ಬೆಂಗಳೂರು, ಅಕ್ಟೋಬರ್ 16: ಬೆಂಗಳೂರಿನಲ್ಲಿ ಐಟಿ ದಾಳಿ (IT Raid) ವೇಳೆ ಕೋಟ್ಯಂತರ ಹಣ ಪತ್ತೆ ವಿಚಾರವಾಗಿ ಬಿಜೆಪಿ ನಾಯಕ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಕಾಂಗ್ರೆಸ್ ಸರ್ಕಾರದ (Congress Government) ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಹಣ ಸಂಗ್ರಹಿಸಿ ಪಂಚರಾಜ್ಯಗಳಿಗೆ ಕಳುಹಿಸುತ್ತಿರುವುದು ಜನರಿಗೆ ಗೊತ್ತಿದೆ. ಕಾಂಗ್ರೆಸ್ಸಿಗರು ಐಟಿ ದಾಳಿ ರಾಜಕೀಯ ಪ್ರೇರಿತ ಎಂದು ಆರೋಪಿಸುತ್ತಿದ್ದಾರೆ. ಈ ಹಣ ಕಾಂಗ್ರೆಸ್ಗೆ ಸೇರಿದೆ ಅಂತ ಅವರೇ ಒಪ್ಪಿಕೊಂಡಿದ್ದಾರೆ. ಇದು ಲೂಟಿ ಸರ್ಕಾರ, ಎಟಿಎಂ ಸರ್ಕಾರ ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್ನವರು ಲೂಟಿ ಮೂಲಕ ಬೇರೆ ರಾಜ್ಯಗಳಲ್ಲಿ ಚುನಾವಣೆ ಗೆಲ್ಲಲು ಹೊರಟಿದ್ದಾರೆ ಎಂದು ಅವರು ಟೀಕಿಸಿದ್ದಾರೆ.
ಕಳೆದ 5 ದಿನಗಳಲ್ಲಿ ದೇಶಾದ್ಯಂತ ಐಟಿ ಅಧಿಕಾರಿಗಳು ಭರ್ಜರಿ ಬೇಟೆಯಾಡಿದ್ದಾರೆ. 55 ಕಡೆ ನಡೆದ ಐಟಿ ಅಧಿಕಾರಿಗಳ ದಾಳಿಯಲ್ಲಿ ಬರೋಬ್ಬರಿ 94 ಕೋಟಿಗೂ ಅಧಿಕ ಹಣವನ್ನ ಸೀಜ್ ಮಾಡಲಾಗಿದೆ. ಇದರಲ್ಲಿ ಕರ್ನಾಟಕದ ಲೆಕ್ಕವೂ ಹೊರಬಿದ್ದಿತ್ತು.
ಬೆಂಗಳೂರಿನಲ್ಲಿ ಭರ್ಜರಿ ರೇಡ್ ನಡೆಸಿದ್ದ ಐಟಿ ಅಧಿಕಾರಿಗಳು ಗುತ್ತಿಗೆದಾರ ಅಂಬಿಕಾಪತಿ ಪುತ್ರನ ಮನೆಯಲ್ಲಿ 40 ಕೋಟಿಗೂ ಹೆಚ್ಚು ಹಣವನ್ನ ಸೀಜ್ ಮಾಡಿದ್ದರು. ಮಂಚದ ಕೆಳಗೆ 40 ಕೋಟಿ ರೂಪಾಯಿ ಪತ್ತೆಯಾಗಿದ್ದು, ಬಾಕ್ಸ್‌ಗಳಲ್ಲಿ ಹಣ ತುಂಬಿಕೊಂಡು ಹೋಗಿದ್ದ ಐಟಿ ಅಧಿಕಾರಿಗಳು ಅಂಬಿಕಾಪತಿಗೆ ಶಾಕ್ ನೀಡಿದ್ದರು.
ಇದಾದ ಬಳಿಕ ಬಿಲ್ಡರ್ ಸಂತೋಷ್ ಅನ್ನೋರಿಗೂ ಐಟಿ ಟೀಮ್ ಶಾಕ್ ನೀಡಿತ್ತು. ಬೆಂಗಳೂರಿನ ರಾಜಾಜಿನಗರದ ಅಪಾರ್ಟ್ಮೆಂಟ್ನಲ್ಲಿರೋ ಸಂತೋಷ್ಗೆ ಸೇರಿದ ಫ್ಲ್ಯಾಟ್ಮೇಲೆ ದಾಳಿ ಮಾಡಿದ್ರು. ಇದೇ ವೇಳೆ ಪತ್ತೆಯಾದ 40 ಕೋಟಿಗೂ ಅಧಿಕ ಹಣ ಹಣವನ್ನ ಜಪ್ತಿ ಮಾಡಿ, ಮೂರು ಟ್ರಂಕ್ಗಳು, ಎರಡು ದೊಡ್ಡ ದೊಡ್ಡ ಬ್ಯಾಗ್ಗಳು, ಒಂದು ಬಾಕ್ಸ್, ಸಾಲದ್ದಕ್ಕೆ ಒಂದು ದೊಡ್ಡ ಸೂಟ್ಕೇಸ್ ಮೂಲಕ ಹಣವನ್ನ ಒಯ್ದಿದ್ದರು. ಬೆಳಗಾಗುತ್ತಿದ್ದಂತೆ, ಈ ದಾಳಿಗೆ, ದಾಳಿಯಲ್ಲಿ ಪತ್ತೆಯಾದ ಹಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿತ್ತು.
ಇದನ್ನೂ ಓದಿ: ಸತೀಶ್ ಜಾರಕಿಹೊಳಿ ಅಸಮಾಧಾನಕ್ಕೆ ಕಾರಣವೇನು? ಮುನಿಸು ತಣಿಸಿದ್ರಾ ಕೆಸಿ ವೇಣುಗೋಪಾಲ್?
ಇದರ ಬೆನ್ನಲ್ಲೇ ಐಟಿ ದಾಳಿ ರಾಜಕೀಯ ಆಯಾಮ ಪಡೆದುಕೊಂಡಿತ್ತು. ಐಟಿ ದಾಳಿ ರಾಜಕೀಯ ಪ್ರೇರಿತ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದರೆ, ಪಂಚರಾಜ್ಯ ಚುನಾವಣೆಗೆ ಕರ್ನಾಟಕವನ್ನು ಕಾಂಗ್ರೆಸ್ ಎಟಿಎಂ ಆಗಿ ಮಾಡಿಕೊಂಡಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ