ನಮ್ಮದೇ ಒರಿಜಿನಲ್ ಜೆಡಿಎಸ್: ಇಬ್ರಾಹಿಂ ಈ ಹೇಳಿಕೆ ಹಿಂದೆ ಇದ್ಯಾ ಅವರ ಕೈವಾಡ? ಜಿಟಿ ದೇವೇಗೌಡ ಬಾಂಬ್

ಬಿಜೆಪಿ-ದಳದ ಮೈತ್ರಿಯಿಂದ ಮುನಿಸಿಕೊಂಡಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಇದೀಗ ಹೊಸದೊಂದು ದಾಳ ಉರುಳಿಸಿದ್ದಾರೆ.ಸಿಎಂ ಇಬ್ರಾಹಿಂ ಜೆಡಿಎಸ್‌ನಿಂದ ಈಗಾಗಲೇ ಒಂದು ಕಾಲು ಹೊರಗಿಟ್ಟಿದ್ದು, ಯಾವುದೇ ಸಂದರ್ಭದಲ್ಲಿ ಪಕ್ಷ ತೊರೆಯಬಹುದು ಎನ್ನಲಾಗಿತ್ತು. ಅದ್ರೀಗ ಸಿಎಂ ಇಬ್ರಾಹಿಂ ಶುರುಮಾಡಿರುವ ಹೊಸ ಆಟ ದಳಪತಿಗಳಿಗೆ ಸವಾಲ್ ಎಸೆದಿದೆ. ಇನ್ನು ಇದಕ್ಕೆ ಪ್ರತಿಕ್ರಿಯಿಸಿರುವ ಜೆಡಿಎಸ್​ ಕೋರ್ ಕಮಿಟಿ ಅಧ್ಯಕ್ಷ ಜಿಟಿ ದೇವೇಗೌಡ ಹೊಸ ಬಾಂಬ್ ಸಿಡಿಸಿದ್ದಾರೆ.

ನಮ್ಮದೇ ಒರಿಜಿನಲ್ ಜೆಡಿಎಸ್: ಇಬ್ರಾಹಿಂ ಈ ಹೇಳಿಕೆ ಹಿಂದೆ ಇದ್ಯಾ ಅವರ ಕೈವಾಡ? ಜಿಟಿ ದೇವೇಗೌಡ ಬಾಂಬ್
Follow us
| Updated By: ರಮೇಶ್ ಬಿ. ಜವಳಗೇರಾ

Updated on: Oct 17, 2023 | 1:18 PM

ಬೆಂಗಳೂರು, (ಅಕ್ಟೋಬರ್ 17): ನಮ್ಮದೇ ಒರಿಜಿನಲ್ ಜೆಡಿಎಸ್(JDS), ಬಿಜೆಪಿಗೆ (BJP)ಬೆಂಬಲ ಇಲ್ಲ.ನಾನೇ ರಾಜ್ಯಾಧ್ಯಕ್ಷ.. ನಾನೇಕೆ ಪಕ್ಷ ಬಿಡಲಿ ಎಂದು ಹೇಳಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ (CM Ibrahim) ಅವರು ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಅದರಲ್ಲೂ ಜೆಡಿಎಸ್​ನಲ್ಲಿ ಕಂಪನ ಸೃಷ್ಟಿಸಿದೆ. ಇನ್ನು ಈ ಬಗ್ಗೆ ಕೆಲ ಜೆಡಿಎಸ್ ಶಾಸಕರು ಗರಂ ಆಗಿದ್ದು, ಇಬ್ರಾಹಿಂ ವಿರುದ್ಧ ಮುಗಿಬಿದ್ದಿದ್ದಾರೆ. ಅದರಲ್ಲೂ ಜಿಟಿ ದೇವೇಗೌಡ ಅವರು ಮಾತನಾಡಿ ಇಬ್ರಾಹಿಂ ಬಂಡಾಯದ ಹಿಂದೆ ಕಾಂಗ್ರೆಸ್​ನ ಕೈವಾಡ ಇದೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

ಬೆಂಗಳೂರಿನಲ್ಲಿ ಇಂದು(ಅಕ್ಟೋಬರ್ 17) ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿಟಿ ದೇವೇಗೌಡ, ಇಬ್ರಾಹಿಂ ಬಂಡಾಯದ ಹಿಂದೆ ಕಾಂಗ್ರೆಸ್​ನ ಕೈವಾಡ ಇದೆ. ಚುನಾವಣೆಯೊಳಗೆ ಜೆಡಿಎಸ್ ಮುಗಿಸಲು ಹೋರಾಟ ಮಾಡುತ್ತಿದೆ, ಸಿ.ಎಂ.ಇಬ್ರಾಹಿಂ ಕಾಂಗ್ರೆಸ್ ಮಾತು ಕೇಳಿ ನೀವು ದುಡುಕಬೇಡಿ. ನಿಮ್ಮ ಜೊತೆ ಜೆಡಿಎಸ್ ವರಿಷ್ಠರು ಇದ್ದಾರೆ ಎಂದು ಕಿವಿ ಮಾತು ಹೇಳಿದರು.

ಇನ್ನು ರಾಜ್ಯದಲ್ಲಿ ಮತ್ತೆ ಜೆಡಿಎಸ್ ಪಕ್ಷ ಇಬ್ಭಾಗವಾಗುವ ಬಗ್ಗೆ ಮಾತನಾಡಿದ ಜಟಿಡಿ, ಜೆಡಿಎಸ್ ಪಕ್ಷ ಇಬ್ಭಾಗವಾಗುವ ಸನ್ನಿವೇಶ ಈಗ ಉದ್ಭವ ಆಗಲ್ಲ. ಜೆಡಿಎಸ್ ರಾಜ್ಯದಲ್ಲಿರುವ ಪ್ರಾದೇಶಿಕ ಪಕ್ಷ. ಈ ಪಕ್ಷ ಗಟ್ಟಿಯಾಗಿ ನಿಲ್ಲುತ್ತೆ. ಸಿ.ಎಂ. ಇಬ್ರಾಹಿಂ ಅವರ ಜೊತೆ ಮಾತನಾಡಬೇಕು ಎಂದು ತೀರ್ಮಾನ ಮಾಡಿದ್ದೇವೆ ಎಂದು ಹೇಳಿದರು. ಈ ,ಮೂಲಕ ಪರೋಕಷವಾಗಿ ಇಬ್ರಾಹಿಂ ಅವರನ್ನು ಮನವೊಲಿಸುವ ಪ್ರಯತ್ನ ಮಾಡುತ್ತೇವೆ ಎನ್ನುವ ಅರ್ಥದಲ್ಲಿ ಹೇಳಿದರು.

ಮಾಜಿ ಸಿಎಂ ಕುಮಾರಸ್ವಾಮಿ ಉಚ್ಚಾಟನೆ ಪ್ರಸ್ತಾಪದ ಬಗ್ಗೆ ಮಾತನಾಡಿ, ಸಿಎಂ ಇಬ್ರಾಹಿಂ ಅಧ್ಯಕ್ಷ ಮಾಡಿದ್ದು ಯಾರು? ರಾಷ್ಟ್ರೀಯ ಅಧ್ಯಕ್ಷರು ದೇವೇಗೌಡರು. ಅಲ್ಪಸಂಖ್ಯಾತ ನಾಯಕ ಬೇಕು ಎಂದು ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದಾರೆ. ನಾವು ಪಾಲುದಾರಿಕೆ ಬಗ್ಗೆ ಇನ್ನು ನಿರ್ಣಯವಾಗಿಲ್ಲ. ಸೀಟು ಹಂಚಿಕೆ ಬಗ್ಗೆ ನಿರ್ಣಯ ಆಗಿಲ್ಲ. ಅವರಿಗೆ(ಇಬ್ರಾಹಿಂ) ಒಂದು ಸಿಟ್ಟು ಇದ್ದು, ಆ ಒಂದು ಸಿಟ್ಟಿಗೆ ಈ ರೀತಿ ಮಾಡಿದ್ದಾರೆ. ದೆಹಲಿಗೆ ನನ್ನ ಕರೆಯಲಿಲ್ಲ ಎಂದು ಈ ರೀತಿ ಮಾತನಾಡುತ್ತಿದ್ದಾರೆ. ರಾಷ್ಟ್ರೀಯ ಅಧ್ಯಕ್ಷರು ಕರೆದು ಮಾತಾಡ್ತಾರೆ. ಅವರಿಗೆ ಅನುಭವ ಇದೆ ಹಿರಿಯರು ಇದ್ದಾರೆ. ತಪ್ಪು ದಾರಿ ಹಿಡಿಯಲ್ಲ ಎಂಬ ನಂಬಿಕೆ ಇದೆ ಎಂದರು.

ಎಲ್ಲ ಕಾರ್ಯಕರ್ತರು, ಶಾಸಕರ ಸಭೆ ಕರೆದಾಗ ಇಬ್ರಾಹಿಂ ಇದ್ದರು. ಏನೇ ತೀರ್ಮಾನ ತೆಗೆದುಕೊಂಡರೂ ನಾವು ನಿಮ್ಮ ಜೊತೆ ಇರುತ್ತೇವೆ ಎಂದು ಅಧ್ಯಕ್ಷರು ಹೇಳಿದ್ದರು. ಅಧಿಕಾರ ಶಾಶ್ವತವಾಗಿ ಇರಬೇಕು. ಅಧಿಕಾರ ಹಂಚಿಕೆ ವಿಚಾರದಲ್ಲಿ ಸರಿಯಾಗಿ ತೀರ್ಮಾನ ಮಾಡಿ ಎಂದು ಸಲಹೆ ನೀಡಿದ್ದಾರೆ. ಅವರ ಜೊತೆ ಮಾತನಾಡುತ್ತೇನೆ ಎಂದು ದೇವೇಗೌಡ್ರು ಸಹ ಹೇಳಿದ್ದಾರೆ ಇಬ್ರಾಹಿಂ ಪೋನ್ ಮಾಡಿ 16ರ ಸಭೆ ಬಳಿಕೆ ಭೇಟಿ ಮಾಡುತ್ತೇನೆ ಎಂದು ಹೇಳಿದ್ದರು. ಅಭಿಮಾನಿಗಳು ಒತ್ತಡಕ್ಕೆ ಮಣಿದು ಸಭೆ ಮಾಡಿದ್ದಾರೆ ಮಹಿಮಾ ಪಟೇಲ್ ,ನಾಡಗೌಡ ಇದ್ದರು. ನಮ್ಮ ಪಕ್ಷಕ್ಕೆ ಬರಲಿ ನಮಗೆ ಧ್ವನಿ ಬರುತ್ತೆ ಎಂದು ಹೇಳಿ ಬಂದಿದ್ದಾರೆ. ಶಾಸಕರು, ಪದಾಧಿಕಾರಿಗಳು ಯಾರು ಸಭೆಗೆ ಹೋಗಿಲ್ಲ. ಆದರೂ ಸಹ ನಾನೇ ಮಾತಾಡುತ್ತೇನೆ ನೀವು ಯಾರು ತಲೆಕಡಿಸಿಕೊಳ್ಳಬೇಡಿ ಎಂದು ದೇವೇಗೌಡ್ರು ಹೇಳಿದ್ದಾರೆ ಎಂದು ಸ್ಪಷ್ಟಪಡಿಸಿದರು.