ಬೆಂಗಳೂರು, ಡಿ.17: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ವಿರುದ್ಧ ಟೀಕೆಗಳನ್ನು ನಡೆಸುತ್ತಾ ಬರುತ್ತಿರುವ ಕಾಂಗ್ರೆಸ್ ಎಂಎಲ್ಸಿ ಬಿಕೆ ಹರಿಪ್ರಸಾದ್ (B.K. Hariprasad), ಸಿದ್ದರಾಮಯ್ಯ ಅವರ ತಂತ್ರಗಾರಿಕೆ ಪ್ರತಿಯಾಗಿ ಸಮಯದಾಯ ಒಗ್ಗೂಡಿಸುತ್ತಾ ಬರುತ್ತಿದ್ದಾರೆ. ಮೊದಲು ಹಿಂದುಳಿದ ವರ್ಗಗಳ ಒಗ್ಗೂಡಿಸಿ ತಮ್ಮ ಸಾಮರ್ಥ್ಯವನ್ನು ಎದುರಾಳಿಗಳಿಗೆ ಮನವರಿಕೆ ಮಾಡಿದ್ದ ಹರಿಪ್ರಸಾದ್, ಇದೀಗ ಮತ್ತೊಂದು ಸಮಾವೇಶ ನಡೆಸಲು ಸಿದ್ಧತೆ ನಡೆಸುತ್ತಿದ್ದಾರೆ.
ಈಡಿಗ, ಬಿಲ್ಲವ, ನಾಮಧಾರಿ ಸಮಾವೇಶ ಮೂಲಕ ಹರಿಪ್ರಸಾದ್ ಅವರು ಸಿದ್ದರಾಮಯ್ಯ ಅವರಿಗೆ ನೇರ ಸವಾಲು ಒಡ್ಡಿದ್ದರು. ಇವರಿಗೆ ಕೌಂಟರ್ ನೀಡಲೆಂದೇ ಸರ್ಕಾರದ ಇರಾದೆ ಮೇರೆಯೇ ಮತ್ತೊಂದು ಈಡಿಗ ಸಮಾವೇಶ ನಡೆದಿತ್ತು. ಈ ಸಮಾವೇಶದಲ್ಲಿ ಸಮಯದಾಯದ ನಾಯಕ ಹರಿಪ್ರಸಾದ್ ಅವರನ್ನೇ ದೂರ ಇಡಲಾಗಿತ್ತು.
ಇದನ್ನೂ ಓದಿ: ಈಡಿಗ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ನೀಡಿದ ಭರವಸೆಗಳಿಗೆ ಟಕ್ಕರ್ ಕೊಟ್ಟ ಬಿಕೆ ಹರಿಪ್ರಸಾದ್
ಇದೀಗ ಜಾತಿ ಜನಣತಿಗೆ ಒತ್ತಾಯಿಸಿ ನಡೆಯುತ್ತಿರುವ ಅಹಿಂದ ಸಮಾವೇಶಕ್ಕೆ ಹರಿಪ್ರಸಾದ್ ಕಾಯುತ್ತಿದ್ದಾರೆ. ಜನವರಿಯಲ್ಲಿ ಮತ್ತೊಂದು ಸುತ್ತಿನ ಬೃಹತ್ ಹಿಂದುಳಿದ ಸಮಾವೇಶ ನಡೆಸಲು ಹರಿಪ್ರಸಾದ್ ಸಿದ್ಧತೆ ನಡೆಸುತ್ತಿದ್ದಾರೆ. ಆ ಮೂಲಕ ತಮ್ಮ ವಿರೋಧಿಗಳಿಗೆ ಸ್ಪಷ್ಟ ಸಂದೇಶ ರವಾನಿಸಲು ಸಜ್ಜಾಗುತ್ತಿದ್ದಾರೆ.
ಹರಿಪ್ರಸಾದ್ ಅವರು ಹಿಂದುಳಿದ ವರ್ಗ ತಮ್ಮ ಬೆನ್ನಿಗೆ ನಿಂತಿದೆ ಎಂದು ಮತ್ತೆ ಸಂದೇಶ ರವಾನಿಸಲು ಮುಂದಾಗಿದ್ದು, ಮತ್ತೊಂದು ಸುತ್ತು ರಾಜ್ಯ ಪ್ರವಾಸ ಮಾಡಲಿದ್ದಾರೆ. ಹಿಂದುಳಿದ ವರ್ಗಗಳ ಹಲವು ಸ್ವಾಮೀಜಿಗಳು ಜನವರಿಯಲ್ಲಿ ಬೃಹತ್ ಸಮಾವೇಶ ನಡೆಸಲು ಹರಿಪ್ರಸಾದ್ ಬೆನ್ನಿಗೆ ನಿಂತಿದ್ದಾರೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ