ಸಾರ್ವಜನಿಕರ ತೆರಿಗೆ ಹಣದಿಂದ ಹೈವೇ ನಿರ್ಮಾಣ, ಮೋದಿ ಅವರಪ್ಪನ ಮನೆಯ ಹಣ ಅಲ್ಲ: ಹೆಚ್​.ವಿಶ್ವನಾಥ್

ಉದ್ಘಾಟನೆಗೊಂಡು ಸಾರ್ವಜನಿಕರು ಓಡಾಡಲು ಆರಂಭಿಸಿದ್ದರೂ ಬೆಂಗಳೂರು-ಮೈಸೂರು ಹೆದ್ದಾರಿ ಬಗೆಗಿನ ಚರ್ಚೆ ಮುಕ್ತಾಯಗೊಂಡಿಲ್ಲ. ರಾಜ್ಯದ ಪ್ರಬಲ ಮೂರು ಪಕ್ಷಗಳೂ ಕ್ರೆಡಿಡ್ ಕ್ಲೈಂ ಮಾಡಿಕೊಂಡಿದೆ. ಈ ನಡುವೆ ಹೆದ್ದಾರಿ ನಿರ್ಮಾಣದ ಬಗ್ಗೆ ಪ್ರಧಾನಿ ಮೋದಿ ವಿರುದ್ಧವೇ ಸ್ವಪಕ್ಷದ ಎಂಎಲ್​ಸಿ ಹೆಚ್.ವಿಶ್ವನಾಥ್ ಅವರು ವಾಗ್ದಾಳಿ ನಡೆಸಿದ್ದಾರೆ.

ಸಾರ್ವಜನಿಕರ ತೆರಿಗೆ ಹಣದಿಂದ ಹೈವೇ ನಿರ್ಮಾಣ, ಮೋದಿ ಅವರಪ್ಪನ ಮನೆಯ ಹಣ ಅಲ್ಲ: ಹೆಚ್​.ವಿಶ್ವನಾಥ್
ಹೆಚ್.ವಿಶ್ವನಾಥ್ ಮತ್ತು ನರೇಂದ್ರ ಮೋದಿ
Follow us
Rakesh Nayak Manchi
|

Updated on: Mar 14, 2023 | 3:49 PM

ಮೈಸೂರು: ಬೆಂಗಳೂರು-ಮೈಸೂರು ಹೆದ್ದಾರಿ (Bengaluru-Mysuru Expressway) ಉದ್ಘಾಟನೆಗೊಂಡು ಸಾರ್ವಜನಿಕರು ಓಡಾಡಲು ಆರಂಭಿಸಿದ್ದರೂ ಇದರ ನಿರ್ಮಾಣದ ಮೇಲಿನ ಚರ್ಚೆ ಮಾತ್ರ ಇನ್ನೂ ನಿಂತಿಲ್ಲ. ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳೆಲ್ಲವೂ ಹೈವೇ ನಿರ್ಮಾಣದಲ್ಲಿ ತಮ್ಮದೂ ಪಾಲಿದೆ ಎಂದು ಕ್ರೆಡಿಟ್ ಕ್ಲೈಂ ಮಾಡಿಕೊಂಡಿದೆ. ಈ ನಡುವೆ ಹೆದ್ದಾರಿ ನಿರ್ಮಾಣದ ಬಗ್ಗೆ ಪ್ರಧಾನಿ ಮೋದಿ ವಿರುದ್ಧವೇ ಸ್ವಪಕ್ಷದ ಎಂಎಲ್​ಸಿ ಹೆಚ್.ವಿಶ್ವನಾಥ್ (H.Vishwanath) ಅವರು ವಾಗ್ದಾಳಿ ನಡೆಸಿರುವುದು ಪಕ್ಷಕ್ಕೆ ಇರಿಸು ಮುರಿಸು ಉಂಟಾಗಿದೆ. ಹೈವೇಯನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಅಥವಾ ಸಂಸದ ಪ್ರತಾಪ್ ಸಿಂಹ (Pratap Simha) ಅವರಾಗಲಿ ಅವರ ಅಪ್ಪನ ಮನೆಯಿಂದ ಹಣ ತಂದು ಮಾಡಿಲ್ಲ, ಸಾರ್ವಜನಿಕರ ಹಣದಿಂದ ನಿರ್ಮಾಣ ಮಾಡಿರುವುದು ಎಂದು ವಾಗ್ದಾಳಿ ನಡೆಸಿದರು.

ಬೆಂಗಳೂರು-ಮೈಸೂರು ಹೆದ್ದಾರಿಯನ್ನು ಮಾ.13 ರಂದು ಉದ್ಘಾಟನೆಗೊಂಡು ಇಂದಿನಿಂದ ಟೋಲ್​ ಸಂಗ್ರಹ ಪ್ರಾರಂಭವಾಗಿದೆ. ಇದಕ್ಕೆ ಭಾರೀ ವಿರೋಧವೂ ವ್ಯಕ್ತವಾಗುತ್ತಿದೆ. ಟೋಲ್ ಸಂಗ್ರಹ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಿದ್ದಾರೆ. ಟೋಲ್ ಸಂಗ್ರಹದ ಬಗ್ಗೆ ಮೈಸೂರಿನಲ್ಲಿ ಮಾತನಾಡಿದ ವಿಶ್ವನಾಥ್, ಮೋದಿಯವರು ಅವರಪ್ಪನ ಮನೆಯಿಂದ ಹಣ ತಂದು ಹೈವೇ ನಿರ್ಮಿಸಿಲ್ಲ. ಪ್ರತಾಪ್ ಸಿಂಹ ಅಪ್ಪನ ಮನೆಯಿಂದ ಹಣ ತಂದು ಹೈವೇ ಮಾಡಿಲ್ಲ. ಸಾರ್ವಜನಿಕರ ತೆರಿಗೆ ಹಣದಿಂದ ಹೈವೇ ನಿರ್ಮಾಣ ಮಾಡಲಾಗಿದೆ. ಆದರೂ ಹೈವೇಗೆ ದುಬಾರಿ ಟೋಲ್ ನಿಗದಿಪಡಿಸಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಅರ್ಧ ಶೇವ್ ಮಾಡಿದ್ದಾರೆ, ಮತ್ತರ್ಧ ಶೇವ್ ಮಾಡಿಲ್ಲ: ಹೆಚ್ ವಿಶ್ವನಾಥ್

ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​ ಹೈವೇಯನ್ನು ಸಂಪೂರ್ಣ ಉದ್ಘಾಟನೆ ಮಾಡಿಲ್ಲ. ಕೇವಲ ಅರ್ಧ ಪೂರ್ಣಗೊಂಡಿರುವ ಹೈವೇ ಉದ್ಘಾಟನೆ ಮಾಡಿದ್ದಾರೆ. ಅರ್ಧ ಶೇವ್ ಮಾಡಿದ್ದಾರೆ, ಮತ್ತರ್ಧ ಶೇವ್ ಮಾಡಿಲ್ಲ ಎಂದು ವಿಶ್ವನಾಥ್ ವ್ಯಂಗ್ಯವಾಡಿದ್ದಾರೆ. ಅಲ್ಲದೆ, ಹೈವೇಯಲ್ಲಿ ಸಂಚರಿಸಲು ದುಬಾರಿ ಟೋಲ್​ ಹಾಕುತ್ತಿದ್ದಾರೆ. ಇದನ್ನು ವಿರೋಧಿಸಿ ಮಾರ್ಚ್ 17ರಂದು ಹೈವೇಯಲ್ಲಿ ಒಂದು ಗಂಟೆ ಶಾಂತಿಯುತ ಪ್ರತಿಭಟನೆ ಮಾಡುತ್ತೇನೆ. ನನ್ನೊಂದಿಗೆ ಯಾರು ಬರದಿದ್ದರೂ ಏಕಾಂಗಿಯಾಗಿ ಪ್ರತಿಭಟನೆ ಮಾಡುತ್ತೇನೆ ಎಂದರು.

ಇದನ್ನೂ ಓದಿ: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಂಗ್ರಹಿಸಲಾಗುತ್ತಿರುವ ಟೋಲ್ ಶುಲ್ಕ ಎಷ್ಟು ಗೊತ್ತಾ? ಕೇಳಿಸಿಕೊಂಡರೆ ಗಾಬರಿಯಾಗುತ್ತೀರಿ!

ಏನಪ್ಪಾ ಪ್ರತಾಪ್ ಸಿಂಹ.. ಎಷ್ಟು ಕೋಟಿಯ ಮನೆ ಕಟ್ಟುತ್ತಿದ್ದೀಯಾ?

ಸ್ವಪಕ್ಷೀಯ ಸಂಸದ ಪ್ರತಾಪ್ ಸಿಂಹ ವಿರುದ್ಧವೇ ಕಿಡಿಕಾರಿದ ಹೆಚ್.ವಿಶ್ವನಾಥ್, ಏನಪ್ಪಾ.. ಎಷ್ಟು ಕೋಟಿ ಹಣ ಖರ್ಚು ಮಾಡಿ ಮನೆ ಕಟ್ಟುತ್ತಿದ್ದೀಯಾ? ಬೆಂಗಳೂರು-ಮೈಸೂರು ಹೈವೇ ನಿರ್ಮಾಣದಲ್ಲಿ ಎಷ್ಟು ಕೋಟಿ ಬಂತು? ಬೆಕ್ಕು ಕಣ್ಮುಚ್ಚಿಕೊಂಡು ಹಾಲು ಕುಡಿದರೆ ಯಾರಿಗೂ ಗೊತ್ತಾಗುದಿಲ್ಲವಾ? ನಾನು ರಾಜಕಾರಣಕ್ಕೆ ಬಂದು 50 ವರ್ಷ ಆಯ್ತು. ನನ್ನ ಮನೆ ಹೇಗಿದೆ? ನೀನು ನಿನ್ನೆ ಬಂದವನು, ನಿನ್ನ ಮನೆ ಹೇಗಿದೆ? ಎಷ್ಟು ಕೋಟಿ ಖರ್ಚು ಮಾಡಿ ಮನೆ ಕಟ್ಟುತ್ತಿದ್ದೀಯಾ ಬಹಿರಂಗಪಡಿಸು ಎಂದು ಸವಾಲು ಹಾಕಿದರು.

ಎಕ್ಸ್​ಪ್ರೆಸ್​ ಹೈವೇ ಕಾಮಗಾರಿಯಲ್ಲಿ ಪ್ರತಾಪ್ ಸಿಂಹ ಲಾಭವಾಗಿಲ್ಲವೇ?

ಎಕ್ಸ್​ಪ್ರೆಸ್​ ಹೈವೇ ಕಾಮಗಾರಿಯಲ್ಲಿ ಪ್ರತಾಪ್ ಸಿಂಹ ಲಾಭವಾಗಿಲ್ಲವೇ ಎಂದು ಹೆಚ್.ವಿಶ್ವನಾಥ್​ ಪ್ರಶ್ನಿಸಿದ್ದಾರೆ. ಹೈವೇ ನಿರ್ಮಾಣಕ್ಕೆ ಜಲ್ಲಿಕಲ್ಲು, ಮರಳು ಸರಬರಾಜು ಮಾಡಿದವರು ನಿಮ್ಮ ಸ್ನೇಹಿತರಲ್ಲವೇ? ಬೆಕ್ಕು ಕಣ್ಣುಮುಚ್ಚಿಕೊಂಡು ಹಾಲು ಕುಡಿದರೆ ಗೊತ್ತಾಗಲ್ವಾ ಪ್ರತಾಪ್​ ಸಿಂಹ. ಪ್ರತಾಪ್ ಸಿಂಹಗೆ ನಾಚಿಕೆ ಮಾನ ಮರ್ಯಾದೆ ಯಾವುದೂ ಇಲ್ಲ. ಉರಿಗೌಡ, ನಂಜೇಗೌಡ ಹೆಸರು ಹೇಳಿಕೊಂಡು ರಾಜಕೀಯ ಮಾಡುತ್ತಿದ್ದಾರೆ. ಎಲ್ಲದರಲ್ಲೂ ರಾಜಕೀಯ ಮಾಡುವ ಇಂಥವರಿಗೆ ಏನನ್ನಬೇಕು? ಇವರನ್ನು ಅಧಿಕಾರಕ್ಕೆ ತಂದಿದ್ದಕ್ಕೆ ನಾನು ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ