AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ್ ಜೋಡೋ ಯಾತ್ರೆಯ ಪ್ರಚಾರ ಫಲಕದಲ್ಲಿ ಸಾವರ್ಕರ್ ಚಿತ್ರ; ಫೋಟೊ ವೈರಲ್ ಆದಾಗ ಗಾಂಧೀಜಿ ಚಿತ್ರ ಅಂಟಿಸಿ ಮುಜುಗರ ತಪ್ಪಿಸಿದ ಕಾಂಗ್ರೆಸ್ಸಿಗರು

ಈ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾದ ಕೂಡಲೇ ಕಾಂಗ್ರೆಸ್ ಕಾರ್ಯಕರ್ತರು ಬಂದು ಸಾವರ್ಕರ್ ಅವರ ಚಿತ್ರದ ಮೇಲೆ ಗಾಂಧೀಜಿಯವರ ಚಿತ್ರವನ್ನು ಅಂಟಿಸಿ ಮುಜುಗರ ತಪ್ಪಿಸುವ ಕೆಲಸ ಮಾಡಿದ್ದಾರೆ.

ಭಾರತ್ ಜೋಡೋ ಯಾತ್ರೆಯ ಪ್ರಚಾರ ಫಲಕದಲ್ಲಿ ಸಾವರ್ಕರ್ ಚಿತ್ರ; ಫೋಟೊ ವೈರಲ್ ಆದಾಗ ಗಾಂಧೀಜಿ ಚಿತ್ರ ಅಂಟಿಸಿ ಮುಜುಗರ ತಪ್ಪಿಸಿದ ಕಾಂಗ್ರೆಸ್ಸಿಗರು
ಭಾರತ್ ಜೋಡೋ ಯಾತ್ರೆ ಫಲಕದಲ್ಲಿ ಸಾವರ್ಕರ್ ಚಿತ್ರ
TV9 Web
| Edited By: |

Updated on:Sep 21, 2022 | 6:33 PM

Share

ಕೊಚ್ಚಿ: ರಾಹುಲ್ ಗಾಂಧಿ (Rahul Gandhi) ನೇತೃತ್ವದ ಭಾರತ್ ಜೋಡೋ ಯಾತ್ರೆ (Bharat Jodo Yatra) ಈಗ ಕೇರಳದಲ್ಲಿದೆ. ನೆಡುಂಬಶ್ಶೇರಿಯ ಕೊಟ್ಟಾಯಿ ಜಂಕ್ಷನ್​​ನಲ್ಲಿ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಗೆ ಸ್ವಾಗತ ಕೋರಿ ಕಾಂಗ್ರೆಸ್ (Congress) ಪಕ್ಷ ಬ್ಯಾನರ್ ಸ್ಥಾಪಿಸಿತ್ತು. ಈ ಬ್ಯಾನರ್​​ನಲ್ಲಿ ಸಾವರ್ಕರ್ ಚಿತ್ರವಿದ್ದು, ಫೋಟೊ ವೈರಲ್ ಆದ ಬೆನ್ನಲ್ಲೇ ಈ ಚಿತ್ರವನ್ನು ಬದಲಿಸಲಾಗಿದೆ. ಕೇರಳದ ಶಾಸಕ ಪಿವಿ ಅನ್ವರ್ ಈ ಬ್ಯಾನರ್ ಚಿತ್ರವನ್ನು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದರು. ಈ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾದ ಕೂಡಲೇ ಕಾಂಗ್ರೆಸ್ ಕಾರ್ಯಕರ್ತರು ಬಂದು ಸಾವರ್ಕರ್ ಅವರ ಚಿತ್ರದ ಮೇಲೆ ಗಾಂಧೀಜಿಯವರ ಚಿತ್ರವನ್ನು ಅಂಟಿಸಿ ಮುಜುಗರ ತಪ್ಪಿಸುವ ಕೆಲಸ ಮಾಡಿದ್ದಾರೆ. ಇದೇ ವೇಳೆ ರಾಹುಲ್ ಗಾಂಧಿ ಆಗಮಿಸುವ ಮುನ್ನ ಸಾವರ್ಕರ್ ಫೋಟೊವನ್ನು ಮರೆ ಮಾಡಲಾಗಿದ್ದರೂ, ಅದರ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಆಲುವಾ ಚೆಂಗಮನಾಡ್ ಜೋಡೋ ಯಾತ್ರೆಯ ಪ್ರಚಾರ ಫಲಕದಲ್ಲಿ ಸಾವರ್ಕರ್ ಕಾಣಿಸಿಕೊಂಡಿದ್ದನ್ನು ಸೂಚಿಸಿದಾಗ ಕರ್ನಾಟಕದಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ಬಿಜೆಪಿ ಸ್ಥಾಪಿಸಿದ ಬೋರ್ಡ್ ಎಂದು ಲೀಗ್ ಕಾರ್ಯಕರ್ತರು ಸಮಜಾಯಿಷಿ ನೀಡುತ್ತಿದ್ದಾರೆ. ಸಾಹಿಬರು,  ಗಾಂಧೀಜಿಯನ್ನು ಹೊರಗಿಟ್ಟು ಸಾವರ್ಕರ್ ಇರುವ  ಬೋರ್ಡ್ ಹಾಕಿದ್ದು ಕರ್ನಾಟಕದಲ್ಲಿ ಅಥವಾ ಉತ್ತರ ಭಾರತದಲ್ಲಿ ಅಲ್ಲ, ನಮ್ಮದೇ ಕೇರಳದಲ್ಲಿ. ನಿಮ್ಮ  ಕಾಂಗ್ರೆಸ್ ನಾಯಕತ್ವ ತಪ್ಪನ್ನು ತಿದ್ದಿಕೊಂಡಿದೆ. ಸಾವರ್ಕರ್ ಫೋಟೋ ಮೇಲೆ  ಗಾಂಧೀಜಿ  ಫೋಟೊ ಅಂಟಿಸಿದ್ದಾರೆ. ಲೀಗ್​​​ನವರಿಗೆ ಹೇಳಿ ಅರ್ಥ ಮಾಡಿಸುವುದಕ್ಕಿಂತ ಒಂದು ಕೆಜಿ ಜೀರಿಗೆ ತಂದು ಅದರ ಸಿಪ್ಪೆ  ಸುಲಿಯುವುದು ವಾಸಿ. ಆದರೂ ಈ ವಿಡಿಯೊ ಇಲ್ಲಿರಲಿ ಎಂದು ಪಿವಿ ಅನ್ವರ್ ವಿಡಿಯೊ ಪೋಸ್ಟ್ ಮಾಡಿದ್ದಾರೆ. ಐಎನ್​​ಟಿಯುಸಿ ಚೆಂಗಮನಾಡ್ ಕ್ಷೇತ್ರದ ಅಧ್ಯಕ್ಷ ಅಮಾನತು

ನೆಡುಂಬಶ್ಶೇರಿಯಲ್ಲಿ ಭಾರತ್ ಜೋಡೋ ಯಾತ್ರೆಯ ಪ್ರಚಾರ ಫಲಕದಲ್ಲಿ ಸಾವರ್ಕರ್ ಅವರ ಚಿತ್ರ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎನ್​​ಟಿಯುಸಿ ಚೆಂಗಮನಾಡ್ ಕ್ಷೇತ್ರದ ಅಧ್ಯಕ್ಷ ಸುರೇಶ್ ಅವರನ್ನು ಅಮಾನತುಗೊಳಿಸಲಾಗಿದೆ. ಕೊಟ್ಟಾಯಿ ಜಂಕ್ಷನ್‌ನಲ್ಲಿ ಹಾಕಿರುವ ಬೋರ್ಡ್ ವಿವಾದವಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಪಕ್ಷದ ಪ್ರಚಾರಕ್ಕಾಗಿ ಮಂಡಳಿಯನ್ನು ಅಧಿಕೃತವಾಗಿ ಸ್ಥಾಪಿಸಲಾಗಿಲ್ಲ ಎಂದು ಕಾಂಗ್ರೆಸ್ ಹೇಳಿದೆ. ಜಿಲ್ಲೆಯ ಹಲವೆಡೆ ಪಕ್ಷದ ಬೆಂಬಲಿಗರು ತಾವೇ ಬೋರ್ಡ್ ಹಾಕಿಕೊಂಡಿದ್ದಾರೆ. ಇದು ಅಂತಹ ಬೋರ್ಡ್ ಆಗಿದ್ದು, ತಪ್ಪಿನ ಅರಿವಾದ ನಂತರ ತಾವೇ ತೆಗೆಸಿದ್ದಾರೆ ಎಂಬುದು ಪಕ್ಷ ಹೇಳಿದೆ.

Published On - 6:22 pm, Wed, 21 September 22

48 ಗಂಟೆಗಳಲ್ಲಿ ಅಭಿಷೇಕ್ ದಾಖಲೆ ಮುರಿದ ಇಶಾನ್ ಕಿಶನ್
48 ಗಂಟೆಗಳಲ್ಲಿ ಅಭಿಷೇಕ್ ದಾಖಲೆ ಮುರಿದ ಇಶಾನ್ ಕಿಶನ್
ಬಿಗ್ ಬಾಸ್: ಬಂಗಾರದ ಅಂಗಡಿಯಲ್ಲಿ ಕಾವ್ಯಾ ಜೊತೆ ಸೆಲ್ಫಿಗೆ ಮುಗಿಬಿದ್ದ ಜನ
ಬಿಗ್ ಬಾಸ್: ಬಂಗಾರದ ಅಂಗಡಿಯಲ್ಲಿ ಕಾವ್ಯಾ ಜೊತೆ ಸೆಲ್ಫಿಗೆ ಮುಗಿಬಿದ್ದ ಜನ
ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಅಫ್ಘಾನ್ ಬ್ಯಾಟರ್
ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಅಫ್ಘಾನ್ ಬ್ಯಾಟರ್
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ