ಕಾಲು ಹಿಡಿದು ಬೇಡಿಕೊಂಡರೂ ಬಿಡಲಿಲ್ಲ; ಕೊಲ್ಕತ್ತಾ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆ ಹೇಳಿಕೆ
24 ವರ್ಷದ ವಿದ್ಯಾರ್ಥಿನಿಯೊಬ್ಬಳು ತನ್ನ ದೂರಿನಲ್ಲಿ ವಿವರ ನೀಡಿದ್ದಾರೆ. ಪ್ರಮುಖ ಆರೋಪಿಯಿಂದ ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದ ನಂತರ ಕೊಲ್ಕತ್ತಾ ಕಾನೂನು ಕಾಲೇಜಿನೊಳಗೆ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ ಎಂದು ಆ ಯುವತಿ ಆರೋಪಿಸಿದ್ದಾಳೆ. ಈ ಹಲ್ಲೆಯನ್ನು ಚಿತ್ರೀಕರಿಸಿ, ತನಗೆ ಬ್ಲ್ಯಾಕ್‌ಮೇಲ್ ಮಾಡಲು ಮತ್ತು ಬೆದರಿಕೆ ಹಾಕಲು ಬಳಸಿಕೊಂಡಿದ್ದರು ಎಂದು ಆಕೆ ಹೇಳಿದ್ದಾಳೆ.

ಕೊಲ್ಕತ್ತಾ, ಜೂನ್ 27: ಬುಧವಾರ ತಡರಾತ್ರಿ ಪಶ್ಚಿಮ ಬಂಗಾಳದ (West Bengal) ಕೊಲ್ಕತ್ತಾ ಕಾನೂನು ಕಾಲೇಜಿನಲ್ಲಿ ಸೆಕ್ಯುರಿಟಿ ಕೊಠಡಿಯಲ್ಲಿ 24 ವರ್ಷದ ಕೊಲ್ಕತ್ತಾ ಕಾಲೇಜು ವಿದ್ಯಾರ್ಥಿನಿಯ ಮೇಲೆ ಮೂರನೇ ವ್ಯಕ್ತಿ ಅತ್ಯಾಚಾರ ನಡೆಸುತ್ತಿರುವುದನ್ನು ಇಬ್ಬರು ಪುರುಷರು ವೀಕ್ಷಿಸಿದ್ದರು. ಸೆಕ್ಯುರಿಟಿಯನ್ನು ಹೊರಹೋಗುವಂತೆ ಬೆದರಿಸಿದ ನಂತರ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು. ಈ ಘಟನೆಯ ಬಗ್ಗೆ ದೂರಿನಲ್ಲಿ ವಿವರ ನೀಡಿರುವ ಸಂತ್ರಸ್ತೆ, ನಾನು ಕಾಲು ಹಿಡಿದು ಬೇಡಿಕೊಂಡರೂ ಅವರು ಬಿಡಲಿಲ್ಲ ಎಂದಿದ್ದಾರೆ.
ಗುರುವಾರ ಸಂಜೆ ಸಲ್ಲಿಸಿದ ದೂರಿನಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ನ ವಿದ್ಯಾರ್ಥಿ ವಿಭಾಗದ ಸಭೆಯ ನಂತರ ಸಂಜೆ 7.30ಕ್ಕೆ ‘J’, ‘M’ ಮತ್ತು ‘P’ ಎಂಬ ಅಕ್ಷರಗಳಿಂದ ಮಾತ್ರ ಗುರುತಿಸಲ್ಪಟ್ಟ ಮೂವರು ಪುರುಷರು ನನ್ನನ್ನು ಎಳೆದುಕೊಂಡು ಹೋಗಿದ್ದಾರೆ ಎಂದು ಆ ಮಹಿಳೆ ಹೇಳಿದ್ದಾರೆ. ‘M’ ಮತ್ತು ‘P’ ಎಂಬ ಪದಗಳು ತನ್ನ ಮೇಲೆ ಅತ್ಯಾಚಾರ ಮಾಡಲು ಪ್ರಯತ್ನಿಸಿದ ‘J’ ಜೊತೆ ಕೋಣೆಯಲ್ಲಿ ನಿಂತುಕೊಂಡು ತನ್ನ ಮೇಲಾಗುವ ಅತ್ಯಾಚಾರವನ್ನು ನೋಡುತ್ತಿದ್ದರು ಎಂದು ಆಕೆ ಹೇಳಿದ್ದಾರೆ.
ಇದನ್ನೂ ಓದಿ: ಕೋಲ್ಕತ್ತಾ: ಕಾನೂನು ವಿದ್ಯಾರ್ಥಿನಿ ಮೇಲೆ ಕಾಲೇಜಿನ ಆವರಣದೊಳಗೆ ಸಾಮೂಹಿಕ ಅತ್ಯಾಚಾರ
“ನಾನು ಅವರ ದಾಳಿಯನ್ನು ಪ್ರತಿರೋಧಿಸಿದೆ. ನಾನು ಅಳುತ್ತಾ ಅವರ ಕಾಲು ಹಿಡಿದು ನನ್ನನ್ನು ಬಿಟ್ಟುಬಿಡು ಎಂದು ಕೇಳಿದೆ. ನಾನು ಅವನ ಕಾಲುಗಳನ್ನು ಮುಟ್ಟಿ ಬೇಡಿಕೊಂಡೆ. ಆದರೆ ಅವನು ನನ್ನನ್ನು ಹೋಗಲು ಬಿಡಲಿಲ್ಲ” ಎಂದು ಅವಳು ಪೊಲೀಸರಿಗೆ ಹೇಳಿದ್ದಾಳೆ. “ಅವನು ಲೈಂಗಿಕ ಕ್ರಿಯೆ ನಡೆಸುವ ಉದ್ದೇಶದಿಂದ ನನ್ನನ್ನು ಬಲವಂತಪಡಿಸಲು ಪ್ರಯತ್ನಿಸಿದನು. ನಾನು ಅವನನ್ನು ಹಿಂದಕ್ಕೆ ತಳ್ಳುತ್ತಲೇ ಇದ್ದೆ. ನನ್ನನ್ನು ಹೋಗಲು ಬಿಡುವಂತೆ ಕೇಳಿದೆ. ‘ನನಗೆ ಹೀಗೆ ಮಾಡಬೇಡ. ನನಗೆ ಒಬ್ಬ ಗೆಳೆಯನಿದ್ದಾನೆ. ನಾನು ಅವನನ್ನು ಪ್ರೀತಿಸುತ್ತೇನೆ ಎಂದು ನಾನು ಹೇಳಿದೆ’ ಎಂದಿದ್ದಾರೆ.
ಅವರ ದಾಳಿಯ ಸಮಯದಲ್ಲಿ ನನಗೆ ಪ್ಯಾನಿಕ್ ಅಟ್ಯಾಕ್ ಆಯಿತು. ಇನ್ಹೇಲರ್ ಗಾಗಿ ನಾನು ಬೇಡಿಕೊಂಡೆ. ನನಗೆ ಪ್ಯಾನಿಕ್ ಅಟ್ಯಾಕ್ ಇತ್ತು ಮತ್ತು ಉಸಿರಾಟದ ತೊಂದರೆ ಇತ್ತು. ನಂತರ ‘J’ ‘M’ ಮತ್ತು ‘P’ ಅವರನ್ನು ಒಳಗೆ ಬರಲು ಕರೆದು, ನಾನು ಸಹಾಯ ಕೇಳಿದೆ. ಆದರೆ ಅವರು ನನಗೆ ಸಹಾಯ ಮಾಡಲಿಲ್ಲ. ನಂತರ ನಾನು ಅವರಿಗೆ ಇನ್ಹೇಲರ್ ತರಲು ಹೇಳಿದೆ. ‘M’ ಅದನ್ನು ತಂದರು. ನಾನು ಅದನ್ನು ತೆಗೆದುಕೊಂಡೆ” ಎಂದು ಅವಳು ಹೇಳಿದ್ದಾಳೆ. ಹಾಗೇ, ನಂತರ ಹೊರಗೆ ಓಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾಗಿಯೂ ಪೊಲೀಸರಿಗೆ ಹೇಳಿದ್ದಾಳೆ.
ಇದನ್ನೂ ಓದಿ: ಆಯುಧದ ಮೇಲಿನ ರಕ್ತದ ಜೊತೆ ಕೊಲೆಯಾದ ವ್ಯಕ್ತಿಯ ರಕ್ತ ಹೊಂದಿಕೆಯಾದರೆ ಶಿಕ್ಷೆ ನೀಡಲಾಗದು; ಸುಪ್ರೀಂ ಕೋರ್ಟ್ ತೀರ್ಪು
ಸೆಕ್ಯುರಿಟಿ ರೂಮಿನ ಬಾಗಿಲನ್ನು ಲಾಕ್ ಮಾಡಲಾಗಿತ್ತು. ಅಲ್ಲಿದ್ದ ಸಿಬ್ಬಂದಿ ಅಸಹಾಯಕರಾಗಿದ್ದರು. ನನಗೆ ಯಾರೂ ಸಹಾಯ ಮಾಡಲಿಲ್ಲ. ಸೆಕ್ಯುರಿಟಿ ಗಾರ್ಡ್‌ನನ್ನು ಹೊರಗೆ ಎಸೆದರು. ಅಲ್ಲಿ ‘J’ ನನ್ನ ಬಟ್ಟೆ ಬಿಚ್ಚಿ ಅತ್ಯಾಚಾರ ಮಾಡಲು ಪ್ರಾರಂಭಿಸಿದ. ನಾನು ಜಗಳವಾಡಿದಾಗ ಅವನು ನನ್ನನ್ನು ಬ್ಲ್ಯಾಕ್‌ಮೇಲ್ ಮಾಡಿದನು. ಪ್ರಮುಖ ಆರೋಪಿ ತನ್ನ ಮೇಲೆ ಅತ್ಯಾಚಾರ ನಡೆಸುತ್ತಿರುವಾಗ ಉಳಿದ ಇಬ್ಬರು ಪಕ್ಕದಲ್ಲಿ ನಿಂತು ನೋಡುತ್ತಿದ್ದರು ಎಂದು ಆಕೆ ಹೇಳಿದ್ದಾಳೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




