ಬಿಎಂಎಸ್ ಟ್ರಸ್ಟ್​​ ವಿವಾದ: ಸ್ಪೀಕರ್ ನೇತೃತ್ವದಲ್ಲಿ ನಡೆದ ಸಂಧಾನ ಸಭೆ ವಿಫಲ; ಜೆಡಿಎಸ್​ನಿಂದ ಧರಣಿ ಮುಂದುವರಿಕೆ

| Updated By: Rakesh Nayak Manchi

Updated on: Sep 23, 2022 | 12:36 PM

ಬಿಎಂಎಸ್ ಟ್ರಸ್ಟ್​​ ವಿವಾದ ಸದನದಲ್ಲಿ ಸುದ್ದು ಮಾಡುತ್ತಿದೆ. ಅದರಂತೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನೇತೃತ್ವದಲ್ಲಿ ಜೆಡಿಎಸ್ ಜೊತೆ ನಡೆದ ಸಂಧಾನ ಸಭೆ ವಿಫಲಗೊಂಡಿದೆ. ಯಾವುದೇ ತನಿಖೆಗೂ ಸಭೆಯಲ್ಲಿ ರಾಜ್ಯ ಸರ್ಕಾರ ಒಪ್ಪದ ಹಿನ್ನೆಲೆ ಸದನದಲ್ಲಿ ಜೆಡಿಎಸ್ ಧರಣಿ ಮುಂದುವರಿಸಲಿದೆ.

ಬಿಎಂಎಸ್ ಟ್ರಸ್ಟ್​​ ವಿವಾದ: ಸ್ಪೀಕರ್ ನೇತೃತ್ವದಲ್ಲಿ ನಡೆದ ಸಂಧಾನ ಸಭೆ ವಿಫಲ; ಜೆಡಿಎಸ್​ನಿಂದ ಧರಣಿ ಮುಂದುವರಿಕೆ
ಬಿಎಂಎಸ್ ಟ್ರಸ್ಟ್​​ ವಿವಾದ: ಸ್ಪೀಕರ್ ನೇತೃತ್ವದಲ್ಲಿ ನಡೆದ ಸಂಧಾನ ಸಭೆ ವಿಫಲ; ಜೆಡಿಎಸ್​ನಿಂದ ಧರಣಿ ಮುಂದುವರಿಕೆ
Follow us on

ವಿಧಾನಸಭೆ: ಬಿಎಂಎಸ್ ಟ್ರಸ್ಟ್​​ ವಿವಾದ ಸದನದಲ್ಲಿ ಸುದ್ದು ಮಾಡುತ್ತಿದ್ದು, ಇಂದು ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆಯೇ ಜೆಡಿಎಸ್ ಧರಣಿ ಆರಂಭಿಸಿದೆ. ಅದರಂತೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ (Vishweshwar Hegde Kageri) ನೇತೃತ್ವದಲ್ಲಿ ಜೆಡಿಎಸ್ (JDS) ಜೊತೆ ಸಂಧಾನ ಸಭೆ ನಡೆಯಿತು. ಈ ಸಭೆಯಲ್ಲಿ ಜೆಡಿಎಸ್ ಒತ್ತಾಯಕ್ಕೆ ಸರ್ಕಾರವೂ ಜಗ್ಗಲಿಲ್ಲ, ಇತ್ತ ತನಿಖೆಗೆ ಪಟ್ಟು ಹಿಡಿದಿರುವ ಜೆಡಿಎಸ್ ಬಗ್ಗದೆ ಧರಣಿಯನ್ನು ಮುಂದುವರಿಸಲು ನಿರ್ಧರಸಿದೆ. ಅದರಂತೆ ಸಂಧಾನ ಸಭೆ ವಿಫಲವಾಗಿದೆ. ಬಿಎಂಎಸ್ ಟ್ರಸ್ಟ್​ನಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಸಂಧಾನ ಸಭೆಯಲ್ಲಿ ಪಟ್ಟು ಹಿಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ (H.D.Kumaraswami), ನಿಮ್ಮದೇ ಸಂಸ್ಥೆಯಿಂದ ಆದರೂ ತನಿಖೆ ಆಗಲಿ ಎಂದು ಒತ್ತಾಯಿಸಿದ್ದಾರೆ. ಆದರೆ ಯಾವುದೇ ಮಾದರಿಯ ತನಿಖೆಗೂ ಸಭೆಯಲ್ಲಿ ರಾಜ್ಯ ಸರ್ಕಾರ ಒಪ್ಪದ ಹಿನ್ನೆಲೆ ಸದನದಲ್ಲಿ ಜೆಡಿಎಸ್ ಧರಣಿ ಮುಂದುವರಿಸಲಿದೆ.

ಬಿಎಂಎಸ್ ಟ್ರಸ್ಟ್​​ ವಿವಾದ ಸದನದಲ್ಲಿ ಸುದ್ದು ಮಾಡುತ್ತಿದ್ದು, ಇಂದು ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆಯೇ ಜೆಡಿಎಸ್ ಧರಣಿ ಆರಂಭಿಸಿದೆ. ಬಿಎಂಎಸ್ ಟ್ರಸ್ಟ್ ಡೀಡ್ ಬಗ್ಗೆ ಸರ್ಕಾರ ಉತ್ತರ ನೀಡಲು ಸದನದಲ್ಲಿ ಹೆಚ್.ಡಿ. ಕುಮಾರಸ್ವಾಮಿ ಒತ್ತಾಯಿಸಿದರಲ್ಲದೆ, ಪಕ್ಷದ ಶಾಸಕರೊಂದಿಗೆ ಸದನದ ಬಾವಿಗೆ ಇಳಿದು ಧಿಕ್ಕಾರಗಳನ್ನು ಕೂಗಿದ್ದಾರೆ. ಇದಕ್ಕೂ ಮುನ್ನ ವಿಧಾನಸಭೆಯಲ್ಲಿ ಕುಮಾರಸ್ವಾಮಿ ಮತ್ತು ಜೆಡಿಎಸ್ ಶಾಸಕರೊಂದಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕೆಲ ಕಾಲ ಚರ್ಚೆ ನಡೆಸಿದರು. ಅಲ್ಲದೆ ಧರಣಿ ವಾಪಸ್ ಪಡೆಯುವಂತೆ ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಅವರು ಕೂಡ ಜೆಡಿಎಸ್ ಮನವೊಲಿಕೆ ಯತ್ನಿಸಿದ್ದಾರೆ. ಅದಾಗ್ಯೂ, ತಣ್ಣಗಾಗದ ಜೆಡಿಎಸ್ ಕಲಾಪ ಆರಂಭವಾಗತ್ತಿದ್ದಂತೆ ಮತ್ತೆ ಧರಣಿ ಆರಂಭಿಸಿದೆ.

ಅದರಂತೆ ಸ್ಪೀಕರ್ ಕಾಗೇರಿ ನೇತೃತ್ವದಲ್ಲಿ ಜೆಡಿಎಸ್ ಜೊತೆ ಸಂಧಾನ ಸಭೆ ನಡೆಸಲಾಯಿತು. ಒಟ್ಟು 45 ನಿಮಿಷಗಳ ಕಾಲ ಸ್ಪೀಕರ್ ಕೊಠಡಿಯಲ್ಲಿ ನಡೆದ ಸಂಧಾನ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಾನೂನು ಸಚಿವ ಮಾಧುಸ್ವಾಮಿ, ವಿಪಕ್ಷ ನಾಯಕ ಸಿದ್ದರಾಮಯ್ಯ, ಹೆಚ್.ಡಿ. ಕುಮಾರಸ್ವಾಮಿ, ಹೆಚ್.ಡಿ. ರೇವಣ್ಣ, ಯು.ಟಿ. ಖಾದರ್ ಭಾಗಿಯಾಗದರು.

ದಾಖಲೆ ನೀಡಲು ನಾನು ಸಿದ್ಧ

ಉನ್ನತ ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಗಂಭೀರವಾಗಿ ಆರೋಪಿಸುತ್ತಿರುವ ಮಾಜಿ ಸಚಿವ ಹೆಚ್​.ಡಿ.ರೇವಣ್ಣ, ದಾಖಲೆ ನೀಡಲು ನಾನು ಸಿದ್ಧ ನೀವು ತನಿಖೆ ನಡೆಸಲು ಸಿದ್ಧರಿದ್ದೀರಾ ಎಂದು ಸರ್ಕಾರವನ್ನು ಪ್ರಶ್ನಸಿದ್ದಾರೆ. ಅಲ್ಲದೆ, ಉನ್ನತ ಶಿಕ್ಷಣ ಇಲಾಖೆ ಅಕ್ರಮ ಬಗ್ಗೆ ದಾಖಲೆ ನೀಡಲು ವಿಫಲವಾದರೆ ನನ್ನ ಸ್ಥಾನ ಬಿಡುತ್ತೇನೆ ಎಂದು ವಿಧಾನಸಭೆಯಲ್ಲಿ ಹೇಳಿಕೆ ನೀಡಿದ್ದಾರೆ.

ಜೆಡಿಎಸ್ ಆರೋಪವೇನು?

ಬಿಎಂಎಸ್ ಕಾಲೇಜು ಟ್ರಸ್ಟ್ ವಿವಾದ ತಣ್ಣಗಾಗುತ್ತಿಲ್ಲ. ಜಮೀನು ಅಕ್ರಮ ಆರೋಪ ಸಂಬಂಧ ತನಿಖೆಗೆ ಆಗ್ರಹಿಸಿ ಜೆಡಿಎಸ್ ಸದಸ್ಯರು ಕಲಾಪದ ವೇಳೆ ಗದ್ದಲ ನಡೆಸಿದರು. ಇನ್ನು ಇದಕ್ಕೆ ದನಿಗೂಡಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಕುಮಾರಸ್ವಾಮಿ ಅವರು ಮಾಡಿದ ಆರೋಪಗಳ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಬಿಎಂಎಸ್​ ಟ್ರಸ್ಟ್​​ನಲ್ಲಿ ಸಾಕಷ್ಟು​ ಅಕ್ರಮ ನಡೆದಿದೆ ಎಂದು ವಿಧಾನಸೌಧದಲ್ಲಿ ಆರೋಪಿಸಿದ ಕುಮಾರಸ್ವಾಮಿ, ಸಾವಿರಾರು ಕೋಟಿ ಮೌಲ್ಯದ ಆಸ್ತಿ ಲಪಟಾಯಿಸಲು ಹುನ್ನಾರ ನಡೆಸಲಾಗಿದೆ. ಅಕ್ರಮದ ಕುರಿತ ದಾಖಲೆಗಳನ್ನು ಸದನದ ಮುಂದಿಟ್ಟಿದ್ದೇನೆ. ಆದರೆ ಸಚಿವರು ಉಡಾಫೆ, ಉದ್ಧಟತನದ ಉತ್ತರ ನೀಡಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ್​​ ನಾರಾಯಣ ರಾಜೀನಾಮೆ ನೀಡುವಂತೆ ಆಗ್ರಹಿಸಿದರು. ಅಲ್ಲದೆ ಮದ್ಯಾಹ್ನದ ಬಳಿಕ ಸುದ್ದಿಗೋಷ್ಠಿ ನಡೆಸಿ ಎಲ್ಲವನ್ನೂ ಹೇಳುತ್ತೇನೆ ಎಂದರು.

ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:21 pm, Fri, 23 September 22