IIIT ಕೋಟ್ಟಯಂನ ಹುಡುಗರ ಹಾಸ್ಟೆಲ್‌ನಲ್ಲಿ ಪಟಾಕಿ ಎಸೆದು ರಾಕೆಟ್ ಹಾರಿಸಿ ಮೋಜು; ವೈರಲ್ ವಿಡಿಯೊ
ಕೇರಳದ ಕೋಟ್ಟಯಂನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಇನ್‌ಫರ್ಮೇಷನ್ ಟೆಕ್ನಾಲಜಿ (ಐಐಐಟಿ)ಯಲ್ಲಿ ನಡೆದ ಘಟನೆಯೊಂದರಲ್ಲಿ ಸಾಮಾಜಿಕ ಜಾಲತಾಣಗಳಲಿ ವೈರಲ್ ಆಗಿದೆ. ವಿಡಿಯೊದಲ್ಲಿ ವಿದ್ಯಾರ್ಥಿಗಳು ಪಟಾಕಿ ಬಳಸಿ ಮೋಜು ಮಾಡುತ್ತಿರುವುದನ್ನು ಕಾಣಬಹುದು. ಈ ವಿಡಿಯೊವನ್ನು thetatvaindia ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದೆ.
ತಿರುವನಂತಪುರಂ ನವೆಂಬರ್ 15:ದೀಪಾವಳಿಯು(Diwali) ಪ್ರಪಂಚದಾದ್ಯಂತ ಲಕ್ಷಾಂತರ ಜನರಿಗೆ ಬೆಳಕು ಮತ್ತು ಸಮೃದ್ಧಿಯ ಹಬ್ಬವಾಗಿದೆ. ಎಲ್ಲರೂ ತಮ್ಮ ಮನೆ ಅಥವಾ ಹಾಸ್ಟೆಲ್‌ಗಳನ್ನು ದೀಪಗಳಿಂದ ಅಲಂಕರಿಸುವ ಮೂಲಕ ಈ ಹಬ್ಬದ ಋತುವನ್ನು ಆಚರಿಸುತ್ತಾರೆ. ಆದರೆ ಕೇರಳದ (Kerala) ಕೋಟ್ಟಯಂನ (Kottayam) ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಇನ್‌ಫರ್ಮೇಷನ್ ಟೆಕ್ನಾಲಜಿ (IIIT)ಯಲ್ಲಿ ನಡೆದ ಘಟನೆಯೊಂದರಲ್ಲಿ ಸಾಮಾಜಿಕ ಜಾಲತಾಣಗಳಲಿ ವೈರಲ್ ಆಗಿದೆ. ವಿಡಿಯೊದಲ್ಲಿ ವಿದ್ಯಾರ್ಥಿಗಳು ಪಟಾಕಿ ಬಳಸಿ ಮೋಜು ಮಾಡುತ್ತಿರುವುದನ್ನು ಕಾಣಬಹುದು.ಈ ವಿಡಿಯೊವನ್ನು thetatvaindia ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದೆ.
“ಕೇರಳದ ಕೊಟ್ಟಾಯಂನಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಇನ್‌ಫಾರ್ಮೇಶನ್ ಟೆಕ್ನಾಲಜಿ ಕಾಲೇಜಿನ ಹುಡುಗರ ಹಾಸ್ಟೆಲ್ ದೀಪಾವಳಿಯಂದು ಪಟಾಕಿಗಳನ್ನು ಬಳಸಿ ಯುದ್ಧ ಮಾಡಿದ್ದಾರೆ ಎಂದು ಪೋಸ್ಟ್ ನಲ್ಲಿ ಹೇಳಲಾಗಿದೆ.
View this post on Instagram
ವಿಡಿಯೊವನ್ನು ವೀಕ್ಷಿಸಿದ ನಂತರ ನೆಟಿಜನ್ಗಳಲ್ಲಿ ಕೆಲವರು ಇದನ್ನು ತಮಾಷೆಯಾಗಿ ತೆಗೆದುಕೊಂಡಿದ್ದು, ಇನ್ನು ಕೆಲವರು ಟೀಕಿಸಿದ್ದಾರೆ. ಬಳಕೆದಾರರೊಬ್ಬರು, ಇದನ್ನು ನೋಡಿದ ನಂತರ ಉಕ್ರೇನ್ ಮತ್ತು ರಷ್ಯಾ ನಿಜವಾಗಿ ಶಾಂತವಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.
ಇದನ್ನು ನಡೆಯುತ್ತಿರುವ ಇಸ್ರೇಲ್ ಯುದ್ಧಕ್ಕೆ ಹೋಲಿಸಿದ ಬಳಕೆದಾರರು “ಇಸ್ರೇಲ್-ಗಾಜಾ ಯುದ್ಧಕ್ಕಿಂತ ಉತ್ತಮವಾಗಿದೆ ಎಂದಿದ್ದಾರೆ.
ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ, ಕೋಟ್ಟಯಂ ಕೇರಳದ ಒಂದು ಸ್ವಾಯತ್ತ ಎಂಜಿನಿಯರಿಂಗ್ ಸಂಸ್ಥೆಯಾಗಿದೆ.
‘Tiger 3’ released in theatres on November 12. A video, shared on X (formerly known as Twitter), shows fans bursting firecrackers inside Mohan Cinema in Malegaon, in Nashik district in Maharashtra. The video also shows other fans running to a safe space inside the theatrer pic.twitter.com/zPpCc75vzl
— Ravi Rock (@Ravi02178934) November 13, 2023
ಮಾಲೆಗಾಂವ್‌ನ ಥಿಯೇಟರ್‌ನಲ್ಲಿಯೂ ಇದೇ ರೀತಿಯ ಘಟನೆ
ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಮಾಲೆಗಾಂವ್‌ನಲ್ಲಿರುವ ಮೋಹನ್ ಚಿತ್ರಮಂದಿರದಲ್ಲಿ ಪಟಾಕಿ ಸಿಡಿಸಿದ ಮತ್ತೊಂದು ಘಟನೆ ಈ ಹಿಂದೆ ವರದಿಯಾಗಿತ್ತು. ದೃಶ್ಯಗಳು ಕಾಲ್ತುಳಿತದಂತಹ ಪರಿಸ್ಥಿತಿಯ ನಡುವೆಯೂ ಪ್ರೇಕ್ಷಕರು ರಕ್ಷಣೆಗಾಗಿ ಓಡಿದ್ದಾರೆ. ಸಲ್ಮಾನ್ ಖಾನ್ ಅಭಿನಯದ ಟೈಗರ್ 3 ಸಿನಿಮಾ ಪ್ರದರ್ಶನದ ವೇಳೆ ಈ ಘಟನೆ ನಡೆದಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:46 pm, Wed, 15 November 23