Tribal Pride Day: ಬಿರ್ಸಾ ಮುಂಡಾ ಜನ್ಮದಿನ, ಬುಡಕಟ್ಟು ಜನಾಂಗದ ಐಕಾನ್ನ ಪ್ರತಿಮೆಗೆ ಗೌರವ ಸಲ್ಲಿಸಿದ ಪ್ರಧಾನಿ ಮೋದಿ
ಬುಡಕಟ್ಟು ಜನಾಂಗದ ಐಕಾನ್ ಎಂದೇ ಪ್ರಸಿದ್ಧ ಪಡೆದಿರುವ ಬಿರ್ಸಾ ಮುಂಡಾ ಅವರ ಜನ್ಮ ವಾರ್ಷಿಕೋತ್ಸವದಂದು ಪ್ರಧಾನಿ ಮೋದಿ ಅವರು ಜಾರ್ಖಂಡ್‌ನ ಖುಂಟಿಯಲ್ಲಿರುವ ಬಿರ್ಸಾ ಮುಂಡಾ ಪ್ರತಿಮೆಗೆ ಮಾಲೆ ಹಾಕಿ ಗೌರವ ಸಲ್ಲಿಸಿದರು. ಪ್ರಧಾನಿ ಮೋದಿ ಅವರು, ಪಾರ್ಕ್-ಕಮ್-ಫ್ರೀಡಂ ಫೈಟರ್ ಮ್ಯೂಸಿಯಂನಲ್ಲಿರುವ ಬಿರ್ಸಾ ಮುಂಡಾ ಅವರ 25 ಅಡಿ ಎತ್ತರದ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರು.
ರಾಂಚಿ, ನ.15: ಬುಡಕಟ್ಟು ಜನಾಂಗದ ಐಕಾನ್ ಎಂದೇ ಪ್ರಸಿದ್ಧ ಪಡೆದಿರುವ ಬಿರ್ಸಾ ಮುಂಡಾ (Birsa Munda) ಅವರ ಜನ್ಮ ವಾರ್ಷಿಕೋತ್ಸವದಂದು ಪ್ರಧಾನಿ ನರೇಂದ್ರ ಮೋದಿ ಅವರು ಜಾರ್ಖಂಡ್‌ನ ಖುಂಟಿಯಲ್ಲಿರುವ ಬಿರ್ಸಾ ಮುಂಡಾ ಪ್ರತಿಮೆಗೆ ಮಾಲೆ ಹಾಕಿ ಗೌರವ ಸಲ್ಲಿಸಿದರು. ಪ್ರಧಾನಿ ಮೋದಿ ಅವರು, ಪಾರ್ಕ್-ಕಮ್-ಫ್ರೀಡಂ ಫೈಟರ್ ಮ್ಯೂಸಿಯಂನಲ್ಲಿರುವ ಬಿರ್ಸಾ ಮುಂಡಾ ಅವರ 25 ಅಡಿ ಎತ್ತರದ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರು. ಜೂನ್ 9, 1900ರಲ್ಲಿ ಕೊನೆಯುಸಿರೆಳೆದ ಬಿರ್ಸಾ ಮುಂಡಾ ಅವರ ಜನ್ಮದಿನವನ್ನು ದೇಶಾದ್ಯಂತ ಜನಜಾತಿಯ ಗೌರವ್ ದಿವಸ್ ಎಂದು ಆಚರಿಸಲಾಗುತ್ತದೆ.
ಪ್ರಧಾನಿ ಮೋದಿ ಅವರು ಬಿರ್ಸಾ ಮುಂಡಾ ಅವರ ಜನ್ಮದಿನ ಪ್ರಯುಕ್ತ ಎಕ್ಸ್ನಲ್ಲಿ ಶುಭಾಶಯಗಳನ್ನು ತಿಳಿಸಿದ್ದಾರೆ. ಜನಜಾತಿಯ ಗೌರವ್ ದಿವಸ್‌ನ ಈ ವಿಶೇಷ ಸಂದರ್ಭದಲ್ಲಿ ದೇಶಾದ್ಯಂತ ಇರುವ ಬುಡಕಟ್ಟು ಜನಾಂಗದ ಸದಸ್ಯರಿಗೆ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ. ಮೋದಿ ಅವರು ಜಾರ್ಖಂಡ್‌ನ ಖುಂಟಿಯಲ್ಲಿರುವ ಪಾರ್ಕ್-ಕಮ್-ಫ್ರೀಡಂ ಫೈಟರ್ ಮ್ಯೂಸಿಯಂಗೆ ಭೇಟಿ ನೀಡಿದರು. ಮೋದಿ ಜತೆಗೆ ಮುಖ್ಯಮಂತ್ರಿ ಹೇಮಂತ್ ಸೊರೆನ್, ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ಮತ್ತು ಕೇಂದ್ರ ಸಚಿವ ಅರ್ಜುನ್ ಮುಂಡಾ ಉಪಸ್ಥಿತರಿದರು.
ಈ ಮ್ಯೂಸಿಯಂನಲ್ಲಿ ಬಿರ್ಸಾ ಮುಂಡಾ ಅವರು ಮಾಡಿದ ಸಾಧನೆಯನ್ನು ತಿಳಿಸಿತ್ತು. ಬಿರ್ಸಾ ಮುಂಡಾ ಶೌರ್ಯ ಮತ್ತು ತ್ಯಾಗದ ಜೊತೆಗೆ ತಮ್ಮ ಅರಣ್ಯ, ಭೂಮಿಯ ಹಕ್ಕು ಮತ್ತು ಸಂಸ್ಕೃತಿಯನ್ನು ರಕ್ಷಿಸಲು ಆದಿವಾಸಿಗಳು ಹೆಣಗಾಡುತ್ತಿದ್ದ ಪ್ರದರ್ಶನಗಳನ್ನು ತೋರಿಸಲಾಗಿದೆ. ಬಿರ್ಸಾ ಮುಂಡಾ ಜೊತೆಗೆ ಬುಧು ಭಗತ್, ಸಿಧು-ಕನ್ಹು, ನೀಲಂಬರ್-ಪಿತಾಂಬರ್, ದಿವಾ-ಕಿಸುನ್, ತೆಲಂಗಾ ಖಾದಿಯಾ, ಗಯಾ ಮುಂಡಾ, ಜಾತ್ರಾ ಭಗತ್, ಪೊಟೊ ಎಚ್, ಭಗೀರಥ ಮಾಂಝಿ ಮತ್ತು ಗಂಗಾ ನಾರಾಯಣ್ ಸಿಂಗ್ ಅವರಂತಹ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆಗಳನ್ನು ಮ್ಯೂಸಿಯಂ ಪ್ರದರ್ಶಿಸಲಾಗಿದೆ.
ಇದನ್ನೂ ಓದಿ: ಆದಿವಾಸಿಗಳ ಪಾಲಿಗೆ ದೇವರಂತಿದ್ದ ಬಿರ್ಸಾ ಮುಂಡಾ ಯಾರು? ಇಲ್ಲಿದೆ ಮಾಹಿತಿ
ಇನ್ನು ಬಿರ್ಸಾ ಮುಂಡಾ ಅವರ ಸ್ಮಾರಕವನ್ನು 25 ಎಕರೆ ಭೂಮಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇದರ ಜತೆಗೆ ಸಂಗೀತ ಕಾರಂಜಿ, ಮಕ್ಕಳ ಉದ್ಯಾನವನ, ಅನಂತ ಪೂಲ್, ಉದ್ಯಾನ ಮತ್ತು ಇತರ ಮನರಂಜನಾ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗಿದೆ. ಪ್ರಧಾನಿ ಮೋದಿ ಅವರು ಎರಡು ದಿನಗಳ ಜಾರ್ಖಂಡ್ ಪ್ರವಾಸ ಕೈಗೊಂಡಿದ್ದಾರೆ. ಈ ಕಾರ್ಯಕ್ರಮದ ನಂತರ ಮೋದಿ ಅವರು ಖುಂಟಿ ಜಿಲ್ಲೆಯ ಬಿರ್ಸಾ ಮುಂಡಾ ಅವರ ಜನ್ಮಸ್ಥಳ ಉಲಿಹಾತು ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ.
ನಂತರ ಅಲ್ಲಿಂದ ದುರ್ಬಲ ಬುಡಕಟ್ಟು ಗುಂಪುಗಳ (ಪಿವಿಟಿಜಿ) ಅಭಿವೃದ್ಧಿಗಾಗಿ 24,000-ಕೋಟಿ ರೂ. ವೆಚ್ಚದ ಯೋಜನೆಗೆ ಚಾಲನೆ ನೀಡಲಿದ್ದಾರೆ. ಇದರ ಜತೆಗೆ ವಿಕ್ಷಿತ್ ಭಾರತ್ ಸಂಕಲ್ಪ ಯಾತ್ರೆಗೆ ಚಾಲನೆ ನೀಡಲಿದ್ದಾರೆ, ಪಿಎಂ-ಕಿಸಾನ್ ಯೋಜನೆಯಡಿ 18,000 ಕೋಟಿ ರೂ.ಗಳ 15ನೇ ಕಂತಿನ ಬಿಡುಗಡೆ ಮತ್ತು ರಾಜ್ಯದಲ್ಲಿ 7,200 ಕೋಟಿ ರೂಪಾಯಿಗಳ ಯೋಜನೆಗಳ ಉದ್ಘಾಟನೆ ಮತ್ತು ಅಡಿಪಾಯ ಹಾಕಲಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ