆಸಗಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಆಕೆಯ ಮಾವ ಆಕೆಯನ್ನು ಶಿವೈಪಟ್ಟಿ ಪೊಲೀಸ್ ಠಾಣೆ ಪ್ರದೇಶದ ಮಧೇರಾ ಗ್ರಾಮದಲ್ಲಿರುವ ಮಾಂತ್ರಿಕನ ಬಳಿಗೆ ಭೂತ ಬಿಡಿಸಲು ಕರೆದೊಯ್ದರು. ಮಹಿಳೆ ಭಯದಿಂದ ಈ ವಿಚಾರವನ್ನು ಯಾರಿಗೂ ಹೇಳಿರಲಿಲ್ಲ. ಆದರೆ ಮತ್ತೊಮ್ಮೆ ಕೂಡ ಹೀಗೆ ಮಾಡಿದ್ದ,ಮೂರನೇ ಬಾರಿಗೆ ಕರೆದೊಯ್ದಾಗ ಆರೋಪಿ ಇದೇ ಕೆಲಸವನ್ನು ಮತ್ತೆ ಮಾಡಿದಾಗ ಆಕೆ ಸುಮ್ಮನಿರಲಾರದೆ ಕುಟುಂಬದವರ ಬಳಿ ಹೇಳಿಕೊಂಡಿದ್ದಾಳೆ.

ಮಹಿಳೆ ಸ್ಥಿತಿ ತೀರಾ ಹದಗೆಟ್ಟಿತ್ತು, ಆಕೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಕೂಡಲೇ ಕುಟುಂಬದವರಿಗೆ ಮಾಹಿತಿ ನೀಡಲಾಗಿತ್ತು. ಶಿವಾಯಿಪಟ್ಟಿ ಪೊಲೀಸ್ ಠಾಣೆಗೂ ಮಾಹಿತಿ ನೀಡಲಾಗಿದೆ, ಪ್ರಕರಣದಲ್ಲಿ ತನಿಖೆ ಮತ್ತು ಕ್ರಮ ಮುಂದುವರೆದಿದೆ.

Published On - 11:06 am, Thu, 3 July 25