ಒಂದು ಹುಳದ ಮೇಲೂ ಸಿಬಿಐ ದಾಳಿಯಾಗುತ್ತೆ: ಸ್ವಪಕ್ಷದ ನಾಯಕನ ವಿರುದ್ಧ ಹೊಸ ಬಾಂಬ್ ಸಿಡಿಸಿದ ಯತ್ನಾಳ್

ಅವಳಿ ಜಿಲ್ಲೆಯಲ್ಲಿ ಒಂದು ಹುಳು ಇದೆ. ಅದರ ಮೇಲೂ ಸಿಬಿಐ ದಾಳಿಯಾಗುತ್ತೆ ಎಂದು ಯತ್ನಾಳ್ ಸ್ವಪಕ್ಷದ ನಾಯಕನ ವಿರುದ್ಧ ಹೊಸ ಬಾಂಬ್ ಸಿಡಿಸಿದ್ದಾರೆ.

ಒಂದು ಹುಳದ ಮೇಲೂ ಸಿಬಿಐ ದಾಳಿಯಾಗುತ್ತೆ: ಸ್ವಪಕ್ಷದ ನಾಯಕನ ವಿರುದ್ಧ ಹೊಸ ಬಾಂಬ್ ಸಿಡಿಸಿದ ಯತ್ನಾಳ್
ಬಸನಗೌಡ ಪಾಟೀಲ ಯತ್ನಾಳ್
Updated By: ರಮೇಶ್ ಬಿ. ಜವಳಗೇರಾ

Updated on: Oct 02, 2022 | 10:57 PM

ಬಾಗಲಕೋಟೆ: ಸ್ವಪಕ್ಷದವರ ವಿರುದ್ದ ಹರಿಹಾಯುವುದರಲ್ಲಿ, ಸ್ವಪಕ್ಷದವರ ಬಂಡವಾಳವನ್ನು ಖುಲ್ಲಂಖುಲ್ಲಾಗಿ ಹೇಳುವುದರಲ್ಲಿ ಶಾಸಕ ಬಸವಗೌಡ ಪಾಟೀಲ್ ಯತ್ನಾಳ್ ಎತ್ತಿದ ಕೈ. ಇದೀಗ ಮತ್ತೆ ಪರೋಕ್ಷವಾಗಿ ಸ್ವಪಕ್ಷದ ನಾಯಕ, ಸಚಿವ ಮುರುಗೇಶ್ ನಿರಾಣಿ ವಿರುದ್ಧ ಹರಿಹಾಯ್ದಿದ್ದಾರೆ.

ಬಾಗಲಕೋಟೆಯಲ್ಲಿ ಇಂದು(ಅಕ್ಟೋಬರ್ 02) ಮಾತನಾಡಿದ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಅವಳಿ ಜಿಲ್ಲೆಯಲ್ಲಿ ಒಂದು ಹುಳು ಇದೆ. ರೊಕ್ಕ (ಹಣ)ಇದೆ ಅಂತ ಉಪದ್ಯಾಪಿ ಮಾಡುತ್ತ ಹೊರಟಿದೆ. ಅದರ ಮೇಲೂ ಸಿಬಿಐ ದಾಳಿ ಬರುತ್ತದೆ ಎಂದು ಹೆಸರು ಹೇಳದೆ ಸಚಿವ ಮುರುಗೇಶ್ ನಿರಾಣಿ ವಿರುದ್ಧ ಹೊಸ ಬಾಂಬ್ ಸಿಡಿಸಿದರು.

ಇದನ್ನೂ ಓದಿ: ಧಾರಕಾರ ಮಳೆಯಲ್ಲಿ ಕೈ ನಾಯಕರ ಶಕ್ತಿ ಪ್ರದರ್ಶನ: ಮಳೆಯಲ್ಲಿ ನೆನೆಯುತ್ತಾ ರಾಹುಲ್ ಅಬ್ಬರದ ಭಾಷಣ

ಚರಂತಿಮಠ, ಯತ್ನಾಳ್,ಗೋವಿಂದ ಕಾರಜೋಳ, ಸಿದ್ದು ಸವದಿ ಅವರನ್ನು ಕೆಡವುತ್ತೇವೆ ಅಂತ ಹೊರಟಿದೆ.
ಏನು ರೊಕ್ಕದಿಂದ ಎಲ್ಲರನ್ನು ಕೆಡವುತ್ತೇವೆ ಎಂದು ಹುಳು ತಿಳಿದುಕೊಂಡಿದೆ. ಅದೇ ಈ ಸಲ ಹೊಕ್ಕತಿ ಆ ಹುಳು. ಯಾವುದು ಅಂತ ನೀವೆ ವಿಶ್ಲೇಷಣೆ ಮಾಡಿ ಎಂದು ಯತ್ನಾಳ್, ಪರೋಕ್ಷವಾಗಿ ಸಚಿವ ಮುರುಗೇಶ್ ನಿರಾಣಿಗೆ ಹುಳು ಎಂದರು.

ಸಿಬಿಐಯನ್ನು ಬಿಜೆಪಿ ದುರುಪಯೋಗ ಪಡಿಸಿಕೊಳ್ತಿದೆ ಎಂಬ ಡಿಕೆಶಿ ಆರೋಪಕ್ಕೆ ಪ್ರತಿಕ್ರಿಯಿಸಿದ ಯತ್ನಾಳ್, ಇವರು ಈ ದೇಶವನ್ನು ಲೂಟಿ ಮಾಡಿದ್ದಾರೆ. ಕನಕಪುರ ಪೂರ್ತಿ ಲೂಟಿ ಆಗಿದೆ. ಸಾವಿರಾರು ಕೋಟಿ ರೂಪಾಯಿ ಅಕ್ರಮ‌ ಆಸ್ತಿ ಇದೆ. ನನ್ನ ಮೇಲೆ ರೇಡ್ ಮಾಡ್ತಾರಾ? 10 ಸಾರಿ ರೇಡ್ ಮಾಡಿದ್ರೂ ನನ್ನ ಬಳಿ ಏನೂ ಸಿಗುವುದಿಲ್ಲ. ನೀವು ಕಳ್ಳತನ ಮಾಡಿದ್ದೀರಿ ಅದಕ್ಕೆ ಸಿಬಿಐನವರು ರೇಡ್ ಮಾಡ್ತಿದಾರೆ ಎಂದು ಟಾಂಗ್ ಕೊಟ್ಟರು.

ಸಿದ್ದರಾಮಯ್ಯ ಮನೆ ಮೇಲೆ ರೇಡ್‌ ಮಾಡಿದ್ದೀವಾ? ಸಿದ್ದರಾಮಯ್ಯ ಅವರ ಮೇಲೆ ಯಾಕೆ ಮಾಡಿಲ್ಲ ಡಿಕೆಶಿ ಮೇಲಿನ ತರಹದ ಆರೋಪಗಳು ಸಿದ್ದರಾಮಯ್ಯ ಮೇಲಿಲ್ಲ. ಆರೋಪ ಇದ್ರೆ ಸಿದ್ದರಾಮಯ್ಯ ಮೇಲೂ ಮಾಡ್ತಾರೆ. ನನ್ನ ಮೇಲೂ ರೇಡ್ ಮಾಡ್ತಾರೆ ಎಂದರು.

ನಮ್ಮ ಬಿಜೆಪಿ ಕೆಲವು ಮಂದಿ ಮೇಲೆ ರೇಡ್ ಮಾಡಿದ್ದಾರೆ. ಹಿಂದಿನ ಸಿಎಂ ಅವರ ಮಗನ ಅತ್ಯಂತ ನಿಕಟವರ್ತಿ ಮೇಲೂ ರೇಡ್ ಮಾಡಿದ್ರು ಎಂದು ಹೇಳಿದರು.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ