Sign In

By signing in or creating an account, you agree with Associated Broadcasting Company's Terms & Conditions and Privacy Policy.

Birsa Munda Death Anniversary: ಆದಿವಾಸಿಗಳ ಪಾಲಿಗೆ ದೇವರಂತಿದ್ದ ಬಿರ್ಸಾ ಮುಂಡಾ ಯಾರು? ಇಲ್ಲಿದೆ ಮಾಹಿತಿ

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಆದಿವಾಸಿಗಳು ಅನೇಕ ರೀತಿಯಲ್ಲಿ ಕೊಡುಗೆ ನೀಡಿದ್ದಾರೆ. ಕೆಲವರು ಗಾಂಧೀಜಿ ತೋರಿದ ಮಾರ್ಗದಲ್ಲಿ ಸಾಗಿದರು, ಕೆಲವರು ಬ್ರಿಟಿಷರ ದಬ್ಬಾಳಿಕೆ ವಿರುದ್ಧ ಶಸ್ತ್ರಾಸ್ತ್ರಗಳನ್ನು ಹಿಡಿದರು, ಕೆಲವರು ಸ್ವಾತಂತ್ರ್ಯ ಹೋರಾಟಗಾರರಿಗೆ ಸಹಾಯ ಮಾಡಿದರು.

Birsa Munda Death Anniversary: ಆದಿವಾಸಿಗಳ ಪಾಲಿಗೆ ದೇವರಂತಿದ್ದ ಬಿರ್ಸಾ ಮುಂಡಾ ಯಾರು? ಇಲ್ಲಿದೆ ಮಾಹಿತಿ
ಬಿರ್ಸಾ ಮುಂಡಾImage Credit source: The Indian Express
Follow us
ನಯನಾ ರಾಜೀವ್
|

Updated on: Jun 09, 2023 | 10:14 AM

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಆದಿವಾಸಿಗಳು ಅನೇಕ ರೀತಿಯಲ್ಲಿ ಕೊಡುಗೆ ನೀಡಿದ್ದಾರೆ. ಕೆಲವರು ಗಾಂಧೀಜಿ ತೋರಿದ ಮಾರ್ಗದಲ್ಲಿ ಸಾಗಿದರು, ಕೆಲವರು ಬ್ರಿಟಿಷರ ದಬ್ಬಾಳಿಕೆ ವಿರುದ್ಧ ಶಸ್ತ್ರಾಸ್ತ್ರಗಳನ್ನು ಹಿಡಿದರು, ಕೆಲವರು ಸ್ವಾತಂತ್ರ್ಯ ಹೋರಾಟಗಾರರಿಗೆ ಸಹಾಯ ಮಾಡಿದರು. ಅಂತಹ ಆದಿವಾಸಿಗಳ ನಾಯಕ ಬಿರ್ಸಾ ಮುಂಡಾ. ಅವರ ಕೊಡುಗೆ ಎಷ್ಟಿತ್ತೆಂದರೆ ಇಂದಿಗೂ ಆದಿವಾಸಿಗಳು ಅವರನ್ನು ದೇವರೆಂದು ಭಾವಿಸುತ್ತಾರೆ. ಜೂನ್ 9 ರಂದು ಅವರ ಪುಣ್ಯತಿಥಿ. ಬಿರ್ಸಾ ಮುಂಡಾ ಅವರ ಕೊಡುಗೆ ಸ್ವಾತಂತ್ರ್ಯಕ್ಕಾಗಿ ಮಾತ್ರವಲ್ಲದೆ ಅವರು ಆದಿವಾಸಿಗಳ ಧ್ವನಿಯಾಗಿದ್ದರು.

ಇಂದು ಪ್ರತಿಯೊಬ್ಬ ದೇಶವಾಸಿಗಳು, ವಿಶೇಷವಾಗಿ ದೇಶದ ಮಕ್ಕಳು ಬಿರ್ಸಾ ಮುಂಡಾ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ. ಬ್ರಿಟಿಷರ ವಿರುದ್ಧ ಹೋರಾಡುತ್ತಾ, ತಮ್ಮ ಬುಡಕಟ್ಟು ಸಮುದಾಯಗಳ ಪಾಲಿಗೆ ಆರಾಧ್ಯ ದೈವ ಸ್ವರೂಪವೇ ಆಗಿ ಹೋಗಿದ್ದ ಬಿರ್ಸಾ ಮುಂಡಾ ದಂತಕಥೆಯೇ ಆಗಿಹೋಗಿದ್ದಾರೆ. 1875ರಲ್ಲಿ ಹುಟ್ಟಿ 25 ವರ್ಷಗಳ ಕಾಲ ಬದುಕಿದ್ದ ಬಿರ್ಸಾ ಮುಂಡ ತಮ್ಮ ಕಿರಿ ವಯಸ್ಸಿನಲ್ಲೇ ದೊಡ್ಡ ಹೋರಾಟ ಮಾಡಿದವರು. ಆಗಿನ ಬೆಂಗಾಲ್ ಪ್ರೆಸಿಡೆನ್ಸಿಯಲ್ಲಿ ಮುಂಡಾ ಬುಡಕಟ್ಟು ಸಮುದಾಯದ ಜನರ ದೊಡ್ಡ ಆಂದೋಲನ ಕಟ್ಟಿದವರು. ಅದರಲ್ಲೂ ಕ್ರೈಸ್ತ ಮಿಷನರಿ ಚಟುವಟಿಕೆ ವಿರುದ್ಧ ಅವರು ಟೊಂಕ ಕಟ್ಟಿ ನಿಂತವರು. ಅವರೇಕೆ ಮಿಷನರಿ ವಿರುದ್ಧ ಹೋರಾಡಿದ್ದು? ಇಲ್ಲಿದೆ ಇಂಟರೆಸ್ಟಿಂಗ್ ಸಂಗತಿ.

ಮತ್ತಷ್ಟು ಓದಿ: ಕೊಡಗು: ಮೂಲಸೌಕರ್ಯವಿಲ್ಲದೆ ಗೋಳಾಡುತ್ತಿರುವ ಆದಿವಾಸಿಗಳು; ಕ್ಯಾರೆ ಎನ್ನದ ಜನಪ್ರತಿನಿಧಿಗಳು, ಅಧಿಕಾರಿಗಳು

ಕ್ರೈಸ್ತರಾಗಿದ್ದ ಬಿರ್ಸಾ ಮುಂಡಾ ಈಗಿನ ಜಾರ್ಖಂಡ್ ರಾಜ್ಯದ ಖುಂಟಿ ಜಿಲ್ಲೆಯಲ್ಲಿರುವ ಉಲಿಹಟು ಎಂಬ ಗ್ರಾಮದಲ್ಲಿ ಬಿರ್ಸಾ ಮುಂಡಾ 1875 ನವೆಂಬರ್ 15ರಂದು ಹುಟ್ಟಿದರು. ಮುಂಡಾ ಬುಡಕಟ್ಟು ಸಮುದಾಯದವರು. ಅವರು ಗುರುವಾರ ಹುಟ್ಟಿದ್ದರಿಂದ ಬಿರ್ಸಾ ಎಂದು ಹೆಸರಿಡಲಾಯಿತು ಎಂದು ಹೇಳುತ್ತಾರೆ. ಈಗಲೂ ಕೂಡ ಉಲಿಹಟು ಗ್ರಾಮದಲ್ಲಿ ಬಿರ್ಸಾ ಮುಂಡಾ ಕುಟುಂಬಕ್ಕೆ ಸೇರಿದ ಮನೆ ಇದೆ.

ಬಿರ್ಸಾ ಮುಂಡಾ ಇದ್ದ ಸ್ಥಳದ ಸುತ್ತಮುತ್ತಲೂ ಆಗ ಕ್ರೈಸ್ತ ಮಿಷನರಿಗಳು ಬಹಳ ಇದ್ದರು. ಆ ಪ್ರದೇಶದ ಬಹಳ ಮಂದಿಯನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲಾಗಿತ್ತು. ಬಡವರಾಗಿದ್ದ ಬಿರ್ಸಾ ಮುಂಡಾರನ್ನು ಜರ್ಮನ್ ಮಿಷನರಿ ಶಾಲೆಗೆ ಸೇರಿಸಲಾಯಿತು. ಆದರೆ ಅಲ್ಲಿ ಅವರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲು ಹೇಳಲಾಯಿತು. ಓದುವ ಆಸೆಗೆ ಬಿದ್ದು ಬಿರಸಾ ಕ್ರೈಸ್ತ ಧರ್ಮವಪ್ಪಿದರು.

ಬಡತನದಲ್ಲಿ ಕಳೆದ ಬಾಲ್ಯ ಬಿರ್ಸಾ ಮುಂಡಾ 15 ನವೆಂಬರ್ 1875 ರಂದು ಬಂಗಾಳ ಪ್ರೆಸಿಡೆನ್ಸಿಯ ರಾಂಚಿ ಜಿಲ್ಲೆಯ ಉಲಿಹತು ಗ್ರಾಮದಲ್ಲಿ ಜನಿಸಿದರು. ಅವರ ತಂದೆಯ ಹೆಸರು ಸುಗ್ನಾ ಮುಂಡಾ ಮತ್ತು ತಾಯಿಯ ಹೆಸರು ಕಾರ್ಮಿ ಹತು. ಅವರ ಬಾಲ್ಯವು ಬಡತನದಲ್ಲಿ ಕಳೆಯಿತು. ಅವರಿಗೆ ಕೊಳಲು ನುಡಿಸುವುದು ತುಂಬಾ ಇಷ್ಟವಾಗಿತ್ತು. ಅವರ ಆರಂಭಿಕ ಶಿಕ್ಷಣ ಸಲ್ಗಾದಲ್ಲಿ ನಡೆಯಿತು. ಆದರೆ ಶೀಘ್ರದಲ್ಲೇ ಅವರು ತಮ್ಮ ಹಳ್ಳಿಯಲ್ಲಿ ಜನರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಪರಿವರ್ತಿಸುವ ಕ್ರಿಶ್ಚಿಯನ್ ಮಿಷನರಿಯೊಂದಿಗೆ ಸಂಪರ್ಕಕ್ಕೆ ಬಂದರು.

ಬಿರ್ಸಾ ಅಧ್ಯಯನದಲ್ಲಿ ಬಹಳ ಬುದ್ಧಿವಂತರಾಗಿದ್ದರು. ಅದಕ್ಕಾಗಿಯೇ ಅವರನ್ನು ಸಾಲ್ಗಾದ ಜರ್ಮನ್ ಮಿಷನ್ ಶಾಲೆಗೆ ಕಳುಹಿಸಲಾಯಿತು, ಅಲ್ಲಿ ಅವರು ಕ್ರಿಶ್ಚಿಯನ್ ಆದ ನಂತರ ಬಿರ್ಸಾ ಡೇವಿಡ್ ಆದರು. ಕೆಲವು ವರ್ಷಗಳ ಕಾಲ ಅಧ್ಯಯನ ಮಾಡಿದ ನಂತರ, ಬಿರ್ಸಾ ಮಿಷನರಿಗಳ ಆಟವನ್ನು ಅರ್ಥಮಾಡಿಕೊಂಡರು ಮತ್ತು ಅವರನ್ನು ವಿರೋಧಿಸಲು ಪ್ರಾರಂಭಿಸಿದರು ಮತ್ತು ಶಾಲೆಯನ್ನು ತೊರೆದರು.

ಇದರ ನಂತರ ಅವರು ದೀರ್ಘಕಾಲದವರೆಗೆ ಚೈಬಾಸಾದಲ್ಲಿ ವಾಸಿಸುತ್ತಿದ್ದರು ಮತ್ತು 1890 ರಲ್ಲಿ ಅವರ ಇಡೀ ಕುಟುಂಬವು ಕ್ರಿಶ್ಚಿಯನ್ ಧರ್ಮವನ್ನು ತೊರೆದು ತಮ್ಮ ಬುಡಕಟ್ಟು ಧಾರ್ಮಿಕ ಸಂಪ್ರದಾಯಕ್ಕೆ ಮರಳಿದರು.

ಬಿರ್ಸಾ ಮುಂಡಾ ಕೇವಲ ಮತಾಂತರ ವಿರುದ್ಧ ಸಿಡಿದು ನಿಲ್ಲಲಿಲ್ಲ. ಬ್ರಿಟಿಷರ ವಿರುದ್ಧ ಹೋರಾಡಲು ಗೆರಿಲ್ಲಾ ಸೇನೆಯನ್ನು ಕಟ್ಟುತ್ತಾರೆ. ಆದಿವಾಸಿಗಳೇ ಇದ್ದ ತಮ್ಮ ಸೇನೆಯ ಮೂಲಕ ಬ್ರಿಟಿಷ್ ಆಡಳಿತದ ವಿರುದ್ಧ ನಿರಂತರ ದಾಳಿಗಳನ್ನು ಮಾಡುತ್ತಾರೆ. “ಅಬುವಾ ರಾಜ್ ಸೆಟರ್ ಜಾನಾ, ಮಹಾರಾಣಿ ರಾಜ್ ತುಂಟು ಜಾನಾ  ಎಂಬುದು ಬಿರ್ಸಾ ಮುಂಡಾ ಘೋಷವಾಕ್ಯವಾಗಿತ್ತು.

ಅದರರ್ಥ, ಮೊದಲು ರಾಣಿ ಆಳ್ವಿಕೆ ನಿಲ್ಲಲಿ, ನಮ್ಮ ಆಳ್ವಿಕೆ ಬರಲಿ ಎಂದಾಗುತ್ತದೆ. ಬಿರ್ಸಾ ನೇತೃತ್ವದಲ್ಲಿ ರಚನೆಯಾದ ಪುಟ್ಟ ಸೇನೆಯು ಪೊಲೀಸ್ ಠಾಣೆಗಳ ಮೇಲೆ ದಾಳಿ ಆಡುತ್ತದೆ. ಬ್ರಿಟಿಷರ ಪರ ಇದ್ದ ವ್ಯಾಪಾರಿಗಳ ಮನೆಗಳನ್ನು ಧ್ವಂಸ ಮಾಡುತ್ತಾರೆ.

ಬಿರ್ಸಾ ಮುಂಡಾ ನಿಧನ ಕೆಲ ವರ್ಷಗಳ ಬಳಿಕ ಬ್ರಿಟಿಷರು ಬಿರ್ಸಾ ಮುಂಡಾರನ್ನು ಬಂಧಿಸುವಲ್ಲಿ ಯಶಸ್ವಿಯಾಗುತ್ತಾರೆ. 1900, ಜೂನ್ 9ರಂದು ಬಿರಸಾ ಮುಂಡಾ ಜೈಲಿನಲ್ಲೇ ಸಾವನ್ನಪ್ಪುತ್ತಾರೆ. ಅವರ ಸಾವಿನ ಬಳಿಕ ಆದಿವಾಸಿಗಳ ಆಂದೋಲನ ಕ್ರಮೇಣ ನಶಿಸಿಹೋಗುತ್ತದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಸ್ಪೈಸ್‌ಜೆಟ್ ಪ್ರಯಾಣಿಕರೊಂದಿಗೆ ಡ್ಯಾನ್ಸ್ ಮಾಡಿ ಹೋಳಿ ಆಚರಿಸಿದ ಸಿಬ್ಬಂದಿ
ಸ್ಪೈಸ್‌ಜೆಟ್ ಪ್ರಯಾಣಿಕರೊಂದಿಗೆ ಡ್ಯಾನ್ಸ್ ಮಾಡಿ ಹೋಳಿ ಆಚರಿಸಿದ ಸಿಬ್ಬಂದಿ
ಬೆಂಗಳೂರಿನಲ್ಲಿ ಶ್ವಾನದ ಮೇಲೆ ಅತ್ಯಾಚಾರವೆಸಗಿ ವಿಕೃತಿ
ಬೆಂಗಳೂರಿನಲ್ಲಿ ಶ್ವಾನದ ಮೇಲೆ ಅತ್ಯಾಚಾರವೆಸಗಿ ವಿಕೃತಿ
ವೇದಿಕೆ ಮೇಲೆಯೇ ವಾಗ್ವಾದಕ್ಕಿಳಿದ ಸಂಸದ ಪಿಸಿ ಮೋಹನ್​, ಪ್ರದೀಪ್​ ಈಶ್ವರ್
ವೇದಿಕೆ ಮೇಲೆಯೇ ವಾಗ್ವಾದಕ್ಕಿಳಿದ ಸಂಸದ ಪಿಸಿ ಮೋಹನ್​, ಪ್ರದೀಪ್​ ಈಶ್ವರ್
ಆಶೀರ್ವಾದ ರೂಪದಲ್ಲಿ ಹಣ ನೀಡುವುದು ಮಠದ ಸಂಪ್ರದಾಯ: ಸ್ವಾಮೀಜಿ
ಆಶೀರ್ವಾದ ರೂಪದಲ್ಲಿ ಹಣ ನೀಡುವುದು ಮಠದ ಸಂಪ್ರದಾಯ: ಸ್ವಾಮೀಜಿ
ಆಮಿರ್- ರಣ್​ಬೀರ್ ನಡುವೆ ಬಿರುಕು ಮೂಡಿಸಿದ ರಿಷಭ್ ಪಂತ್
ಆಮಿರ್- ರಣ್​ಬೀರ್ ನಡುವೆ ಬಿರುಕು ಮೂಡಿಸಿದ ರಿಷಭ್ ಪಂತ್
ನೀವೆಲ್ಲ ಬರುವಂಗಿದಿದ್ರೆ ನಿಮ್ಮನ್ನೂ ಊಟಕ್ಕೆ ಕರೀಬಹುದಿತ್ತು: ಶಿವಕುಮಾರ್
ನೀವೆಲ್ಲ ಬರುವಂಗಿದಿದ್ರೆ ನಿಮ್ಮನ್ನೂ ಊಟಕ್ಕೆ ಕರೀಬಹುದಿತ್ತು: ಶಿವಕುಮಾರ್
‘ಅಪ್ಪು’ ಮರು ಬಿಡುಗಡೆ: ಅಣ್ಣಾವ್ರ ಅಭಿಮಾನಿಗಳಿಂದ ಮತ್ತೊಂದು ಬೇಡಿಕೆ
‘ಅಪ್ಪು’ ಮರು ಬಿಡುಗಡೆ: ಅಣ್ಣಾವ್ರ ಅಭಿಮಾನಿಗಳಿಂದ ಮತ್ತೊಂದು ಬೇಡಿಕೆ
ಶಾಸಕರು ಬಣ್ಣದಾಟ ಆಡುವಾಗ ಕೃಷ್ಣ ಭೈರೇಗೌಡ ತಪ್ಪಿಸಿಕೊಂಡಿದ್ದು ಹೇಗೆ ಗೊತ್ತಾ?
ಶಾಸಕರು ಬಣ್ಣದಾಟ ಆಡುವಾಗ ಕೃಷ್ಣ ಭೈರೇಗೌಡ ತಪ್ಪಿಸಿಕೊಂಡಿದ್ದು ಹೇಗೆ ಗೊತ್ತಾ?
ಪತಿ ಸೂರ್ಯ ಸಾವಿನ ಹಿಂದೆ ಶ್ವೇತಾಳ ಕೈವಾಡವಿದೆ ಎಂದ ಪತ್ನಿ ದೀಪಿಕಾ
ಪತಿ ಸೂರ್ಯ ಸಾವಿನ ಹಿಂದೆ ಶ್ವೇತಾಳ ಕೈವಾಡವಿದೆ ಎಂದ ಪತ್ನಿ ದೀಪಿಕಾ
ಸಿಐಡಿ ತನಿಖೆ ರಾಜ್ಯ ಸರ್ಕಾರ ಹಿಂತೆಗೆದುಕೊಂಡ ಕಾರಣ ಗೊತ್ತಿಲ್ಲ: ಅಣ್ಣಾಮಲೈ
ಸಿಐಡಿ ತನಿಖೆ ರಾಜ್ಯ ಸರ್ಕಾರ ಹಿಂತೆಗೆದುಕೊಂಡ ಕಾರಣ ಗೊತ್ತಿಲ್ಲ: ಅಣ್ಣಾಮಲೈ