ಸ್ಟೇ ಹಿನ್ನಲೆ ತೆರವು ಕಾರ್ಯಚರಣೆಗೆ ತಾತ್ಕಲಿಕ ಸ್ಥಗಿತಗೊಳಿಸಿದ ಬಿಬಿಎಂಪಿ: ಸೋಮವಾರಕ್ಕೆ ಮುಂದೂಡಿಕೆ

|

Updated on: Jun 17, 2023 | 3:18 PM

ಅಕ್ರಮ ಜಾಗ ಒತ್ತುವರಿ ವಿರುದ್ಧ ಬಿಬಿಎಂಪಿ ನೆಲಸಮ ಕಾರ್ಯಾಚರಣೆ ಇಂದು ನಗರದ ಎಂಟು ವಲಯಗಳಲ್ಲಿ ಮತ್ತೆ ಜೆಸಿಬಿ ಘರ್ಜನೆ ಶುರುವಾಗಿತ್ತು. ಆದರೆ ಕೆಲವು ಕಟ್ಟಡಗಳಿಗೆ ಸ್ಟೇ ಹಿನ್ನಲೆ ಬಿಬಿಎಂಪಿಯಿಂದ ತೆರವು ಕಾರ್ಯಚರಣೆಯನ್ನು ತಾತ್ಕಲಿಕವಾಗಿ ಸ್ಥಗಿತ ಮಾಡಲಾಗಿದೆ.

ಸ್ಟೇ ಹಿನ್ನಲೆ ತೆರವು ಕಾರ್ಯಚರಣೆಗೆ ತಾತ್ಕಲಿಕ ಸ್ಥಗಿತಗೊಳಿಸಿದ ಬಿಬಿಎಂಪಿ: ಸೋಮವಾರಕ್ಕೆ ಮುಂದೂಡಿಕೆ
ತೆರವು ಕಾರ್ಯಾಚರಣೆ
Follow us on

ಬೆಂಗಳೂರು: ಅಕ್ರಮ ಜಾಗ ಒತ್ತುವರಿ ವಿರುದ್ಧ ಬಿಬಿಎಂಪಿ (BBMP) ನೆಲಸಮ ಕಾರ್ಯಾಚರಣೆ ಇಂದು ನಗರದ ಎಂಟು ವಲಯಗಳಲ್ಲಿ ಮತ್ತೆ ಜೆಸಿಬಿ ಘರ್ಜನೆ ಶುರುವಾಗಿತ್ತು. ಆದರೆ ಕೆಲವು ಕಟ್ಟಡಗಳಿಗೆ ಸ್ಟೇ ಹಿನ್ನಲೆ ಬಿಬಿಎಂಪಿಯಿಂದ ತೆರವು ಕಾರ್ಯಚರಣೆಯನ್ನು ತಾತ್ಕಲಿಕವಾಗಿ ಸ್ಥಗಿತ ಮಾಡಲಾಗಿದೆ. ಸ್ಟೇ ಇಲ್ಲದ ಕಟ್ಟಡಗಳನ್ನ ಸೋಮವಾರಕ್ಕೆ ತೆರವು ಮಾಡಲು ಬೃಹತ್​​ ಬೆಂಗಳೂರು ಮಹಾನಗರ ಪಾಲಿಕೆ ಮುಂದಾಗಿದೆ. ಇತ್ತೀಚೆಗೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಬೆಟರ್ ಬೆಂಗಳೂರು, ವಿಷನ್ ಬೆಂಗಳೂರು ನಿರ್ಮಾಣ ಮಾಡುವುದಾಗಿ ಹೇಳಿದ್ದರು.

ಹಾಗಾಗಿ ರಾಜಕಾಲುವೆ ಒತ್ತುವರಿದಾರರು ಮತ್ತೆ ಸ್ಟೇ ತಂದವರ ವಿರುದ್ಧ ಸಹ ಗುಡುಗಿದ್ದರು. ಈ ಹಿನ್ನಲೆ ಶುಕ್ರವಾರ ಸಭೆ ನಡೆಸಿ ಒತ್ತುವರಿ ತೆರವು ಕಾರ್ಯಾಚರಣೆ ಆರಂಭ ಮಾಡಲು ಸೂಚಿಸಿದ್ದರು. ಇದರ ಬೆನ್ನಲ್ಲೆ ಬಿಬಿಎಂಪಿ ಅಧಿಕಾರಿಗಳು ಶನಿವಾರ ಬೆಂಗಳೂರಿನ ಎಂಟು ವಲಯಗಳಲ್ಲಿ ಜೆಸಿಬಿ ಮೂಲಕ ತೆರವು ಕಾರ್ಯಾಚರಣೆಗೆ ಮುಂದಾಗಿತ್ತು.

ಇದನ್ನೂ ಓದಿ: ಒತ್ತುವರಿ ತೆರವು ಕಾರ್ಯಾಚರಣೆ ಆರಂಭ; ಹೊಯ್ಸಳ ನಗರದಲ್ಲಿ ಸ್ಥಳೀಯರ ವಿರೋಧ, ಅಕ್ರಮ ಕಟ್ಟಡ ಮಾಲೀಕರಲ್ಲಿ ಆತಂಕ

ಇಂದು ಮಹದೇವಪುರದ ಮುನೇನಕೊಳಲು ಬಳಿ ರಾಜಕಾಲುವೆ ಮೇಲೆಯೇ ಬೃಹತ್ ಕಟ್ಟಡಗಳ ನಿರ್ಮಾಣ ಮಾಡಿರುವುದು ಕಂಡು ಬಂದಿದೆ. ರಾಜಕಾಲುವೆಗಳ ಮೇಲೆಯೇ ಅಕ್ರಮವಾಗಿ ಐದಾರು ಅಂತಸ್ತಿನ ಕಟ್ಟಡಗಳ ನಿರ್ಮಾಣ ಮಾಡಲಾಗಿದೆ. ಸದ್ಯ ಈ ಅಕ್ರಮ ಕಟ್ಟಡಗಳಿಗೆ ಬಿಬಿಎಂಪಿ ಮಾರ್ಕ್​ ಮಾಡಿದೆ. ಸ್ಪೈಸ್​​ ಗಾರ್ಡನ್​ನಲ್ಲಿ ತೆರವು ಮಾಡುವ ಭಾಗದಲ್ಲಿ ಮಾರ್ಕ್​ ಮಾಡಲಾಗಿದೆ. ಎಸ್​ಡಬ್ಲ್ಯೂಡಿ ಬಿಲ್ಡಿಂಗ್ ನಂಬರ್ ಮಾರ್ಕ್ ಮಾಡಿ ತೆರವು ಕಾರ್ಯಾಚರಣೆಗೆ ಪ್ಲ್ಯಾನ್ ಮಾಡಲಾಗಿದೆ.

ಬಿಬಿಎಂಪಿ ವಿಶೇಷ ಆಯುಕ್ತ ತ್ರಿಲೋಕ ಚಂದ್ರ ಹೇಳಿದಿಷ್ಟು

ಈ ಕುರಿತಾಗಿ ಟಿವಿ9ಗೆ ಬಿಬಿಎಂಪಿ ವಿಶೇಷ ಆಯುಕ್ತ ತ್ರಿಲೋಕ ಚಂದ್ರ ಹೇಳಿಕೆ ನೀಡಿದ್ದು, ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡಿರುವವರಿಗೆ ನೋಟಿಸ್​ ನೀಡಲಾಗಿದೆ. ನ್ಯಾಯಾಲಯದ ಆದೇಶದ ಬಳಿಕ ತೆರವು ಕಾರ್ಯ ಮಾಡಲಾಗುತ್ತಿದೆ. ಮಹದೇವಪುರ, ಕೆ.ಆರ್​.ಪುರಂನಲ್ಲಿ ತೆರವು ಕಾರ್ಯ ನಡೆಯಲಿದೆ ಎಂದು ಹೇಳಿದ್ದರು.

ಇದನ್ನೂ ಓದಿ: Bengaluru News: ಚುರುಕುಗೊಂಡ ರಾಜಕಾಲುವೆ ಒತ್ತುವರಿ ತೆರವು ಕಾರ್ಯ: ಅಧಿಕಾರಿಗಳಿಗೆ ಗಡುವು ನೀಡಿದ ಬಿಬಿಎಂಪಿ ಆಯುಕ್ತ

ಸೆಪ್ಟೆಂಬರ್​​ನಲ್ಲಿ ತಡೆ ತಂದಿದ್ರೂ BBMP ಗಮನಕ್ಕೆ ತರದ ತಹಶೀಲ್ದಾರ್

ಒತ್ತುವರಿ ತೆರವು ವಿಚಾರದಲ್ಲಿ ಬಿಬಿಎಂಪಿಗೆ ಮತ್ತೊಂದು ಹಿನ್ನಡೆ ಆಗಿದೆ. ಸೆಪ್ಟೆಂಬರ್​​ನಲ್ಲಿ ಬೆಂಗಳೂರು ಉತ್ತರ ತಹಶೀಲ್ದಾರ್ ನೋಟಿಸ್​​ಗೆ ನಿವಾಸಿಗಳು ತಡೆ ತಂದಿದ್ದರು. ಕೋರ್ಟ್ ತಡೆಯಾಜ್ಞೆ ಬಗ್ಗೆ ಬಿಬಿಎಂಪಿ ಗಮನಕ್ಕೆ ತಹಶೀಲ್ದಾರ್​ ತಂದಿಲ್ಲ. ಈ ಬಗ್ಗೆ ಜೂನ್ 15ರಂದು ಸ್ಥಳೀಯ ಶಾಸಕರ ನೇತೃತ್ವದಲ್ಲಿ ಸಭೆ ನಡೆದಿತ್ತು. ತಡೆಯಾಜ್ಞೆ ಬಗ್ಗೆ ಶಾಸಕರ ಸಭೆಯಲ್ಲೂ ಗಮನಕ್ಕೆ ತಂದಿರಲಿಲ್ಲ. ಹಾಗಾಗಿ ತಹಶೀಲ್ದಾರ್ ಎಡವಟ್ಟಿನಿಂದ ಬಿಬಿಎಂಪಿ ಅಧಿಕಾರಿಗಳು ಮುಜುಗರಕ್ಕೀಡಾಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:16 pm, Sat, 17 June 23