Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನ್ನಂತವರನ್ನ ಬಹಳ ಕಾಲ ಸುಮ್ಮನೇ ಕೂರಿಸುಲು ಆಗಲ್ಲ: ಸಿಟಿ ರವಿ

ಅಧರ್ಮದ ವಿರುದ್ಧ ಧರ್ಮ, ಅಸತ್ಯದ ವಿರುದ್ಧ ಸತ್ಯಕ್ಕೆ ಜಯ ಸಿಗಬೇಕು ಎಂದು ಹೇಳಿದ ಬಿಜೆಪಿ ಹಿರಿಯ ನಾಯಕ ಸಿಟಿ ರವಿ, ರಾಮ, ಪಾಂಡವರಿಗೂ ವನವಾಸ ತಪ್ಪಿಲ್ಲ ಇನ್ನೂ ನಾನು ಯಾವ ಲೆಕ್ಕ. ಆದರೆ, ನನ್ನಂಥವರನ್ನು ಬಹು ಕಾಲ ಸುಮ್ಮನೆ ಕೂರಿಸಲು ಆಗಲ್ಲ ಎಂದು ಹೇಳಿದ್ದಾರೆ.

ನನ್ನಂತವರನ್ನ ಬಹಳ ಕಾಲ ಸುಮ್ಮನೇ ಕೂರಿಸುಲು ಆಗಲ್ಲ: ಸಿಟಿ ರವಿ
ಸಿ.ಟಿ.ರವಿ
Follow us
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Updated By: Rakesh Nayak Manchi

Updated on: Nov 11, 2023 | 7:46 PM

ಹಾಸನ, ನ.11: ನನ್ನಂತವರನ್ನ ಬಹಳ ಕಾಲ ಸುಮ್ಮನೇ ಕೂರಿಸಲು ಆಗಲ್ಲ ಎಂದು ಬಿಜೆಪಿ ಹಿರಿಯ ನಾಯಕ ಸಿ.ಟಿ. ರವಿ (C.T.Ravi) ಹೇಳಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಬಿವೈ ವಿಜಯೇಂದ್ರ (B.Y.Vijayendra) ಅವರ ಪಾಲಾದ ಹಿನ್ನೆಲೆ ಸಿಟಿ ರವಿ ಅಸಮಾಧಾನಗೊಂಡಿದ್ದಾರೆ ಎನ್ನಲಾಗುತ್ತಿದೆ.

ಈ ನಡುವೆ ಹಾಸನದ ಹಾಸನಾಂಬ ದೇವಸ್ಥಾನಕ್ಕೆ ಭೇಟಿ ನೀಡಿ ಹಾಸನಾಂಬೆ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧರ್ಮದ ವಿರುದ್ಧ ಧರ್ಮ, ಅಸತ್ಯದ ವಿರುದ್ಧ ಸತ್ಯಕ್ಕೆ ಜಯ ಸಿಗಬೇಕು ಎಂದರು. ಅಲ್ಲದೆ, ಪಕ್ಷ ವಿಸ್ತರಿಸುವ ಕೆಲಸ ಆಗಬೇಕು. ಸ್ಪರ್ಧೆಯೇ ಇಲ್ಲದಿದ್ದಾಗ ರೇಸ್​ನ ಪ್ರಶ್ನೆಯೇ ಉದ್ಭವಿಸಲ್ಲ. ರಾಮ, ಪಾಂಡವರಿಗೂ ವನವಾಸ ತಪ್ಪಿಲ್ಲ ಇನ್ನೂ ನಾನು ಯಾವ ಲೆಕ್ಕ. ನಾನೀಗ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ ಎಂದರು.

ಇದನ್ನೂ ಓದಿ: ನಾನೇನು ಸನ್ಯಾಸಿಯಲ್ಲ: ಪರೋಕ್ಷವಾಗಿ ಅಧಿಕಾರದ ಆಕಾಂಕ್ಷೆ ಹೊರಹಾಕಿದ ಸಿಟಿ ರವಿ

ಪಕ್ಷ ಜವಾಬ್ದಾರಿ ನೀಡಿದಾಗ ಮಾತಾಡಿದರೆ ತಪ್ಪು ಸಂದೇಶ ಹೋಗುತ್ತದೆ. ಪಕ್ಷ ಗಟ್ಟಿಯಾಗಬೇಕೆಂದು ಬಯಸುತ್ತೇನೆ, ಯಾರ ಮೂಲಕ ಅಂತಲ್ಲ. ಕಾಲಕಾಲಕ್ಕೆ ಅನುಭವ ಇದ್ದವರು, ಇಲ್ಲದಿದ್ದವರಿಗೂ ಸ್ಥಾನಮಾನ ನೀಡಿದೆ. ಪಕ್ಷದ ವಿಚಾರದ ಬಗ್ಗೆ ಚರ್ಚೆ ಮಾಡಲು ನಾನು ಬಯಸುವುದಿಲ್ಲ ಎಂದರು. ಎರಡು ದಿನದ ಹಿಂದೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ನನಗೆ ಕರೆ ಮಾಡಿದ್ದರು. ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನೇಮಕಾತಿ ಬಗ್ಗೆ ನನ್ನ ಜೊತೆ ಮಾತಾಡಿಲ್ಲ ಎಂದು ಸಿಟಿ ರವಿ ಹೇಳಿದರು.

ಆಪರೇಷನ್ ಹಸ್ತಕ್ಕೆ ಸಿಟಿ ರವಿ ತಿರುಗೇಟು

ಬಿಜೆಪಿ ಪಕ್ಷದ ನಾಯಕರು ಕಾಂಗ್ರೆಸ್​ನ ಆಪರೇಷನ್ ಹಸ್ತಕ್ಕೆ ಒಳಗಾಗುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಟಿ ರವಿ, ಕಾಂಗ್ರೇಸ್​ನವರು ಈಗಿರುವರನ್ನೇ ಸಮಾಧಾನ ಪಡಿಸಲು ಆಗುತ್ತಿಲ್ಲ. ಕರೆದುಕೊಂಡು ಹೋದವರಿಗೆ ಏನ್ ಕೊಡುತ್ತಾರೆ ಎಂದು ಪ್ರಶ್ನಿಸಿದರು. ಅಲ್ಲದೆ, ಯಾವಾಗಲೂ ಸರ್ಕಾರ ಬಂದಾಗ ಇನ್ ಕಮಿಂಗ್ ನಂತರ ಔಟ್ ಗೋಯಿಂಗ್ ಇರುತ್ತದೆ ಎಂದರು.

ಗೆಲುವಿಗೆ ಹತ್ತಾರು ಕಾರಣಗಳು ಇದ್ದ ಹಾಗೆ ಸೋಲಿಗೂ ಹತ್ತಾರು ಕಾರಣಗಳಿವೆ. ಪ್ರಯೋಗಗಳಿಂದಲೇ ಎಲ್ಲ ಆಗಿಲ್ಲ. ಪ್ರತಾಪ್ ಸಿಂಹ ಎರಡು ಬಾರಿ ಸಂಸದರಾಗಿಲ್ವಾ. ಭಗವಾನ್ ಖೂಬಾ ಎಂಪಿ ಆಗಿಲ್ವಾ? ನಾವೆಲ್ಲ ಪ್ರಯೋಗಳಿಂದಲೇ ಬಂದವರು. ಕೇಂದ್ರ ಅಂತ ಬಂದಾಗ ಜನರು ಮೋದಿ ಅಂತಾ ಹೇಳುತ್ತಾರೆ. ನಮ್ಮದು ಒಂದೇ ಗುರಿ. ಮತ್ತೊಮ್ಮೆ ಬಿಜೆಪಿ ಸರಕಾರ ರಚಿಸುವುದು, ಮತ್ತೊಮ್ಮೆ ಮೋದಿಯವರನ್ನ ಪ್ರಧಾನಿ ಮಾಡುವುದು ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ