ಮಹತ್ವದ ತೀರ್ಮಾನಕ್ಕೆ ಬಂದ ಸಿಎಂ ಬೊಮ್ಮಾಯಿ: ಬೆಂಗಳೂರು ಉಸ್ತುವಾರಿ ಪಟ್ಟ ಯಾರಿಗೆ..?

| Updated By: ರಮೇಶ್ ಬಿ. ಜವಳಗೇರಾ

Updated on: Oct 18, 2022 | 6:18 PM

ಕೆಲ ಕಾರಣಾಂತರಗಳಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರು ಉಸ್ತುವಾರಿಯ ಬಾರವನ್ನು ಇಳಿಸಲು ಮುಂದಾಗಿದ್ದಾರೆ. ಹಾಗಾದ್ರೆ, ಬೆಂಗಳೂರು ನಗರ ಪಟ್ಟ ಯಾರಿಗೆ..?

ಮಹತ್ವದ ತೀರ್ಮಾನಕ್ಕೆ ಬಂದ ಸಿಎಂ ಬೊಮ್ಮಾಯಿ: ಬೆಂಗಳೂರು ಉಸ್ತುವಾರಿ ಪಟ್ಟ ಯಾರಿಗೆ..?
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Follow us on

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವರುಣ ಅಬ್ಬರಿಸುತ್ತಿದ್ದಾನೆ. ಇದರಿಂದ ನಗರ ಹಲವೆಡೆ ಜನಜೀವನ ಅಸ್ತವ್ಯಸ್ತವಾಗಿದೆ. ಅಲ್ಲದೇ ರಸ್ತೆ ಗುಂಡಿಗಳಿಂದ ಜೀವಗಳು ಬಲಿಯಾಗುತ್ತಿವೆ. ನಗರ ಜನತೆ ಬೊಮ್ಮಾಯಿ ಸರ್ಕಾರ ಹಾಗೂ ಬಿಬಿಎಂಪಿ ವಿಡುದ್ಧ ಇಡೀ ಶಾಪ ಹಾಕಿತ್ತಿದ್ದಾರೆ. ಇದರ ಮಧ್ಯೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಬೆಂಗಳೂರು ನಗರ ಉಸ್ತುವಾರಿ ಸ್ಥಾನವನ್ನು ಬಿಟ್ಟುಕೊಡಲು ಸಿದ್ಧರಾಗಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.

ಹೌದು…ರಾಜ್ಯ ರಾಜಧಾನಿಗೆ ಹೆಚ್ಚು ಹೊತ್ತು ಕೊಡುವುದಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಸಮಯ ಸಾಕಾಗುತ್ತಿಲ್ಲ. ಬ್ಯುಸಿ ಶೆಡ್ಯೂಲ್ ನಿಂದ ಬೆಂಗಳೂರಿಗೆ ಗಮನ ಕೊಡುವುದಕ್ಕೆ ಆಗುತ್ತಿಲ್ಲ. ಹೀಗಾಗಿ ಬೆಂಗಳೂರು ಉಸ್ತುವಾರಿಯನ್ನ (Bengaluru Incharge) ಬೇರೊಬ್ಬರಿಗೆ ಬಿಟ್ಟುಕೊಡಲು ಬೊಮ್ಮಾಯಿ ಚಿಂತನೆ ನಡೆಸಿದ್ದಾರೆ ಎಂದು ಟಿವಿ9ಗೆ ಸಿಎಂ ಕಚೇರಿಯಿಂದ ಮಾಹಿತಿ ಲಭ್ಯವಾಗಿದೆ.

ಬಿಜೆಪಿ ಸಂಕಲ್ಪ ಯಾತ್ರೆ ಮೊಟಕುಗೊಳಿಸಿ ದಿಢೀರ್ ದಿಲ್ಲಿಗೆ ಹೋಗಿದ್ಯಾಕೆ? ಸ್ಪಷ್ಟನೆ ಕೊಟ್ಟ ಬಿಎಸ್​ವೈ

ಬೆಂಗಳೂರು ಸಿಟಿ ರೌಂಡ್ಸ್ ಸಮಸ್ಯೆ ಬಗೆಹರಿಸಬೇಕು. ಆದ್ರೆ, ಚುನಾವಣೆ ಸಮೀಪವಾಗುತ್ತಿದ್ದಂತೆ ಹೈಕಮಾಂಡ್ ಸೂಚನೆ ಮೇರೆಗೆ ಬೊಮ್ಮಾಯಿ ಅವರು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಇದರ ಮಧ್ಯೆ ಪದೇ ಪದೇ ಶಾಸಕರ ಭೇಟಿ, ಜಿಲ್ಲಾವಾರು ಭೇಟಿಗಳಿಂದ ಫುಲ್ ಬ್ಯುಸಿಯಾಗಿದ್ದಾರೆ. ಡಿಸೆಂಬರ್ ವರೆಗೂ ಜನಸಂಕಲ್ಪಯಾತ್ರೆಯಲ್ಲಿ ಬೊಮ್ಮಾಯಿ ಪಾಲ್ಗೊಳ್ಳಲಿದ್ದಾರೆ.

ಅಲ್ಲದೇ ಇಲಾಖಾವಾರು ಸಭೆ ಸಮಾರಂಭಗಳಲ್ಲಿ ಭಾಗಿಯಾಗುತ್ತಿರುವುದರಿಂದ ಬೆಂಗಳೂರಿಗೆ ಹೆಚ್ಚಿನ ಸಮಯ ಕೊಡುವುದಕ್ಕೆ ಅವರಿಂದ ಆಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಬೆಂಗಳೂರು ಉಸ್ತುವಾರಿ ಬೇರೊಬ್ಬರಿಗೆ ಬಿಟ್ಟುಕೊಟ್ಟು ಚುನಾವಣೆ ಮೇಲೆ ಹೆಚ್ಚು ಗಮನಹರಿಸಲು ಬೊಮ್ಮಾಯಿ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

ಈ ಬಾರಿ ಸಂಪುಟ ವಿಸ್ತರಣೆ ವೇಳೆ ಹಂಚಿಕೆ ಸಾಧ್ಯತೆ

ಈಗಾಗಲೇ ಬೊಮ್ಮಾಯಿ ಅವರೇ ಶೀಘ್ರದಲ್ಲಿ ಸಂಪುಟ ವಿಸ್ತರಣೆ ಮಾಡುವುದಾಗಿ ಹೇಳಿದ್ದಾರೆ. ಅದರಂತೆ ಬೊಮ್ಮಾಯಿ ಅವರು ಈ ಬಾರಿ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಬೆಂಗಳೂರು ನಗರ ಉಸ್ತುವಾರಿ ಸಚಿವ ಸ್ಥಾನವನ್ನೂ ಸಹ ಹಂಚಿಕೆ ಮಾಡುವ ಎಲ್ಲಾ ಸಾಧ್ಯತೆಗಳಿವೆ. ಆದ್ರೆ, ಈಗಾಗಲೇ ಸಚಿವರಾಗಿರುವ ಸ್ಥಳೀಯರಿಗೆ ಬೆಂಗಳೂರು ಹೆಚ್ಚುವರಿ ಜವಾಬ್ದಾರಿ ನೀಡುತ್ತಾರೋ ಅಥವಾ ಹೊಸ ಮುಖಗಳಿಗೆ ಬೆಂಗಳೂರು ನಗರ ಸಚಿವ ಸ್ಥಾನವನ್ನು ನೀಡುತ್ತಾರೋ ಎನ್ನುವುದು ಸದ್ಯದ ಕುತೂಹಲ.

ಬಿಬಿಎಂಪಿ ಚುನಾವಣೆ

ಇವೆಲ್ಲದರ ಮಧ್ಯೆ ಬಿಬಿಎಂಪಿ ಚುನಾವಣೆಗೆ ಇನ್ನೇನು ಇಷ್ಟರಲ್ಲೇ ದಿನಾಂಕ ಘೋಷಣೆಯಾಗುವ ಸಾಧ್ಯತೆಗಳಿವೆ. ಚುನಾವಣೆ ದೃಷ್ಟಿಯಿಂದ ಹೆಚ್ಚು ಬೆಂಗಳೂರಿಗೆ ಹೊತ್ತು ಕೊಡುವುದು ಅನಿರ್ವಾಯವಾಗಿದೆ. ಆದ್ರೆ, ಬೊಮ್ಮಾಯಿ ಅವರಿಗೆ ನಾನಾ ಕೆಲಸದ ಒತ್ತಡಗಳು ಹೆಚ್ಚಾಗಿವೆ. ಈ ಇದೊಂದು ಕಾರಣಕ್ಕಾಗಿಯೂ ಸಹ ಬೊಮ್ಮಾಯಿ ಬೆಂಗಳೂರು ನಗರ ಉಸ್ತುವಾರಿಯನ್ನು ಬಿಟ್ಟು ಕೊಡಲು ಮುಂದಾಗಿದ್ದಾರೆ.

ಯಾರಾಗ್ತಾರೆ ಬೆಂಗಳೂರು ಉಸ್ತುವಾರಿ ಸಚಿವರು?

ಬೊಮ್ಮಾಯಿ ಅವರು ಬೆಂಗಳೂರು ನಗರ ಉಸ್ತುವಾರಿ ಸಚಿವ ಸ್ಥಾನವನ್ನು ಬಿಟ್ಟುಕೊಡಲು ಮುಂದಾಗಿದ್ದಾರೆ ನಿಜ. ಆದ್ರೆ, ಅದನ್ನು ಯಾರಿಗೆ ಕೊಡಲಿದ್ದಾರೆ ಎನ್ನುವುದೇ ಕುತೂಹಲ. ಯಾಕಂದ್ರೆ ಈ ಹಿಂದೆ ಇದೇ ಬೆಂಗಳೂರು ಉಸ್ತುವಾರಿ ಸಚಿವ ಸ್ಥಾನಕ್ಕೆ ದೊಡ್ಡ ರಾಜಕೀಯ ಹೈಡ್ರಾಮಗಳೇ ನಡೆದ ಉದಾಹರಣೆಗಳು ಇವೆ. ಹೀಗಾಗಿ ನಾಲ್ಕೈದು ಜನರರಲ್ಲಿ ಬೊಮ್ಮಾಯಿ ಅವರು ಬೆಂಗಳೂರು ನಗರ ಪಟ್ಟವನ್ನು ಯಾರಿಗೆ ಕಟ್ಟುತ್ತಾರೆ ಎನ್ನುವುದೇ ಇಟ್ರಸ್ಟಿಂಗ್ ಆಗಿದೆ.

ಈ ಹಿಂದೆ ಉಪಮುಖ್ಯಮಂತ್ರಿಗಳಾಗಿದ್ದಾಗ ಆರ್. ಅಶೋಕ್, ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಬೆಂಗಳೂರು ಉಸ್ತುವಾರಿಯ ಮೇಲೆ ಕಣ್ಣಿಟ್ಟಿದ್ದರು. ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಸಹ ಪ್ರಯತ್ನಪಟ್ಟಿದ್ದರು. ಇದೆಲ್ಲದರ ಮಧ್ಯೆ ವಿ.ಸೋಮಣ್ಣ ಅವರು ನನ್ನನ್ನೇ ಮಂತ್ರಿ ಮಾಡಿ ಎಂದು ಬಹಿರಂಗವಾಗಿ ಬೇಡಿಕೆ ಇಟ್ಟಿದ್ದರು. ಆದ್ರೆ, ಯಡಿಯೂರಪ್ಪ ಮಾತ್ರ ಯಾರಿಗೂ ಕೊಡಲಿಲ್ಲ.

ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರು ಉಸ್ತುವಾರಿ ಸಚಿವ ಸ್ಥಾನಕ್ಕೆ ಭರ್ಜರಿ ಲಾಬಿಗಳು ನಡೆದಿದ್ದವು. ಆರ್. ಅಶೋಕ್, ಅಶ್ವತ್ಥ್ ನಾರಾಯಣ, ಬೈರತಿ ಬಸವರಾಜ, ಸೋಮಣ್ಣ ಸೇರಿದಂತೆ ಇನ್ನೂ ಹಲವರ ಮಧ್ಯೆ ಪೈಪೋಟಿ ಏರ್ಪಟ್ಟಿತ್ತು. ಆದ್ರೆ, ಯಡಿಯೂರಪ್ಪ ಮಾತ್ರ ಯಾರಿಗೂ ನೀಡದೆ ತಮ್ಮ ಬಳಿಯೇ ಉಳಿಸಿಕೊಂಡಿದ್ದರು. ಬಳಿಕ ಬೊಮ್ಮಾಯಿ ಬಂದ ಮೇಲೂ ಸಹ ಅವರು ಬೆಂಗಳೂರು ಉಸ್ತುವಾರಿಯನ್ನು ಯಾರಿಗೂ ವಹಿಸದೇ ತಾವೇ ಇಟ್ಟುಕೊಂಡಿದ್ದಾರೆ. ಆದ್ರೆ, ಇದೀಗ ಅದನ್ನು ಬೇರೆಯವರಿಗೆ ಹಂಚಲು ತೀರ್ಮಾನಕ್ಕೆ ಬಂದಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಬೆಂಗಳೂರು ನಗರ ಉಸ್ತುವಾರಿ ವಹಿಸಿಕೊಳ್ಳಲು ನಾಲ್ಕೈದು ಸಚಿವರ ಮಧ್ಯೆ ತೀವ್ರ ಪೈಪೋಟಿ ಇದೆ. ಹೀಗಾಗಿ ಈ ಹಿಂದಿನಂತೆ ಬೆಂಗಳೂರು ಉಸ್ತುವಾರಿಯಾಗಲು ಬಿಜೆಪಿಯಲ್ಲಿ ಮತ್ತೊಂದು ಸುತ್ತಿನ ರಾಜಕೀಯ ಹೈಡ್ರಾಮ ನಡೆಯುತ್ತಾ ಎನ್ನುವುದನ್ನು ಕಾದುನೋಡಬೇಕಿದೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:08 pm, Tue, 18 October 22