ಕಾಂಗ್ರೆಸ್ ವಂಶಾಡಳಿತ ಹೇಗೆ ಗೊತ್ತೇ? ವಿಜಯೇಂದ್ರ ನೇಮಕ ಬಗ್ಗೆ ಕುಟುಕಿದ್ದಕ್ಕೆ ಮಾಜಿ ಸಚಿವ ಜೀವರಾಜ್ ತಿರುಗೇಟು
ಬಿವೈ ವಿಜಯೇಂದ್ರ ಅವರು ಯುವಮೋರ್ಚಾ ಅರ್ಧಯಕ್ಷರಾಗಿ, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷರಾಗಿ, ಶಾಸಕರಾಗಿ ಆಯ್ಕೆ ಆಗಿದ್ದಾರೆ. ಅವರ ಸಾಮರ್ಥ್ಯದ ಮೇಲೆ ಅವರಿಗೆ ಅಧಿಕಾರ ಕೊಟ್ಟಿದ್ದಾರೆ ಎನ್ನುವುದು ಗಮನಾರ್ಹ ಎಂದು ಜೀವರಾಜ್ ಹೇಳಿದ್ದಾರೆ.
ಚಿಕ್ಕಮಗಳೂರು, ನವೆಂಬರ್ 11: ಬಿಜೆಪಿಯ ಕರ್ನಾಟಕ ಘಟಕದ ಅಧ್ಯಕ್ಷರಾಗಿ ಶಿಕಾರಿಪುರದ ಶಾಸಕ ಬಿವೈ ವಿಜಯೇಂದ್ರ ಅವರ ನೇಮಕವನ್ನು ವ್ಯಂಗ್ಯವಾಡಿದ ಕಾಂಗ್ರೆಸ್ಗೆ (Congress) ಮಾಜಿ ಸಚಿವ ಡಿಎನ್ ಜೀವರಾಜ್ (DN Jeevaraj) ತೀಕ್ಷ್ಣ ತಿರುಗೇಟು ನೀಡಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ಗೆ ಸ್ವಂತ ಸಾಮರ್ಥ್ಯದ ಮೇಲೆ ಏನೂ ಮಾಡಿ ಗೊತ್ತಿಲ್ಲ ಎಂದು ಟೀಕಿಸಿದ್ದಾರೆ.
‘ಜವಹರಲಾಲ್ ನೆಹರೂ ಮಗಳು ಇಂದಿರಾಗಾಂಧಿಗೆ ಅಭಿನಂದನೆ. ಇಂದಿರಾಗಾಂಧಿ ಮಗ ರಾಜೀವ್ ಗಾಂಧಿಗೆ ಅಭಿನಂದನೆ. ರಾಜೀವ್ ಗಾಂಧಿ ಪತ್ನಿ ಸೋನಿಯಾ ಗಾಂಧಿಗೆ ಅಭಿನಂದನೆ. ಸೋನಿಯಾ ಗಾಂಧಿ ಮಗ ರಾಹುಲ್ ಗಾಂಧಿಗೆ ಅಭಿನಂದನೆ. ಕಾಂಗ್ರೆಸ್ಗೆ ಹೀಗೆ ಹೇಳಿ ಅಭ್ಯಾಸ, ಆ ಅಭ್ಯಾಸದ ಮೇಲೆ ಹೇಳುತ್ತಾರೆ. ವಂಶಪಾರಂಪರ್ಯ ರಾಜಕಾರಣವನ್ನು ಕಾಂಗ್ರೆಸ್ ಹೇಳುವ ರೀತಿ ಅದು’ ಎಂದು ಟೀಕಿಸಿದ್ದಾರೆ.
ಬಿವೈ ವಿಜಯೇಂದ್ರ ಅವರು ಯುವಮೋರ್ಚಾ ಅರ್ಧಯಕ್ಷರಾಗಿ, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷರಾಗಿ, ಶಾಸಕರಾಗಿ ಆಯ್ಕೆ ಆಗಿದ್ದಾರೆ. ಅವರ ಸಾಮರ್ಥ್ಯದ ಮೇಲೆ ಅವರಿಗೆ ಅಧಿಕಾರ ಕೊಟ್ಟಿದ್ದಾರೆ ಎನ್ನುವುದು ಗಮನಾರ್ಹ ಎಂದು ಜೀವರಾಜ್ ಹೇಳಿದ್ದಾರೆ.
ಕರ್ನಾಟಕದಲ್ಲಿ ಚುನಾವಣೆ ನಡೆದು ಸುಮಾರು 6 ತಿಂಗಳ ಬಳಿಕ ಬಿಜೆಪಿ ಹೈಕಮಾಂಡ್ ರಾಜ್ಯ ಘಟಕದ ಅಧ್ಯಕ್ಷರನ್ನು ಶುಕ್ರವಾರ ನೇಮಕ ಮಾಡಿದೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಮಗ ಬಿವೈ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಇದರ ಬೆನ್ನಲ್ಲೇ ಸಾಮಾಜಿಕ ಮಾಧ್ಯಮ ಎಕ್ಸ್ ಮೂಲಕ ಕಾಂಗ್ರೆಸ್ ವಾಗ್ದಾಳಿ ನಡೆಸಿತ್ತು.
ಇದನ್ನೂ ಓದಿ: ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಪಟ್ಟದ ಹಿಂದೆ ನೂರೆಂಟು ಲೆಕ್ಕಾಚಾರ: ಒಂದು ಕಲ್ಲಲ್ಲಿ ಎರಡು ಹಕ್ಕಿ ಹೊಡೆಯಲು ಹೈಕಮಾಂಡ್ ಸ್ಕೆಚ್!
ಯಡಿಯೂರಪ್ಪನವರ ಮಗ ಎಂಬ ಅರ್ಹತೆಯಲ್ಲಿ ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ‘ಯಡಿಯೂರಪ್ಪನವರ ಮಗ’ನಿಗೆ ಅಭಿನಂದನೆಗಳು. ‘ಬಿಜೆಪಿಯಲ್ಲಿ ಕುಟುಂಬ ರಾಜಕಾರಣವಿಲ್ಲ’ ಎಂಬ ಸುಳ್ಳನ್ನು ನಂಬಬೇಕು ಎಂದು ರಾಜ್ಯದ ಜನರಲ್ಲಿ ಮನವಿ ಮಾಡುತ್ತೇವೆ! ಎಂದು ಎಕ್ಸ್ ಸಂದೇಶದಲ್ಲಿ ಕಾಂಗ್ರೆಸ್ ಉಲ್ಲೇಖಿಸಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ