ತೀವ್ರ ಕುತೂಹಲ ಮೂಡಿಸಿದ ಸೋನಿಯಾ ಗಾಂಧಿ, ನಿತೀಶ್ ಕುಮಾರ್, ಲಾಲೂ ಯಾದವ್ ಭೇಟಿ; 6 ವರ್ಷಗಳ ಬಳಿಕ ನಾಯಕರ ಮುಖಾಮುಖಿ

ನಿತೀಶ್ ಕುಮಾರ್ ಮತ್ತು ಸೋನಿಯಾ ಗಾಂಧಿ ಅವರು 2015ರಲ್ಲಿ ಬಿಹಾರ ಚುನಾವಣೆಗೆ ಮುಂಚಿತವಾಗಿ ಕೊನೆಯ ಬಾರಿಗೆ ಭೇಟಿಯಾಗಿದ್ದರು. ಅದಾದ ಬಳಿಕ ಅವರಿಬ್ಬರೂ ಮುಖಾಮುಖಿಯಾಗಿಲ್ಲ.

ತೀವ್ರ ಕುತೂಹಲ ಮೂಡಿಸಿದ ಸೋನಿಯಾ ಗಾಂಧಿ, ನಿತೀಶ್ ಕುಮಾರ್, ಲಾಲೂ ಯಾದವ್ ಭೇಟಿ; 6 ವರ್ಷಗಳ ಬಳಿಕ ನಾಯಕರ ಮುಖಾಮುಖಿ
ಸೋನಿಯಾ ಗಾಂಧಿ- ನಿತೀಶ್ ಕುಮಾರ್
TV9kannada Web Team

| Edited By: Sushma Chakre

Sep 23, 2022 | 10:09 AM

ಪಾಟ್ನಾ: ಬಿಹಾರದಲ್ಲಿ ಮಹಾಮೈತ್ರಿಗೆ ಇಬ್ಬರು ಹಿರಿಯ ನಾಯಕರಾದ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಮತ್ತು ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ (Lalu Prasad Yadav) ಭಾನುವಾರ ಸಂಜೆ ದೆಹಲಿಯಲ್ಲಿ ಕಾಂಗ್ರೆಸ್ ಮುಖ್ಯಸ್ಥ ಸೋನಿಯಾ ಗಾಂಧಿಯವರನ್ನು (Sonia Gandhi) ಭೇಟಿ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಳೆದ 6 ವರ್ಷಗಳಲ್ಲಿ ಇದು ಅವರ ಮೊದಲ ಭೇಟಿಯಾಗಲಿದೆ. ಈ ಸಭೆಗೆ ರಾಹುಲ್ ಗಾಂಧಿ (Rahul Gandhi) ಕೂಡ ಹಾಜರಾಗಲಿದ್ದಾರೆ ಎನ್ನಲಾಗಿದೆ. ಹೀಗಾಗಿ, ಈ ಭೇಟಿ ಬಹಳ ಕುತೂಹಲ ಮೂಡಿಸಿದೆ.

ನಿತೀಶ್ ಕುಮಾರ್ ಮತ್ತು ಸೋನಿಯಾ ಗಾಂಧಿ ಅವರು 2015ರಲ್ಲಿ ಬಿಹಾರ ಚುನಾವಣೆಗೆ ಮುಂಚಿತವಾಗಿ ಕೊನೆಯ ಬಾರಿಗೆ ಭೇಟಿಯಾಗಿದ್ದರು. ಅದಾದ ಬಳಿಕ ಅವರಿಬ್ಬರೂ ಮುಖಾಮುಖಿಯಾಗಿಲ್ಲ. ಈ ತಿಂಗಳ ಆರಂಭದಲ್ಲಿ ದೆಹಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಹುಲ್ ಗಾಂಧಿಯನ್ನು ಭೇಟಿ ಮಾಡಿದ್ದರು. ಆಗ ಸೋನಿಯಾ ಗಾಂಧಿ ವೈದ್ಯಕೀಯ ಚಿಕಿತ್ಸೆಗಾಗಿ ವಿದೇಶದಲ್ಲಿದ್ದರು. ಹೀಗಾಗಿ, ಆಗ ಅವರಿಗೆ ಸೋನಿಯಾ ಗಾಂಧಿಯನ್ನು ಭೇಟಿಯಾಗಲು ಸಾಧ್ಯವಾಗಿರಲಿಲ್ಲ.

ಇದನ್ನೂ ಓದಿ: Bharat Jodo Yatra: ಭಾರತ್ ಜೋಡೋ ಯಾತ್ರೆ ಪ್ರಯುಕ್ತ ಕೇರಳದಲ್ಲಿ ಅಕ್ರಮ ಬ್ಯಾನರ್​, ಕಾಂಗ್ರೆಸ್ ಧ್ವಜ ಅಳವಡಿಕೆ; ಹೈಕೋರ್ಟ್​ ಅಸಮಾಧಾನ

ಲಾಲೂ ಪ್ರಸಾದ್ ಯಾದವ್ 2018ರಲ್ಲಿ ಮೇವು ಹಗರಣ ಪ್ರಕರಣದಲ್ಲಿ ಜೈಲಿನಲ್ಲಿದ್ದರು. ನಂತರ ಕೊವಿಡ್ ಸಾಂಕ್ರಾಮಿಕ ಬಂದಿತು. ಇದೀಗ ಜಾಮೀನಿನ ಮೇಲೆ ಜೈಲಿನಿಂದ ಹೊರಗಿರುವ ಲಾಲೂ ಪ್ರಸಾದ್ ಯಾದವ್ ಅನಾರೋಗ್ಯದಿಂದ ಬಳಲುತ್ತಿದ್ದು, ಮುಂಬರುವ ವಾರಗಳಲ್ಲಿ ಮೂತ್ರಪಿಂಡ ಕಸಿಗಾಗಿ ಸಿಂಗಾಪುರಕ್ಕೆ ಹೋಗಲಿದ್ದಾರೆ.

ಸೋನಿಯಾ ಗಾಂಧಿ ಜೊತೆಗಿನ ಈ ಇಬ್ಬರ ಭೇಟಿ ಕೇವಲ ಸೌಜನ್ಯದ ಭೇಟಿಯಾಗಿರಲಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಈ ಸಂದರ್ಭದಲ್ಲಿ ಕೆಲವು ಗಂಭೀರ ವಿಷಯಗಳನ್ನು ಚರ್ಚೆ ಮಾಡುವ ಅವಕಾಶವೂ ಇದೆ. ತಮ್ಮ ಮೈತ್ರಿಯನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯುವುದು ಸೇರಿದಂತೆ ಹಲವು ವಿಷಯಗಳ ಬಗ್ಗೆ ಈ ವೇಳೆ ಚರ್ಚೆಯಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ: ಒಬ್ಬ ವ್ಯಕ್ತಿ, ಒಂದು ಹುದ್ದೆ ಎಂದ ರಾಹುಲ್​​ ಗಾಂಧಿ; ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಆಕಾಂಕ್ಷಿ ಗೆಹ್ಲೋಟ್​​​ ನಿಲುವೇನು?

ನಿತೀಶ್ ಕುಮಾರ್ ಅವರು 2024ರ ರಾಷ್ಟ್ರೀಯ ಚುನಾವಣೆಗೆ ಮುಂಚಿತವಾಗಿ ಬಿಜೆಪಿ ವಿರುದ್ಧ ವಿರೋಧ ಪಕ್ಷಗಳನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ತನ್ನ ಮುಂದಿನ ಅಧ್ಯಕ್ಷರನ್ನು ಆಯ್ಕೆ ಮಾಡಲು ಸಿದ್ಧತೆ ನಡೆಸುತ್ತಿರುವುದರಿಂದ ಸಭೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ರೇಸ್​ನಲ್ಲಿ ಶಶಿ ತರೂರ್ ಮತ್ತು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಇದ್ದಾರೆ. ಇವರ ಜೊತೆಗೆ ಮನೀಶ್ ತಿವಾರಿ ಮತ್ತು ದಿಗ್ವಿಜಯ ಸಿಂಗ್ ಸೇರಿದಂತೆ ಹಲವಾರು ನಾಯಕರು ಕೂಡ ಸ್ಪರ್ಧಿಸಲು ಆಸಕ್ತಿ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada