ಮಾಜಿ ಶಿಷ್ಯನಿಗೆ ಚಿಲ್ಲರೆ ಎಂದ ಸಿದ್ದರಾಮಯ್ಯ: 24 ಗಂಟೆ ಒಳಗಾಗಿ ಪದ ಹಿಂಪಡೆಯುವಂತೆ ಗಡುವು ನೀಡಿದ ವರ್ತೂರ್​ ಪ್ರಕಾಶ್​

| Updated By: ವಿವೇಕ ಬಿರಾದಾರ

Updated on: Feb 13, 2023 | 7:08 AM

ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಬರಿಗೈಯಲ್ಲಿ ಬಂದಿದ್ದ ಸಿದ್ದರಾಮಯ್ಯ ಅವರಿಗೆ ಚಾಮುಂಡೇಶ್ವರಿಯಿಂದ ರಾಜಕೀಯ ಪುನರ್ಜನ್ಮ ಪಡೆಯಲು ಇದೇ ವರ್ತೂರು‌ ಪ್ರಕಾಶ್ ಬೇಕಿತ್ತು ಅಲ್ಲವೆ ? ಅಂದು ನಾನು ಇಲ್ಲದಿದ್ದರೆ ನೀವು ಇಂದು ಚಿಲ್ಲರೆ ಆಗಿರಬೇಕಿತ್ತು ಎಂದು ವರ್ತೂರ್​ ಪ್ರಕಾಶ್​ ಟ್ವೀಟ್​ ಮಾಡಿದ್ದಾರೆ.

ಮಾಜಿ ಶಿಷ್ಯನಿಗೆ ಚಿಲ್ಲರೆ ಎಂದ ಸಿದ್ದರಾಮಯ್ಯ: 24 ಗಂಟೆ ಒಳಗಾಗಿ ಪದ ಹಿಂಪಡೆಯುವಂತೆ ಗಡುವು ನೀಡಿದ ವರ್ತೂರ್​ ಪ್ರಕಾಶ್​
ವರ್ತೂರ್​ ಪ್ರಕಾಶ್​ (ಎಡಚಿತ್ರ) ಸಿದ್ದರಾಮಯ್ಯ (ಬಲಚಿತ್ರ)
Follow us on

ಕೋಲಾರ: ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಮತ್ತು ಕೋಲಾರ (Kolar) ಬಿಜೆಪಿ (BJP) ಟಿಕೆಟ್​ ಆಕಾಂಕ್ಷಿ ವರ್ತೂರ್​ ಪ್ರಕಾಶ (Varthur Prakash) ಮಧ್ಯೆ ಜಟಾಪಟಿ ಶುರುವಾಗಿದೆ. ವರ್ತೂರ್​ ಪ್ರಕಾಶ್ ಒಂದು ಕಾಲದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶಿಷ್ಯ ಎಂದು ಗುರುತಿಸಿಕೊಂಡಿದ್ದರು. ಆದರೆ ಈಗ ನಾನು ಶಿಷ್ಯನಾಗಿರಲಿಲ್ಲ, ಕಾಂಗ್ರೆಸ್​ ನಾಯಕ ಸಿದ್ದರಾಮಯ್ಯಗೆ ರಾಜಕೀಯ ಪುನರ್ಜನ್ಮ ನೀಡಿದ್ದೇ ನಾನು ಎಂದು ಹೇಳುತ್ತಿದ್ದಾರೆ. ಇನ್ನು ಕೋಲಾರ ಡಿಸಿಸಿ ಬ್ಯಾಂಕ್​ ಹಗರಣಕ್ಕೆ ಕಾರಣಿಕರ್ತನೇ ಸಿದ್ದರಾಮಯ್ಯ ಎಂದು ಮಾಜಿ ಶಿಷ್ಯ ವರ್ತೂರ್​ ಆರೋಪ ಮಾಡಿದ್ದರು. ಇದಕ್ಕೆ ನಿನ್ನೆ(ಫೆ.12) ಪ್ರತಿಕ್ರಿಯಿಸಿದ್ದ ಸಿದ್ದರಾಮಯ್ಯ ನಾನು ಚಿಲ್ಲರೆಗಳ ಮಾತಿಗೆ ಪ್ರತಿಕ್ರಿಯಿಸಲ್ಲ ಎಂದಿದ್ದಾರೆ. ಇದಕ್ಕೆ ಮಿರಿ ಮಿರಿ ಕೆಂಡಾಮಂಡಲವಾದ ವರ್ತೂರು 24 ಗಂಟೆಯ ಒಳಗಾಗಿ ಈ ಪದವನ್ನು ವಾಪಸ್​ ಪಡೆಯಬೇಕು, ಇಲ್ಲವಾದರೇ ನೀವಾಡಿದ ಮಾತಿಗೆ ಇಂದು (ಫೆ.13) ಕೋಲಾರದಲ್ಲಿ ತಕ್ಕ ಉತ್ತರ ನೀಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಟ್ವೀಟ್​ ಮಾಡಿದ ವರ್ತೂರ್​ ಪ್ರಕಾಶ್​ ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಬರಿಗೈಯಲ್ಲಿ ಬಂದಿದ್ದ ಸಿದ್ದರಾಮಯ್ಯ ಅವರಿಗೆ ಚಾಮುಂಡೇಶ್ವರಿಯಿಂದ ರಾಜಕೀಯ ಪುನರ್ಜನ್ಮ ಪಡೆಯಲು ಇದೇ ವರ್ತೂರು‌ ಪ್ರಕಾಶ್ ಬೇಕಿತ್ತು ಅಲ್ಲವೆ ? ಅಂದು ನಾನು ಇಲ್ಲದಿದ್ದರೆ ನೀವು ಇಂದು ಚಿಲ್ಲರೆ ಆಗಿರಬೇಕಿತ್ತು ಎಂದು ಟ್ವೀಟ್​ ಮಾಡಿದ್ದಾರೆ.

ಬಹಳ ನೋವಿನ ಸಂಗತಿ ಇದು, 2006 ರಲ್ಲಿ ಸಿದ್ದರಾಮಯ್ಯ ಅವರಿಗೆ ಪುನರ್ಜನ್ಮ ಕೊಟ್ಟಾಗ, ಅವತ್ತು ನಾನು ಚಿಲ್ಲರೆ ಆಗಿರಲಿಲ್ಲ. ನಾನು ಮಾಡಿದ ಅಬ್ಬರದ ಪ್ರಚಾರಕ್ಕೆ ಕುಮಾರಸ್ವಾಮಿ ಅವರೇ ವರ್ತೂರ್ ಪ್ರಕಾಶ್ ಯಾರೆಂದು, ನಮ್ಮ ಮನೆ ಮೇಲೆ ದಾಳಿ ಮಾಡಿದರು. ಅಷ್ಟರ ಮಟ್ಟಿಗೆ ಉಪಚುನಾವಣೆ ಮಾಡಿದ್ದೇವು. ಬೇಕಾದಷ್ಟು ಹಣ ಸುರಿದೆವು, ಆಗ ಚಿಲ್ಲರೆ ಆಗಿರಲಿಲ್ಲ. ಪ್ರಾಣ ತ್ಯಾಗಮಾಡಿ ಸಿದ್ದರಾಮಯ್ಯ ಅವರನ್ನು ಗೆಲ್ಲಿಸಿದ್ದೇವೆ. ಲೋಕಸಭಾ ಚುನಾವಣೆಯಲ್ಲಿ ವರುಣಗೆ ಬೆಂಬಲ ನೀಡಿದೆ. ಪಕ್ಷೇತರವಾಗಿ ಎರಡು ಭಾರಿ ಆಯ್ಕೆ ಮಾಡಿದ್ದಾರೆ. ವರ್ತೂರ್ ಪ್ರಕಾಶ್ ಅವರಿಗೆ ಹೇಳಿರುವ ಮಾತಲ್ಲ, ಕೋಲಾರ ಜನತೆಗೆ ಹೇಳಿದ ಮಾತಿದು. ಅಹಿಂದ ಮುಖಂಡನ ಮೇಲೆ ಚುನಾವಣೆಗೆ ನಿಲ್ಲುತ್ತಿದ್ದೀರಿ. ಅಹಿಂದಾ ಸಮಾಜದ ಜನರು ನಿಮಗೆ ಪಾಠ ಕಲಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಕೀಳುಮಟ್ಟದ ರಾಜಕಾರಣಕ್ಕೆ ಸಿದ್ದರಾಮಯ್ಯ ಕೈಹಾಕಿದ್ದಾರೆ. ಇಂದು (ಫೆ.13) ಕೋಲಾರಕ್ಕೆ ಬರುತ್ತಿದ್ದೀರಿ, ನೀವಾಡಿದ ಮಾತಿಗೆ ತಕ್ಕ ಉತ್ತರ ನೀಡುತ್ತೇವೆ, ಅದು ಹೇಗೆ ಇರುತ್ತೆ ಎಂದು ಹೇಳುವುದಿಲ್ಲ. ಈ ಪದವನ್ನ ಹಿಂಪಡೆಯಬೇಕು ಇಲ್ಲವಾದಲ್ಲಿ ಜನ ಸರಿಯಾದ ಪಾಠ ಕಲಿಸುತ್ತಾರೆ. ಕೋಲಾರದಿಂದ ಸ್ಪರ್ಧೆ ಮಾಡುವ ಮಾತಿಗೆ ಭದ್ದರಾಗಿ. ಯೂಟರ್ನ್ ತೆಗೆದುಕೊಂಡರೆ ಜನವೇ ಉತ್ತರ ನೀಡುತ್ತಾರೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ