Bharat Jodo Yatra: ಭಾರತ್ ಜೋಡೋ ಯಾತ್ರೆ ಪ್ರಯುಕ್ತ ಕೇರಳದಲ್ಲಿ ಅಕ್ರಮ ಬ್ಯಾನರ್​, ಕಾಂಗ್ರೆಸ್ ಧ್ವಜ ಅಳವಡಿಕೆ; ಹೈಕೋರ್ಟ್​ ಅಸಮಾಧಾನ

ತಿರುವನಂತಪುರದಿಂದ ತ್ರಿಶೂರ್ ಮತ್ತು ಸುತ್ತಮುತ್ತಲಿನ ರಾಷ್ಟ್ರೀಯ ಹೆದ್ದಾರಿಯ ಪ್ರತಿಯೊಂದು ಬದಿಯಲ್ಲಿ ಭಾರತ್ ಜೋಡೋ ಯಾತ್ರೆ ಪ್ರಯುಕ್ತ ಕಾಂಗ್ರೆಸ್ ಪಕ್ಷವು ಅಕ್ರಮವಾಗಿ ಧ್ವಜ ಮತ್ತು ಬೋರ್ಡ್​ಗಳನ್ನು ಹಾಕಿದೆ.

Bharat Jodo Yatra: ಭಾರತ್ ಜೋಡೋ ಯಾತ್ರೆ ಪ್ರಯುಕ್ತ ಕೇರಳದಲ್ಲಿ ಅಕ್ರಮ ಬ್ಯಾನರ್​, ಕಾಂಗ್ರೆಸ್ ಧ್ವಜ ಅಳವಡಿಕೆ; ಹೈಕೋರ್ಟ್​ ಅಸಮಾಧಾನ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Sep 23, 2022 | 8:51 AM

ಕೊಚ್ಚಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ನೇತೃತ್ವದಲ್ಲಿ ಈಗಾಗಲೇ ‘ಭಾರತ್ ಜೊಡೋ ಯಾತ್ರೆ’ (Bharat Jodo Yatra) ಆರಂಭವಾಗಿದೆ. ಕೇರಳದಲ್ಲಿರುವ ಭಾರತ್ ಜೋಡೋ ಯಾತ್ರೆ ಮುಂದಿನ ದಿನಗಳಲ್ಲಿ ನಾನಾ ರಾಜ್ಯಗಳಲ್ಲಿ ಮುಂದುವರೆಯಲಿದೆ. ಈ ಯಾತ್ರೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ (Congress) ನಾಯಕರ ಸ್ವಾಗತಕ್ಕೆ ಕೇರಳದ ರಸ್ತೆಗಳಲ್ಲಿ ಬೃಹತ್ ಬ್ಯಾನರ್​, ಬೋರ್ಡ್​ ಮತ್ತು ಸಾಲು ಸಾಲು ಧ್ವಜಗಳನ್ನು ಹಾಕಲಾಗಿದೆ. ಆದರೆ, ಕೇರಳದ ಹೆದ್ದಾರಿಗಳಲ್ಲಿನ ಬೋರ್ಡ್​ಗಳು ಮತ್ತು ಧ್ವಜಗಳ ಬಗ್ಗೆ ಕೇರಳ ಹೈಕೋರ್ಟ್ (Kerala High Court) ಅಸಮಾಧಾನ ವ್ಯಕ್ತಪಡಿಸಿದೆ.

ತಿರುವನಂತಪುರದಿಂದ ತ್ರಿಶೂರ್ ಮತ್ತು ಸುತ್ತಮುತ್ತಲಿನ ರಾಷ್ಟ್ರೀಯ ಹೆದ್ದಾರಿಯ ಪ್ರತಿಯೊಂದು ಬದಿಯಲ್ಲಿ ಕಾಂಗ್ರೆಸ್ ಪಕ್ಷವು ಅಕ್ರಮವಾಗಿ ಧ್ವಜ ಮತ್ತು ಬೋರ್ಡ್​ಗಳನ್ನು ಹಾಕಿದೆ. ಪೊಲೀಸರು ಮತ್ತು ಇತರ ಅಧಿಕಾರಿಗಳು ಈ ಬಗ್ಗೆ ಸಂಪೂರ್ಣವಾಗಿ ತಿಳಿದಿದ್ದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಯ ಪ್ರಚಾರ ಫಲಕದಲ್ಲಿ ಸಾವರ್ಕರ್ ಚಿತ್ರ; ಫೋಟೊ ವೈರಲ್ ಆದಾಗ ಗಾಂಧೀಜಿ ಚಿತ್ರ ಅಂಟಿಸಿ ಮುಜುಗರ ತಪ್ಪಿಸಿದ ಕಾಂಗ್ರೆಸ್ಸಿಗರು

ರಸ್ತೆಗಳಲ್ಲಿ ಅಕ್ರಮ ಬ್ಯಾನರ್‌ಗಳು ಮತ್ತು ಬೋರ್ಡ್‌ಗಳ ವಿಷಯವನ್ನು ಪರಿಗಣಿಸುವಾಗ ನ್ಯಾಯಮೂರ್ತಿ ದೇವಾನ್ ರಾಮಚಂದ್ರನ್ ಈ ಬಗ್ಗೆ ಪ್ರಸ್ತಾಪಿಸಿದ್ದಾರೆ. “ಕೇರಳದಾದ್ಯಂತ ಮೆರವಣಿಗೆ ನಡೆಸುವಾಗ ನಿರ್ದಿಷ್ಟ ರಾಜಕೀಯ ಪಕ್ಷವು ಅಕ್ರಮವಾಗಿ ಹೆಚ್ಚಿನ ಸಂಖ್ಯೆಯ ಬೋರ್ಡ್​ಗಳು, ಬ್ಯಾನರ್‌ಗಳು, ಧ್ವಜಗಳನ್ನು ಹಾಕಿದೆ” ಎಂದು ಅಮಿಕಸ್ ಕ್ಯೂರಿ ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.

ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಾಲಯ “ಈ ಅಕ್ರಮ ಬೋರ್ಡ್​ಗಳು ವಾಹನ ಚಾಲಕರು ಹೆದ್ದಾರಿಯ ಮೂಲಕ ಚಲಿಸುವಾಗ ಅವರ ಗಮನವನ್ನು ಬೇರೆಡೆ ಸೆಳೆಯುತ್ತವೆ. ಇದರಿಂದ ದೊಡ್ಡ ಅಪಾಯ ಉಂಟಾಗುತ್ತದೆ. ಈ ಬೋರ್ಡ್​​ಗಳು ಸಡಿಲವಾಗಿ ಕೆಳಗೆ ಬಿದ್ದು ಹಾನಿ ಉಂಟುಮಾಡುವ ಅಪಾಯವೂ ಇದೆ. ವಿಶೇಷವಾಗಿ ದ್ವಿಚಕ್ರ ವಾಹನಗಳ ಸವಾರರ ಪ್ರಾಣಕ್ಕೂ ಕುತ್ತು ತರಬಹುದು. ಇಂತಹ ಬೋರ್ಡ್​ಗಳನ್ನು ವಿಲೇವಾರಿ ಮಾಡುವ ಸಮಸ್ಯೆಯೂ ಇದೆ. ಅಧಿಕೃತ ಅಧಿಕಾರಿಗಳು ಅಂತಹ ವಿಷಯಗಳ ಬಗ್ಗೆ ಏಕೆ ತಿಳಿದಿಲ್ಲ? ಎಂದು ನ್ಯಾಯಾಲಯ ಪ್ರಶ್ನಿಸಿದೆ.

ಇದನ್ನೂ ಓದಿ: Assam Jodo Yatra: ನವೆಂಬರ್ 1 ರಿಂದ ಕಾಂಗ್ರೆಸ್​ನ ‘ಅಸ್ಸಾಂ ಜೋಡೋ ಯಾತ್ರೆ’ ಆರಂಭ

ನ್ಯಾಯಾಲಯವು ಈ ವಿಷಯದ ವಿಚಾರಣೆಯನ್ನು ಇಂದಿಗೆ (ಶುಕ್ರವಾರ) ಮುಂದೂಡಿದೆ. ಈ ಅಕ್ರಮ ಧ್ವಜ, ಬೋರ್ಡ್​ಗಳನ್ನು ಹೇಗೆ ಹಾಕಲಾಗಿದೆ ಮತ್ತು ಅವುಗಳನ್ನು ಏಕೆ ತೆಗೆದುಹಾಕಲಾಗಿಲ್ಲ ಎಂಬುದರ ಕುರಿತು ಪ್ರಧಾನ ಕಾರ್ಯದರ್ಶಿ, ಸ್ಥಳೀಯ ಸ್ವಯಂ ಇಲಾಖೆ, ಮುಖ್ಯ ಕಾರ್ಯದರ್ಶಿ ಮತ್ತು ರಾಜ್ಯ ಪೊಲೀಸ್ ಮುಖ್ಯಸ್ಥರಿಂದ ಸೂಚನೆಗಳನ್ನು ಪಡೆಯಲು ಹೆಚ್ಚುವರಿ ವಕೀಲ ಜನರಲ್ ಅವರಿಗೆ ನ್ಯಾಯಾಲಯ ಸೂಚಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ

ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ