ಸ್ಟಾಲಿನ್ ವಿರುದ್ಧ ಟೀಕೆ ಮಾಡಲಾಗದೆ ನಮ್ಮ ವಿರುದ್ಧ ಟೀಕೆ; ಸಿದ್ದರಾಮಯ್ಯ ವಿರುದ್ಧ ಆರ್ ಅಶೋಕ ವಾಗ್ದಾಳಿ

R Ashoka reaction to Siddaramaiah; ತಮಿಳುನಾಡನ್ನು ಎದುರುಹಾಕಿಕೊಳ್ಳುವ ಧೈರ್ಯ ಕಾಂಗ್ರೆಸ್​​ಗೆ ಇಲ್ಲ. ತಮಿಳುನಾಡು ಸಿಎಂ ವಿರುದ್ಧ ಒಂದು ಹೇಳಿಕೆಯನ್ನೂ ಸಹ ಕೊಡುತ್ತಿಲ್ಲ. ಅವರ ವಿರುದ್ಧ ಹೇಳಿಕೆ‌ ನೀಡದೇ ನಮ್ಮ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಟಾಲಿನ್ ವಿರುದ್ಧ ಟೀಕೆ ಮಾಡಲಾಗದೆ ನಮ್ಮ ವಿರುದ್ಧ ಟೀಕೆ; ಸಿದ್ದರಾಮಯ್ಯ ವಿರುದ್ಧ ಆರ್ ಅಶೋಕ ವಾಗ್ದಾಳಿ
ಆರ್ ಅಶೋಕ ಮತ್ತು ಸಿದ್ದರಾಮಯ್ಯ
Updated By: Ganapathi Sharma

Updated on: Sep 11, 2023 | 3:52 PM

ಮೈಸೂರು, ಸೆಪ್ಟೆಂಬರ್ 11: ಕೆಆರ್​ಎಸ್ ಡ್ಯಾಮ್​ನಿಂದ ನೀರು ಬಿಡುಗಡೆ ವಿಚಾರವಾಗಿ ತಮಿಳುನಾಡಿನ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರನ್ನು ಟೀಕಿಸಲಾಗಿದೆ ನಮ್ಮ ವಿರುದ್ಧ ಟೀಕೆ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹಾಗೂ ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿ ನಾಯಕ ಆರ್ ಅಶೋಕ (R Ashoka) ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಕೇಂದ್ರದ ಬಳಿ ನಿಯೋಗ ಕರೆದೊಯ್ಯುವ ಬಗ್ಗೆ ನಮ್ಮ ಬಳಿ ಚರ್ಚಿಸಿಯೂ ಇಲ್ಲ ನಮ್ಮನ್ನು ಕರದೇ ಇಲ್ಲ. ಬಿಎಸ್ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಯಾರನ್ನೂ ಕೂಡ ಕಾಂಗ್ರೆಸ್ ಕರೆದಿಲ್ಲ. ಸ್ಟಾಲಿನ್​ಗೆ ಬೈಯೋಕೆ ಆಗದೆ‌ ನಮ್ಮ ವಿರುದ್ಧ ಟೀಕೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಸರ್ವಪಕ್ಷ ಸಭೆಯಲ್ಲಿ ನೀರು ಬಿಡುವುದಿಲ್ಲ ಅಂದಿದ್ದರು. ಆದರೆ ನೀರು ಬಿಟ್ಟಿದ್ದಾರೆ‌. ರಾಜ್ಯ ಸರ್ಕಾರ ಕೊಟ್ಟ ಮಾತಿನಂತೆ ನಡೆಯಲಿಲ್ಲ. ಪ್ರಾಧಿಕಾರದಲ್ಲಿಯೂ ವಾದ ಮಾಡುವುದರಲ್ಲಿ ಸರ್ಕಾರ ವಿಫಲವಾಗಿದೆ. ನೀರು ಬಿಡುವ ಸಂದರ್ಭದಲ್ಲಿ ಸರ್ವಪಕ್ಷದ ಸದಸ್ಯರಿಗೆ ಹೇಳಬೇಕಿತ್ತು. ಒಂದು ಹನಿ ನೀರು ಬಿಡುವುದಿಲ್ಲ ಅಂತ ಹೇಳಿ ನೀರನ್ನು ಬಿಟ್ಟಿದ್ದಾರೆ. ಈ ಮೂಲಕ ರಾಜ್ಯದ ರೈತರಿಗೆ ಕಾಂಗ್ರೆಸ್ ಸರ್ಕಾರ ಮೋಸ ಮಾಡಿದೆ ಎಂದು ಅಶೋಕ್ ಟೀಕಿಸಿದ್ದಾರೆ.

ತಮಿಳುನಾಡನ್ನು ಎದುರುಹಾಕಿಕೊಳ್ಳುವ ಧೈರ್ಯ ಕಾಂಗ್ರೆಸ್​​ಗೆ ಇಲ್ಲ. ತಮಿಳುನಾಡು ಸಿಎಂ ವಿರುದ್ಧ ಒಂದು ಹೇಳಿಕೆಯನ್ನೂ ಸಹ ಕೊಡುತ್ತಿಲ್ಲ. ಅವರ ವಿರುದ್ಧ ಹೇಳಿಕೆ‌ ನೀಡದೇ ನಮ್ಮ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮಂಡ್ಯ; ಬೆಂಗಳೂರು ಮೈಸೂರು ಹೆದ್ದಾರಿ ಬಂದ್ ಹಿಂಪಡೆದ ರೈತ ಸಂಘ

ಜೆಡಿಎಸ್​, ಬಿಜೆಪಿ ಮೈತ್ರಿಗೆ ಕಾಂಗ್ರೆಸ್ ನಾಯಕರ​ ಟೀಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈ‌ ಹಿಂದೆ ಕಾಂಗ್ರೆಸ್​​ನವರು ಕೂಡ ಹೊಂದಾಣಿಕೆ ಮಾಡಿಕೊಂಡಿದ್ದರು. ಸಿದ್ದರಾಮಯ್ಯ ಕಾಲದಲ್ಲೂ ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡಿದ್ದರು. ಇವರ ಜೊತೆ ಮೈತ್ರಿ ಮಾಡಿಕೊಂಡಾಗ ಜನತಾದಳ ಒಳ್ಳೆಯದು. ನಮ್ಮ ಜತೆ ಮಾಡಿಕೊಂಡಾಗ ಒಳ್ಳೆಯದಲ್ಲ. ಕಾಂಗ್ರೆಸ್​ನವರದ್ದು ಡಬಲ್ ಸ್ಟ್ಯಾಂಡರ್ಡ್. ಇವರ ಯೋಗ್ಯತೆಗೆ ಕಳೆದ ಬಾರಿ ಗೆದ್ದಿದ್ದು ಒಂದು ಸ್ಥಾನ ಅಷ್ಟೇ. ಹೊಂದಾಣಿಕೆಯಾದ್ರೆ‌ ಕಾಂಗ್ರೆಸ್ ಒಂದು ಸ್ಥಾನವನ್ನೂ ಗೆಲ್ಲಲ್ಲ ಎಂದು ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:31 pm, Mon, 11 September 23