ಕೇಂದ್ರ ಸರ್ಕಾರ ಯಾವುದೆ ಕೆಲಸ ಮಾಡುತ್ತಿಲ್ಲ, ಬರೀ ಪ್ರಚಾರವನ್ನಷ್ಟೇ ಮಾಡುತ್ತಿದೆ: ನಿತೀಶ್ ಕುಮಾರ್

| Updated By: ರಶ್ಮಿ ಕಲ್ಲಕಟ್ಟ

Updated on: Aug 24, 2022 | 7:46 PM

ನಿರ್ದಿಷ್ಟ ಹುದ್ದೆಯ ಮೇಲೆ ಕಣ್ಣಿಟ್ಟು ನಾನು ಆರ್​​ಜೆಡಿ ಜತೆ ಮೈತ್ರಿ ಮಾಡಿಲ್ಲ ಎಂದು ಹೇಳಿದ ಬಿಹಾರ ಸಿಎಂ ನಾನು ಪ್ರಧಾನಿ ರೇಸ್ ನಲ್ಲಿಲ್ಲ ಎಂದು ಪುನರುಚ್ಛರಿಸಿದ್ದಾರೆ. 2020ರಲ್ಲಿ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯು ಬಿಜೆಪಿ ಜತೆ ಇದ್ದಾಗ ಅವರು ನನ್ನನ್ನು ಕುಗ್ಗಿಸಲು ಯಾವ ರೀತಿ ಪ್ರಯತ್ನಿಸಿದರು ಎಂಬುದರ ಬಗ್ಗೆ...

ಕೇಂದ್ರ ಸರ್ಕಾರ ಯಾವುದೆ ಕೆಲಸ ಮಾಡುತ್ತಿಲ್ಲ, ಬರೀ ಪ್ರಚಾರವನ್ನಷ್ಟೇ ಮಾಡುತ್ತಿದೆ: ನಿತೀಶ್ ಕುಮಾರ್
ನಿತೀಶ್ ಕುಮಾರ್
Follow us on

ಬಿಹಾರ (Bihar) ವಿಧಾನಸಭೆಯಲ್ಲಿ ನಡೆದ ವಿಶೇಷ ಅಧಿವೇಶನ ಬಹಿಷ್ಕರಿಸಿ ಬಿಜೆಪಿ (BJP) ಹೊರನಡೆದಿರುವುದರ ಬಗ್ಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ವಾಗ್ದಾಳಿ ನಡೆಸಿದ್ದಾರೆ. ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಮತ್ತು ಆರ್​​ಜೆಡಿ ಮೈತ್ರಿಕೂಟದ ಮಹಾಘಟಬಂಧನ್ ಬುಧವಾರ ಬಹುಮತ ಸಾಬೀತು ಪಡಿಸಿದೆ. ಬಿಜೆಪಿ ವಿರುದ್ಧ ಟೀಕಾ ಪ್ರಹಾರ ಮಾಡಿದ ನಿತೀಶ್ ಕುಮಾರ್, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಯಾವುದೇ ಕೆಲಸ ಮಾಡುತ್ತಿಲ್ಲ. ಅದು ಬರೀ ಪ್ರಚಾರ ಕಾರ್ಯದಲ್ಲಿ ನಿರತವಾಗಿದೆ. ನಾವು ತುಂಬಾನೇ ಕಿರಿಕಿರಿ ಅನುಭವಿಸುತ್ತಿದ್ದೆವು. ಹಾಗಾಗಿ ನಾವು ಆರ್​​ಜೆಡಿ ಮತ್ತು ಇತರ ವಿರೋಧ ಪಕ್ಷಗಳೊಂದಿಗೆ ಕೈ ಜೋಡಿಸಿದೆವು. ನಾನು ರಾಜ್ಯದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತೇವೆ ಎಂದು ವಿಧಾನಸಭೆಯಲ್ಲಿ ಮಾತನಾಡಿದ ಬಿಹಾರ ಸಿಎಂ ಹೇಳಿದ್ದಾರೆ. ಟೀಕೆ ವಿರುದ್ಧ ಬಿಜೆಪಿ ಶಾಸಕರು ಪ್ರತಿಭಟಿಸಿದಾಗ, ನಿತೀಶ್ ಕುಮಾರ್ ಅವರು ಕುಳಿತುಕೊಳ್ಳಿ, ಆರಾಮವಾಗಿರಿ ಎಂದಿದ್ದಾರೆ. ನೀವು ಮಕ್ಕಳು, ನಿಮಗೆ ಈಶಾನ್ಯ ರಾಜ್ಯದ ರಾಜಕೀಯ ಬೆಳವಣಿಗೆ ಬಗ್ಗೆ ಗೊತ್ತಿಲ್ಲ ಎಂದು ನಿತೀಶ್ ಹೇಳಿದ್ದಾರೆ.

ನಿರ್ದಿಷ್ಟ ಹುದ್ದೆಯ ಮೇಲೆ ಕಣ್ಣಿಟ್ಟು ನಾನು ಆರ್​​ಜೆಡಿ ಜತೆ ಮೈತ್ರಿ ಮಾಡಿಲ್ಲ ಎಂದು ಹೇಳಿದ ಬಿಹಾರ ಸಿಎಂ ನಾನು ಪ್ರಧಾನಿ ರೇಸ್ ನಲ್ಲಿಲ್ಲ ಎಂದು ಪುನರುಚ್ಛರಿಸಿದ್ದಾರೆ. 2020ರಲ್ಲಿ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯು ಬಿಜೆಪಿ ಜತೆ ಇದ್ದಾಗ ಅವರು ನನ್ನನ್ನು ಕುಗ್ಗಿಸಲು ಯಾವ ರೀತಿ ಪ್ರಯತ್ನಿಸಿದರು ಎಂಬುದರ ಬಗ್ಗೆ ಎಲ್ಲರಿಗೂ ತಿಳಿದಿದೆ ಎಂದಿದ್ದಾರೆ.

ನಾನು ಸಿಎಂ ಆಗಬೇಕೆಂದು ಒತ್ತಡ ಹೇರಲಾಗಿತ್ತು, ಆದರೆ ಬಿಜೆಪಿಯು ಸುಶೀಲ್ ಕುಮಾರ್ ಮೋದಿಯನ್ನು ಉಪಮುಖ್ಯಮಂತ್ರಿ ಮಾಡಲು ಅಥವಾ ನಂದ ಕಿಶೋರ್ ಯಾದವ್ ಮತ್ತು ಇತರ ಹಳೆಯ ಬಿಜೆಪಿ ನಾಯಕರನ್ನು ಮಂತ್ರಿ ಮಾಡಲು ಎಂದಿಗೂ ಕಾಳಜಿ ವಹಿಸಲಿಲ್ಲ., 2020 ರ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದ ನಂತರ ಬಿಜೆಪಿ ಮೈತ್ರಿಯಲ್ಲಿ ಹಿರಿಯಣ್ಣನಂತೆ ಆಡಲು ಪ್ರಯತ್ನಿಸಿತು.

2017ರಲ್ಲಿ ಪಾಟ್ನಾ ವಿಶ್ವವಿದ್ಯಾಲಯಕ್ಕೆ ಕೇಂದ್ರ ಸ್ಥಾನಮಾನಕ್ಕೆ ಬೇಡಿಕೆ ಇಟ್ಟಾಗ ಯಾರೂ ಅದಕ್ಕೆ ಕಿವಿಗೊಡಲಿಲ್ಲ ಎಂದು ಕುಮಾರ್ ಹೇಳಿದರು. ಈಗ ಬಿಜೆಪಿ ತನ್ನ “ಜಾಹೀರಾತು” ಮಾಡಲು ಅದೇ ರೀತಿ ಮಾಡಲಿದೆ. ಬಿಜೆಪಿ ಸಾಮಾಜಿಕ ಮಾಧ್ಯಮ ಮತ್ತು ಪತ್ರಿಕಾ ಮಾಧ್ಯಮವನ್ನು ನಿಯಂತ್ರಿಸುತ್ತಿದೆ ಎಂದಿದ್ದಾರೆ ನಿತೀಶ್.
ಪ್ರತಿಯೊಬ್ಬರೂ ಕೇಂದ್ರದ ಕೆಲಸವನ್ನಷ್ಟೇ ಚರ್ಚಿಸುತ್ತಾರೆ ಎಂದಿದ್ದಾರೆ ಕುಮಾರ್.

ಆಮೇಲೆ ಬಿಜೆಪಿ ಸದಸ್ಯರು ಸದನ ಬಹಿಷ್ಕರಿಸಿ ಹೊರನಡೆದರು. ಇದಕ್ಕೆ ಪ್ರತಿಕ್ರಿಯಿಸಿದ ಕುಮಾರ್, ನೀವು ಬಿಜೆಪಿ ಶಾಸಕರೆಲ್ಲರೂ ಓಡಿ ಹೋಗುತ್ತಿದ್ದೀರಿ. ನೀವು ನನ್ನ ವಿರುದಗ್ಧ ಏನಾದರೂ ಹೇಳಿದರೆ ಮಾತ್ರ ನಿಮಗೆ ನಿಮ್ಮ ಪಕ್ಷದಲ್ಲಿ ಸ್ಥಾನ ಸಿಗುವುದು. ನೀವು ಹಾಗೆ ಮಾಡಿ ನಿಮಗೆ ಪಕ್ಷದಲ್ಲಿ ಸ್ಥಾನ ಸಿಕ್ಕಿದರೆ ನನಗೆ ಖುಷಿಯಾಗುತ್ತದೆ. ನಿಮಗೆಲ್ಲರಿಗೂ ನಿಮ್ಮ ಮೇಲಿನ ಬಾಸ್ ಗಳಿಂದ ಆದೇಶ ಸಿಕ್ಕಿರಬಹುದು. ಬಿಜೆಪಿ ಶಾಸಕರು ಹೊರನಡೆಯದೇ ಇದ್ದರೆ ನಾನು ಅವರ ವಿರುದ್ಧ ಮತ್ತಷ್ಟು ಹೇಳುತ್ತಿದ್ದೆ ಎಂದು ನಿತೀಶ್ ತಮ್ಮ ಭಾಷಣ ಮುಗಿಸಿದ್ದಾರೆ.