ಧಾರಕಾರ ಮಳೆಯಲ್ಲಿ ಕೈ ನಾಯಕರ ಶಕ್ತಿ ಪ್ರದರ್ಶನ: ಮಳೆಯಲ್ಲಿ ನೆನೆಯುತ್ತಾ ರಾಹುಲ್ ಅಬ್ಬರದ ಭಾಷಣ

ಮೈಸೂರಿನ ಬಂಡಿಪಾಳ್ಯದಲ್ಲಿ ಆಯೋಜಿಸಿದ ಸಾರ್ವಜನಿಕ ಕಾರ್ಯಕ್ರಮದಲ್ಲಿ ರಾಹುಲ್‌ ಗಾಂಧಿ ಮಳೆ ಲೆಕ್ಕಿಸದೇ ಅಬ್ಬರದ ಭಾಷಣ ಮಾಡಿದ್ದಾರೆ.

ಧಾರಕಾರ ಮಳೆಯಲ್ಲಿ  ಕೈ ನಾಯಕರ ಶಕ್ತಿ ಪ್ರದರ್ಶನ: ಮಳೆಯಲ್ಲಿ ನೆನೆಯುತ್ತಾ ರಾಹುಲ್ ಅಬ್ಬರದ ಭಾಷಣ
Rahul Gandhi
TV9kannada Web Team

| Edited By: Ramesh B Jawalagera

Oct 02, 2022 | 10:40 PM

ಮೈಸೂರು: ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ(Bharat jodo yatra ) ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರ ತಲುಪಿದೆ. ಇಂದು(ಅಕ್ಟೋಬರ್. 02) ಭಾರತ್ ಜೋಡೋ ಯಾತ್ರೆ ಅಂತ್ಯವಾಗಿದ್ದು, ಮೈಸೂರಿನ ಬಂಡಿಪಾಳ್ಯದಲ್ಲಿ ಆಯೋಜಿಸಿದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರು ಶಕ್ತಿ ಪ್ರದರ್ಶನ ಮಾಡಿದರು.

ಧಾರಾಕಾರ ಮಳೆಯ ನಡುವೆ ನಾಯಕರು ವೇದಿಕೆ ಮೇಲೆ ಕೈ ಎತ್ತಿ ಹಿಡಿದು ಶಕ್ತಿ ಪ್ರದರ್ಶಿಸಿದ್ರೆ, ಮತ್ತೊಂದೆಡೆ  ಮಳೆಯಲ್ಲಿ ನೆನೆಯುತ್ತಾ ರಾಹುಲ್‌ ಗಾಂಧಿ(Rahul Gandhi) ಅಬ್ಬರದ ಭಾಷಣ ಮಾಡಿದರು.

ಇದನ್ನೂ ಓದಿ: ಅ.4ರಂದು ಕರ್ನಾಟಕಕ್ಕೆ ಕಾಂಗ್ರೆಸ್ ಅಧಿನಾಯಕಿ, ಪುತ್ರನ ಯಾತ್ರೆಯಲ್ಲಿ ಹೆಜ್ಜೆ ಹಾಕಲಿರುವ ಸೋನಿಯಾ ಗಾಂಧಿ

ಮೈಸೂರಿನ ಬಂಡಿಪಾಳ್ಯದಲ್ಲಿ ಧಾರಕಾರ ಮಳೆಯಲ್ಲಿ ನೆನೆಯುತ್ತ ಭಾಷಣ ಮಾಡಿದ ರಾಹುಲ್ ಗಾಂಧಿ, ಭಾರತ್ ಜೋಡೋ ಯಾತ್ರೆ ಯಾವುದೇ ಕಾರಣಕ್ಕೂ ನಿಲ್ಲಲ್ಲ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಯಾತ್ರೆ ನಡೆಯುತ್ತಿದೆ. ಯಾತ್ರೆ ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಎಷ್ಟೇ ಹಿಂಸೆ ಕೊಟ್ಟರೂ ಭಾರತ್​ ಜೋಡೋ ಯಾತ್ರೆ ನಿಲ್ಲಲ್ಲ. ಗಾಳಿ, ಮಳೆ, ಬಿಸಿಲು ಬಂದರೂ ಜೋಡೋ ಯಾತ್ರೆ ನಿಲ್ಲಲ್ಲ. ಕಾಂಗ್ರೆಸ್ ದೇಶದ ಜನರ ಸಹಾಯಕ ನಿಲ್ಲುತ್ತದೆ. ಯಾತ್ರೆಯಲ್ಲಿ ದ್ವೇಷ, ಅಸೂಯೆ ಇರಲ್ಲ. ಬದಲಿಗೆ ಪ್ರೀತಿ, ಸಹಬಾಳ್ವೆ ಇರುತ್ತೆ ಎಂದು ಗುಡುಗಿದರು.

ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ನೋಟ್ ಬ್ಯಾನ್‌ನಿಂದಾಗಿ ಸಣ್ಣ ಪುಟ್ಟ, ಮಧ್ಯಮ ವ್ಯಾಪರಸ್ಥರು ಇವತ್ತಿಗೂ ಸಮಸ್ಯೆ ಎದುರಿಸುತ್ತಿದ್ದಾರೆ. ಇದರ ಲಾಭ ಕೇವಲ 3-4 ಉದ್ಯಮಿಗಳಿಗೆ ದೊರೆಯುತ್ತಿದೆ. ಒಂದೆಡೆ ನಿರುದ್ಯೋಗ, ಮತ್ತೊಂದೆಡೆ ಬೆಲೆ ಏರಿಕೆ ಬಿಸಿ. ಆದ್ದರಿಂದ ನಾವು ಜೋಡೋ ಯಾತ್ರೆ ಶುರು ಮಾಡಿದ್ದೇವೆ ಎಂದರು.

ರಾಜ್ಯದಲ್ಲಿ ಬಿಜೆಪಿ ಏನು ಮಾಡ್ತಾ ಇದೆ. ಸಿಎಂ ಹಾಗೂ ಸರ್ಕಾರ ಭ್ರಷ್ಟಾಚಾರದಲ್ಲಿ ದಾಖಲೆ ಬರೆದಿದೆ. ಭ್ರಷ್ಟಾಚಾರದ ಎಲ್ಲಾ ದಾಖಲೆಗಳನ್ನು ಮುರಿದಿದೆ. 40% ಕಮಿಷನ್ ಪಡೆದಿರುವ ಆರೋಪವಿದೆ. ಗುತ್ತಿಗೆದಾರ ಸಂಘದವರು ಪಿಎಂಗೆ ಪತ್ರ ಬರೆದಿದ್ದಾರೆ. 40% ಕಮಿಷನ್ ಸರ್ಕಾರ ಕಮಿಷನ್ ಇಲ್ಲದೆ ಯಾವುದೇ ಕೆಲಸ ಆಗಲ್ಲ ಎಂದು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಜೆಪಿಯ ಒಬ್ಬ ನಾಯಕ ಕಮಿಷನ್ ಕೊಡಲು ಆಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಕಮಿಷನ್ ಆರೋಪ ಮಾಡಿದ್ರು ಪಿಎಂ ಆಗಲಿ, ಸಿಎಂ ಆಗಲಿ ಯಾವುದೇ ರೀತಿಯ ಕ್ರಮ ಜರುಗಿಸಿಲ್ಲ ಎಂದು ಕಿಡಿಕಾರಿದರು.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada