ಬಾದಾಮಿ: ಸಿದ್ದರಾಮಯ್ಯ ಅನುಪಸ್ಥಿತಿಯಲ್ಲಿ ಸ್ಪರ್ಧೆ ಹೇಗಿದೆ? ಈ ಬಾರಿಯಾದರೂ ಜೆಡಿಎಸ್ ಅಭ್ಯರ್ಥಿ ಹನುಮಂತ ಮಾವಿನಮರದ ಕೈಹಿಡಿಯುತ್ತಾರಾ ಜನ?

ಬಾದಾಮಿ 2007, 2009, 2019 ರಲ್ಲಿ ಪ್ರವಾಹಕ್ಕೆ ಸಿಲುಕಿದ ಕ್ಷೇತ್ರ. ಸಂತ್ರಸ್ತರು ಇಂದಿಗೂ ಬದುಕು ಕಟ್ಟಿಕೊಳ್ಳಲು ಪರದಾಡುತ್ತಿದ್ದಾರೆ. ಇದೇ ಹಿನ್ನೆಲೆ JDS ನ ಹನುಮಂತ ‌ಮಾವಿನಮರದ ಪ್ರವಾಹ ಸಂತ್ರಸ್ತರ ಮತಗಳನ್ನು ಟಾರ್ಗೆಟ್ ಮಾಡಿಕೊಂಡಿದ್ದಾರೆ. ಅವರ ಕಷ್ಟಕ್ಕೆ ಧ್ವನಿಯಾಗುವ ಭರವಸೆ ನೀಡುತ್ತಾ ಮತ ಯಾಚನೆ ಮಾಡುತ್ತಿದ್ದಾರೆ.

ಬಾದಾಮಿ: ಸಿದ್ದರಾಮಯ್ಯ ಅನುಪಸ್ಥಿತಿಯಲ್ಲಿ ಸ್ಪರ್ಧೆ ಹೇಗಿದೆ? ಈ ಬಾರಿಯಾದರೂ ಜೆಡಿಎಸ್ ಅಭ್ಯರ್ಥಿ ಹನುಮಂತ ಮಾವಿನಮರದ ಕೈಹಿಡಿಯುತ್ತಾರಾ ಜನ?
ಹನುಮಂತ ಮಾವಿನಮರದ, ಹೆಚ್ ಡಿ ಕುಮಾರಸ್ವಾಮಿ
Follow us
ಸಾಧು ಶ್ರೀನಾಥ್​
|

Updated on: Mar 07, 2023 | 10:24 AM

ಆ ಕ್ಷೇತ್ರದಲ್ಲಿ ಸದ್ಯ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಶಾಸಕ. ಕಳೆದ ಬಾರಿ ಬಿ. ಶ್ರೀರಾಮುಲು ಹಾಗೂ ಸಿದ್ದರಾಮಯ್ಯ ಮಧ್ಯೆ ನಡೆದಿದ್ದ ತುರುಸಿನ ಸ್ಪರ್ಧೆಯ ಮಧ್ಯೆ ಜೆಡಿಎಸ್ ಅಭ್ಯರ್ಥಿ ಕೂಡ ಎಲ್ಲರ ಗಮನ ಸೆಳೆದಿದ್ದರು. ಈ ಬಾರಿಯ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ (Karnataka Assembly Elections 2023) ಅದೇ ಅಭ್ಯರ್ಥಿ ಮತ್ತೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ‌. ಅದಕ್ಕಾಗಿ ಕ್ಷೇತ್ರದಲ್ಲಿ ಮೊದಲ ಹಂತದ ಪಾದಯಾತ್ರೆ ಮುಗಿಸಿದ್ದಾರೆ. ಸಮಾವೇಶಕ್ಕೆ ದಳಪತಿ ಹೆಚ್​ಡಿ ಕುಮಾರಸ್ವಾಮಿ ಅವರನ್ನೂ ಕರೆಸಿ ಮತಯಾಚನೆ ಮಾಡಿದ್ದಾರೆ. ಹಳ್ಳಿಯಲ್ಲಿ ಪಾದಯಾತ್ರೆ, ಜನರಿಂದ ಅದ್ದೂರಿ ಸ್ವಾಗತ, ಜೆಡಿಎಸ್ (JDS) ಗೆ ಬೆಂಬಲಿಸುವಂತೆ ಮನವಿ, ಕುಂಭ ಹೊತ್ತು ಹೊರಟಿರುವ ನೂರಾರು ಮಹಿಳೆಯರು. ಡೊಳ್ಳು ಕುಣಿತ, ಜೆಸಿಬಿ ಮೂಲಕ ಪುಷ್ಪವೃಷ್ಟಿ. ನಂತರ ಭವ್ಯ ವೇದಿಕೆಯಲ್ಲಿ ಸಮಾವೇಶ. ಈ ದೃಶ್ಯ ಕಂಡುಬಂದಿದ್ದು ಬಾಗಲಕೋಟೆ ಜಿಲ್ಲೆ ಬಾದಾಮಿ ಕ್ಷೇತ್ರದಲ್ಲಿ (Badami). ಹೌದು ಬಾದಾಮಿ ಕ್ಷೇತ್ರ ಅಂದರೆ ಎಲ್ಲರೂ ಒಂದು ಕ್ಷಣ ತಿರುಗಿ ನೋಡುವಂತಹ ಕ್ಷೇತ್ರ‌. ಯಾಕೆಂದರೆ ಇಲ್ಲಿನ ಶಾಸಕ ಮಾಜಿ ಸಿಎಂ ಸಿದ್ದರಾಮಯ್ಯ. ಕಳೆದ ಬಾರಿ ಬಿಜೆಪಿಯಿಂದ ಬಿ ಶ್ರೀರಾಮುಲು – ಸಿದ್ದರಾಮಯ್ಯ ವಿರುದ್ದ ತೊಡೆ ತಟ್ಟಿದ್ದರು. ಇಬ್ಬರ ಮಧ್ಯೆ ಜೆಡಿಎಸ್ ನಿಂದ ಹನುಮಂತ ಮಾವಿನಮರದ ಸಹ ಅಖಾಡದಲ್ಲಿದ್ದು ಗಮನ ಸೆಳೆದಿದ್ದರು.

ಇದೀಗ ಹನುಮಂತ ಮಾವಿನಮರದ ಮತ್ತೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಆರಂಭ ಮಾಡಿದ್ದಾರೆ. ಈಗಾಗಲೇ ಹನುಮಂತ ‌ಮಾವಿನಮರ ಅಭ್ಯರ್ಥಿ ಎಂದು ಹೆಚ್ ಡಿಕೆ ಘೋಷಣೆ ಮಾಡಿದ್ದು, ಮಾವಿನಮರದ ಕ್ಷೇತ್ರದಾದ್ಯಂತ ಓಡಾಡಿ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಕಳೆದ 15 ದಿನದಿಂದ ಕ್ಷೇತ್ರದ ಹಳ್ಳಿ ಹಳ್ಳಿಯಲ್ಲಿ ಪಾದಯಾತ್ರೆ ಜೊತೆಗೆ ಗ್ರಾಮ ವಾಸ್ತವ್ಯ ನಡೆಸಿದ್ದ ಹನುಮಂತ ಮಾವಿನಮರದ ಜೆಡಿಎಸ್ ಅನ್ನು ಬೆಂಬಲಿಸುವಂತೆ ಮನವಿ ಮಾಡುತ್ತಾ ಬಂದಿದ್ದಾರೆ.

ಎಲ್ಲ ಕಡೆ ಅಭೂತಪೂರ್ವ ಬೆಂಬಲ ಸಿಗುತ್ತಿದೆ. ಹೆಚ್ ಡಿ ಕುಮಾರಸ್ವಾಮಿ ಸಿಎಂ ಆದಾಗ ಮಾಡಿದ ಕಾರ್ಯಗಳು‌, ಪಂಚರತ್ನ ಯೋಜನೆಗಳನ್ನು ಜನರು ಒಪ್ಪಿಕೊಳ್ಳುತ್ತಿದ್ದಾರೆ‌. ಕ್ಷೇತ್ರದಲ್ಲಿ ಪ್ರವಾಹಪೀಡಿತ ಎಲ್ಲ ಹಳ್ಳಿಗಳಲ್ಲಿ ಪಾದಯಾತ್ರೆ ಮಾಡಿದ್ದೇನೆ. ಇನ್ನೂ ಏಳೆಂಟು ಗ್ರಾಮಗಳ ಸ್ಥಳಾಂತರವಾಗಬೇಕು, ಮೂಲಭೂತ ಸೌಲಭ್ಯ ಕಲ್ಪಿಸುವ ಕಾರ್ಯ ಮಾಡಿಲ್ಲ. ಈ ಬಾರಿ ಸಿದ್ದರಾಮಯ್ಯ ಆಗಲಿ ಯಾರೇ ಸ್ಪರ್ಧೆ ಮಾಡಿದರೂ ಜೆಡಿಎಸ್ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹೌದು ಬಾದಾಮಿ ಮಲಪ್ರಭಾ ನದಿ ಪ್ರವಾಹಕ್ಕೆ ನಲುಗಿದ ಗ್ರಾಮ. 2007, 2009, 2019 ರಲ್ಲಿ ಪ್ರವಾಹಕ್ಕೆ ಸಿಲುಕಿದ ಕ್ಷೇತ್ರ. ಆದರೆ ಸಂತ್ರಸ್ತರು ಇಂದಿಗೂ ಕೂಡ ಹೊಸ ಬದುಕು ಕಟ್ಟಿಕೊಳ್ಳಲು ಪರದಾಡುತ್ತಿದ್ದಾರೆ. ಇದೇ ಹಿನ್ನೆಲೆ ಹನುಮಂತ ‌ಮಾವಿನಮರದ ಪ್ರವಾಹ ಸಂತ್ರಸ್ತರ ಮತಗಳನ್ನು ಟಾರ್ಗೆಟ್ ಮಾಡಿಕೊಂಡಿದ್ದಾರೆ. ಅವರ ಕಷ್ಟಕ್ಕೆ ಧ್ವನಿಯಾಗುವ ಭರವಸೆ ನೀಡುತ್ತಾ ಮತ ಯಾಚನೆ ಮಾಡುತ್ತಿದ್ದಾರೆ. 40 ಪ್ರವಾಹ ಪೀಡಿತ ಹಳ್ಳಿಗಳಲ್ಲಿ ಸಂಚಾರ ಮಾಡಿ ಸಮಸ್ಯೆ ಆಲಿಸಿದ್ದಾರೆ. ನಿರಂತರ 10 ದಿನಗಳ ಕಾಲ ಪಾದಯಾತ್ರೆ, ಗ್ರಾಮ ವಾಸ್ತವ್ಯ ಮಾಡಿದ ಹನುಮಂತ ಮಾವಿನಮರದ ಸೋಮವಾರ ಪಾದಯಾತ್ರೆ ಗ್ರಾಮ ವಾಸ್ತವ್ಯ ಕೊನೆ ದಿನ ಸಮಾವೇಶ ನಡೆಸಿದರು.

ಕುಳಗೇರಿ ಕ್ರಾಸ್ ನಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ಜೆ ಡಿ ಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಭಾಗಿಯಾಗಿದ್ರು. ಇದೆ ವೇಳೆ ಮಾತಾಡಿದ ಹೆಚ್ ಡಿಕೆ ಹಾಗೂ ಸಿಎಂ ಇಬ್ರಾಹಿಂ, ಸಿದ್ದರಾಮಯ್ಯ ಹಾಗೂ ರಾಜ್ಯ ಸರಕಾರ ಮಾಡಾಳು ವಿರೂಪಾಕ್ಷಪ್ಪ ಮಗನ ಮೇಲೆ ಲೋಕಾಯುಕ್ತ ಉದಾಹರಣೆ ನೀಡಿ ತರಾಟೆಗೆ ತೆಗೆದುಕೊಂಡರು.

ಬಾದಾಮಿಯಲ್ಲಿ ಸಮಸ್ಯೆ ಬಹಳ ಇವೆ. ಅದಕ್ಕೇ ಸಿದ್ದರಾಮಣ್ಣ ಯಾಕೆ ಕ್ಷೇತ್ರದಲ್ಲೇ ಇರಲಿಕ್ಕೆ ಒಲ್ಲೆ ಅಂತಾನಾ ಅಂತ ಗೊತ್ತಾಗಿದೆ. ಸಿದ್ದರಾಮಯ್ಯ ಹೆಲಿಕಾಪ್ಟರನ್ಯಾಗ ಬರೋದು, ಶೆಟ್ಟಿ ಮನ್ಯಾಗ ಇರೋದು, ವಾಪಾಸು ಹೋಗೂದು… ಸಿದ್ದರಾಮಯ್ಯ ಮಾಡಿದ್ದೇ ಇಷ್ಟೇ. ಕಾಂಗ್ರೆಸ್ ನವರು ಮನ್ಯಾಗ ಜಗಳ ಹಚ್ಚುವ ಗೃಹಲಕ್ಷ್ಮೀ ಕಾರ್ಯಕ್ರಮ ಮಾಡಿದ್ದಾರೆ. ಮಾಡಾಳ್ ಮಗನ ಹತ್ತಿರ 8 ಕೋಟಿ ಇದೆ.

ಇನ್ನು ಶಾಸಕನ ಮನ್ಯಾಗೇ ಎಷ್ಟಿರಬೇಕು? ಮುಂಡೇವ್ ಎಲ್ಲ ರೊಕ್ಕಾ ಹಾಕೋಂತ ಕುಂತಾವ್. ದೇವೇಗೌಡರಿಗೆ ನಾಲ್ಕು ಪಂಚೆ, ಧೋತರ್ ಬಿಟ್ಟರೆ ಏನೂ ಇಲ್ಲ. ಸಿದ್ದುಗೆ ನಿದ್ದೆ ಚಿಂತೆಯಾದ್ರೆ, ಕುಮಾರಣ್ಣನಿಗೆ ರೈತರ ಚಿಂತೆ ಇದೆ ಎಂದಿದ್ದಾರೆ ಸಿಎಂ ಇಬ್ರಾಹಿಂ. ಮಾಡಾಳು ಮನೆಯಲ್ಲಿ ಕೋಟಿ ಕೋಟಿ ಹಣ ಯಾರದ್ದು? ಅದು ನಿಮ್ಮ ಹಣ, ಯಾವುದೇ ಆಮಿಷಕ್ಕೆ ಬಲಿಯಾಗಬೇಡಿ. ಜೆಡಿಎಸ್ ಗೆ ಆಶೀರ್ವದಿಸಿ ಎಂದು ಕೈ ಮುಗಿದು ಹೆಚ್ ಡಿ ಕೆ ಮನವಿ ಮಾಡಿದರು.

ಒಟ್ಟಿನಲ್ಲಿ ಒಂದು ಕಡೆ ಸಿದ್ದರಾಮಯ್ಯ ಪುನಃ ಬಾದಾಮಿಯಲ್ಲಿ ಸ್ಪರ್ಧೆ ಮಾಡಲಿ ಎಂದು ಅವರ ಅಭಿಮಾನಿಗಳು ಒತ್ತಾಯ ಮಾಡುತ್ತಿದ್ದಾರೆ. ಇನ್ನೊಂದು ಕಡೆ ಬಿಜೆಪಿ ಟಿಕೆಟ್ ಫೈನಲ್ ಆಗಿಲ್ಲ. ಈ ಮಧ್ಯೆ ಜೆಡಿಎಸ್ ಅಭ್ಯರ್ಥಿ ಮಾತ್ರ ಭರ್ಜರಿ ಪ್ರಚಾರ ಆರಂಭಿಸಿದ್ದು, ಮತದಾರ ಯಾರ ಕೈ ಹಿಡಿಯುತ್ತಾರೊ ಕಾದು ನೋಡಬೇಕಿದೆ.

ವರದಿ: ರವಿ ಮೂಕಿ, ಟಿವಿ9, ಬಾಗಲಕೋಟೆ

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ