Karnataka Politics: ಇದೇನು ಪ್ರಜಾಪ್ರಭುತ್ವವೋ ಅಥವಾ ಸಿದ್ದರಾಮಯ್ಯನವರ ತುಘಲಕ್ ದರ್ಬಾರೋ; ಬಿಜೆಪಿ ಪ್ರಶ್ನೆ
ಶಾಸಕಾಂಗ ಪಕ್ಷದ ಸಭೆಯಲ್ಲಿನ ವಿದ್ಯಮಾನಗಳ ಕುರಿತ ‘ಟಿವಿ 9 ಕನ್ನಡ’ ವರದಿಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಬಿಜೆಪಿ, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.
ಬೆಂಗಳೂರು: ಸಚಿವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಕಾಂಗ್ರೆಸ್ನ ಕೆಲವು ಶಾಸಕರ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯನವರು (Siddaramaiah) ಶಾಸಕಾಂಗ ಪಕ್ಷದ ಸಭೆಯಲ್ಲಿ ಕೆಂಡಾಮಂಡಲವಾಗಿದ್ದರು ಎಂಬ ವರದಿಗೆ ಬಿಜೆಪಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ಕಾಂಗ್ರೆಸ್ (Congress) ಪಕ್ಷದ ಶಾಸಕರ ಸ್ಥಿತಿಯೇ ಹೀಗಾದರೆ, ನಾಳೆ ಸರ್ಕಾರವನ್ನು ಪ್ರಶ್ನಿಸುವ ಜನಸಾಮಾನ್ಯರ ಪಾಡು ಏನಾಗಲಿದೆ ಎಂದು ಬಿಜೆಪಿ (BJP) ಪ್ರಶ್ನಿಸಿದೆ. ಅಲ್ಲದೆ, ಇದೇನು ಪ್ರಜಾಪ್ರಭುತ್ವವೋ ಅಥವಾ ಸಿದ್ದರಾಮಯ್ಯನವರ ತುಘಲಕ್ ದರ್ಬಾರೋ ಎಂದು ಕಿಡಿ ಕಾರಿದೆ.
ಶಾಸಕಾಂಗ ಪಕ್ಷದ ಸಭೆಯಲ್ಲಿನ ವಿದ್ಯಮಾನಗಳ ಕುರಿತ ‘ಟಿವಿ 9 ಕನ್ನಡ’ ವರದಿಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಬಿಜೆಪಿ, ‘ಸಿಎಂ ಸಿದ್ದರಾಮಯ್ಯರವರ ಎರಡು ತಿಂಗಳ ಅಸಮರ್ಥ ಹಾಗೂ ಅವೈಜ್ಞಾನಿಕ ಆಡಳಿತದ ಬಗ್ಗೆ ಬಹಿರಂಗವಾಗಿ ಪ್ರಶ್ನಿಸಿದ್ದ ಸ್ವಪಕ್ಷೀಯ ಶಾಸಕರ ವಿರುದ್ಧವೇ ಈಗ ಅವರು ಕೆಂಡಕಾರುತ್ತಿದ್ದಾರೆ. ಸ್ವಾಮಿ ಸಿದ್ದರಾಮಯ್ಯರವರೇ, ನಿಮ್ಮ ಪಕ್ಷದ ಶಾಸಕರ ಪರಿಸ್ಥಿತಿಯೇ ಹೀಗಾದರೆ, ಇನ್ನು ನಾಳೆ ಸರ್ಕಾರವನ್ನು ಪ್ರಶ್ನಿಸುವ ಜನಸಾಮಾನ್ಯರ ಪಾಡೇನು?’ ಎಂದು ಉಲ್ಲೇಖಿಸಿದೆ.
ಸಿಎಂ ಸಿದ್ದರಾಮಯ್ಯರವರ ಎರಡು ತಿಂಗಳ ಅಸಮರ್ಥ ಹಾಗೂ ಅವೈಜ್ಞಾನಿಕ ಆಡಳಿತದ ಬಗ್ಗೆ ಬಹಿರಂಗವಾಗಿ ಪ್ರಶ್ನಿಸಿದ್ದ ಸ್ವಪಕ್ಷೀಯ ಶಾಸಕರ ವಿರುದ್ಧವೇ ಈಗ ಸಿಎಂ ಕೆಂಡಕಾರುತ್ತಿದ್ದಾರೆ.
ಸ್ವಾಮಿ ಸಿದ್ದರಾಮಯ್ಯರವರೇ, ನಿಮ್ಮ ಪಕ್ಷದ ಶಾಸಕರ ಪರಿಸ್ಥಿತಿಯೇ ಹೀಗಾದರೆ, ಇನ್ನೂ ನಾಳೆ ಸರ್ಕಾರವನ್ನು ಪ್ರಶ್ನಿಸುವ ಜನಸಾಮಾನ್ಯರ ಪಾಡೇನು..? https://t.co/C7IgDF4u5q
— BJP Karnataka (@BJP4Karnataka) July 28, 2023
ಸಿದ್ದರಾಮಯ್ಯ ಅವರೇ, ವರ್ಗಾವಣೆ ದಂಧೆ, ಅನುದಾನ ಕಡಿತ, ಸಚಿವರ ಹಾಗೂ ಅವರ ಆಪ್ತ ಕಾರ್ಯದರ್ಶಿಗಳ ಹಸ್ತಕ್ಷೇಪದಿಂದ ರೋಸಿ ಹೋಗಿರುವ ನಿಮ್ಮದೇ ಪಕ್ಷದ ಶಾಸಕರು, ನಿಮ್ಮ ಸಹಾಯ ಕೇಳಿ ಮನವಿ ಪತ್ರ ಸಲ್ಲಿಸಿದರೆ, ಅದನ್ನು ಹರಿದು ಕಸದ ಬುಟ್ಟಿಗೆ ಹಾಕುವಷ್ಟು ಉದ್ಧಟತನ ತೋರಿಸಿದ್ದೀರಿ! ಇದೇನು ಪ್ರಜಾಪ್ರಭುತ್ವವೋ ಅಥವಾ ನಿಮ್ಮ ತುಘಲಕ್ ದರ್ಬಾರೋ? ಎಂದು ಮತ್ತೊಂದು ಟ್ವೀಟ್ನಲ್ಲಿ ಬಿಜೆಪಿ ಪ್ರಶ್ನಿಸಿದೆ.
ಇದನ್ನೂ ಓದಿ: Congress CLP Meeting: ಬಸವರಾಜ ರಾಯರೆಡ್ಡಿಯ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಸಿಎಂ ಸಿದ್ದರಾಮಯ್ಯ
ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ತುಘಲಕ್ ದರ್ಬಾರ್ ಎಷ್ಟರ ಮಟ್ಟಿಗೆ ನಡೆಯುತ್ತಿದೆ ಎನ್ನುವುದಕ್ಕೆ ಸಂತ್ರಸ್ತ ವಿದ್ಯಾರ್ಥಿಗಳ ಮೇಲೆ ಪೊಲೀಸರಿಂದ ಲಾಠಿ ಚಾರ್ಚ್ ಮಾಡಿಸುತ್ತಿರುವುದೇ ಪ್ರತ್ಯಕ್ಷ ಸಾಕ್ಷಿ. ಉಡುಪಿ ಕಾಲೇಜಿನ ಅಮಾನುಷ ಕೃತ್ಯವನ್ನು ಬಯಲಿಗೆಳೆದವರ ಮೇಲೆಯೂ ಪೊಲೀಸರಿಂದ ಕಾಂಗ್ರೆಸ್ ಸರ್ಕಾರ ದಬ್ಬಾಳಿಕೆ ನಡೆಸುತ್ತಿದೆ. ಪ್ರಕರಣದ ಸತ್ಯಾಸತ್ಯತೆಯನ್ನು ಬಯಲಿಗೆಳೆದು ಅನ್ಯಾಯವನ್ನು ತಡೆಯಲು, ನ್ಯಾಯ ಕೇಳಲು, ಜಿಹಾದಿಗಳ ಹೆಡೆಮುರಿ ಕಟ್ಟಲು ಆಗ್ರಹಿಸಿ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದರೆ, ಅದನ್ನು ಹತ್ತಿಕ್ಕಲು ಈ ರೀತಿ ಪೊಲೀಸರಿಂದ ದೌರ್ಜನ್ಯ ನಡೆಸಿ ಸಿದ್ದರಾಮಯ್ಯ ಅವರ ಸರ್ಕಾರ ಹೇಡಿತನ ಪ್ರದರ್ಶಿಸಿದೆ ಎಂದು ಬಿಜೆಪಿ ಟ್ವೀಟ್ ಮೂಲಕ ಟೀಕಿಸಿದೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ