ಟೀಂ ಇಂಡಿಯಾದ ಉತ್ಸಾಹದೊಂದಿಗೆ ಸಹಕಾರಿ ಸಂಯುಕ್ತ ವ್ಯವಸ್ಥೆಗೆ ಶಕ್ತಿ ತುಂಬಲು ಪ್ರಧಾನಿ ಮೋದಿ ನಿರಂತರ ಪ್ರಯತ್ನ
2014 ರ ಮೊದಲು ದೆಹಲಿಯಲ್ಲಿ ವಾಡಿಕೆಯಂತೆ ಆಯೋಜಿಸಲಾಗುತ್ತಿದ್ದ ವಾರ್ಷಿಕ ಸಮ್ಮೇಳನಗಳನ್ನು (2020 ರ ಸಭೆಯನ್ನು ಹೊರತುಪಡಿಸಿ, ಇದನ್ನು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಆಯೋಜಿಸಲಾಗಿತ್ತು) ಈಗ ದೇಶಾದ್ಯಂತ ಆಯೋಜಿಸಲಾಗುತ್ತಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ನಾಳೆ ಶುಕ್ರವಾರ (ಸೆಪ್ಟೆಂಬರ್ 23 ರಂದು) ಎಲ್ಲಾ ರಾಜ್ಯಗಳ ಪರಿಸರ ಮಂತ್ರಿಗಳ ರಾಷ್ಟ್ರೀಯ ಸಮ್ಮೇಳನವನ್ನು (National Conference of Environment Ministers) ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಲಿದ್ದಾರೆ. ಪ್ರಧಾನವಾಗಿ ರಾಜ್ಯಗಳ ನೀತಿ ನಿರೂಪಕರೊಂದಿಗೆ ಇಂತಹ ರಾಷ್ಟ್ರೀಯ ಸಮ್ಮೇಳನಗಳಲ್ಲಿ ಪ್ರಧಾನ ಮಂತ್ರಿ ಭಾಗವಹಿಸುವಿಕೆಯು ಸಹಕಾರಿ ಸಂಯುಕ್ತ ವ್ಯವಸ್ಥೆಗಾಗಿ (cooperative federalism) ಟೀಂ ಇಂಡಿಯಾದ (Team India) ಮನೋಭಾವವನ್ನು ಪೋಷಿಸುವಲ್ಲಿ ಸಹಕಾರಿಯಾಗಲಿದೆ.
ಈ ನಿಟ್ಟಿನಲ್ಲಿ ಇತ್ತೀಚಿನ ಕೆಲವು ಉದಾಹರಣೆಗಳು:
• ಕೇವಲ 15 ದಿನಗಳ ಹಿಂದೆ ಸೆಪ್ಟೆಂಬರ್ 10 ರಂದು ಪ್ರಧಾನ ಮಂತ್ರಿಯವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಅಹಮದಾಬಾದ್‌ನಲ್ಲಿ ‘ಸೆಂಟರ್-ಸ್ಟೇಟ್ ಸೈನ್ಸ್ ಕಾನ್ಕ್ಲೇವ್’ ಅನ್ನು ಉದ್ಘಾಟಿಸಿದರು.
• ಇನ್ನು ಆಗಸ್ಟ್ 25, 2022 ರಂದು ಪ್ರಧಾನ ಮಂತ್ರಿಯವರು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾರ್ಮಿಕ ಮಂತ್ರಿಗಳ ರಾಷ್ಟ್ರೀಯ ಕಾರ್ಮಿಕ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದರು.
• ಜೂನ್ 16, 2022 ರಂದು ಪ್ರಧಾನ ಮಂತ್ರಿ ಎರಡು ದಿನಗಳ ಮುಖ್ಯ ಕಾರ್ಯದರ್ಶಿಗಳ ರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಲು ಧರ್ಮ ಶಾಲಾಕ್ಕೆ ತೆರಳಿದ್ದರು.
• 30ನೇ ಏಪ್ರಿಲ್ 2022 ರಂದು, ಪ್ರಧಾನ ಮಂತ್ರಿ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳ ಜಂಟಿ ಸಮ್ಮೇಳನವನ್ನು ಉದ್ಘಾಟಿಸಿದರು.
ಇಂತಹ ರಾಷ್ಟ್ರೀಯ ಸಮ್ಮೇಳನಗಳ ಸಂಘಟನೆಯ ಮೂಲಕ ‘ಟೀಮ್ ಇಂಡಿಯಾ’ದ ಮನೋಭಾವವನ್ನು ಪೋಷಿಸುವಲ್ಲಿ ಪ್ರಧಾನಮಂತ್ರಿಯವರು ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳೊಂದಿಗೆ ವಹಿಸಿದ್ದ ಸಮಯೋಚಿತ ಮತ್ತು ಆವರ್ತಕ ಸಭೆಗಳ ನಾಯಕತ್ವವನ್ನು ಅತ್ಯುತ್ತಮವಾಗಿ ಉದಾಹರಿಸಬಹುದು.
ಮಾರ್ಚ್ 2020 ರಿಂದ ಏಪ್ರಿಲ್ 2022 ರವರೆಗೆ ಪ್ರಧಾನಿಯವರು ಇಂತಹ ಇಪ್ಪತ್ತು ಸಭೆಗಳ ಅಧ್ಯಕ್ಷತೆ ವಹಿಸಿದ್ದರು. ‘ಶತಮಾನಕ್ಕೊಮ್ಮೆ ಮಹಾಮಾರಿ’ ಒಡ್ಡುವ ಸವಾಲನ್ನು ಕೇಂದ್ರ ಮತ್ತು ರಾಜ್ಯಗಳ ಸಂಘಟಿತ ಕ್ರಮದಿಂದ ಮಾತ್ರ ನಿಭಾಯಿಸಲು ಸಾಧ್ಯ ಎಂದು ಪ್ರಧಾನಿ ನಂಬಿದ್ದರು. ವಿಶ್ವದ ಅತಿ ದೊಡ್ಡ ಕೋವಿಡ್ ಲಸಿಕೆ ಕಾರ್ಯಕ್ರಮದ ಯಶಸ್ವಿ ಅನುಷ್ಠಾನದಲ್ಲಿ ಈ ಸಮನ್ವಯವು ಸಹ ಉಪಯುಕ್ತವಾಗಿದೆ.
ಅದೇ ರೀತಿ, ಪ್ರಧಾನಮಂತ್ರಿಯವರು ಡಿಜಿಪಿ/ಐಜಿಪಿಗಳ ವಾರ್ಷಿಕ ಸಮ್ಮೇಳನಗಳಲ್ಲಿ ಹೆಚ್ಚಿನ ಆಸಕ್ತಿ ವಹಿಸಿದ್ದಾರೆ ಮತ್ತು 2014 ರಿಂದ ಆಯೋಜಿಸಲಾದ ಪ್ರತಿ ಸಮ್ಮೇಳನದಲ್ಲಿ ಭಾಗವಹಿಸುವುದನ್ನು ಅವರು ಖಾತ್ರಿಪಡಿಸಿಕೊಂಡಿದ್ದಾರೆ. 2014 ರ ಮೊದಲು ದೆಹಲಿಯಲ್ಲಿ ವಾಡಿಕೆಯಂತೆ ಆಯೋಜಿಸಲಾಗುತ್ತಿದ್ದ ವಾರ್ಷಿಕ ಸಮ್ಮೇಳನಗಳನ್ನು (2020 ರ ಸಭೆಯನ್ನು ಹೊರತುಪಡಿಸಿ, ಇದನ್ನು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಆಯೋಜಿಸಲಾಗಿತ್ತು) ಈಗ ದೇಶಾದ್ಯಂತ ಆಯೋಜಿಸಲಾಗುತ್ತಿದೆ. ಈ ಸಮ್ಮೇಳನವನ್ನು ಗುವಾಹಟಿಯಲ್ಲಿ 2014 ರಲ್ಲಿ, ಧೋರ್ಡೊ- ರಾನ್ ಆಫ್ ಕಚ್ ನಲ್ಲಿ 2015 ರಲ್ಲಿ, ರಾಷ್ಟ್ರೀಯ ಪೊಲೀಸ್ ಅಕಾಡೆಮಿ ಹೈದರಾಬಾದ್ ನಲ್ಲಿ 2016, 2017 ರಲ್ಲಿ BSF ಅಕಾಡೆಮಿ ಟೇಕನ್‌ಪುರ ದಲ್ಲಿ, 2018 ರಲ್ಲಿ ಕೆವಾಡಿಯಾ: IISER – 2019 ರಲ್ಲಿ ಪುಣೆ ಮತ್ತು 2021 ರಲ್ಲಿ ಲಕ್ನೋ ಆಯೋಜಿಸಲಾಗಿತ್ತು ಎಂಬುದು ಗಮನಾರ್ಹ.