AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಮಿಳುನಾಡು: ಬೇಟೆಗೆಂದು ಹೋಗಿ ಜಿಂಕೆ ಬದಲು ಸ್ನೇಹಿತನನ್ನು ಗುಂಡಿಕ್ಕಿ ಕೊಂದ ವ್ಯಕ್ತಿ

ತಮಿಳುನಾಡಿನ ಜವಾಡಿ ಬೆಟ್ಟದಲ್ಲಿ ಜಿಂಕೆ ಬೇಟೆಗೆಂದು ಹೋಗಿದ್ದ ಸ್ನೇಹಿತರಲ್ಲಿ ಓರ್ವ ಜಿಂಕೆ ಬದಲು ಸ್ನೇಹಿತನಿಗೆ ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಜಮುನಾಮರತೂರಿನ ಶಕ್ತಿವೇಲ್, ಪ್ರಕಾಶ್ ಮತ್ತು ಶಕ್ತಿವಾಸನ್ ಅವರು ದೀಪಾವಳಿ ಸಂದರ್ಭದಲ್ಲಿ ಅಕ್ರಮವಾಗಿ ಜಿಂಕೆಯನ್ನು ಬೇಟೆಯಾಡಲು ಮತ್ತು ತಿನ್ನಲು ಬೆಟ್ಟಕ್ಕೆ ಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ತಮಿಳುನಾಡು: ಬೇಟೆಗೆಂದು ಹೋಗಿ ಜಿಂಕೆ ಬದಲು ಸ್ನೇಹಿತನನ್ನು ಗುಂಡಿಕ್ಕಿ ಕೊಂದ ವ್ಯಕ್ತಿ
ಗುಂಡಿನ ದಾಳಿImage Credit source: India Today
ನಯನಾ ರಾಜೀವ್
|

Updated on: Nov 15, 2023 | 11:43 AM

Share

ತಮಿಳುನಾಡಿನ ಜವಾಡಿ ಬೆಟ್ಟದಲ್ಲಿ ಜಿಂಕೆ ಬೇಟೆಗೆಂದು ಹೋಗಿದ್ದ ಸ್ನೇಹಿತರಲ್ಲಿ ಓರ್ವ ಜಿಂಕೆ ಬದಲು ಸ್ನೇಹಿತನಿಗೆ ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಜಮುನಾಮರತೂರಿನ ಶಕ್ತಿವೇಲ್, ಪ್ರಕಾಶ್ ಮತ್ತು ಶಕ್ತಿವಾಸನ್ ಅವರು ದೀಪಾವಳಿ ಸಂದರ್ಭದಲ್ಲಿ ಅಕ್ರಮವಾಗಿ ಜಿಂಕೆಯನ್ನು ಬೇಟೆಯಾಡಲು ಮತ್ತು ತಿನ್ನಲು ಬೆಟ್ಟಕ್ಕೆ ಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಗ್ಯಾಂಗ್‌ನ ಸದಸ್ಯರೊಬ್ಬರು ಜಿಂಕೆಯನ್ನು ಗುರಿಯಾಗಿಸಿಕೊಂಡು ಹೋಗುತ್ತಿದ್ದಾಗ ಗುಂಡು ಶಕ್ತಿವೇಲ್‌ಗೆ ತಗುಲಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಪ್ರಕಾಶ್ ಮುಖಕ್ಕೆ ಗಾಯವಾಗಿದೆ.ಪೊಲೀಸರ ಪ್ರಕಾರ, ಶಕ್ತಿವೇಲ್ ಅವರ ಸಂಬಂಧಿಕರು ಪೊಲೀಸರಿಗೆ ಅಥವಾ ಅರಣ್ಯ ಅಧಿಕಾರಿಗಳಿಗೆ ತಿಳಿಸದೆ ಶವವನ್ನು ಹೂಳಲು ಪ್ರಯತ್ನಿಸಿದ್ದಾರೆ ಎಂದು ವರದಿಯಾಗಿದೆ.

ಮತ್ತಷ್ಟು ಓದಿ: ಬೇಟೆ ಬಲೆಗೆ ಚಿರತೆ ಸಿಲುಕಿ ಅಚಾತುರ್ಯ: ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಚಿರತೆ ಸಾವು

ಆದರೆ, ಜಮುನಾಮರತ್ತೂರು ಪೊಲೀಸರು ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ತಿರುವಣ್ಣಾಮಲೈ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಮೂರನೇ ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ