ನಾನೇ ಸಿಎಂ ಎಂದ ಕೋನರೆಡ್ಡಿ, ನಾನು ಹೋಮ್​ ಮಿನಿಸ್ಟರ್​ ಪರ ಎಂದ ಸಂತೋಷ್​ ಲಾಡ್; ಉಭಯ ನಾಯಕರ ವಿಡಿಯೋ ವೈರಲ್​

ಹುಬ್ಬಳ್ಳಿ ತಾಲೂಕಿನ ಕುಸಗಲ್ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಸಚಿವ ಸಂತೋಷ್​ ಲಾಡ್​​ ಮತ್ತು ಶಾಸಕ ಕೋನರೆಡ್ಡಿ ನಡೆಸಿರುವ ಸಂಭಾಷಣೆ ವಿಡಿಯೋ ವೈರಲ್​ ಆಗಿದೆ. ವಿಡಿಯೋದಲ್ಲಿ ಸಚಿವ ಸಂತೋಷ್​ ಲಾಡ್​​, ನಾನು ಗೃಹ ಸಚಿವ ಜಿ ಪರಮೇಶ್ವರ್​​ ಅವರ ಪರ ಎಂದು ಹೇಳಿದ್ದಾರೆ. ಮತ್ತು ಶಾಸಕ ಕೋನರೆಡ್ಡಿ ನಾನೇ ಸಿಎಂ ಎಂದಿದ್ದಾರೆ.

Follow us
ಶಿವಕುಮಾರ್ ಪತ್ತಾರ್. ಹುಬ್ಬಳ್ಳಿ
| Updated By: ವಿವೇಕ ಬಿರಾದಾರ

Updated on:Nov 07, 2023 | 9:56 AM

ಹುಬ್ಬಳ್ಳಿ ನ.07: ಕರ್ನಾಟಕ ಕಾಂಗ್ರೆಸ್​​ ಸರ್ಕಾರದಲ್ಲಿ (Congress Government) ಮುಖ್ಯಮಂತ್ರಿ ಬದಲಾವಣೆ ವಿಚಾರ ಸಾಕಷ್ಟು ಚರ್ಚೆಯಾಗುತ್ತಿದೆ. ಕಾಂಗ್ರೆಸ್ ಪಕ್ಷದ ಶಾಸಕರು ಮತ್ತು ಸಚವರೇ ಎರಡೂವರೆ ವರ್ಷದ ಬಳಿಕ ಮುಖ್ಯಮಂತ್ರಿ ಬದಲಾಗುತ್ತಾರೆ ಎಂಬ ಹೇಳಿಕೆಗಳನ್ನು ನೀಡುತ್ತ್ತಿದ್ದಾರೆ. ಇನ್ನು ಪಕ್ಷದಲ್ಲಿ ಬಣ ರಾಜಕೀಯ ಶುರುವಾಗಿದ್ದು, ಕೆಲ ಶಾಸಕರು ಮತ್ತು ಸಚಿವರು ನಾನು ಸಿಎಂ ಸಿದ್ದರಾಮಯ್ಯ (Siddaramaiah) ಪರ ಮತ್ತು ಇನ್ನು ಕೆಲ ಶಾಸಕರು ಮತ್ತು ಸಚಿವರು ನಾನು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಪರ ಎಂದು ಬಹಿರಂಗವಾಗಿಯೇ ಹೇಳಿಕೆ ಕೊಡುತ್ತಿದ್ದಾರೆ. ಈ ಎರಡು ವಿಚಾರಗಳು ಪಕ್ಷದ ವರ್ಚಸ್ಸಿಗೆ ಮತ್ತು ಸರ್ಕಾರಕ್ಕೆ ಸಂಕಟ ತಂದಿವೆ. ಈ ಬಗ್ಗೆ ಯಾರು ಹೇಳಿಕೆ ನೀಡಬಾರದು ಎಂದು ಸಿಎಂ ಮತ್ತು ಡಿಸಿಎಂ ಸೂಚನೆ ನೀಡಿದ್ದಾರೆ. ಆದರೂ ಕೂಡ ನವಲಗುಂದ ಶಾಸಕ ಕೋನರೆಡ್ಡಿ ನಾನೇ ಸಿಎಂ ಎಂದು ಹೇಳಿರುವ ವಿಡಿಯೋ ವೈರಲ್​ ಆಗಿದೆ.​

ಹುಬ್ಬಳ್ಳಿ ತಾಲೂಕಿನ ಕುಸಗಲ್ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಸಚಿವ ಸಂತೋಷ್​ ಲಾಡ್​​ ಮತ್ತು ಶಾಸಕ ಕೋನರೆಡ್ಡಿ ನಡೆಸಿರುವ ಸಂಭಾಷಣೆ ವಿಡಿಯೋ ವೈರಲ್​ ಆಗಿದೆ. ವಿಡಿಯೋದಲ್ಲಿ ಸಚಿವ ಸಂತೋಷ್​ ಲಾಡ್​​, ನಾನು ಗೃಹ ಸಚಿವ ಜಿ ಪರಮೇಶ್ವರ್​​ ಅವರ ಪರ ಎಂದು ಹೇಳಿದ್ದಾರೆ. ಮತ್ತು ಶಾಸಕ ಕೋನರೆಡ್ಡಿ ನಾನೇ ಸಿಎಂ ಎಂದಿದ್ದಾರೆ.

ಇದನ್ನೂ ಓದಿ: 2028ಕ್ಕೆ ಕಾಂಗ್ರೆಸ್​ನಲ್ಲಿ ಸಿಎಂ ಸ್ಥಾನಕ್ಕೆ ನಾನು ಬೇಡಿಕೆ ಇಡುತ್ತೇನೆ: ಸಚಿವ ಸತೀಶ್ ಜಾರಕಿಹೊಳಿ

ಸಂತೋಷ್​ ಲಾಡ್​: ನಮ್ಮನ್ನು ಸರಿಯಾಗಿ ನೋಡಿಕೊಳ್ಳಬೇಕು ನಾವು ಹೋಮ್​ ಮಿನಿಸ್ಟರ್​ ಕಡೆಯವರು. ಹೀಗೆಲ್ಲ ನೋಡಿಕೊಂಡರೆ ಹೇಗೆ? ಹೌದು ನಾವು ಹೋಮ್ ಮಿನಿಸ್ಟರ್ ಕಡೆಯವರೇ. ಅವರ ಯಾರ ಕಡೆಯಾದರೂ ಇರಲಿ, ನಾವು ಮಾತ್ರ ಹೋಮ್ ಮಿನಿಸ್ಟರ್ ಕಡೆಯವರು ಎಂದು ಎರಡು ಬಾರಿ ಉಚ್ಚರಿಸಿದರು.

ಎನ್​ಹೆಚ್​ ಕೋನರೆಡ್ಡಿ: ನಾನೇ ಸಿಎಂ

ಸಂತೋಷ್​ ಲಾಡ್​: ಈತ ಯಾವ ಸಿಎಂ, ಹೋಮ್​​ ಮಿನಿಸ್ಟರ್​ ಇದ್ದಲ್ಲೇ ಇವನು ಸಿಎಂ. ನಮ್ಮ ಸಿಎಂ ಇವನೇ, ಅವರು ಯಾರು ಎಂದು ಸಚಿವ ಸಂತೋಷ್​ ಲಾಡ್​ ಹೇಳಿದರು.

ಉಭಯ ನಾಯಕರ 48 ಸೆಕೆಂಡಿನ್​ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು, ಚರ್ಚೆಗೆ ಗ್ರಾಸವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:52 am, Tue, 7 November 23