Sign In

By signing in or creating an account, you agree with Associated Broadcasting Company's Terms & Conditions and Privacy Policy.

Operation Hastha: ತುಮಕೂರು ಜಿಲ್ಲೆ ಬಿಜೆಪಿ ಶಾಸಕರಿಂದ ಡಿಕೆ ಬ್ರದರ್ಸ್ ಭೇಟಿ! ಆಪರೇಷನ್ ಹಸ್ತಕ್ಕೆ ಜೀವ?

Tumkur BJP MLA: ತುಮಕೂರು ಜಿಲ್ಲೆಯ ಬಿಜೆಪಿ ಶಾಸಕರು ತಂಡೋಪಾದಿಯಲ್ಲಿ ಡಿಕೆ ಬ್ರದರ್ಸ್ ಅವರನ್ನು ಭೇಟಿಯಾಗಿದ್ದಾರೆ. ತುಮಕೂರು ಜೆಡಿಎಸ್ ಮಾಜಿ/ ಹಾಲಿ ಶಾಸಕರ ಜೊತೆಗೂ ಭಾರೀ ಚರ್ಚೆ ನಡೆದಿದೆ. ಬಿಜೆಪಿಯ ತುಮಕೂರು ಗ್ರಾಮೀಣ ಶಾಸಕ ಸುರೇಶ್ ಗೌಡ ಸಂಸದ ಡಿಕೆ ಸುರೇಶ್ ಜೊತೆಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ.

Operation Hastha: ತುಮಕೂರು ಜಿಲ್ಲೆ ಬಿಜೆಪಿ ಶಾಸಕರಿಂದ ಡಿಕೆ ಬ್ರದರ್ಸ್ ಭೇಟಿ! ಆಪರೇಷನ್ ಹಸ್ತಕ್ಕೆ ಜೀವ?
ತುಮಕೂರು ಜಿಲ್ಲೆಯಲ್ಲಿ ಆಪರೇಷನ್ ಹಸ್ತಕ್ಕೆ ಜೀವ??
Follow us
ಪ್ರಸನ್ನ ಗಾಂವ್ಕರ್​
| Updated By: ಸಾಧು ಶ್ರೀನಾಥ್​

Updated on:Aug 28, 2023 | 11:33 AM

ಬೆಂಗಳೂರು/ತುಮಕೂರು: ಇತರೆ ಪಕ್ಷಗಳಲ್ಲಿರುವ ನಾಯಕರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳುವ ಮತ್ತು ​​ಘರ್​ವಾಪ್ಸಿ ಕುರಿತಾದ ಆಪರೇಷನ್ ಹಸ್ತ (Operation Hastha) ತುಮಕೂರು ಜಿಲ್ಲೆಯಿಂದಲೂ ಶುರುವಾಯ್ತಾ ಎಂಬ ಪ್ರಶ್ನೆ ಎದ್ದಿದೆ. ಇದಕ್ಕೆ ಪುಷ್ಠಿ ನೀಡುವ ನಿಟ್ಟಿನಲ್ಲಿ ತುಮಕೂರು ಜಿಲ್ಲೆಯ ಬಿಜೆಪಿ ಶಾಸಕರು ತಂಡೋಪಾದಿಯಲ್ಲಿ ಡಿಕೆ ಬ್ರದರ್ಸ್ ಅವರನ್ನು ಭೇಟಿಯಾಗಿದ್ದಾರೆ.

ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಸುರೇಶ್ ಗೌಡ ಅವರು (Tumkur BJP MLA) ಸಂಸದ ಡಿಕೆ ಸುರೇಶ್ (DK Suresh) ಭೇಟಿಯಾಗಿದ್ದಾರೆ. ಜೊತೆಗೆ ಜೆಡಿಎಸ್‌ನ ಹಾಲಿ- ಮಾಜಿ ಶಾಸಕರಿಬ್ಬರನ್ನೂ ಕಾಂಗ್ರೆಸ್ ಕಡೆ ಸೆಳೆಯುವ ಪ್ರಯತ್ನ ನಡೆದಿದೆ. ತುಮಕೂರು ಜೆಡಿಎಸ್ ಮಾಜಿ/ ಹಾಲಿ ಶಾಸಕರ ಜೊತೆಗೂ ಭಾರೀ ಚರ್ಚೆ ನಡೆದಿದೆ. ಬಿಜೆಪಿಯ ತುಮಕೂರು ಗ್ರಾಮೀಣ ಶಾಸಕ ಸುರೇಶ್ ಗೌಡ ಸಂಸದ ಡಿಕೆ ಸುರೇಶ್ ಜೊತೆಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ.

ಇದನ್ನೂ ಓದಿ: ತುಮಕೂರು: ಎಂಪಿ ರೇಣುಕಾಚಾರ್ಯ ಕಾಂಗ್ರೆಸ್​ ಸೇರ್ಪಡೆ; ಡಿಕೆ ಶಿವಕುಮಾರ್​ ಹೇಳಿದ್ದಿಷ್ಟು

ಎರಡು ದಿನಗಳ ಹಿಂದೆ ತಡರಾತ್ರಿ ತನಕ ಸಂಸದ ಡಿಕೆ ಸುರೇಶ್ ನಿವಾಸದಲ್ಲಿದ್ದ ಸುರೇಶ್ ಗೌಡ ಚರ್ಚೆ ನಡೆಸಿದ್ದಾರೆ. ಸಂಸದ ಡಿಕೆ ಸುರೇಶ್ ನಿವಾಸದಲ್ಲಿ ನಡೆದ ಈ ಮಾತುಕತೆ ಆಪರೇಷನ್ ಹಸ್ತದ ಪ್ರಮುಖ ಭಾಗ ಎನ್ನಲಾಗುತ್ತಿದೆ. ಪ್ರಭಾವಿ ಬಿಜೆಪಿ ನಾಯಕರೊಬ್ಬರನ್ನು ಕರೆತಂದು ತುಮಕೂರು ಲೋಕಸಭೆ ಟಿಕೆಟ್ ನೀಡಲಾಗುತ್ತದೆ ಎಂಬ ಚರ್ಚೆ ಕೂಡ ಈಗ ಜೋರಾಗಿ ಕೇಳುತ್ತಿದೆ.

ತುಮಕೂರು ಜಿಲ್ಲಾ ಸುದ್ದಿಗಳನ್ನು ಫದಲು ಇಲ್ಲಿ ಕ್ಲಿಕ್ ಮಾಡಿ

Published On - 11:32 am, Mon, 28 August 23

ಕೇಂದ್ರ ಸಚಿವರೊಬ್ಬರ ವಿರುದ್ಧ ಒತ್ತುವರಿ ಕಾರ್ಯಾಚರಣೆ ನಡೆದ ಪ್ರಕರಣಗಳು ವಿರಳ
ಕೇಂದ್ರ ಸಚಿವರೊಬ್ಬರ ವಿರುದ್ಧ ಒತ್ತುವರಿ ಕಾರ್ಯಾಚರಣೆ ನಡೆದ ಪ್ರಕರಣಗಳು ವಿರಳ
ಮುಸ್ಲಿಮರಿಗೆ ಶೇ 4 ಮೀಸಲಾತಿ ಸುಪ್ರೀಂ​ನಲ್ಲಿ ಪ್ರಶ್ನಿಸಲಾಗ್ತಿದೆ: ಬೊಮ್ಮಾಯಿ
ಮುಸ್ಲಿಮರಿಗೆ ಶೇ 4 ಮೀಸಲಾತಿ ಸುಪ್ರೀಂ​ನಲ್ಲಿ ಪ್ರಶ್ನಿಸಲಾಗ್ತಿದೆ: ಬೊಮ್ಮಾಯಿ
ತುಮಕೂರು: ಓರ್ವ ವಿದ್ಯಾರ್ಥಿನಿಗಾಗಿ ಒಂದು ಸರ್ಕಾರಿ ಶಾಲೆ, ಓರ್ವ ಶಿಕ್ಷಕಿ
ತುಮಕೂರು: ಓರ್ವ ವಿದ್ಯಾರ್ಥಿನಿಗಾಗಿ ಒಂದು ಸರ್ಕಾರಿ ಶಾಲೆ, ಓರ್ವ ಶಿಕ್ಷಕಿ
ಅಧಿಕಾರಿಗಳು ಜನಪ್ರತಿನಿಧಿಗಳಿಗೆ ಗೌರವ ನೀಡದಿದ್ದರೆ ಹೇಗೆ? ಯುಟಿ ಖಾದರ್
ಅಧಿಕಾರಿಗಳು ಜನಪ್ರತಿನಿಧಿಗಳಿಗೆ ಗೌರವ ನೀಡದಿದ್ದರೆ ಹೇಗೆ? ಯುಟಿ ಖಾದರ್
ಇಡೀ ಜಗತ್ತು ಮಹಾ ಕುಂಭಮೇಳದ ರೂಪದಲ್ಲಿ ಭಾರತದ ಶ್ರೇಷ್ಠ ರೂಪ ನೋಡಿದೆ: ಮೋದಿ
ಇಡೀ ಜಗತ್ತು ಮಹಾ ಕುಂಭಮೇಳದ ರೂಪದಲ್ಲಿ ಭಾರತದ ಶ್ರೇಷ್ಠ ರೂಪ ನೋಡಿದೆ: ಮೋದಿ
ಕುಡಿದ ಮತ್ತಿನಲ್ಲಿ ಹೈಟೆನ್ಷನ್ ವಿದ್ಯುತ್​ ಕಂಬ ಏರಿದ ಯುವಕ!
ಕುಡಿದ ಮತ್ತಿನಲ್ಲಿ ಹೈಟೆನ್ಷನ್ ವಿದ್ಯುತ್​ ಕಂಬ ಏರಿದ ಯುವಕ!
ನಿಮ್ಮಪ್ಪಂದಾ ಪದ ಹುಟ್ಟುಹಾಕಿದ್ದು ಬಿಜೆಪಿ ನಾಯಕರು: ಪ್ರದೀಪ್ ಈಶ್ವರ್
ನಿಮ್ಮಪ್ಪಂದಾ ಪದ ಹುಟ್ಟುಹಾಕಿದ್ದು ಬಿಜೆಪಿ ನಾಯಕರು: ಪ್ರದೀಪ್ ಈಶ್ವರ್
ಹಣದ ಬದಲು ಅಕ್ಕಿ ಕೊಡುವುದೇ ಲೇಸು ಎನ್ನುತ್ತಾರೆ ಫಲಾನುಭವಿಗಳು
ಹಣದ ಬದಲು ಅಕ್ಕಿ ಕೊಡುವುದೇ ಲೇಸು ಎನ್ನುತ್ತಾರೆ ಫಲಾನುಭವಿಗಳು
ಕಾಂಗ್ರೆಸ್ ಮುಖಂಡರು ದೆಹಲಿಗೆ ಹೋದಾಗ ಕುತೂಹಲ ಹುಟ್ಟೋದು ಸಹಜ!
ಕಾಂಗ್ರೆಸ್ ಮುಖಂಡರು ದೆಹಲಿಗೆ ಹೋದಾಗ ಕುತೂಹಲ ಹುಟ್ಟೋದು ಸಹಜ!
ದಾವಣಗೆರೆ: ಇದ್ದಕ್ಕಿದ್ದಂತೆ ಒಡೆದು ಹೋದ ಭದ್ರಾ ಕಾಲುವೆ
ದಾವಣಗೆರೆ: ಇದ್ದಕ್ಕಿದ್ದಂತೆ ಒಡೆದು ಹೋದ ಭದ್ರಾ ಕಾಲುವೆ