ಬೆಳಗಾವಿಗೆ ಬಂದಾಗ ಎಲ್ಲಿ ಲುಂಗಿ ಬಿಚ್ಚುತ್ತಾರೆ, ಎಲ್ಲಿ ಪ್ಯಾಂಟ್ ಬಿಚ್ಚುತ್ತಾರೆ ಗೊತ್ತಿದೆ; ಪರೋಕ್ಷವಾಗಿ ಡಿ.ಕೆ.ಶಿವಕುಮಾರ್ ಸಿಡಿ ಇದೆ ಎಂದ ಲಖನ್ ಜಾರಕಿಹೊಳಿ
ತನ್ನ ವಿರುದ್ಧ ಹುಡುಗಿಯನ್ನು ಬಿಟ್ಟು ಷಡ್ಯಂತರ ರೂಪಿಸಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ವಿರುದ್ಧ ರಮೇಶ್ ಜಾರಕಿಹೊಳಿ ಆರೋಪಿಸಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಡಿ.ಕೆ.ಶಿವಕುಮಾರ್, ರಮೇಶ್ ಜಾರಕಿಹೊಳಿಗೆ ಪ್ಯಾಂಟ್ ಬಿಚ್ಚಲು ನಾನು ಹೇಳಿದ್ನಾ ಎಂದು ಪ್ರಶ್ನಿಸಿದ್ದರು.
ಬೆಳಗಾವಿ: ಕರ್ನಾಟಕದಲ್ಲಿ ಮತ್ತೆ ಸಿಡಿ ರಾಜಕಾರಣ ಮುನ್ನಲೆಗೆ ಬಂದಿದ್ದು, ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarakiholi) ಆರೋಪಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D.K.Shivakumar) ಪ್ರತ್ಯಾರೋಪ ಮಾಡುತ್ತಿದ್ದಾರೆ. ರಮೇಶ್ ಜಾರಕಿಹೊಳಿಗೆ ಪ್ಯಾಂಟ್ ಬಿಚ್ಚಲು ನಾನು ಹೇಳಿದ್ನಾ ಎಂದು ಪ್ರಶ್ನಿಸಿದ್ದ ಡಿಕೆಶಿಗೆ ತಿರುಗೇಟು ನೀಡಿದ ಎಂಎಲ್ಸಿ ಲಖನ್ ಜಾರಕಿಹೊಳಿ (Lakhan Jarakiholi), ಲಂಚ ಮಂಚ ಅಂತಾ ಈ ಮಹಾರಾಜ ಹೇಳುತ್ತಾನೆ. ಇವನು ಲುಂಗಿ ಬಿಚ್ಚೋದು ಎಲ್ಲ ನಮಗೆ ಗೊತ್ತು. ಬೆಳಗಾವಿಗೆ ಬಂದಾಗ ಎಲ್ಲಿ ಲುಂಗಿ ಬಿಚ್ಚುತ್ತಾರೆ, ಎಲ್ಲಿ ಪ್ಯಾಂಟ್ ಬಿಚ್ಚುತ್ತಾರೆ ಗೊತ್ತಿದೆ. ಬೆಳಗಾವಿ ಸರ್ಕ್ಯೂಟ್ ಹೌಸ್ನಿಂದ ಗಾಡಿ ಎಲ್ಲಿಗೆ ಹೋಗುತ್ತದೆ ಗೊತ್ತಿದೆ ಎಂದು ಹೇಳುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ.
ಇನ್ನು, ಲಖನ್ ಆರೋಪದ ಬಗ್ಗೆ ದಾಖಲೆ ಬಿಡುಗಡೆ ಮಾಡುತ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಸಮಯ ಬಂದರೆ ಅದನ್ನೂ ಮಾಡುತ್ತೇವೆ ಎಂದು ಹೇಳುವ ಮೂಲಕ ಡಿ.ಕೆ.ಶಿವಕುಮಾರ್ ಅವರ ಸಿಡಿ ಕೂಡ ಇದೆ ಎಂದು ಪರೋಕ್ಷವಾಗಿ ಹೇಳಿಕೆ ನೀಡಿದ್ದಾರೆ. ಸಿಡಿ ವಿಚಾರದಲ್ಲಿ ಎಲ್ಲರೂ ಕೊರಗಿದ್ದಾರೆ. ಕಾಂಗ್ರೆಸ್ನವರು ವೇದಿಕೆ ಮೇಲೆ ಹೇಗೆ ಸುಮ್ಮನೆ ಕುಳಿತಿರ್ತಾರೆ ನೋಡಿ. ಎದ್ದು ಮಾತನಾಡುವವರೂ ರಮೇಶ್ ಜಾರಕಿಹೊಳಿ ಒಬ್ಬರೇ ಇದ್ದರು. ಇಲ್ಲಿ ಬಂದ ಮೇಲೆ ಅಲ್ಲಿ ಯಾರು ಮಾತಾಡುವವರು ಇಲ್ಲ. ಮಾತನಾಡಿದರೆ ಮುಗಿತು ಬೆಳಗಾವಿಗೆ ಬಂದರೆ ಮುಗಿಯಿತು ಮಚಲಿ ಜಾಲ್ ಮೇ ಫಸ್ ಗಯಾ ಅಂತಾಗುತ್ತೆ ಎಂದರು.
ಇದನ್ನೂ ಓದಿ: Ramesh Jarkiholi CD: ರಮೇಶ್ ಜಾರಕಿಹೊಳಿ ಸಿಡಿ ಹಿಂದಿನ ರೂವಾರಿ ಹೆಸರು ಬಿಚ್ಚಿಟ್ಟ ಮಾಜಿ ಶಾಸಕ ನಾಗರಾಜ್
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಸಿಬಿಐಗೆ ನೀಡುವ ವಿಚಾರವಾಗಿ ಮಾತನಾಡಿದ ಲಖನ್ ಜಾರಕಿಹೊಳಿ, ರಮೇಶ್ ಜಾರಕಿಹೊಳಿ ವಿರುದ್ಧ ಷಡ್ಯಂತರ ಆಗಿದೆ, ಇದರ ಹಿಂದೆ ದೊಡ್ಡ ಜಾಲ ಇದೆ. ಈ ಜಾಲದ ಫ್ಯಾಕ್ಟರಿ ಇರುವುದೇ ಬೆಳಗಾವಿಯಲ್ಲಿ, ಇಲ್ಲಿಂದ ಡಿಸ್ಪ್ಯಾಚ್ ಆಗೋದು ಅಲ್ಲಿ. ರಾಜ್ಯಾದ್ಯಂತ ವಿಸ್ತಾರವಾಗಿ ಮಹಾರಾಷ್ಟ್ರ, ಕೇರಳ, ದಿಲ್ಲಿಯಲ್ಲಿದೆ. ಅದಕ್ಕಾಗಿ ಸಿಬಿಐಗೆ ಕೊಡಬೇಕೆಂದು ನಾನು ಮುಖ್ಯಮಂತ್ರಿಗೆ ಆಗ್ರಹ ಮಾಡುತ್ತೇನೆ ಎಂದರು.
ಪ್ರಕರಣವನ್ನು ಸಿಬಿಐಗೆ ಕೊಟ್ಟರೆ ಎಲ್ಲವೂ ಹೊರಗೆ ಬರುತ್ತದೆ. ಸಿಡಿ ಪ್ರಕರಣದಲ್ಲಿ ನೂರಾರು ಜನ ಅಲ್ಲಾ ಸಾವಿರಾರು ಜನರು ಸಿಕ್ಕಿದ್ದಾರೆ. 2000 ಇಸವಿಯಿಂದ ಆರಂಭವಾಗಿದೆ. ಬ್ಲ್ಯಾಕ್ ಮೇಲ್ ಮಾಡೋದು ಮಾಡುತ್ತಿದ್ದಾರೆ. ರಮೇಶ್ ಜಾರಕಿಹೊಳಿ ಸಿಡಿ ಹುಡುಗಿಯರನ್ನೇ ಬಿಟ್ಟು ಮಾಡಿದರು. ಅದೇ ಫ್ಯಾಕ್ಟರಿ ಅವರದ್ದು ಈಗ ಟಿವಿಗಳ ಮುಂದೆ ಜಿಗಿ ಜಿಗಿದು ಮಾತಾಡುತ್ತಾರೆ. ಮೊದಲು ಅವರದ್ದು ಉದ್ಯೋಗ ಇದೇ ಇತ್ತು, ಈಗ ಉನ್ನತ ಹುದ್ದೆಗೆ ಕುಳಿತಿರಬಹುದು ಎಂದರು.
ಇದನ್ನೂ ಓದಿ: 100 ರೂಪಾಯಿಗೆ ಕನಕಪುರದಲ್ಲಿ ಬ್ಲೂ ಫಿಲ್ಮ್ ತೋರಿಸಿದ್ದ ಡಿ.ಕೆ.ಶಿವಕುಮಾರ್: ರಮೇಶ್ ಜಾರಕಿಹೊಳಿ ಗಂಭೀರ ಆರೋಪ
ಲಕ್ಷ್ಮೀ ಹೆಬ್ಬಾಳ್ಕರ್ ವಿಷಕನ್ಯೆ ಅನ್ನೋದು ಬೆಳಗಾವಿ ಜನರಿಗೆ ಗೊತ್ತಿದೆ
ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ವಾಗ್ದಾಳಿ ನಡೆಸಿದ ಲಖನ್ ಜಾರಕಿಹೊಳಿ, ಆಕೆ ವಿಷಕನ್ಯೆ ಅನ್ನೋದು ಬೆಳಗಾವಿ ಜನರಿಗೆ ಗೊತ್ತಿದೆ. 2000 ಇಸವಿಯಿಂದಲೂ ಹೆಸರು ಇದೆ, ಎಷ್ಟು ಜನ ಸಿಡಿಯಲ್ಲಿ ಸಿಕ್ಕು ಮುದುಡಿ ಹೋದ ಜನ ಇಟ್ಟ ಹೆಸರದು. ವಿಷಕನ್ಯೆ, ಮಟಾಷ್ ಲೆಗ್, ರಕ್ತಕಣ್ಣೀರು ಅಂತಾರೆ ಎಂದು ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಬಗ್ಗೆ ಹೇಳುತ್ತಿಲ್ಲ, ಆದರೆ ಕೆಪಿಸಿಸಿ ಅಂದರೆ ಕರ್ನಾಟಕ ಪ್ರಚಾರ ಸಿಡಿ ಕಮೀಟಿ ಅಂತಾರೆ. ಈಗ ಮತ್ತೆ ಅವರು (ಸಿಡಿ) ಉದ್ಯೋಗ ಹೆಚ್ಚು ಮಾಡಿದ್ದಾರೆ. ಇವರ ಕೈಯಲ್ಲಿ ರಾಜ್ಯ ಸಿಕ್ಕರೆ ಮುಗಿದೇ ಹೋಯಿತು, ದೇವರ ಬಲ್ಲಾ ಎಂದರು.
ರಾಜಕೀಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:14 pm, Tue, 31 January 23