ಆಪರೇಷನ್​ ಹಸ್ತಕ್ಕೆ ಬ್ರೇಕ್​​, ಲೋಕಸಭಾ ಚುನಾವಣೆಗೆ ತಂತ್ರ ಹೆಣೆಯಲು ಇಂದು ಬಿಜೆಪಿ ಕೋರ್​ ಕಮಿಟಿ ಸಭೆ

| Updated By: ವಿವೇಕ ಬಿರಾದಾರ

Updated on: Aug 21, 2023 | 7:13 AM

ಬಿಜೆಪಿಯ ಹಾಲಿ ಮತ್ತು ಮಾಜಿ ಶಾಸಕರು ಕಾಂಗ್ರೆಸ್ ಸೇರ್ಪಡೆ ಕುರಿತ ಚಟುವಟಿಕೆ ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ. ಪಕ್ಷದ ಹಲವು ನಾಯಕರು ಕಾಂಗ್ರೆಸ್​ ಸಂಪರ್ಕದಲ್ಲಿದ್ದಾರೆ ಎಂಬ ಮಾತುಗಳು ಕೇಳಿಬುರತ್ತಿರುವ ಹಿನ್ನೆಲೆಯಲ್ಲಿ ಇವರನ್ನು ಹಿಡಿದಿಟ್ಟುಕೊಳ್ಳಲು ತಂತ್ರ ಹೆಣೆಯಲು ಬಿಜೆಪಿ ಇಂದು ಕೋರ್​ ಕಮಿಟಿ ಸಭೆ ನಡೆಸಲಿದೆ.

ಆಪರೇಷನ್​ ಹಸ್ತಕ್ಕೆ ಬ್ರೇಕ್​​, ಲೋಕಸಭಾ ಚುನಾವಣೆಗೆ ತಂತ್ರ ಹೆಣೆಯಲು ಇಂದು ಬಿಜೆಪಿ ಕೋರ್​ ಕಮಿಟಿ ಸಭೆ
ಬಿಜೆಪಿ
Follow us on

ಬೆಂಗಳೂರು: ಬಿಜೆಪಿಯ (BJP) ಹಾಲಿ ಮತ್ತು ಮಾಜಿ ಶಾಸಕರು ಕಾಂಗ್ರೆಸ್ (Congress) ಸೇರ್ಪಡೆ ಕುರಿತ ಚಟುವಟಿಕೆ ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ. ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ (ST Somashekar) ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಇನ್ನೊಂದು ಕಡೆ ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್ ಕಾಂಗ್ರೆಸ್‌ಗೆ ವಾಪಸಾಗಲು ಸದ್ದಿಲ್ಲದೆ ಪ್ರಯತ್ನ ಆರಂಭಿಸಿದ್ದಾರೆ. ಈ ಮಧ್ಯೆ ಲೋಕಪಯೋಗಿ ಸಚಿವ ರಮೇಶ್​ ಜಾರಕಿಹೊಳಿ (Ramesh Jarkiholi) ಅವರು ಬಿಜೆಪಿ ಹಾಗೂ ಜೆಡಿಎಸ್‌ನ 20 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಹೇಳುವ ಮೂಲಕ ಹೊಸ ಬಾಂಬ್​ ಸಿಡಿಸಿದ್ದಾರೆ. ಈ ಎಲ್ಲ ಬೆಳವಣಿಗೆಗಳಿಂದ ಎಚ್ಚೆತ್ತುಕೊಂಡಿರುವ ಬಿಜೆಪಿ ಇದೀಗ ತನ್ನ ಮುಖಂಡರನ್ನು ಹಿಡಿದಿಟ್ಟುಕೊಳ್ಳಲು ಇಂದು (ಆ.21) ಬೆಳಿಗ್ಗೆ 11 ಗಂಟೆಗೆ ಕೋರ್ ಕಮಿಟಿ ಸಭೆ ನಡೆಯಲಿದೆ.

ಇಬ್ಬರ ಅಮಾನತು: ವಿಧಾನಸಭಾ ಚುನಾವಣೆ ಬಳಿಕ ಸ್ವಪಕ್ಷೀಯರ ವಿರುದ್ಧವೇ ಮುನಿಸಿ ಕೊಂ ಡಿರುವ ಎಸ್.ಟಿ.ಸೋಮಶೇಖರ್ ಮನವೊ ಲಕೆಗೆ ಶನಿವಾರವಷ್ಟೇ ಬಿಜೆಪಿ ಪ್ರಯತ್ನ ಆರಂ ಇದರ ಬೆನ್ನಲ್ಲೇ ಅವರ ಕೆಂಗಣ್ಣಿಗೆ ಭಿಸಿತ್ತು. ಇದರ ಗುರಿಯಾಗಿರುವ ಯಶವಂತಪುರ ಮಾಜಿ ಮಂಡಲ ಅಧ್ಯಕ್ಷ ಮಾರೇಗೌಡ ಮತ್ತು ಹಾಲ ಉಪಾಧ್ಯಕ್ಷ ಧನಂಜಯ ಅವರನ್ನು ಪಕ್ಷದಿಂದ ಭಾನುವಾರ ಉಚ್ಚಾಟಿಸಲಾಗಿದೆ.

ಹಾಲಿ ಮತ್ತು ಮಾಜಿ ಶಾಸಕರ ಪಕ್ಷಾಂತರದ ಭೀತಿ ನಡುವೆಯೇ ಪ್ರಮುಖ ಪಕ್ಷದ ಹಿರಿಯ ನಾಯಕರನ್ನು ಒಳಗೊಂಡ ಕೋರ್ ಕಮಿಟಿ ಸಭೆ ನಡೆಯಲಿದೆ. ಸಭೆಯಲ್ಲಿ ಮುಂಬರುವ ಲೋಕಸಭಾ ಚುನಾವಣೆ ಸೇರಿದಂತೆ ಬಿಬಿಎಂಪಿ ಚುನಾವಣೆ ತಯಾರಿ, ಸರ್ಕಾರ ವಿರುದ್ಧ ಹೋರಾಟ, ಲೋಕಸಭೆ ಚುನಾವಣಾ ಆಪರೇಷನ್ ಹಸ್ತ ವಿಫಲಗೊಳಿಸುವುದು ಮತ್ತು ಕಾವೇರಿ ವಿಚಾರದಲ್ಲಿ ಹೋರಾಟ ಸೇರಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ.

ಇದನ್ನೂ ಓದಿ: ಆಪರೇಷನ್ ಹಸ್ತ​ ಸದ್ದು-ಗದ್ದಲದ ಮಧ್ಯೆ ಸಿದ್ದರಾಮಯ್ಯ ಭೇಟಿಯಾದ ಬಿಜೆಪಿ ಶಾಸಕ ಎಸ್​​ಟಿ ಸೋಮಶೇಖರ್

ಸಭೆಯಲ್ಲಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್​ ಕಟೀಲ್, ಮಾಜಿ ಮುಖ್ಯಮಂತ್ರಿಗಳಾದ ಬಿ. ಎಸ್.ಯಡಿಯೂರಪ್ಪ, ಬಸವ ರಾಜ ಬೊಮ್ಮಾಯಿ, ಡಿ.ವಿ. ಸದಾನಂದಗೌಡ, ಮಾಜಿ ಉಪಮುಖ್ಯ ಮಂತ್ರಿಗಳಾದ ಕೆ.ಎಸ್‌.ಈಶ್ವರಪ್ಪ, ಆರ್.ಅಶೋಕ್, ಡಾ.ಸಿ.ಎನ್. ಅಶ್ವತ್ಥನಾರಾಯಣ, ಗೋವಿಂದ ಕಾರಜೋಳ, ಮಾಜಿ ಸಚಿವ ಸಿ.ಟಿ. ರವಿ ಇತರರು ಪಾಲ್ಗೊಳಲಿದ್ದಾರೆ.

ಇಬ್ಬರು ಅಮಾನತು

ವಿಧಾನಸಭಾ ಚುನಾವಣೆ ಬಳಿಕ ಸ್ವಪಕ್ಷೀಯರ ವಿರುದ್ಧವೇ ಮುನಿಸಿ ಕೊಂಡಿರುವ ಎಸ್.ಟಿ.ಸೋಮಶೇಖರ್ ಮನವೊಲಕೆಗೆ ಭಾನುವಾರ ಬಿಜೆಪಿ ಯಶವಂತಪುರ ಮಾಜಿ ಮಂಡಲ ಅಧ್ಯಕ್ಷ ಮಾರೇಗೌಡ ಮತ್ತು ಹಾಲ ಉಪಾಧ್ಯಕ್ಷ ಧನಂಜಯ ಅವರನ್ನು ಪಕ್ಷದಿಂದ ಭಾನುವಾರ ಉಚ್ಚಾಟಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.