ನಾನು ಒಂದು ಬಾರಿ ಕೃಷಿ ಮಂತ್ರಿ ಆಗಬೇಕು: ಮತ್ತೆ ಸಚಿವ ಸ್ಥಾನದ ಆಕಾಂಕ್ಷೆ ಬಿಚ್ಚಿಟ್ಟ ಶಾಸಕ ಕೋನರೆಡ್ಡಿ
ತಾನು ಕೃಷಿ ಸಚಿವನಾಗಬೇಕು ಎಂದು ನವಲಗುಂದ ಕಾಂಗ್ರೆಸ್ ಶಾಸಕ ಕೋನರೆಡ್ಡಿ ಅವರು ಮತ್ತೊಮ್ಮೆ ಆಕಾಂಕ್ಷೆ ಹೊರಹಾಕಿದ್ದಾರೆ. ಒಬ್ಬ ಶಾಸಕನಾಗಿ ನಾನು ನನ್ನ ಹಕ್ಕು ಕೇಳಿದ್ದೇನೆ. ಒಂದು ಸಾರಿ ಕೃಷಿ ಮಂತ್ರಿ ಮಾಡಿ ಎಂದು ಕೇಳಿದ್ದೇನೆ. ಆದರೆ, ನನಗೆ ಮಂತ್ರಿಗಿರಿ ಸಿಗಲಿ ಅಥವಾ ಸಿಗದೇ ಇರಲಿ. ಕಾರ್ಯಕರ್ತನಾಗಿ ಸೇವೆ ಮಾಡುತ್ತೇನೆ ಎಂದರು.
ಹುಬ್ಬಳ್ಳಿ, ಡಿ.17: ನವಲಗುಂದ ಕ್ಷೇತ್ರದ ಕಾಂಗ್ರೆಸ್ ಶಾಸಕ ಎನ್ಎಚ್ ಕೋನರೆಡ್ಡಿ (NH Konareddy) ಅವರು ಮತ್ತೊಮ್ಮೆ ಸಚಿವ ಸ್ಥಾನದ ಆಕಾಂಕ್ಷೆಯನ್ನು ಹೊರಹಾಕಿದ್ದಾರೆ. ನಾನು ಒಂದು ಬಾರಿ ಕೃಷಿ ಮಂತ್ರಿ ಆಗಬೇಕು. ಒಬ್ಬ ಶಾಸಕನಾಗಿ ನಾನು ನನ್ನ ಹಕ್ಕು ಕೇಳಿದ್ದೇನೆ. ಒಂದು ಸಾರಿ ಕೃಷಿ ಮಂತ್ರಿ ಮಾಡಿ ಎಂದು ಕೇಳಿದ್ದೇನೆ ಎಂದರು.
ನಮಗೆ ಹೈಕಮಾಂಡ್ ಇದೆ, ಪಕ್ಷದ ಅಧ್ಯಕ್ಷರಿದ್ದಾರೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಜೋಡೆತ್ತು. ಕಾರ್ಪೋರೆಟ್ಗಳು ಮೇಯರ್ ಆಗಬೇಕು ಅಂತಾರೆ. ಶಾಸಕರು ಮಂತ್ರಿ ಆಗಬೇಕು ಅಂತಾರೆ. ಆದರೆ ಎಲ್ಲರನ್ನು ಮಂತ್ರಿ ಮಾಡಲು ಆಗುವುದಿಲ್ಲ. ಮಂತ್ರಿಯನ್ನಾಗಿಸುವ ವಿಚಾರದಲ್ಲಿ ಮುಖ್ಯಮಂತ್ರಿ ಪರಮಾಧಿಕಾದಕ್ಕೆ ನಾವು ಬದ್ದರಾಗಿದ್ದೇವೆ. ನನಗೆ ಮಂತ್ರಿ ಸ್ಥಾನ ಸಿಗದಿದ್ದರೂ ಕಾರ್ಯಕರ್ತನಾಗಿ ಸೇವೆ ಮಾಡುತ್ತೇನೆ ಎಂದರು.
ಇದನ್ನೂ ಓದಿ: ನಾನೇ ಸಿಎಂ ಎಂದ ಕೋನರೆಡ್ಡಿ, ನಾನು ಹೋಮ್ ಮಿನಿಸ್ಟರ್ ಪರ ಎಂದ ಸಂತೋಷ್ ಲಾಡ್; ಉಭಯ ನಾಯಕರ ವಿಡಿಯೋ ವೈರಲ್
ಕೋನರೆಡ್ಡಿ ಅವರು ತಾನು ಕೃಷಿ ಮಂತ್ರಿ ಆಗಬೇಕು ಎಂದು ಹೇಳಿಕೊಳ್ಳುತ್ತಿರುವುದು ಇದೇ ಮೊದಲೇನಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದ ಸಂದರ್ಭದಲ್ಲೇ ಕೃಷಿ ಸಚಿವನಾಗಬೇಕು ಎಂದು ಹೇಳಿಕೆ ನೀಡಿದ್ದರು. ನನಗೂ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಚಿವನಾಗಬೇಕು ಎಂಬ ಆಸೆ ಇದೆ ಎಂದು ಹೇಳಿಕೆ ನೀಡಿದ್ದರು.
ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡುವಂತೆ ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಬ್ಬಯ್ಯ ಪ್ರಸಾದ್ ಒತ್ತಾಯಿಸಿದ್ದಾರೆ. ಇವರ ಮಾತಿಗೆ ದನಿಗೂಡಿಸಿದ ಕೋನರೆಡ್ಡಿ, ಟಿಪ್ಪು ಒಬ್ಬ ಹೋರಾಟಗಾರ, ವಿಮಾನ ನಿಲ್ದಾಣಕ್ಕೆ ಇವರ ಹೆಸರಿಡುವ ಬಗ್ಗೆ ಬೇಡಿಕೆ ಇದೆ. ಅದರಲ್ಲಿ ತಪ್ಪೇನು ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ