ಬಿಜೆಪಿ ಮೇಲ್ಜಾತಿಯವರ ಪಕ್ಷ, ಕೆಳ ವರ್ಗ ಮತ್ತು ನಾಡಿನ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡಲ್ಲ: ಸಿದ್ದರಾಮಯ್ಯ ವಾಗ್ದಾಳಿ

|

Updated on: Mar 07, 2023 | 12:13 PM

‘ಬಿಜೆಪಿ ಮೇಲ್ಜಾತಿಯವರ ಪಕ್ಷ, ಶ್ರೀಮಂತ ವರ್ಗದವರ ಪಕ್ಷ, ಕೆಳ ವರ್ಗದವರ ಬಗ್ಗೆ ನಾಡಿನ ಅಭಿವೃದ್ಧಿ ಬಗ್ಗೆ ಬಿಜೆಪಿ ಚಿಂತನೆ ಮಾಡಲ್ಲ ಎಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸಿದ್ದರಾಮಯ್ಯ ಬಿಜೆಪಿ ವಿರುದ್ದ ಹರಿಹಾಯ್ದಿದ್ದಾರೆ.

ಬಿಜೆಪಿ ಮೇಲ್ಜಾತಿಯವರ ಪಕ್ಷ, ಕೆಳ ವರ್ಗ ಮತ್ತು ನಾಡಿನ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡಲ್ಲ: ಸಿದ್ದರಾಮಯ್ಯ ವಾಗ್ದಾಳಿ
ಮಾಜಿ ಸಿಎಂ ಸಿದ್ದರಾಮಯ್ಯ
Follow us on

ಬೆಂಗಳೂರು: ‘ಬಿಜೆಪಿ ಮೇಲ್ಜಾತಿಯವರ ಹಾಗೂ  ಶ್ರೀಮಂತ ವರ್ಗದವರ ಪಕ್ಷ, ಕೆಳ ವರ್ಗದವರ ಬಗ್ಗೆ ನಾಡಿನ ಅಭಿವೃದ್ಧಿ ಬಗ್ಗೆ ಬಿಜೆಪಿ ಚಿಂತನೆ ಮಾಡಲ್ಲ. ಹೇಗಾದರೂ ಹಣದ ಮೂಲಕ ಅಧಿಕಾರಕ್ಕೆ ಬರಬೇಕು ಎಂಬುದು ಬಿಜೆಪಿಯವರ ಉದ್ದೇಶವಾಗಿದೆ. ಟನ್ ಗಟ್ಟಲೆ ಲಂಚ ಹೊಡೆದಿರುವ ಹಣ ಬಿಜೆಪಿಯವರ ಹತ್ತಿರ ಇದೆ. ಕೋಟ್ಯಾನುಗಟ್ಟಲೆ ಖರ್ಚು ಮಾಡಬೇಕು ಎನ್ನುವುದು ಅವರ ಉದ್ದೇಶ. ನಾಲ್ಕು ವರ್ಷದಿಂದ ಏನೂ ಕೆಲಸ ಮಾಡದೇ ಲೂಟಿ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಬಿಜೆಪಿ ವಿರುದ್ದ ಕಿಡಿಕಾರಿದ್ದಾರೆ.

ಸಿಎಂ ಬೊಮ್ಮಾಯಿಗೆ ನೈತಿಕತೆ ಇದ್ದರೆ ರಾಜೀನಾಮೆ ಕೊಡಬೇಕು ಎಂದು ಸಿದ್ದರಾಮಯ್ಯ

‘ಮಾಡಾಳ್​ ಪುತ್ರನ ಮನೆಯಲ್ಲಿ ಕೋಟಿ ಕೋಟಿ ಹಣ ಪತ್ತೆ ಕೇಸ್ ವಿಚಾರವಾಗಿ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಭ್ರಷ್ಟಾಚಾರ ಆರೋಪಕ್ಕೆ ಸಿಎಂ ದಾಖಲಾತಿ ಕೊಡಿ ಅಂತಾ ಹೇಳ್ತಿದ್ರು, ಬಿಎಸ್​ವೈ ಆಪ್ತ ಮಾಡಾಳ್ ವಿರೂಪಾಕ್ಷಪ್ಪ ಸಿಕ್ಕಿ ಹಾಕಿಕೊಂಡಿದ್ದಾನಲ್ಲ. ಮುಖ್ಯಮಂತ್ರಿ ಬೊಮ್ಮಾಯಿಗೆ ಇದಕ್ಕಿಂತ ಇನ್ನೇನು ದಾಖಲೆ ಬೇಕು.? ಈ ಮೂಲಕ 40 ಪರ್ಸೆಂಟ್​​ ಕಮಿಷನ್ ಆರೋಪ ಸಾಬೀತಾಗಿದೆ. ‘ಸಿಎಂ ಬೊಮ್ಮಾಯಿಗೆ ನೈತಿಕತೆ ಇದ್ದರೆ ರಾಜೀನಾಮೆ ಕೊಡಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

ಇದನ್ನೂ ಓದಿ:ಸಿದ್ದರಾಮಯ್ಯ ಸಿಎಮ್ ಆಗಿದ್ದಾಗ ಅತಿಥಿಗಳ ಕಾಫಿ-ತಿಂಡಿಗಾಗಿ ರೂ. 200 ಕೋಟಿ ಖರ್ಚು ಮಾಡಲಾಗಿದೆ: ಎನ್ ಆರ್ ರಮೇಶ್, ಬಿಜೆಪಿ ಮುಖಂಡ

ಸಿದ್ದರಾಮಯ್ಯನ ಕಾಲದಲ್ಲಿ ಭ್ರಷ್ಟಾಚಾರ ರಕ್ಷಣೆ ಮಾಡಲು ಎಸಿಬಿ ರಚನೆ

ಸಿದ್ದರಾಮಯ್ಯನ ಕಾಲದಲ್ಲಿ ಭ್ರಷ್ಟಾಚಾರ ರಕ್ಷಣೆ ಮಾಡಲು ಎಸಿಬಿ ರಚನೆ ಮಾಡಿದರು ಲೋಕಾಯುಕ್ತ ಮುಚ್ಚಿಬಿಟ್ರು ಅಂತಾರೆ. ಕನಿಷ್ಟ ಜ್ಞಾನ ಇದ್ದವರು ಯಾರೂ ಈ ತರಹ ಮಾತನಾಡಲ್ಲ. ನಾವು ಲೋಕಾಯುಕ್ತ ಮುಚ್ಚಲಿಲ್ಲ, ಇನ್ನೂ ಇಫೆಕ್ಟಿವ್ ಆಗಿ ಕೆಲಸ ಮಾಡಬೇಕು ಎಂದು ಎಸಿಬಿ ಮಾಡಿದೆವು. ಹಿಂದಿನ ಲೋಕಾಯುಕ್ತರ ಮನೆಯಲ್ಲೇ ಭ್ರಷ್ಟಾಚಾರ ಇತ್ತು ಎನ್ನುವ ಕಾರಣಕ್ಕೆ ನಾವು ಎಸಿಬಿ ಮಾಡಿದೆವು. ಕೋರ್ಟ್ ಈಗ ಲೋಕಾಯುಕ್ತ ಕೆಲಸ ಮಾಡಲಿ ಎಸಿಬಿ ಬೇಡ ಎಂದು ಹೇಳಿದೆ.

ಇದನ್ನೂ ಓದಿ:ಬಾದಾಮಿ: ಸಿದ್ದರಾಮಯ್ಯ ಅನುಪಸ್ಥಿತಿಯಲ್ಲಿ ಸ್ಪರ್ಧೆ ಹೇಗಿದೆ? ಈ ಬಾರಿಯಾದರೂ ಜೆಡಿಎಸ್ ಅಭ್ಯರ್ಥಿ ಹನುಮಂತ ಮಾವಿನಮರದ ಕೈಹಿಡಿಯುತ್ತಾರಾ ಜನ?

ಇವರು ಮೂರು ವರ್ಷ ಅಧಿಕಾರದಲ್ಲಿದ್ರಲ್ಲ ಎಸಿಬಿಯನ್ನು ಯಾವತ್ತೂ ರದ್ದು ಮಾಡಲಿಲ್ಲ. ಇವರಿಗೂ ಎಸಿಬಿ ಬೇಕಾಗಿತ್ತು. ಬಿಜೆಪಿ ಅಧಿಕಾರದಲ್ಲಿ ಇರುವ ಗುಜರಾತ್​, ಮಧ್ಯಪ್ರದೇಶ ಅನೇಕ ರಾಜ್ಯಗಳಲ್ಲಿ ಎಸಿಬಿ ಲೋಕಾಯುಕ್ತ ಎರಡೂ ಇದೆ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯದಲ್ಲಿ ಯಾಕೆ ಎಸಿಬಿ ರದ್ದು ಮಾಡಲಿಲ್ಲ? ಎಸಿಬಿ ರಚನೆ ಮಾಡಿರುವುದು ಸರಿ ಎಂದು ಇವರ ಎಜಿ ವಾದ ಮಾಡಿದ್ದಾರೆ. ಎಜಿ ವಾದ ಮಾಡಿದ್ದಾನೆ ಅಂದ್ರೆ ಅದು ಸರ್ಕಾರದ ನಿಲುವು, ಅಲ್ಲಿ ಎಸಿಬಿ ಇರಬೇಕು ಎಂದು ವಾದ ಮಾಡಿ ಹೊರಗಡೆ ಎಸಿಬಿ ಬೇಡ ಅಂತ ಹೇಳುತ್ತಾರೆ ಎಂದು ಬಿಜೆಪಿಯವರಿಗೆ ಟಾಂಗ್​ ಕೊಟ್ಟರು.

ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ