ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ(JP Nadda) ಅವರು ವಿವಿಧ ವಿವಿಧ ರಾಜ್ಯಗಳ ಸಂಘಟನಾ ಕಾರ್ಯದರ್ಶಿಗಳನ್ನು(Organisational appointments) ನೇಮಕ ಮಾಡಿದ್ದಾರೆ. ಅಜಯ್ ಜಮ್ವಾಲ್ ಅವರನ್ನು ಮಧ್ಯ ಪ್ರದೇಶ ಮತ್ತು ಛತ್ತೀಸಗಡದ ಕ್ಷೇತ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಪಂಜಾಬ್-ಚಂಡೀಗಢದ ರಾಜ್ಯ ಕಾರ್ಯದರ್ಶಿಯಾಗಿ ಮಂತ್ರಿ ಶ್ರೀನಿವಾಸುಲು, ಕರ್ನಾಟಕದಲ್ಲಿ ರಾಜೇಶ್ ಜಿ.ವಿ(Rajesh G V) ಮತ್ತು ಸತೀಶ್ ಧೋಂಡ್ ಅವರನ್ನು ಪಶ್ಚಿಮ ಬಂಗಾಳ ರಾಜ್ಯ ಜಂಟಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.
Organisational appointments by Shri @JPNadda.
Shri Ajay Jamwal: Kshetriya General Secretary (Org), Madhya Kshetra (MP, Chhattisgarh)
Shri Manthri Srinivasulu: State GS (Org), Punjab-Chandigarh
Shri Rajesh G V: State GS (Org), Karnataka
Shri Satish Dhond: State Joint GS (Org), WB pic.twitter.com/fGu5tlvFqQ— BJP (@BJP4India) July 21, 2022
ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ರಾಜೇಶ್ ಜಿ. ವಿ.
ಬಿಜೆಪಿ ರಾಜ್ಯ ಘಟಕದ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ದಕ್ಷಿಣ ಕನ್ನಡ ಜಿಲ್ಲೆಯ ಆರ್‌ಎಸ್‌ಎಸ್ ಕಾರ್ಯಕರ್ತರಾಗಿದ್ದ ರಾಜೇಶ್ ಜಿ.ವಿ ಅವರನ್ನು ನಿಯುಕ್ತಿಗೊಳಿಸಲಾಗಿದೆ. ರಾಜೇಶ್ ಅವರು ತುಮಕೂರು ವಿಭಾಗದ ಪ್ರಚಾರಕ್ ಆಗಿದ್ದರು. ಇವರು ಮೈಸೂರು ಜಿಲ್ಲಾ ಆರ್‌ಎಸ್‌ಎಸ್ ಪ್ರಚಾರಕ್ ಆಗಿಯೂ ಸೇವೆ ಸಲ್ಲಿಸಿದ್ದರು.
Published On - 2:13 pm, Thu, 21 July 22