ಬಿಜೆಪಿ ಕತೆ ಮುಗಿದಿದೆ, ಯಾರನ್ನೇ ಅಧ್ಯಕ್ಷ ಮಾಡಿದರೂ ಅವರು ಮತ್ತೆ ಗೆಲ್ಲಲ್ಲ: ಶರಣಪ್ರಕಾಶ್ ಪಾಟೀಲ್
ಕರ್ನಾಟಕ ರಾಜ್ಯ ಬಿಜೆಪಿ ಅಧ್ಯಕ್ಷರನ್ನಾಗಿ ಶಾಸಕ ಬಿ.ವೈ.ವಿಜಯೇಂದ್ರ ಅವರನ್ನು ನೇಮಕ ಮಾಡಲಾಗಿದೆ. ಈ ಬಗ್ಗೆ ಶಿವಮೊಗ್ಗದಲ್ಲಿ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್, ಬಿಜೆಪಿ ಕತೆ ಮುಗಿದಿದೆ. ಯಾರನ್ನೇ ಅಧ್ಯಕ್ಷರನ್ನಾಗಿ ಮಾಡಿದರೂ ಅವರು ಮತ್ತೆ ಗೆಲ್ಲುವುದಿಲ್ಲ ಎಂದಿದ್ದಾರೆ.
ಶಿವಮೊಗ್ಗ, ನ.11: ಬಿಜೆಪಿ ಕತೆ ಮುಗಿದಿದೆ. ಯಾರನ್ನೇ ಅಧ್ಯಕ್ಷರನ್ನಾಗಿ ಮಾಡಿದರೂ ಅವರು ಮತ್ತೆ ಗೆಲ್ಲುವುದಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ (Sharanaprakash Patil) ಹೇಳಿದ್ದಾರೆ. ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ (B.Y.Vijayendra) ನೇಮಕ ವಿಚಾರವಾಗಿ ಶಿವಮೊಗ್ಗದಲ್ಲಿ ಮಾತನಾಡಿದರು.
ಶಾಸಕರನ್ನು ಖರೀದಿಸಿ ಬಿಜೆಪಿಯವರು ರಾಜ್ಯದಲ್ಲಿ ಸರ್ಕಾರ ರಚಿಸಿದ್ದರು. ಬಿಜೆಪಿಯವರು ದೇಶದಲ್ಲಿ ಅದೆಷ್ಟೋ ಚುನಾಯಿತ ಸರ್ಕಾರ ಕೆಡವಿದೆ. ಜನರು ಬಿಜೆಪಿಯನ್ನ ರಿಜೆಕ್ಟ್ ಮಾಡಿದ್ದಾರೆ, ಬಿಜೆಪಿಗೆ ತಕ್ಕ ಪಾಠ ಕಲಿಸಿದ್ದಾರೆ. 40 ಪರ್ಸೆಂಟ್ ಸರ್ಕಾರ ಅಂತಾನೆ ಹೆಸರಾಗಿತ್ತು, ಹಣ ಲೂಟಿ ಮಾಡಿದರು ಎಂದರು.
ಇದನ್ನೂ ಓದಿ: ಪುತ್ರ ಬಿ.ವೈ. ವಿಜಯೇಂದ್ರನಿಗೆ ಬಿಜೆಪಿ ಪಟ್ಟ ಸಿಕ್ಕಿದ ಬಗ್ಗೆ ಬಿಎಸ್ ಯಡಿಯೂರಪ್ಪ ಹೇಳಿದಿಷ್ಟು
ಪಿಎಸ್ಐ ಪರೀಕ್ಷಾ ಹಗರಣ ಬಯಲು ಮಾಡಿದ್ದೇ ಪ್ರಿಯಾಂಕ್ ಖರ್ಗೆ. ಕೆಇಎ ಪರೀಕ್ಷಾ ಅಕ್ರಮ ಸಂಬಂಧ ಆರ್.ಡಿ.ಪಾಟೀಲ್‌ನನ್ನು ಬಂಧಿಸಲಾಗಿದೆ. ಆರ್.ಡಿ.ಪಾಟೀಲ್, ಪ್ರಿಯಾಂಕ್ ಖರ್ಗೆಗೆ ನಂಟಿದೆ ಎಂಬ ಬಿಜೆಪಿ ಆರೋಪ ಸುಳ್ಳು ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ